ಬ್ರೇಕಿಂಗ್ ನ್ಯೂಸ್
11-04-26 12:44 pm HK News Desk ದೇಶ - ವಿದೇಶ
ಹೂಸ್ಟನ್, ಎಪ್ರಿಲ್ 11: ನಾಸಾದ ನಾಲ್ವರು ಗಗನಯಾತ್ರಿಗಳು ಬಾಹ್ಯಾಕಾಶ ಇತಿಹಾಸದಲ್ಲಿ ಮತ್ತೊಂದು ಅಧ್ಯಾಯ ಬರೆದಿದ್ದಾರೆ. ನಾಸಾದ ‘ಆರ್ಟೆಮಿಸ್-2’ ಗಗನಯಾತ್ರಿಗಳ ತಂಡವು ಚಂದ್ರನ ಕಕ್ಷೆಯನ್ನು ಯಶಸ್ವಿಯಾಗಿ ಸುತ್ತು ಹಾಕುವ ಮೂಲಕ ಹತ್ತು ದಿನಗಳ ಯಾತ್ರೆಯನ್ನು ಕೊನೆಗೊಳಿಸಿದ್ದು ಇಂದು ಮುಂಜಾನೆ ಸುರಕ್ಷಿತವಾಗಿ ಪೆಸಿಫಿಕ್ ಸಾಗರದಲ್ಲಿ ಇಳಿದಿದೆ.
ನಾಲ್ವರು ಗಗನಯಾತ್ರಿಗಳನ್ನು ಹೊತ್ತ ನಾಸಾದ ‘ಒರಿಯಾನ್’ ಕ್ಯಾಪ್ಸೂಲ್ ಇಂದು ಮುಂಜಾನೆ ಕ್ಯಾಲಿಫೋರ್ನಿಯಾದ ಸ್ಯಾನ್ ಡಿಯಾಗೋ ಬಳಿಯ ಪೆಸಿಫಿಕ್ ಮಹಾಸಾಗರದಲ್ಲಿ ಯಶಸ್ವಿಯಾಗಿ ಇಳಿಯಿತು. ಭೂಮಿಯ ವಾತಾವರಣವನ್ನು ಪ್ರವೇಶಿಸುವಾಗ ಉಂಟಾದ ಸುಮಾರು 2,760 ಡಿಗ್ರಿ ಸೆಲ್ಸಿಯಸ್ನಷ್ಟು ಭೀಕರ ತಾಪಮಾನವನ್ನು ನೌಕೆಯ ಹೀಟ್ ಶೀಲ್ಡ್ ಸಮರ್ಥವಾಗಿ ಎದುರಿಸಿತು. ಭೂಮಿ ಸಮೀಪಿಸುತ್ತಿದ್ದಂತೆ ನೌಕೆಯಿಂದ ಗಗನಯಾತ್ರಿಗಳು ಪ್ಯಾರಾಚೂಟ್ ಮೂಲಕ ಸಮುದ್ರಕ್ಕೆ ಇಳಿದಿದ್ದು ಅಮೆರಿಕಾದ ನೌಕಾಪಡೆ ಮತ್ತು ನಾಸಾ ವಿಜ್ಞಾನಿಗಳ ತಂಡ ಸಂಭ್ರಮದಿಂದ ಸ್ವಾಗತಿಸಿದರು. ಐದು ದಶಕದ ಬಳಿಕ ನಾಸಾ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಚಂದ್ರನಲ್ಲಿಗೆ ಗಗನಯಾತ್ರಿಗಳನ್ನು ಕಳುಹಿಸಿತ್ತು. 1972ರ ಅಪೋಲೊ ಯಾತ್ರೆಯ ಬಳಿಕ ಚಂದ್ರನಲ್ಲಿಗೆ ಮಾನವನ ಮೊದಲ ಪ್ರಯಾಣವಾಗಿದ್ದು ಮುಂದಿನ ಎರಡು ವರ್ಷದಲ್ಲಿ ಚಂದ್ರನ ದಕ್ಷಿಣ ಧ್ರುವಕ್ಕೆ ಕಾಲಿಡಲು ಸಿದ್ಧತೆ ನಡೆಸಿದ್ದಾರೆ.




ಮಿಷನ್ನಲ್ಲಿ ರೀಡ್ ವೈಸ್ಮನ್, ವಿಕ್ಟರ್ ಗ್ಲೋವರ್, ಕ್ರಿಸ್ಟಿನಾ ಕೋಚ್ ಮತ್ತು ಜೆರೆಮಿ ಹ್ಯಾನ್ಸನ್ ಪಾಲ್ಗೊಂಡಿದ್ದರು. ಈ ಪೈಕಿ ಕ್ರಿಸ್ಟಿನಾ ಕೋಚ್ ಚಂದ್ರನ ಕಕ್ಷೆಯವರೆಗೆ ಪ್ರಯಾಣಿಸಿದ ಮೊದಲ ಮಹಿಳೆ ಎಂಬ ಇತಿಹಾಸ ನಿರ್ಮಿಸಿದ್ದಾರೆ. ಈ ತಂಡವು ಚಂದ್ರನ ಮೇಲ್ಮೈಗೆ ಇಳಿಯದಿದ್ದರೂ, ಚಂದ್ರನ ಹಿಂಭಾಗದಿಂದ ಹಾದುಹೋಗುವ ಮೂಲಕ ಭೂಮಿಯಿಂದ ಅತಿ ಹೆಚ್ಚು ದೂರ (ಸುಮಾರು 4 ಲಕ್ಷ ಕಿ.ಮೀ) ಪ್ರಯಾಣಿಸಿದ ಮಾನವರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಚಂದ್ರನ ಕಕ್ಷೆಯಲ್ಲಿ ಸುತ್ತುವಾಗ ಗಗನಯಾತ್ರಿಗಳು ಭವಿಷ್ಯದ ಮಾನವ ವಸಾಹತು ಮತ್ತು ಸಂಶೋಧನೆಗಳಿಗೆ ಪೂರಕವಾದ ಮಹತ್ವದ ತಾಂತ್ರಿಕ ಪರೀಕ್ಷೆಗಳನ್ನು ನಡೆಸಿದ್ದಾರೆ. ನೌಕೆಯೊಳಗಿನ ಆಮ್ಲಜನಕ ವ್ಯವಸ್ಥೆ, ವಿಕಿರಣದ ಮಟ್ಟ ಮತ್ತು ಸಂವಹನ ತಂತ್ರಜ್ಞಾನಗಳ ಕಾರ್ಯಕ್ಷಮತೆಯನ್ನು ಈ ಪ್ರವಾಸದಲ್ಲಿ ದೃಢೀಕರಿಸಲಾಗಿದೆ. ಈ ಯಶಸ್ಸು ಮುಂದಿನ ದಿನಗಳಲ್ಲಿ ಚಂದ್ರನ ಮೇಲೆ ಮನುಷ್ಯನನ್ನು ನೇರವಾಗಿ ಇಳಿಸುವ ‘ಆರ್ಟೆಮಿಸ್-3’ ಯೋಜನೆಗೆ ಭದ್ರ ಬುನಾದಿ ಹಾಕಿದೆ.
Four astronauts from NASA have safely returned to Earth after completing a historic journey around the Moon, marking a major milestone in modern space exploration. The crew of the Artemis II mission concluded their 10-day voyage with a successful splashdown in the Pacific Ocean early today.
03-10-26 05:30 pm
HK News Staffer
Urdu Habba Row: ವಿಧಾನಸೌಧ ಮೆಟ್ಟಿಲುಗಳಲ್ಲಿ ಉರ್ದು...
01-10-26 10:50 pm
‘ಕನ್ನಡದ ಶಿವಮಣಿ’ ಖ್ಯಾತಿಯ ಡ್ರಮ್ಮರ್ ದೇವ್ ನಿಧನ ;...
27-09-26 03:21 pm
ಬೆಂಗಳೂರಿಗೆ ಬಂದ ಶಾಸಕರೆಲ್ಲ ಎರಡೆರಡು ಮದುವೆಯಾಗಿದ್ದ...
25-09-26 04:49 pm
ರಾಜ್ಯ ಸರ್ಕಾರಕ್ಕೆ ಆರ್ಥಿಕ ಸಂಕಷ್ಟ ; ಬೆಳಗಾವಿ ವಿಟಿ...
25-09-26 03:11 pm
05-10-26 08:56 pm
HK News Staffer
ಪಶ್ಚಿಮ ಬಂಗಾಳದಲ್ಲಿ ಏಕರೂಪ ನಾಗರಿಕ ಸಂಹಿತೆ ; ಲವ್ ಜ...
05-10-26 01:49 pm
ನಾನು ಸಾವಿಗೆ ಅಂಜಲ್ಲ, ವಿಮಾನ ಪತನವೇ ಉದ್ದೇಶವಾಗಿತ್ತ...
05-10-26 11:40 am
Ramesh Chennithala: ಕೇರಳದಲ್ಲಿ ಪಿಡಬ್ಲ್ಯೂಡಿ ರಸ್...
04-10-26 07:07 pm
Smith Machar, benjamin netanyahu: ಸ್ಮಿತ್ ಮಚ್ಚ...
04-10-26 12:34 pm
05-10-26 10:53 pm
Mangaluru Staffer
Mangalore News, Ekkaru Temple, Tirupati Templ...
05-10-26 12:35 pm
'ಮುಳಿಯ ಜುವೆಲ್ಲರಿ' ಮಾಲೀಕ ಪುತ್ತೂರಿನ ಮುಳಿಯ ಶ್ಯಾಮ...
05-10-26 11:41 am
brijesh chowta: ಹೈಕೋರ್ಟ್ ಪೀಠ ಸ್ಥಾಪನೆಗೆ ಒಗ್ಗಟ್...
03-10-26 09:56 pm
Tammanna Shetty, mysore kambala: ಮೈಸೂರು ದಸರಾ...
03-10-26 01:27 pm
05-10-26 08:26 pm
HK News Staffer
ಪುತ್ತೂರಿನಿಂದ ಕೇರಳಕ್ಕೆ ಹಿಂಸಾತ್ಮಕ ರೀತಿಯಲ್ಲಿ 11...
05-10-26 08:24 pm
Udupi News, Indrali Railway Station, Nizamudd...
05-10-26 12:28 pm
Belthangady News, Banakal Accident, Mudigere...
05-10-26 10:49 am
bantwal rain: ಕರಾವಳಿ ಭಾಗದಲ್ಲಿ ಹಿಂಗಾರು ಮಳೆ ಅಬ್...
05-10-26 10:04 am