ಬ್ರೇಕಿಂಗ್ ನ್ಯೂಸ್
24-03-26 12:10 pm HK News Staffer ದೇಶ - ವಿದೇಶ
ಟೆಹ್ರಾನ್, ಮಾರ್ಚ್ 24: ಅಮೆರಿಕ ಮತ್ತು ಇಸ್ರೇಲ್ ವಿರುದ್ಧ ಇರಾನ್ ನಿಂದ ಕಠಿಣ ಬೆದರಿಕೆಗಳು ಹೊರಬಂದಿವೆ. ‘ನಮ್ಮ ವಿದ್ಯುತ್ ಘಟಕಗಳಿಗೆ ದಾಳಿ ಮಾಡಿದರೆ, ನಾವು ಸಹ ಅದನ್ನೇ ಮಾಡುತ್ತೇವೆ. ಕರಾವಳಿ ಮತ್ತು ದ್ವೀಪಗಳನ್ನು ಗುರಿಯಾಗಿಸಿದರೆ, ಪರ್ಶಿಯನ್ ಕೊಲ್ಲಿಯಲ್ಲಿ ಸಮುದ್ರ ಸ್ಫೋಟಕಗಳನ್ನು ಅಳವಡಿಸುತ್ತೇವೆ’ ಎಂದು ಇರಾನ್ ರೆವಲ್ಯೂಷನರಿ ಗಾರ್ಡ್ಸ್ ಕೋರ್ ಸ್ಪಷ್ಟಪಡಿಸಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 48 ಗಂಟೆಯೊಳಗೆ ಹೋರ್ಮುಜ್ ಜಲಸಂಧಿಯನ್ನು ಮುಕ್ತಗೊಳಿಸುವಂತೆ ಬೆದರಿಕೆ ನೀಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಇರಾನ್, “ನಮ್ಮ ವಿದ್ಯುತ್ ಘಟಕಗಳಿಗೆ ಹಾನಿ ಮಾಡಿದರೆ ಪ್ರತಿದಾಳಿ ಖಚಿತ” ಎಂದು ತಿಳಿಸಿದೆ. ಇರಾನ್ ರಕ್ಷಣಾ ಮಂಡಳಿಯು ಕರಾವಳಿ ಮತ್ತು ದ್ವೀಪಗಳ ಮೇಲೆ ದಾಳಿ ಮಾಡಲು ಯತ್ನಿಸಿದರೆ, ಎಲ್ಲಾ ಪ್ರವೇಶ ಮಾರ್ಗಗಳಲ್ಲಿ ಸ್ಫೋಟಕಗಳ ಹಾನಿ ಸಂಭವಿಸಲಿದೆ ಎಂದು ಎಚ್ಚರಿಸಿದೆ.
ಇರಾನ್ ವಿದೇಶಾಂಗ ಇಲಾಖೆ ಮತ್ತು ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಾಘೇರ್ ಈ ಸಂದರ್ಭ ಯಾವುದೇ ಅಮೆರಿಕ–ಇರಾನ್ ಮಾತುಕತೆ ನಡೆದಿಲ್ಲ ಎಂದು ಹೇಳಿದ್ದು, ಅಮೆರಿಕದ ಹೇಳಿಕೆ ‘ಇಂಧನ ಬೆಲೆ ನಿಯಂತ್ರಣ ತಂತ್ರ’ ಮಾತ್ರ ಎಂದು ಹೇಳಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ರ 5 ದಿನದ ಕದನವಿರಾಮ ಹೇಳಿಕೆಗೆ ಪ್ರತಿಕ್ರಿಯಿಸಿರುವ ಇರಾನ್ ವಿದೇಶಾಂಗ ಸಚಿವಾಲಯ, ‘ಟೆಹ್ರಾನ್ ಮತ್ತು ವಾಷಿಂಗ್ಟನ್ ನಡುವೆ ಯಾವುದೇ ಮಾತುಕತೆಗಳು ನಡೆದಿಲ್ಲ. ಟ್ರಂಪ್ ಅವರ ಹೇಳಿಕೆಯು, ಏರುತ್ತಿರುವ ಇಂಧನ ಬೆಲೆಗಳನ್ನು ಕಡಿಮೆ ಮಾಡುವ ತಂತ್ರವಾಗಿದೆ’ ಎಂದು ಸ್ಪಷ್ಟಪಡಿಸಿದೆ. ಇದಕ್ಕೂ ಮುನ್ನ, ’ಇರಾನ್ನ ಪ್ರತಿದಾಳಿ ಬೆದರಿಕೆಗೆ ಬಗ್ಗಿ ಟ್ರಂಪ್ ಕದನವಿರಾಮದ ಮಾತು ಆಡಿದ್ದಾರೆ’ ಎಂದು ಇರಾನ್ ಸರ್ಕಾರಿ ಟಿವಿ ವರದಿ ಮಾಡಿತ್ತು.
ಈ ನಡುವೆ ಭಾರತೀಯ ಧ್ವಜ ಹೊತ್ತ ಎಲ್ಪಿಜಿ ಹಡಗುಗಳು ಪರ್ಶಿಯನ್ ಕೊಲ್ಲಿಯಿಂದ ಭಾರತಕ್ಕೆ ಪ್ರಯಾಣ ಆರಂಭಿಸಿವೆ. ಲಾರ್ಕ್ ಮತ್ತು ಕೆಶ್ಮ್ ದ್ವೀಪಗಳ ಹತ್ತಿರ ಹಡಗುಗಳು ಸಾಗುತ್ತಿದ್ದು, ಹೋರ್ಮುಜ್ ದಾಟುವ ಮೊದಲು ಇರಾನಿನ ಅಧಿಕಾರಿಗಳಿಗೆ ಗುರುತಿನ ಮಾಹಿತಿ ನೀಡಲು ನಿಧಾನಿಸಬಹುದೆಂದು ತಿಳಿಯುತ್ತಿದೆ. ಶಿವಾಲಿಕ್, ನಂದಾದೇವಿ, ಜಗ್ ಲಾಡ್ಕಿ ಮತ್ತು ಜಗ್ ಪ್ರಕಾಶ್ ಹಡಗುಗಳು ಈಗಾಗಲೇ ಭಾರತದತ್ತ ಸಾಗಿವೆ.
03-10-26 05:30 pm
HK News Staffer
Urdu Habba Row: ವಿಧಾನಸೌಧ ಮೆಟ್ಟಿಲುಗಳಲ್ಲಿ ಉರ್ದು...
01-10-26 10:50 pm
‘ಕನ್ನಡದ ಶಿವಮಣಿ’ ಖ್ಯಾತಿಯ ಡ್ರಮ್ಮರ್ ದೇವ್ ನಿಧನ ;...
27-09-26 03:21 pm
ಬೆಂಗಳೂರಿಗೆ ಬಂದ ಶಾಸಕರೆಲ್ಲ ಎರಡೆರಡು ಮದುವೆಯಾಗಿದ್ದ...
25-09-26 04:49 pm
ರಾಜ್ಯ ಸರ್ಕಾರಕ್ಕೆ ಆರ್ಥಿಕ ಸಂಕಷ್ಟ ; ಬೆಳಗಾವಿ ವಿಟಿ...
25-09-26 03:11 pm
05-10-26 08:56 pm
HK News Staffer
ಪಶ್ಚಿಮ ಬಂಗಾಳದಲ್ಲಿ ಏಕರೂಪ ನಾಗರಿಕ ಸಂಹಿತೆ ; ಲವ್ ಜ...
05-10-26 01:49 pm
ನಾನು ಸಾವಿಗೆ ಅಂಜಲ್ಲ, ವಿಮಾನ ಪತನವೇ ಉದ್ದೇಶವಾಗಿತ್ತ...
05-10-26 11:40 am
Ramesh Chennithala: ಕೇರಳದಲ್ಲಿ ಪಿಡಬ್ಲ್ಯೂಡಿ ರಸ್...
04-10-26 07:07 pm
Smith Machar, benjamin netanyahu: ಸ್ಮಿತ್ ಮಚ್ಚ...
04-10-26 12:34 pm
05-10-26 10:53 pm
Mangaluru Staffer
Mangalore News, Ekkaru Temple, Tirupati Templ...
05-10-26 12:35 pm
'ಮುಳಿಯ ಜುವೆಲ್ಲರಿ' ಮಾಲೀಕ ಪುತ್ತೂರಿನ ಮುಳಿಯ ಶ್ಯಾಮ...
05-10-26 11:41 am
brijesh chowta: ಹೈಕೋರ್ಟ್ ಪೀಠ ಸ್ಥಾಪನೆಗೆ ಒಗ್ಗಟ್...
03-10-26 09:56 pm
Tammanna Shetty, mysore kambala: ಮೈಸೂರು ದಸರಾ...
03-10-26 01:27 pm
05-10-26 08:26 pm
HK News Staffer
ಪುತ್ತೂರಿನಿಂದ ಕೇರಳಕ್ಕೆ ಹಿಂಸಾತ್ಮಕ ರೀತಿಯಲ್ಲಿ 11...
05-10-26 08:24 pm
Udupi News, Indrali Railway Station, Nizamudd...
05-10-26 12:28 pm
Belthangady News, Banakal Accident, Mudigere...
05-10-26 10:49 am
bantwal rain: ಕರಾವಳಿ ಭಾಗದಲ್ಲಿ ಹಿಂಗಾರು ಮಳೆ ಅಬ್...
05-10-26 10:04 am