ಬ್ರೇಕಿಂಗ್ ನ್ಯೂಸ್
18-03-26 07:11 pm HK News Staffer ದೇಶ - ವಿದೇಶ
ನವದೆಹಲಿ, ಮಾರ್ಚ್ 18: ಕಳೆದ ಮೂರು ವಿತ್ತೀಯ ವರ್ಷಗಳಲ್ಲಿ ಅಂದರೆ, 2022-23, 2023-2024 ಮತ್ತು 2024-2025ನೇ ವರ್ಷದಲ್ಲಿ ಕನಿಷ್ಠ ಬ್ಯಾಲೆನ್ಸ್ ಹೊಂದಿಲ್ಲ ಎಂಬ ಕಾರಣಕ್ಕಾಗಿ ಜನರಿಂದ 19 ಸಾವಿರ ಕೋಟಿ ವಸೂಲಿ ಮಾಡಿದ್ದಾಗಿ ಇತ್ತೀಚೆಗೆ ಸಂಸತ್ತಿನಲ್ಲಿ ಮಾಹಿತಿ ನೀಡಲಾಗಿತ್ತು. ಕಡಿಮೆ ಬ್ಯಾಲೆನ್ಸ್ ಅನ್ನುವ ಕಾರಣಕ್ಕೆ ಬಡವರಿಗೆ ಬರೆ ಹಾಕ್ತೀರಿ ಯಾಕೆ, ಕನಿಷ್ಠ ಬ್ಯಾಲೆನ್ಸ್ ಇಟ್ಟುಕೊಳ್ಳದೇ ಇರುವುದು ಅಪರಾಧನಾ ಎಂದು ಆಮ್ ಆದ್ಮಿ ಪಕ್ಷದ ಸಂಸದ ರಾಘವ್ ಛಡ್ಡಾ ಸಂಸತ್ತಿನಲ್ಲಿ ಮಾರ್ಮಿಕ ಪ್ರಶ್ನೆ ಮುಂದಿಟ್ಟಿದ್ದಾರೆ.
ಬ್ಯಾಂಕ್ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಇಲ್ಲವೆಂಬ ಕಾರಣಕ್ಕೆ ಬಡವರಿಂದ ವಸೂಲಿ ಮಾಡುತ್ತೀರಿ. ಹಣ ಇಲ್ಲದ ಬಡವರ ಖಾತೆಗಳಲ್ಲಿ ಬ್ಯಾಲೆನ್ಸ್ ಕಡಿಮೆ ಇರೋದೇ ಅಪರಾಧನಾ ಎಂದು ಪ್ರಶ್ನಿಸಿದ ರಾಘವ್ ಛಡ್ಡಾ, ಕಡಿಮೆ ಬ್ಯಾಲೆನ್ಸ್ ಹೊಂದಿಲ್ಲವೆಂದು ಕಳೆದ ಮೂರು ವರ್ಷದಲ್ಲಿ ದೇಶಾದ್ಯಂತ ಸಾರ್ವಜನಿಕ ರಂಗದ ಬ್ಯಾಂಕುಗಳಲ್ಲಿ 8 ಸಾವಿರ ಕೋಟಿ ವಸೂಲಿಯಾಗಿದ್ದರೆ, ಖಾಸಗಿ ಬ್ಯಾಂಕುಗಳಲ್ಲಿ 11 ಸಾವಿರ ಕೋಟಿ ಸಂಗ್ರಹ ಮಾಡಲಾಗಿದೆ.
ಒಬ್ಬ ಸಾಮಾನ್ಯ ವ್ಯಕ್ತಿ ಹಣ ಇದ್ದಾಗ ತನ್ನ ಖಾತೆಯಲ್ಲಿ ಆರು ಸಾವಿರ ರೂಪಾಯಿ ಬ್ಯಾಂಕಿಗೆ ಹಾಕಿರ್ತಾನೆ. ಆನಂತರ, ಅಗತ್ಯ ಖರ್ಚಿಗೆಂದು ಕೆಲವು ತಿಂಗಳ ನಂತರ ಅದರಿಂದ ಎರಡು ಸಾವಿರ ತೆಗೆಯುತ್ತಾನೆ. ಆರು ತಿಂಗಳ ನಂತರ ಬಂದರೆ ನಾಲ್ಕು ಸಾವಿರ ಇದ್ದುದು ಖಾತೆಯಲ್ಲಿ ಖಾಲಿಯಾಗಿ ಹೋಗಿರುತ್ತದೆ. ಯಾಕಂದ್ರೆ, ಐದು ಸಾವಿರ ಮಿನಿಮಮ್ ಬ್ಯಾಲೆನ್ಸ್ ಎಂದು ಹೇಳಿ ದಂಡ ಹಾಕಿ ಖಾತೆಯನ್ನೇ ಖಾಲಿ ಮಾಡಿ ಬಿಡುತ್ತಾರೆ. ಕೊನೆಗೆ, ಬ್ಯಾಂಕ್ ಖಾತೆಯೇ ನೆಗೆಟಿವ್ ಆಗಿರುತ್ತದೆ.
ಕನಿಷ್ಠ ಬ್ಯಾಲೆನ್ಸ್ ಎನ್ನುವುದನ್ನೇ ಅಪರಾಧವೆಂದು ಮಾಡಬಾರದು. ಸಾಮಾನ್ಯ ಜನರಿಗೆ ಬ್ಯಾಂಕಿಂಗ್ ಸಿಸ್ಟಮ್ ಇನ್ನೂ ಅವರಿಗೊಂದು ಜೀವನದ ಭಾಗವಾಗಿಲ್ಲ. ಅಂಥವರ ರಕ್ಷಣೆ ಆಗಬೇಕಿದೆ, ಈಗಲೂ ನಗರ ಭಾಗದ ಬ್ಯಾಂಕುಗಳಲ್ಲಿ ಕನಿಷ್ಠ ಹತ್ತು ಸಾವಿರ, ಗ್ರಾಮೀಣ ಭಾಗದಲ್ಲಿ 1300 ಬ್ಯಾಂಕ್ ಬ್ಯಾಲೆನ್ಸ್ ಇರಬೇಕೆಂಬ ನಿಯಮ ಇದೆ. ಇದನ್ನು ಬಡವರಿಗೆ, ರೈತರಿಗಾದ್ರೂ ರಿಯಾಯ್ತಿ ನೀಡಬಾರದೇ ಎಂದು ರಾಘವ್ ಛಡ್ಡಾ ಪ್ರಶ್ನಿಸಿದ್ದಾರೆ.
ಖಾಸಗಿ ಬ್ಯಾಂಕಿನಲ್ಲಿ ಹತ್ತು ಸಾವಿರ ಮಿನಿಮಮ್ ಬ್ಯಾಲೆನ್ಸ್ ಇರಬೇಕೆಂಬ ನಿಯಮ ಇದೆ. ಅದರ ಮೇಲೆ 12 ಪರ್ಸೆಂಟ್ ಜಿಎಸ್ಟಿ ಹಾಕುತ್ತಾರೆ. ಬಡವರಿಗೆ ಕನಿಷ್ಠ ಬ್ಯಾಲೆನ್ಸ್ ಶೂನ್ಯಕ್ಕೆ ಇಳಿಸಬೇಕು, ಅವರಿಂದ ಕನಿಷ್ಠ ಹಣ ಹೊಂದಿಲ್ಲ ಅಂತ ಹಣ ಕೀಳುವುದು ಸರಿಯಲ್ಲ ಎಂದು ಛಡ್ಡಾ ಹೇಳಿದ್ದಾರೆ. ಇವರು ಸಂಸತ್ತಿನಲ್ಲಿ ಆಡಿರುವ ಮಾತು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
03-10-26 05:30 pm
HK News Staffer
Urdu Habba Row: ವಿಧಾನಸೌಧ ಮೆಟ್ಟಿಲುಗಳಲ್ಲಿ ಉರ್ದು...
01-10-26 10:50 pm
‘ಕನ್ನಡದ ಶಿವಮಣಿ’ ಖ್ಯಾತಿಯ ಡ್ರಮ್ಮರ್ ದೇವ್ ನಿಧನ ;...
27-09-26 03:21 pm
ಬೆಂಗಳೂರಿಗೆ ಬಂದ ಶಾಸಕರೆಲ್ಲ ಎರಡೆರಡು ಮದುವೆಯಾಗಿದ್ದ...
25-09-26 04:49 pm
ರಾಜ್ಯ ಸರ್ಕಾರಕ್ಕೆ ಆರ್ಥಿಕ ಸಂಕಷ್ಟ ; ಬೆಳಗಾವಿ ವಿಟಿ...
25-09-26 03:11 pm
05-10-26 08:56 pm
HK News Staffer
ಪಶ್ಚಿಮ ಬಂಗಾಳದಲ್ಲಿ ಏಕರೂಪ ನಾಗರಿಕ ಸಂಹಿತೆ ; ಲವ್ ಜ...
05-10-26 01:49 pm
ನಾನು ಸಾವಿಗೆ ಅಂಜಲ್ಲ, ವಿಮಾನ ಪತನವೇ ಉದ್ದೇಶವಾಗಿತ್ತ...
05-10-26 11:40 am
Ramesh Chennithala: ಕೇರಳದಲ್ಲಿ ಪಿಡಬ್ಲ್ಯೂಡಿ ರಸ್...
04-10-26 07:07 pm
Smith Machar, benjamin netanyahu: ಸ್ಮಿತ್ ಮಚ್ಚ...
04-10-26 12:34 pm
05-10-26 10:53 pm
Mangaluru Staffer
Mangalore News, Ekkaru Temple, Tirupati Templ...
05-10-26 12:35 pm
'ಮುಳಿಯ ಜುವೆಲ್ಲರಿ' ಮಾಲೀಕ ಪುತ್ತೂರಿನ ಮುಳಿಯ ಶ್ಯಾಮ...
05-10-26 11:41 am
brijesh chowta: ಹೈಕೋರ್ಟ್ ಪೀಠ ಸ್ಥಾಪನೆಗೆ ಒಗ್ಗಟ್...
03-10-26 09:56 pm
Tammanna Shetty, mysore kambala: ಮೈಸೂರು ದಸರಾ...
03-10-26 01:27 pm
05-10-26 08:26 pm
HK News Staffer
ಪುತ್ತೂರಿನಿಂದ ಕೇರಳಕ್ಕೆ ಹಿಂಸಾತ್ಮಕ ರೀತಿಯಲ್ಲಿ 11...
05-10-26 08:24 pm
Udupi News, Indrali Railway Station, Nizamudd...
05-10-26 12:28 pm
Belthangady News, Banakal Accident, Mudigere...
05-10-26 10:49 am
bantwal rain: ಕರಾವಳಿ ಭಾಗದಲ್ಲಿ ಹಿಂಗಾರು ಮಳೆ ಅಬ್...
05-10-26 10:04 am