ಬ್ರೇಕಿಂಗ್ ನ್ಯೂಸ್
22-04-26 09:10 pm HK News Staffer ದೇಶ - ವಿದೇಶ
ಟೆಹ್ರಾನ್, ಎಪ್ರಿಲ್ 22: ಭಾರತಕ್ಕೆ ತೈಲ ಹೊತ್ತು ಬರುತ್ತಿದ್ದ ಮತ್ತೆ ಮೂರು ಹಡಗುಗಳನ್ನು ಇರಾನ್ ವಶಕ್ಕೆ ಪಡೆದಿದೆ. ಇರಾನಿನ ಕ್ರಾಂತಿಕಾರಿ ಗಾರ್ಡ್ ಕಾರ್ಪ್ಸ್ (ಐಆರ್ ಜಿಸಿ) ಹಾರ್ಮುಜ್ ಜಲಸಂಧಿ ಮೂಲಕ ಭಾರತಕ್ಕೆ ಬರುತ್ತಿದ್ದ ಹಡಗಿನ ಮೇಲೆ ದಾಳಿ ಮಾಡಿ ವಶಪಡಿಸಿದೆ. ಐಆರ್ ಜಿಸಿ ಅವುಗಳನ್ನು ಇರಾನ್ ಜಲಗಡಿಯೊಳಕ್ಕೆ ಕರೆದೊಯ್ದಿದೆ ಎಂದು ಇರಾನ್ ಟಿವಿ ಮಾಧ್ಯಮಗಳು ವರದಿ ಮಾಡಿವೆ.
ಎರಡು ಹಡಗುಗಳು ಭಾರತದ ಗುಜರಾತಿನ ಮುಂದ್ರಾ ಬಂದರಿಗೆ ಬರುತ್ತಿತ್ತು. ಪನಾಮಾ ಧ್ವಜ ಹೊತ್ತಿದ್ದ ಎಂಎಸ್ ಸಿ ಫ್ರಾನ್ಸೆಸ್ಕಾ ಮತ್ತು ಲೈಬೀರಿಯಾ ಧ್ವಜ ಹೊಂದಿದ್ದ ಎಪಾಮಿನೋಡ್ಸ್ ಎಂಬ ಹೆಸರಿನ ಹಡಗುಗಳನ್ನು ಐಆರ್ ಜಿಸಿ ವಶಕ್ಕೆ ಪಡೆದಿದೆ. ಭಾರತದತ್ತ ಬರುತ್ತಿದ್ದ ಮತ್ತೊಂದು ಗ್ರೀಕ್ ಮೂಲದ ಯುಫೋರಿಯಾ ಹೆಸರಿನ ಹಡಗನ್ನೂ ಇರಾನ್ ವಶಕ್ಕೆ ಪಡೆದಿದೆ.
ಹಡಗಿನ ಮೇಲೆ ಐಆರ್‌ಜಿಸಿ ಗನ್‌ಬೋಟ್ ನಿಂದ ದಾಳಿ ನಡೆಸಿತ್ತು. ಗುಂಡು ಹಾರಿಸುವ ಮೊದಲು IRGC ಯಾವುದೇ ಎಚ್ಚರಿಕೆ ನೀಡಲಿಲ್ಲ. ಯುಕೆ ಏಜೆನ್ಸಿಯ ಪ್ರಕಾರ, ಯಾವುದೇ ಸಾವು- ನೋವು ಸಂಭವಿಸಿಲ್ಲ. ಏತನ್ಮಧ್ಯೆ, ಹಡಗು ಇರಾನಿನ ಸಶಸ್ತ್ರ ಪಡೆಗಳ ಎಚ್ಚರಿಕೆಗಳನ್ನು ನಿರ್ಲಕ್ಷಿಸಿದ ನಂತರ ಗುಂಡು ಹಾರಿಸಲಾಗಿದೆ ಎಂದು ಇರಾನಿನ ಸುದ್ದಿ ಸಂಸ್ಥೆ ನೂರ್ ನ್ಯೂಸ್ ಹೇಳಿಕೊಂಡಿದೆ. ಫಾಸ್ಕ್ ನ್ಯೂಸ್ ಏಜೆನ್ಸಿ ಇದನ್ನು ಹಾರ್ಮುಜ್ ಜಲಸಂಧಿಯ ಮೇಲೆ ತನ್ನ ನಿಯಂತ್ರಣವನ್ನು ಕಾನೂನುಬದ್ಧವಾಗಿ ಜಾರಿಗೊಳಿಸಲು ಇರಾನ್‌ನ ಪ್ರಯತ್ನ ಎಂದು ಬಣ್ಣಿಸಿದೆ.
ಕಳೆದ ವಾರ ಭಾರತದ ಜಗ್ ಆರ್ನವ್ ಮತ್ತು ಸನ್ಮಾರ್ ಹೆರಾಲ್ಡ್ ಎಂಬೆರಡು ಹಡಗುಗಳ ಮೇಲೆ ಇರಾನ್ ದಾಳಿ ಮಾಡಿತ್ತು. ಜಗ್ ಆರ್ನವ್ ಹಡಗು ಸೌದಿ ಅರೇಬಿಯಾದಿಂದ ಮತ್ತು ಸನ್ಮಾರ್ ಹೆರಾಲ್ಡ್ ಹಡಗು ಇರಾಕಿನಿಂದ ತೈಲ ಹೊತ್ತು ಬರುತ್ತಿತ್ತು. ಸ್ನೇಹಿತ ರಾಷ್ಟ್ರಗಳ ಮೇಲೆ ತಡೆ ಹೇರಲ್ಲ ಎಂಬ ಇರಾನ್ ಹೇಳಿಕೆಯ ನಡುವೆಯೂ ಭಾರತದ ಹಡಗುಗಳ ಮೇಲೆ ದಾಳಿ ನಡೆಸಿರುವುದು ಪರಿಸ್ಥಿತಿ ಗಂಭೀರತೆ ಸೃಷ್ಟಿಸಿದೆ.
ಇದೇ ವೇಳೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೆರಡು ವಾರಗಳ ಕಾಲ ಕದನ ವಿರಾಮ ಘೋಷಣೆ ಮಾಡಿದೆ. ಆದರೆ ಹೊರ್ಮುಜ್ ಜಲಸಂಧಿಯ ಮೇಲಿನ ಹಿಡಿತವನ್ನು ಸಡಿಲಿಸುವುದಿಲ್ಲ ಎಂದು ಹೇಳಿದೆ. ಟ್ರಂಪ್ ಕದನ ವಿರಾಮ ಘೋಷಣೆ ಬೆನ್ನಲ್ಲೇ ಭಾರತದತ್ತ ತೆರಳುತ್ತಿದ್ದ ಹಡಗುಗಳ ಮೇಲೆ ಇರಾನ್ ದಾಳಿ ನಡೆಸಿ ವಶಕ್ಕೆ ಪಡೆದಿದೆ.
03-10-26 05:30 pm
HK News Staffer
Urdu Habba Row: ವಿಧಾನಸೌಧ ಮೆಟ್ಟಿಲುಗಳಲ್ಲಿ ಉರ್ದು...
01-10-26 10:50 pm
‘ಕನ್ನಡದ ಶಿವಮಣಿ’ ಖ್ಯಾತಿಯ ಡ್ರಮ್ಮರ್ ದೇವ್ ನಿಧನ ;...
27-09-26 03:21 pm
ಬೆಂಗಳೂರಿಗೆ ಬಂದ ಶಾಸಕರೆಲ್ಲ ಎರಡೆರಡು ಮದುವೆಯಾಗಿದ್ದ...
25-09-26 04:49 pm
ರಾಜ್ಯ ಸರ್ಕಾರಕ್ಕೆ ಆರ್ಥಿಕ ಸಂಕಷ್ಟ ; ಬೆಳಗಾವಿ ವಿಟಿ...
25-09-26 03:11 pm
05-10-26 08:56 pm
HK News Staffer
ಪಶ್ಚಿಮ ಬಂಗಾಳದಲ್ಲಿ ಏಕರೂಪ ನಾಗರಿಕ ಸಂಹಿತೆ ; ಲವ್ ಜ...
05-10-26 01:49 pm
ನಾನು ಸಾವಿಗೆ ಅಂಜಲ್ಲ, ವಿಮಾನ ಪತನವೇ ಉದ್ದೇಶವಾಗಿತ್ತ...
05-10-26 11:40 am
Ramesh Chennithala: ಕೇರಳದಲ್ಲಿ ಪಿಡಬ್ಲ್ಯೂಡಿ ರಸ್...
04-10-26 07:07 pm
Smith Machar, benjamin netanyahu: ಸ್ಮಿತ್ ಮಚ್ಚ...
04-10-26 12:34 pm
05-10-26 10:53 pm
Mangaluru Staffer
Mangalore News, Ekkaru Temple, Tirupati Templ...
05-10-26 12:35 pm
'ಮುಳಿಯ ಜುವೆಲ್ಲರಿ' ಮಾಲೀಕ ಪುತ್ತೂರಿನ ಮುಳಿಯ ಶ್ಯಾಮ...
05-10-26 11:41 am
brijesh chowta: ಹೈಕೋರ್ಟ್ ಪೀಠ ಸ್ಥಾಪನೆಗೆ ಒಗ್ಗಟ್...
03-10-26 09:56 pm
Tammanna Shetty, mysore kambala: ಮೈಸೂರು ದಸರಾ...
03-10-26 01:27 pm
05-10-26 08:26 pm
HK News Staffer
ಪುತ್ತೂರಿನಿಂದ ಕೇರಳಕ್ಕೆ ಹಿಂಸಾತ್ಮಕ ರೀತಿಯಲ್ಲಿ 11...
05-10-26 08:24 pm
Udupi News, Indrali Railway Station, Nizamudd...
05-10-26 12:28 pm
Belthangady News, Banakal Accident, Mudigere...
05-10-26 10:49 am
bantwal rain: ಕರಾವಳಿ ಭಾಗದಲ್ಲಿ ಹಿಂಗಾರು ಮಳೆ ಅಬ್...
05-10-26 10:04 am