ಬ್ರೇಕಿಂಗ್ ನ್ಯೂಸ್
26-03-26 09:31 am HK News Staffer ದೇಶ - ವಿದೇಶ
ಮಂಗಳೂರು, ಮಾರ್ಚ್ 26: ನವ ಮಂಗಳೂರು ಬಂದರಿಗೆ ಶೀಘ್ರದಲ್ಲೇ 2.62 ಲಕ್ಷ ಟನ್ ಕಚ್ಚಾ ತೈಲ ಹೊತ್ತ ಮತ್ತೆರಡು ಹಡಗು ಆಗಮಿಸಲಿದೆ. ಪಶ್ಚಿಮ ಆಫ್ರಿಕಾ ಮತ್ತು ಸೌದಿ ಅರೇಬಿಯಾದಿಂದ ಎರಡು ಬೃಹತ್ ತೈಲ ಹೊತ್ತ ಹಡಗು ಆಗಮಿಸಲಿದ್ದು ಎಂಆರ್ ಪಿಎಲ್ ತೈಲಾಗಾರಕ್ಕೆ ಪೂರೈಸಲಿದೆ.
ಎರಡು ದಿನಗಳ ಹಿಂದಷ್ಟೇ ರಷ್ಯಾದಿಂದ ಒಂದು ಲಕ್ಷ ಟನ್ ತೈಲ ಹೊಂದಿದ್ದ ಹಡಗು ಮಂಗಳೂರಿಗೆ ಆಗಮಿಸಿತ್ತು. ಮಾಹಿತಿ ಪ್ರಕಾರ, ಈಗಾಗಲೇ 1.53 ಲಕ್ಷ ಟನ್ ತೈಲವನ್ನು ಮಂಗಳೂರಿನ ತೈಲಾಗಾರಕ್ಕೆ ಪೂರೈಸಲಾಗಿತ್ತು. ಇದೀಗ ಮತ್ತೆರಡು ಹಡಗು ಇನ್ನೆರಡು ದಿನದಲ್ಲಿ ಬರಲಿದೆ ಎಂಬ ಮಾಹಿತಿ ಲಭಿಸಿದೆ. ಪೋಪಿ ಪಿ ಹೆಸರಿನ ಸೌದಿ ಅರೇಬಿಯಾ ಹಡಗು ಮಾರ್ಚ್ 27ರಂದು ಮಂಗಳೂರು ತಲುಪಲಿದೆ. 1.41 ಲಕ್ಷ ಟನ್ ತೈಲದೊಂದಿಗೆ ಸೌದಿಯ ಅಲ್ ಮುಜೈಝ್ ಬಂದರಿನಿಂದ ಈ ಹಡಗು ಮಾರ್ಚ್ 17ರಂದು ಹೊರಟಿತ್ತು. ಇನ್ನೊಂದು ಹಡಗು ಸನ್ ರೈಸ್ ವೇಯಲ್ಲಿ 1.21 ಲಕ್ಷ ಟನ್ ಕಚ್ಚಾ ತೈಲ ಇರಲಿದ್ದು ಅದು ಮಾರ್ಚ್ 29ರಂದು ಮಂಗಳೂರು ತಲುಪಲಿದೆ. ಈ ಹಡಗು ಪಶ್ಚಿಮ ಆಫ್ರಿಕಾದ ಕೇಪ್ ಲೋಪೆಜ್ ನಿಂದ ಮಾ.6ರಂದು ಹೊರಟಿತ್ತು. ಇವೆರಡರಿಂದಲೂ ಎನ್ಎಂಪಿಎ ಒಳಗಿನಿಂದ ಮಂಗಳೂರು ತೈಲಾಗಾರಕ್ಕೆ ಕಚ್ಚಾ ತೈಲ ಪೂರೈಕೆಯಾಗಲಿದೆ.
ಇದೇ ವೇಳೆ, ಮಾರ್ಚ್ 26ರಂದು 17600 ಟನ್ ಎಲ್ಪಿಜಿ ಇರುವ ಅಪೋಲೊ ಓಶಿಯನ್ ಟ್ಯಾಂಕರ್ ಹಡಗು ಮಂಗಳೂರು ಬಂದರಿಗೆ ಬರಲಿದ್ದು ನೇರವಾಗಿ ಹಿಂದುಸ್ತಾನ್ ಪೆಟ್ರೋಲಿಯಂ ಕಂಪನಿ ಮತ್ತು ಇಂಡಿಯನ್ ಆಯಿಲ್ ಕಂಪನಿಗಳಿಗೆ ಗ್ಯಾಸ್ ಪೂರೈಕೆ ಮಾಡಲಿದೆ. ಮೂಲಗಳ ಪ್ರಕಾರ, ಶಿವಾಲಿಕ್ ಹಡಗು ಮೂಲಕ ಗುಜರಾತ್ ಬಂದರಿಗೆ ತರಲಾಗಿದ್ದ ಎಲ್ಪಿಜಿಯನ್ನು ಅಪೊಲೊ ಓಶಿಯನ್ ನಲ್ಲಿ ಮಂಗಳೂರಿಗೆ ತಂದು ಸ್ಥಳೀಯವಾಗಿ ಪೂರೈಸಲಾಗುತ್ತಿದೆ.
ಇದಲ್ಲದೆ, ದೇಶ್ ರಕ್ಷಕ್ ಹೆಸರಿನ ಮತ್ತೊಂದು ತೈಲ ಹಡಗು ಮಾರ್ಚ್ 25ರಂದು ಮಂಗಳೂರು ಬಂದರಿಗೆ ಬಂದಿದ್ದು 53486 ಟನ್ ಕಚ್ಚಾ ತೈಲವನ್ನು ಅನ್ ಲೋಡ್ ಮಾಡುತ್ತಿದೆ. ಸದ್ಯದಲ್ಲೇ ರಷ್ಯಾದಿಂದ ಮತ್ತೊಂದು ತೈಲ ಹಡಗು ಓಯಸಿಸ್ ಬರಲಿದ್ದು ಅದರ ಮೂಲಕ 99,900 ಮೆಟ್ರಿಕ್ ಟನ್ ತೈಲವನ್ನು ಮಂಗಳೂರು ಬಂದರಿನಿಂದ ತೈಲಾಗಾರಕ್ಕೆ ಒದಗಿಸಲಿದೆ. (ಮಾಹಿತಿ- ಬಿಸ್ನೆಸ್ ಲೈನ್)
03-10-26 05:30 pm
HK News Staffer
Urdu Habba Row: ವಿಧಾನಸೌಧ ಮೆಟ್ಟಿಲುಗಳಲ್ಲಿ ಉರ್ದು...
01-10-26 10:50 pm
‘ಕನ್ನಡದ ಶಿವಮಣಿ’ ಖ್ಯಾತಿಯ ಡ್ರಮ್ಮರ್ ದೇವ್ ನಿಧನ ;...
27-09-26 03:21 pm
ಬೆಂಗಳೂರಿಗೆ ಬಂದ ಶಾಸಕರೆಲ್ಲ ಎರಡೆರಡು ಮದುವೆಯಾಗಿದ್ದ...
25-09-26 04:49 pm
ರಾಜ್ಯ ಸರ್ಕಾರಕ್ಕೆ ಆರ್ಥಿಕ ಸಂಕಷ್ಟ ; ಬೆಳಗಾವಿ ವಿಟಿ...
25-09-26 03:11 pm
05-10-26 08:56 pm
HK News Staffer
ಪಶ್ಚಿಮ ಬಂಗಾಳದಲ್ಲಿ ಏಕರೂಪ ನಾಗರಿಕ ಸಂಹಿತೆ ; ಲವ್ ಜ...
05-10-26 01:49 pm
ನಾನು ಸಾವಿಗೆ ಅಂಜಲ್ಲ, ವಿಮಾನ ಪತನವೇ ಉದ್ದೇಶವಾಗಿತ್ತ...
05-10-26 11:40 am
Ramesh Chennithala: ಕೇರಳದಲ್ಲಿ ಪಿಡಬ್ಲ್ಯೂಡಿ ರಸ್...
04-10-26 07:07 pm
Smith Machar, benjamin netanyahu: ಸ್ಮಿತ್ ಮಚ್ಚ...
04-10-26 12:34 pm
05-10-26 10:53 pm
Mangaluru Staffer
Mangalore News, Ekkaru Temple, Tirupati Templ...
05-10-26 12:35 pm
'ಮುಳಿಯ ಜುವೆಲ್ಲರಿ' ಮಾಲೀಕ ಪುತ್ತೂರಿನ ಮುಳಿಯ ಶ್ಯಾಮ...
05-10-26 11:41 am
brijesh chowta: ಹೈಕೋರ್ಟ್ ಪೀಠ ಸ್ಥಾಪನೆಗೆ ಒಗ್ಗಟ್...
03-10-26 09:56 pm
Tammanna Shetty, mysore kambala: ಮೈಸೂರು ದಸರಾ...
03-10-26 01:27 pm
05-10-26 08:26 pm
HK News Staffer
ಪುತ್ತೂರಿನಿಂದ ಕೇರಳಕ್ಕೆ ಹಿಂಸಾತ್ಮಕ ರೀತಿಯಲ್ಲಿ 11...
05-10-26 08:24 pm
Udupi News, Indrali Railway Station, Nizamudd...
05-10-26 12:28 pm
Belthangady News, Banakal Accident, Mudigere...
05-10-26 10:49 am
bantwal rain: ಕರಾವಳಿ ಭಾಗದಲ್ಲಿ ಹಿಂಗಾರು ಮಳೆ ಅಬ್...
05-10-26 10:04 am