ಬ್ರೇಕಿಂಗ್ ನ್ಯೂಸ್
10-03-26 09:46 pm HK News Desk ದೇಶ - ವಿದೇಶ
ನವದೆಹಲಿ, ಮಾರ್ಚ್ 10: ಗಲ್ಫ್ ರಾಷ್ಟ್ರಗಳ ಯುದ್ಧದಲ್ಲಿ ಇಸ್ರೇಲ್ ಅತ್ಯಂತ ಅಪಾಯಕಾರಿ ಬಿಳಿ ರಂಜಕದ ಬಾಂಬ್ ಗಳನ್ನು ಲೆಬನಾನ್ ಮೇಲೆ ಪ್ರಯೋಗಿಸಿದೆ ಎನ್ನುವ ಸುದ್ದಿ ಬಂದಿದೆ. ಇರಾನ್ ಬೆಂಬಲಿತ ಲೆಬನಾನ್, ಬೈರೂತ್ ನಗರಗಳ ಮೇಲೆ ಇಸ್ರೇಲ್ ದಾಳಿ ನಡೆಸಿದ್ದು ಈ ವೇಳೆ ಜನವಸತಿ ಪ್ರದೇಶಗಳ ಮೇಲೆ ವಿಷಕಾರಿ ರಾಸಾಯನಿಕಗಳನ್ನು ಪ್ರಯೋಗಿಸಿರುವ ಬಗ್ಗೆ ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಬಿಳಿ ರಂಜಕದ ಬಾಂಬ್ ಗಳನ್ನು ಪ್ರಯೋಗಿಸಿದೆ ಎನ್ನುವುದು ಸುದ್ದಿಯಾಗುತ್ತಿದ್ದಂತೆ ವಿಶ್ವ ರಾಷ್ಟ್ರಗಳಿಂದ ಭಾರೀ ಖಂಡನೆ ವ್ಯಕ್ತವಾಗಿದೆ. ಉಕ್ರೇನ್ ಯುದ್ಧದಲ್ಲಿ ರಷ್ಯಾ ಕೂಡ ಇದೇ ರೀತಿಯ ಬಿಳಿ ರಂಜಕವುಳ್ಳ ಬಾಂಬನ್ನು ಪ್ರಯೋಗ ಮಾಡಿದೆ ಎಂದು ಹೇಳಲಾಗಿತ್ತು. ಜಗತ್ತಿನ ಅತಿ ಪ್ರಬಲ ಸೇನಾಪಡೆಗಳ ಬತ್ತಳಿಕೆಯಲ್ಲಿ ಈ ಬಿಳಿ ರಂಜಕ ಭರಿತ ಬಾಂಬ್ ಗಳಿದ್ದು, ಇದನ್ನು ಮನುಕುಲದ ಅತಿ ವಿನಾಶಕಾರಿ ಬಾಂಬ್ ಎಂದು ತಜ್ಞರು ಹೇಳುತ್ತಾರೆ.
ಲೆಬನಾನ್ ಕಡೆಯಿಂದ ಹೆಜ್ಬುಲ್ಲಾ ಬಂಡುಕೋರರು ಇಸ್ರೇಲ್ ಮೇಲೆ ದಾಳಿ ನಡೆಸಿದ್ದಕ್ಕೆ ಪ್ರತಿಯಾಗಿ ಈ ಬಿಳಿ ಅಪಾಯಕಾರಿ ಬಾಂಬ್ ಗಳನ್ನು ಇಸ್ರೇಲ್ ವಾಯುಪಡೆ ಸುರಿಸಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಮಾನವ ಹಕ್ಕುಗಳ ಸಂಸ್ಥೆಯ ರಾಮ್ಜಿ ಕೈಸ್ ಆಕ್ಷೇಪಿಸಿದ್ದು, ನಾಗರಿಕ ಪ್ರದೇಶಗಳ ಮೇಲೆ ಇಂತಹ ಬಾಂಬ್ ಗಳನ್ನು ಹಾಕಿದ್ದು ಖಂಡನೀಯ. ವಸತಿ ಪ್ರದೇಶಗಳ ಮೇಲೆ ಬಿಳಿ ರಂಜಕದ ಬಳಕೆಯು ಕಾನೂನು ಬಾಹಿರ. ಇದರಿಂದ ಸ್ಥಳೀಯ ಜನರ ಮೇಲೆ ಗಂಭೀರ ಪರಿಣಾಮ ಬೀಳುತ್ತದೆ ಎಂದಿದ್ದಾರೆ.
ಬಿಳಿ ರಂಜಕ ಅಪಾಯಕಾರಿ ರಾಸಾಯನಿಕವಾಗಿದ್ದು ಇದನ್ನು ಫಿರಂಗಿ ಶೆಲ್ ಅಥವಾ ಬಾಂಬ್ ಗಳನ್ನಿಟ್ಟು ಸ್ಫೋಟಿಸಲಾಗುತ್ತದೆ. ಬಿಳಿ ರಂಜಕ ಬಿಡುಗಡೆಯಾದ ಕೂಡಲೇ ಆಕ್ಸಿಜನ್ ಜೊತೆ ಸೇರಿ ಉರಿಯತೊಡಗುತ್ತದೆ. ಈ ಪ್ರಕ್ರಿಯೆಯಲ್ಲಿ ತಕ್ಷಣಕ್ಕೆ 815 ಡಿಗ್ರಿ ಸೆಲ್ಸಿಯಸ್ ಮೀರಿದ ಶಾಖ ಬಿಡುಗಡೆಯಾಗುತ್ತದೆ. ದಟ್ಟ ಹೊಗೆ ಮತ್ತು ಬೆಂಕಿ ಉಂಡೆಗಳಾಗಿ ಭೂಮಿಗೆ ಬಿದ್ದಾಗ ಅಲ್ಲಿರುವ ಜನರು ಸಜೀವ ದಹನವಾಗುತ್ತಾರೆ. ಬಿಳಿ ರಂಜಕದ ಜೊತೆಗೆ ರಬ್ಬರ್ ಮಿಶ್ರಣ ಇರುವುದರಿಂದ ಇದರ ಸ್ಫೋಟ ಇನ್ನಷ್ಟು ತೀವ್ರವಾಗಿರುತ್ತದೆ ಎನ್ನುವುದು ತಜ್ಞರ ವಿಶ್ಲೇಷಣೆ.
ಎರಡನೇ ಮಹಾಯುದ್ಧ ಸಂದರ್ಭದಲ್ಲಿ ಸೈನಿಕರನ್ನು ಗೊಂದಲ ಪಡಿಸಲು ಹೊಗೆ ಬಾಂಬ್ ಗಳಾಗಿ ಇದನ್ನು ಬಳಕೆ ಮಾಡಲಾಗಿತ್ತು. ರಾತ್ರಿ ಸಮಯದಲ್ಲಿ ಇದನ್ನು ಸ್ಫೋಟಿಸಿ ಸ್ಥಳಗಳನ್ನು ಗುರುತಿಸಲು, ಶಸ್ತ್ರಾಗಾರಗಳನ್ನು ನಾಶಪಡಿಸಲು ಬಳಸಲಾಗಿತ್ತು. ಈ ಬಾಂಬ್ ಅನ್ನು ರಾಸಾಯನಿಕ ಅಸ್ತ್ರವೆಂದೇ ಪರಿಗಣಿಸಲಾಗಿದೆ. ಗಾಳಿಯಲ್ಲಿ ತೇಲುತ್ತ ಭೂಮಿಯ ಮೇಲ್ಮೈಯಲ್ಲಿ ಉರಿಯುತ್ತ ಸಾಗುವ ಈ ರಾಸಾಯನಿಕದಿಂದಾಗಿ ರಾತ್ರಿ ವೇಳೆಯೂ ಹಗಲಿನಂತೆ ಕಾಣುತ್ತದೆ. ಇದರ ದಟ್ಟ ಹೊಗೆ ಮೈಲುಗಳ ವರೆಗೂ ವ್ಯಾಪಿಸುತ್ತದೆ.
ಬಿಳಿ ರಂಜಕ ಅಪಾಯಕಾರಿ ಏಕೆ ?
ಬಿಳಿ ರಂಜಕ ಅಪಾಯಕಾರಿಯಾಗಿದ್ದು, ಸ್ಫೋಟದ ನಂತರ ಇದರ ಹೊಗೆ ಮತ್ತು ಆವಿಯನ್ನು ಉಸಿರಾಡುವುದರಿಂದ ಶ್ವಾಸಕೋಶದ ಉರಿಯೂತ, ಕೆಮ್ಮು, ಉಸಿರಾಟದ ತೊಂದರೆ ಶ್ವಾಸಕೋಶದ ವೈಫಲ್ಯ ಉಂಟಾಗಬಹುದು. ದವಡೆ ಮೂಳೆ ಕೊಳೆಯುವುದು, ಮನುಷ್ಯನ ನರಮಂಡಲದ ಮೇಲೆ ತೀವ್ರ ಪರಿಣಾಮ ಬೀರಬಹುದು ಎಂದು ಹೇಳುತ್ತಾರೆ, ವಿಜ್ಞಾನಿಗಳು.
ವಿಶ್ವಸಂಸ್ಥೆ ನಿಷೇಧಿತ ಅಸ್ತ್ರ
ವಿಶ್ವಸಂಸ್ಥೆಯ ಪ್ರೋಟೋಕಾಲ್ ಪ್ರಕಾರ, ಬಿಳಿ ರಂಜಕದ ಬಾಂಬ್ ಬಳಕೆಯನ್ನು ನಿಷೇಧಿಸಲಾಗಿದೆ. ಅದರಲ್ಲೂ ನಾಗರಿಕ ಪ್ರದೇಶಗಳ ಮೇಲೆ ಪ್ರಯೋಗಿಸುವುದು ಮಾನವ ಹಕ್ಕು ಉಲ್ಲಂಘನೆಯಾಗುತ್ತದೆ. ಬಿಳಿ ರಂಜಕದ ಸುಟ್ಟ ಗಾಯಗಳಿಂದ ಬದುಕುಳಿದರೂ ದೀರ್ಘ ಕಾಲ ವಾಸಿಯಾಗದ ಕಾಯಿಲೆಗೆ ತುತ್ತಾಗುತ್ತಾರೆ. ಎಲುಬು ನಶಿಸುವುದರಿಂದ ಅಂಗಾಂಗ ವೈಫಲ್ಯ, ಪಾರ್ಶ್ವವಾಯು ರೀತಿಯ ತೊಂದರೆಗೆ ಸಿಲುಕುತ್ತಾರೆ. ಹಾಗಿದ್ದರೂ, ಇರಾಕ್ – ಅಮೆರಿಕ ಯುದ್ಧ ಸೇರಿದಂತೆ ಹಲವು ಬಾರಿ ಈ ಬಾಂಬ್ ಗಳನ್ನು ಬಳಸಲಾಗಿತ್ತು.
03-10-26 05:30 pm
HK News Staffer
Urdu Habba Row: ವಿಧಾನಸೌಧ ಮೆಟ್ಟಿಲುಗಳಲ್ಲಿ ಉರ್ದು...
01-10-26 10:50 pm
‘ಕನ್ನಡದ ಶಿವಮಣಿ’ ಖ್ಯಾತಿಯ ಡ್ರಮ್ಮರ್ ದೇವ್ ನಿಧನ ;...
27-09-26 03:21 pm
ಬೆಂಗಳೂರಿಗೆ ಬಂದ ಶಾಸಕರೆಲ್ಲ ಎರಡೆರಡು ಮದುವೆಯಾಗಿದ್ದ...
25-09-26 04:49 pm
ರಾಜ್ಯ ಸರ್ಕಾರಕ್ಕೆ ಆರ್ಥಿಕ ಸಂಕಷ್ಟ ; ಬೆಳಗಾವಿ ವಿಟಿ...
25-09-26 03:11 pm
05-10-26 08:56 pm
HK News Staffer
ಪಶ್ಚಿಮ ಬಂಗಾಳದಲ್ಲಿ ಏಕರೂಪ ನಾಗರಿಕ ಸಂಹಿತೆ ; ಲವ್ ಜ...
05-10-26 01:49 pm
ನಾನು ಸಾವಿಗೆ ಅಂಜಲ್ಲ, ವಿಮಾನ ಪತನವೇ ಉದ್ದೇಶವಾಗಿತ್ತ...
05-10-26 11:40 am
Ramesh Chennithala: ಕೇರಳದಲ್ಲಿ ಪಿಡಬ್ಲ್ಯೂಡಿ ರಸ್...
04-10-26 07:07 pm
Smith Machar, benjamin netanyahu: ಸ್ಮಿತ್ ಮಚ್ಚ...
04-10-26 12:34 pm
05-10-26 10:53 pm
Mangaluru Staffer
Mangalore News, Ekkaru Temple, Tirupati Templ...
05-10-26 12:35 pm
'ಮುಳಿಯ ಜುವೆಲ್ಲರಿ' ಮಾಲೀಕ ಪುತ್ತೂರಿನ ಮುಳಿಯ ಶ್ಯಾಮ...
05-10-26 11:41 am
brijesh chowta: ಹೈಕೋರ್ಟ್ ಪೀಠ ಸ್ಥಾಪನೆಗೆ ಒಗ್ಗಟ್...
03-10-26 09:56 pm
Tammanna Shetty, mysore kambala: ಮೈಸೂರು ದಸರಾ...
03-10-26 01:27 pm
05-10-26 08:26 pm
HK News Staffer
ಪುತ್ತೂರಿನಿಂದ ಕೇರಳಕ್ಕೆ ಹಿಂಸಾತ್ಮಕ ರೀತಿಯಲ್ಲಿ 11...
05-10-26 08:24 pm
Udupi News, Indrali Railway Station, Nizamudd...
05-10-26 12:28 pm
Belthangady News, Banakal Accident, Mudigere...
05-10-26 10:49 am
bantwal rain: ಕರಾವಳಿ ಭಾಗದಲ್ಲಿ ಹಿಂಗಾರು ಮಳೆ ಅಬ್...
05-10-26 10:04 am