ಬ್ರೇಕಿಂಗ್ ನ್ಯೂಸ್
31-03-26 03:30 pm HK News Staffer ದೇಶ - ವಿದೇಶ
ಇಸ್ಲಾಮಾಬಾದ್, ಮಾರ್ಚ್ 31: ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್ ಸಹೋದರ ಮೊಹಮ್ಮದ್ ತಾಹಿರ್ ಅನ್ವರ್ ನಿಗೂಢ ರೀತಿಯಲ್ಲಿ ಹತ್ಯೆಗೀಡಾಗಿದ್ದಾನೆ. ಆತನ ಅಂತ್ಯಕ್ರಿಯೆ ಜೈಶ್ ಉಗ್ರರ ತಾಣ ಬಹಾವಲ್ಪುರದಲ್ಲಿ ನಡೆದಿದೆ.
ಜೈಶ್-ಎ-ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್ ಐವರು ಸಹೋದರರಿದ್ದು ತಾಹಿರ್ ಅನ್ವರ್ ಹಿರಿಯ ಸೋದರ. ಸಂಘಟನೆಯ ಕಾರ್ಯಾಚರಣೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ತಾಹಿರ್ ಈಗ ನಿಗೂಢವಾಗಿ ಸಾವನ್ನಪ್ಪಿದ್ದಾನೆ, ಕಳೆದ ಕೆಲವು ತಿಂಗಳುಗಳಿಂದ ಪಾಕಿಸ್ತಾನದಲ್ಲಿ ಭಯೋತ್ಪಾದಕ ಸಂಘಟನೆಗಳಲ್ಲಿ ಮುಂಚೂಣಿಯಲ್ಲಿರುವ ಹಲವರನ್ನು ಹತ್ಯೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ತಾಹಿರ್ ಸಾವಿನ ಬಗ್ಗೆ ವಿವಿಧ ರೀತಿಯ ಊಹಾಪೋಹಗಳು ಹರಡುತ್ತಿವೆ. ಆತನ ಮೇಲೆ ದಾಳಿ ನಡೆದಿದೆಯೇ ಎನ್ನುವ ಬಗ್ಗೆ ದೃಢ ಮಾಹಿತಿ ಲಭ್ಯವಿಲ್ಲ.
ಇತ್ತೀಚಿನ ದಿನಗಳಲ್ಲಿ ಮಸೂದ್ ಅಜರ್ ಕುಟುಂಬದಲ್ಲಿ ಸರಣಿ ಸಾವುಗಳು ಸಂಭವಿಸಿದ್ದವು. ಭಾರತದ ಆಪರೇಷನ್ ಸಿಂಧೂರ್ ವೇಳೆ ಬಹಾವಲ್ಪುರದಲ್ಲಿ ನಡೆದ ವೈಮಾನಿಕ ದಾಳಿಯಲ್ಲಿ ಮಸೂದ್ ಕುಟುಂಬದ ಹತ್ತು ಸದಸ್ಯರು ಮತ್ತು ಕೆಲವು ಸಹಚರರು ಸಾವನ್ನಪ್ಪಿದ್ದಾರೆ. ಮೃತರಲ್ಲಿ ಆತನ ಸಹೋದರಿ, ಸೋದರಳಿಯ ಹಾಗೂ ಹತ್ತಿರದ ಕುಟುಂಬ ಸದಸ್ಯರು ಸೇರಿದ್ದಾರೆ.
ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆ 2001ರ ಸಂಸತ್ ದಾಳಿ, 2008 ರ ಮುಂಬೈ ದಾಳಿ, 2016 ರ ಪಠಾಣ್ಕೋಟ್ ದಾಳಿ ಮತ್ತು 2019 ರ ಪುಲ್ವಾಮಾ ದಾಳಿಗಳನ್ನು ನಡೆಸಿರುವ ಗಂಭೀರ ಆರೋಪಗಳನ್ನು ಎದುರಿಸುತ್ತಿದೆ. ಇದರ ಮುಖ್ಯಸ್ಥ ಮಸೂದ್ ಅಜರ್ ಭಾರತದ ಮೋಸ್ಟ್ ವಾಂಟೆಡ್ ಭಯೋತ್ಪಾದಕರ ಪಟ್ಟಿಯಲ್ಲಿದ್ದರೂ, ಕಳೆದ ಕೆಲವು ವರ್ಷಗಳಿಂದ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿಲ್ಲ. ಹೀಗಾಗಿ ಆತನ ಆರೋಗ್ಯ ಬಗ್ಗೆ ವದಂತಿಗಳು ಹರಡುತ್ತಿವೆ.
03-10-26 05:30 pm
HK News Staffer
Urdu Habba Row: ವಿಧಾನಸೌಧ ಮೆಟ್ಟಿಲುಗಳಲ್ಲಿ ಉರ್ದು...
01-10-26 10:50 pm
‘ಕನ್ನಡದ ಶಿವಮಣಿ’ ಖ್ಯಾತಿಯ ಡ್ರಮ್ಮರ್ ದೇವ್ ನಿಧನ ;...
27-09-26 03:21 pm
ಬೆಂಗಳೂರಿಗೆ ಬಂದ ಶಾಸಕರೆಲ್ಲ ಎರಡೆರಡು ಮದುವೆಯಾಗಿದ್ದ...
25-09-26 04:49 pm
ರಾಜ್ಯ ಸರ್ಕಾರಕ್ಕೆ ಆರ್ಥಿಕ ಸಂಕಷ್ಟ ; ಬೆಳಗಾವಿ ವಿಟಿ...
25-09-26 03:11 pm
05-10-26 08:56 pm
HK News Staffer
ಪಶ್ಚಿಮ ಬಂಗಾಳದಲ್ಲಿ ಏಕರೂಪ ನಾಗರಿಕ ಸಂಹಿತೆ ; ಲವ್ ಜ...
05-10-26 01:49 pm
ನಾನು ಸಾವಿಗೆ ಅಂಜಲ್ಲ, ವಿಮಾನ ಪತನವೇ ಉದ್ದೇಶವಾಗಿತ್ತ...
05-10-26 11:40 am
Ramesh Chennithala: ಕೇರಳದಲ್ಲಿ ಪಿಡಬ್ಲ್ಯೂಡಿ ರಸ್...
04-10-26 07:07 pm
Smith Machar, benjamin netanyahu: ಸ್ಮಿತ್ ಮಚ್ಚ...
04-10-26 12:34 pm
05-10-26 10:53 pm
Mangaluru Staffer
Mangalore News, Ekkaru Temple, Tirupati Templ...
05-10-26 12:35 pm
'ಮುಳಿಯ ಜುವೆಲ್ಲರಿ' ಮಾಲೀಕ ಪುತ್ತೂರಿನ ಮುಳಿಯ ಶ್ಯಾಮ...
05-10-26 11:41 am
brijesh chowta: ಹೈಕೋರ್ಟ್ ಪೀಠ ಸ್ಥಾಪನೆಗೆ ಒಗ್ಗಟ್...
03-10-26 09:56 pm
Tammanna Shetty, mysore kambala: ಮೈಸೂರು ದಸರಾ...
03-10-26 01:27 pm
05-10-26 08:26 pm
HK News Staffer
ಪುತ್ತೂರಿನಿಂದ ಕೇರಳಕ್ಕೆ ಹಿಂಸಾತ್ಮಕ ರೀತಿಯಲ್ಲಿ 11...
05-10-26 08:24 pm
Udupi News, Indrali Railway Station, Nizamudd...
05-10-26 12:28 pm
Belthangady News, Banakal Accident, Mudigere...
05-10-26 10:49 am
bantwal rain: ಕರಾವಳಿ ಭಾಗದಲ್ಲಿ ಹಿಂಗಾರು ಮಳೆ ಅಬ್...
05-10-26 10:04 am