ಬ್ರೇಕಿಂಗ್ ನ್ಯೂಸ್
06-04-26 06:16 pm HK News Staffer ದೇಶ - ವಿದೇಶ
ಟೆಹ್ರಾನ್, ಏಪ್ರಿಲ್ 6: ಅಮೆರಿಕ ಮತ್ತು ಇರಾನ್ ನಡುವಿನ ಪರಿಸ್ಥಿತಿ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದೆ. ಹಾರ್ಮುಜ್ ಜಲಸಂಧಿಯನ್ನು ತೆರೆಯಲು ಅಮೆರಿಕ ಇರಾನ್‌ಗೆ ನೀಡಿದ 10 ದಿನಗಳ ಗಡುವು ಮಂಗಳವಾರ ರಾತ್ರಿ 8 ಗಂಟೆಗೆ ಕೊನೆಗೊಳ್ಳಲಿದೆ. ಈ ಮಧ್ಯೆ ಟ್ರಂಪ್, “ಜಲಸಂಧಿ ತೆರೆಯಿರಿ, ಇಲ್ಲದಿದ್ದರೆ ಭೀಕರ ಪರಿಣಾಮಕ್ಕೆ ಸಿದ್ಧರಾಗಿ” ಎಂದು ಇರಾನ್‌ಗೆ ಎಚ್ಚರಿಕೆ ನೀಡಿದ್ದಾರೆ.
ಆದರೆ ಡೊನಾಲ್ಡ್ ಟ್ರಂಪ್ ಬೆದರಿಕೆಗೆ ಕ್ಯಾರೆನ್ನದ ಇರಾನ್, ಈವರೆಗಿನ ಯುದ್ಧದಿಂದ ಆಗಿರುವ ನಷ್ಟವನ್ನು ತುಂಬಿಕೊಡುವಂತೆ ಷರತ್ತು ವಿಧಿಸುವ ಮೂಲಕ ತಿರುಗೇಟು ನೀಡಿದೆ. ಇದರಿಂದ ಪ್ರದೇಶದಲ್ಲಿ ಇನ್ನೇನು ಅನಾಹುತ ಆಗುತ್ತೋ ಎನ್ನುವ ಆತಂಕ ಎದುರಾಗಿದೆ.
ಇದೇ ವೇಳೆ, ದಕ್ಷಿಣ ಇಸ್ರೇಲ್‌ನಲ್ಲಿ ಡಿಮೋನಾ ಪೆಟ್ರೋಕೆಮಿಕಲ್ ಸೌಲಭ್ಯ, ಕುವೈತ್ ಬುಬಿಯಾನ್ ದ್ವೀಪದ ಅಮೆರಿಕ ಮಿಲಿಟರಿ ನೆಲೆ, ನೈಋತ್ಯ ಇರಾನ್ ವಿಮಾನ ನಿಲ್ದಾಣಗಳನ್ನು ಗುರಿಯಾಗಿಸಿ ಇರಾನ್ ಡ್ರೋನ್ ದಾಳಿ ನಡೆಸಿರುವ ಕುರಿತು ವರದಿಯಾಗಿದೆ. ಯುದ್ಧದಲ್ಲಿ ಬೋರುಜ್ ಸ್ಥಾವರದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಯಾವುದೇ ಸಾವು, ನೋವುಗಳಾದ ಬಗ್ಗೆ ವರದಿ ಆಗಿಲ್ಲ.
ಇಸ್ರೇಲ್ ಸೇನೆಗಳು ದಕ್ಷಿಣ ಲೆಬನಾನಿನ ಹೆಜ್ಬುಲ್ಲಾ ಮೇಲೆ ದಾಳಿ ಮುಂದುವರಿಸಿದ್ದು ಅಲ್ಲಿನ ಆರು ಜನರ ಕುಟುಂಬ ಸೇರಿದಂತೆ ಏಳು ಮಂದಿ ಸಾವನ್ನಪ್ಪಿದ್ದಾರೆ. ಇರಾನ್ ಸರ್ಕಾರವು ಅಮೆರಿಕದ ದಾಳಿಗಳನ್ನು ನಾಗರಿಕರನ್ನು ಭಯಗೊಳಿಸಲು ಉದ್ದೇಶಪೂರ್ವಕ ಪ್ರಚೋದನೆ ಮತ್ತು ಯುದ್ಧ ಅಪರಾಧವೆಂದು ಆರೋಪಿಸಿದೆ.
IRGC ಗುಪ್ತಚರ ಮುಖ್ಯಸ್ಥ ಮಜೀದ್ ಖಾದೇಮಿ ಸಾವು
ಇದೇ ವೇಳೆ, ಇರಾನ್ ತೀವ್ರಗಾಮಿ ಪಡೆಯಾದ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಗುಪ್ತಚರ ವಿಭಾಗದ ಮುಖ್ಯಸ್ಥ ಮೇಜರ್ ಜನರಲ್ ಮಜೀದ್ ಖಾದೇಮಿ ಅಮೆರಿಕ–ಇಸ್ರೇಲ್ ಜಂಟಿ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಐಆರ್‌ಜಿಸಿ ಹೇಳಿಕೊಂಡಿದೆ. ಇಸ್ರೇಲ್ ಹೇಳಿಕೆ ಬಿಡುಗಡೆ ಮಾಡಿದ ಬೆನ್ನಲ್ಲೇ ಐಆರ್ ಜಿಸಿಯೂ ಪೋಸ್ಟ್ ಮಾಡಿದೆ.
ಆದರೆ, ಖಾದೇಮಿ ಹತ್ಯೆ ನಡೆದ ಸ್ಥಳದ ಕುರಿತು ಯಾವುದೇ ಸ್ಪಷ್ಟ ಮಾಹಿತಿ ಬಹಿರಂಗವಾಗಿಲ್ಲ. ಸೋಮವಾರ ಮುಂಜಾನೆ ಟೆಹ್ರಾನ್ ಹಾಗೂ ಸುತ್ತಮುತ್ತಲಿನ ವಸತಿ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಹಲವು ವಾಯುದಾಳಿಗಳು ನಡೆದಿದೆ. ವರದಿಗಳ ಪ್ರಕಾರ, ಈ ದಾಳಿಗಳಲ್ಲಿ 6 ಮಕ್ಕಳು ಸೇರಿ ಕನಿಷ್ಠ 34 ಮಂದಿ ಸಾವನ್ನಪ್ಪಿದ್ದಾರೆ.
ಕಳೆದ ವರ್ಷ ಜೂನ್ ತಿಂಗಳಲ್ಲಿ ನಡೆದಿದ್ದ 12 ದಿನಗಳ ಯುದ್ಧದ ವೇಳೆ ಇಸ್ರೇಲ್, ಇರಾನಿನ ಐಆರ್ ಜಿಸಿ ಗುಪ್ತಚರ ಮುಖ್ಯಸ್ಥ ಜನರಲ್ ಮೊಹಮ್ಮದ್ ಕಜೆಮಿ ಅವರನ್ನ ಹತ್ಯೆ ಮಾಡಿತ್ತು. ಆ ಬಳಿಕ ಖಾದೇಮಿ ಗುಪ್ತಚರ ಮುಖ್ಯಸ್ಥನಾಗಿ ಅಧಿಕಾರ ವಹಿಸಿಕೊಂಡಿದ್ದರು. ಸುಮಾರು 50 ವರ್ಷಗಳಿಂದ ಐಆರ್‌ಜಿಸಿನಲ್ಲಿ ತೊಡಗಿಸಿದ್ದ ಖಾದೇಮಿ, ಗುಪ್ತಚರ, ಭದ್ರತಾ ಕ್ಷೇತ್ರಗಳಿಗೆ ಗಮನಾರ್ಹ ಕೊಡುಗೆಗಳನ್ನು ನೀಡಿದ್ದರು, ಶತ್ರುಗಳನ್ನು ಎದುರಿಸುವಾಗ ಉತ್ತಮ ಕಾರ್ಯತಂತ್ರ ರೂಪಿಸುತ್ತಿದ್ದರು. ಅವರ ಪ್ರಯತ್ನಗಳು ಮುಂದಿನ ಹಲವು ವರ್ಷಗಳವರೆಗೂ ದೇಶದ ಗುಪ್ತಚರ ಸಂಸ್ಥೆಗೆ ಮಾರ್ಗದರ್ಶಕವಾಗಿರಲಿದೆ ಎಂದು ಹೇಳಿ ಇರಾನ್ ಸೇನೆ ಸಂತಾಪ ಸೂಚಿಸಿದೆ.
03-10-26 05:30 pm
HK News Staffer
Urdu Habba Row: ವಿಧಾನಸೌಧ ಮೆಟ್ಟಿಲುಗಳಲ್ಲಿ ಉರ್ದು...
01-10-26 10:50 pm
‘ಕನ್ನಡದ ಶಿವಮಣಿ’ ಖ್ಯಾತಿಯ ಡ್ರಮ್ಮರ್ ದೇವ್ ನಿಧನ ;...
27-09-26 03:21 pm
ಬೆಂಗಳೂರಿಗೆ ಬಂದ ಶಾಸಕರೆಲ್ಲ ಎರಡೆರಡು ಮದುವೆಯಾಗಿದ್ದ...
25-09-26 04:49 pm
ರಾಜ್ಯ ಸರ್ಕಾರಕ್ಕೆ ಆರ್ಥಿಕ ಸಂಕಷ್ಟ ; ಬೆಳಗಾವಿ ವಿಟಿ...
25-09-26 03:11 pm
05-10-26 08:56 pm
HK News Staffer
ಪಶ್ಚಿಮ ಬಂಗಾಳದಲ್ಲಿ ಏಕರೂಪ ನಾಗರಿಕ ಸಂಹಿತೆ ; ಲವ್ ಜ...
05-10-26 01:49 pm
ನಾನು ಸಾವಿಗೆ ಅಂಜಲ್ಲ, ವಿಮಾನ ಪತನವೇ ಉದ್ದೇಶವಾಗಿತ್ತ...
05-10-26 11:40 am
Ramesh Chennithala: ಕೇರಳದಲ್ಲಿ ಪಿಡಬ್ಲ್ಯೂಡಿ ರಸ್...
04-10-26 07:07 pm
Smith Machar, benjamin netanyahu: ಸ್ಮಿತ್ ಮಚ್ಚ...
04-10-26 12:34 pm
05-10-26 10:53 pm
Mangaluru Staffer
Mangalore News, Ekkaru Temple, Tirupati Templ...
05-10-26 12:35 pm
'ಮುಳಿಯ ಜುವೆಲ್ಲರಿ' ಮಾಲೀಕ ಪುತ್ತೂರಿನ ಮುಳಿಯ ಶ್ಯಾಮ...
05-10-26 11:41 am
brijesh chowta: ಹೈಕೋರ್ಟ್ ಪೀಠ ಸ್ಥಾಪನೆಗೆ ಒಗ್ಗಟ್...
03-10-26 09:56 pm
Tammanna Shetty, mysore kambala: ಮೈಸೂರು ದಸರಾ...
03-10-26 01:27 pm
05-10-26 08:26 pm
HK News Staffer
ಪುತ್ತೂರಿನಿಂದ ಕೇರಳಕ್ಕೆ ಹಿಂಸಾತ್ಮಕ ರೀತಿಯಲ್ಲಿ 11...
05-10-26 08:24 pm
Udupi News, Indrali Railway Station, Nizamudd...
05-10-26 12:28 pm
Belthangady News, Banakal Accident, Mudigere...
05-10-26 10:49 am
bantwal rain: ಕರಾವಳಿ ಭಾಗದಲ್ಲಿ ಹಿಂಗಾರು ಮಳೆ ಅಬ್...
05-10-26 10:04 am