ಬ್ರೇಕಿಂಗ್ ನ್ಯೂಸ್
10-03-26 04:30 pm Giridhar Shetty, ಗಿರಿಧರ್ ಶೆಟ್ಟಿ ದೇಶ - ವಿದೇಶ
ನವದೆಹಲಿ, ಮಾರ್ಚ್ 10: ಯುದ್ಧ ಬಿಕ್ಕಟ್ಟಿನಿಂದಾಗಿ ತೈಲ ದರ ನಾಗಾಲೋಟದಲ್ಲಿದ್ದರೆ, ಅಮೆರಿಕ ಮತ್ತು ಇರಾನ್ ಮುಯ್ಯಿಗೆ ಮುಯ್ಯಿ, ನೀ ಕೊಡೆ ನಾ ಬಿಡೆ ಅನ್ನುವಷ್ಟರ ಮಟ್ಟಿಗೆ ಎದುರುಬದುರಾಗಿದೆ. ಅಮೆರಿಕ- ಇಸ್ರೇಲ್ ದಾಳಿ ನಿಲ್ಲಿಸದಿದ್ದರೆ ಹರ್ಮುಜ್ ಜಲಸಂಧಿಯಿಂದ ತೈಲ ಹೊತ್ತ ಹಡಗನ್ನು ಹೋಗಲು ಬಿಡುವುದಿಲ್ಲ ಎಂದು ಇರಾನ್ ರೆವೊಲ್ಯುಶನರಿ ಗಾರ್ಡ್ಸ್ ಹೇಳಿದರೆ, ಆ ರೀತಿ ಮಾಡಿದರೆ ಈಗ ಮಾಡಿದ್ದಕ್ಕಿಂತ 20 ಪಟ್ಟು ಹೆಚ್ಚಿನ ದಾಳಿಯನ್ನು ಮಾಡುತ್ತೇವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುಡುಗಿದ್ದಾರೆ.
ಒಂದೆಡೆ ಜಾಗತಿಕ ಮಾರುಕಟ್ಟೆಗೆ ಸೌದಿ ಅರೇಬಿಯಾ ಸೇರಿದಂತೆ ಗಲ್ಫ್ ರಾಷ್ಟ್ರಗಳ ತೈಲ ಪೂರೈಕೆ ವ್ಯತ್ಯಯ ಆಗಿರುವುದರಿಂದ ಕಚ್ಛಾ ಪೆಟ್ರೋಲಿಯಂ ಬೆಲೆಯು ಬ್ಯಾರೆಲ್ ಗೆ 110 ಡಾಲರ್ ಮುಟ್ಟಿದೆ. ಈ ಹಿಂದೆ 2022ರಲ್ಲಿ ಇದೇ ರೀತಿ ಆಗಿದ್ದರೂ, ಆನಂತರ ಅದು ಕೆಲ ತಿಂಗಳಲ್ಲಿ ಸರಿ ಹೋಗಿತ್ತು. ಇದೀಗ ಯುದ್ಧದ ಅನಿಶ್ಚಿತತೆ ಎಷ್ಟು ದಿನ ಆಗಬಹುದೆಂಬ ಅಂದಾಜಿಲ್ಲದಿರುವುದರಿಂದ ರಾಕೆಟ್ ವೇಗದಲ್ಲಿ ತೈಲ ದರವು ಏರತೊಡಗಿದೆ. ಇದರ ಪರಿಣಾಮ ಜನಸಾಮಾನ್ಯನ ಮೇಲೆ ನೇರವಾಗಿ ತಟ್ಟತೊಡಗಿದೆ.
ಪ್ರಮುಖವಾಗಿ ಏಶ್ಯನ್ ರಾಷ್ಟ್ರಗಳಲ್ಲಿ ತೀವ್ರ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ಚೀನಾವು ಯುದ್ಧದ ಸನ್ನಿವೇಶ ಎದುರಾಗಬಹುದು ಎನ್ನುವ ನಿಟ್ಟಿನಲ್ಲಿ ಎರಡು ವರ್ಷಗಳ ಹಿಂದೆಯೇ ತೈಲ ಶೇಖರಣೆ ಮಾಡಲು ತೊಡಗಿತ್ತು. ಇದರಿಂದಾಗಿ ಈಗ ದರ ಹೆಚ್ಚಿದೊಡನೆ ಜಾಗತಿಕ ಮಾರುಕಟ್ಟೆಯಿಂದ ತೈಲ ಖರೀದಿಸುವುದನ್ನು ನಿಲ್ಲಿಸಿದೆ. ಭಾರತದಲ್ಲಿ ಒಂದು ತಿಂಗಳಿಗೆ ಆಗುವಷ್ಟು ತೈಲ ಶೇಖರಣೆ ಇದೆಯೆಂದು ಸರ್ಕಾರ ಹೇಳುತ್ತಿದ್ದರೂ, ಎಲ್ ಪಿಜಿ ದರವನ್ನು ಏರಿಸಿದೆ. ಇದರ ಬೆನ್ನಲ್ಲೇ ಪ್ರಮುಖ ನಗರಗಳಲ್ಲಿ ಎಲ್ ಪಿಜಿ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯ ಆಗಿದೆ.
ಧಾರ್ಮಿಕರ ಆಡಳಿತ ಕೊನೆ ಮಾಡ್ತೀವಿ
ಇದೇ ವೇಳೆ, ಧರ್ಮಗುರುಗಳ ಆಡಳಿತವನ್ನು ಕೊನೆಗಾಣಿಸುವುದೇ ಇಸ್ರೇಲ್ ಗುರಿ ಎಂದು ಪ್ರಧಾನಿ ನೆತನ್ಯಾಹು ಹೇಳಿದ್ದಾರೆ. ಯುದ್ಧದ ಕೊನೆಯನ್ನು ಇರಾನ್ ಜನರೇ ನಿರ್ಧರಿಸಬೇಕು. ಅಲ್ಲಿನ ಜನರಿಗೆ ಒಳ್ಳೆಯ ಆಡಳಿತ, ಧಾರ್ಮಿಕ ಮೂಲಭೂತವಾದ ಹೊರತಾದ ಆಡಳಿತವನ್ನು ಕೊಡುವುದು ನಮ್ಮ ಗುರಿಯಾಗಿದೆ. ಅಂತಹ ಆಡಳಿತ ಬರೋ ವರೆಗೂ ಅಲ್ಲಿ ಆಡಳಿತ ವಹಿಸಿಕೊಂಡವರ ಮೂಳೆಗಳನ್ನು ಮುರಿಯುತ್ತಲೇ ಇರುತ್ತೇವೆ. ನಮ್ಮ ಕೈಗಳು ಇನ್ನಷ್ಟು ವಿಸ್ತಾರ ಆಗುತ್ತಲೇ ಇರುತ್ತವೆ. ಯುದ್ಧ ನಿಂತರೆ ಅದರಿಂದ ಇರಾನ್ ಜನರಿಗೇ ಒಳಿತಾಗುತ್ತದೆ ಎಂದು ಹೇಳಿದ್ದಾರೆ.
ಇದೇ ವೇಳೆ, ಟ್ರುತ್ ಮೀಡಿಯಾದಲ್ಲಿ ಡೊನಾಲ್ಡ್ ಟ್ರಂಪ್ ಹೇಳಿಕೆ ಪ್ರಕಟಿಸಿದ್ದು ತೈಲದ ಹಡಗುಗಳನ್ನು ಹೋಗಲು ಬಿಡದಿದ್ದರೆ ನಮ್ಮ ದಾಳಿಯು ಇನ್ನಷ್ಟು ಕಠಿಣವಾಗುತ್ತದೆ. ಅವರಿಗೆ ಜಗತ್ತಿನ ಬೇರಾವುದೇ ಶಕ್ತಿಗಳು ಬೆಂಬಲ ನೀಡಿದರೂ ಅದನ್ನು ಎದುರಿಸಲು ಅಥವಾ ತಡೆಯಲು ಸಾಧ್ಯವಾಗಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಇದಕ್ಕೆದುರಾಗಿ ಇರಾನ್ ವಕ್ತಾರರು ಹೇಳಿಕೆ ಬಿಡುಗಡೆ ಮಾಡಿದ್ದು, ಯುದ್ಧ ನಿಲ್ಲಿಸುವುದನ್ನು ನಿರ್ಧರಿಸುವುದು ನಾವೇ ಆಗಿರುತ್ತೇವೆ. ಟ್ರಂಪ್ ಹೇಳಿಕೆಯು ಮೂರ್ಖತನದ್ದು ಎಂದು ಹೇಳಿದ್ದಾರೆ.
21-08-26 03:42 pm
HK News Staffer
ಆಟೋಗಳ ರೀತಿ ಗಂಟೆಗೆ 55 ಕಿಮೀ ಓಡುವ ರೈಲುಗಳನ್ನೇ ‘ಸೂ...
19-08-26 09:55 pm
ಬೆಂಗಳೂರಿನಲ್ಲಿ ಎಚ್1ಎನ್1 ಸೋಂಕು ಹೆಚ್ಚಳ ; ಖಾಸಗಿ ಶ...
19-08-26 09:52 pm
ಹನೂರು ಎನ್ಕೌಂಟರ್; ತಮಿಳುನಾಡು ಕ್ಯಾತೆ ಬೆನ್ನಲ್ಲೇ...
19-08-26 05:38 pm
ವಂದೇ ಮಾತರಂ ವಿವಾದ ; ಜೈಲಿಗೆ ಹಾಕಿದ್ರೂ ನಾನು ವಂದೇ...
19-08-26 02:15 pm
20-08-26 10:55 am
HK News Staffer
ತಮಿಳುನಾಡು ಮಹಿಳಾ ಸರ್ಕಾರಿ ನೌಕರರಿಗೆ ಸರ್ಕಾರದ ಬಂಪರ...
19-08-26 02:13 pm
ಲಷ್ಕರ್ ಸ್ಥಾಪಕ ಹಫೀಜ್ ಸಯೀದ್ 10,000 ಯುವಕರನ್ನು ಕಾ...
19-08-26 01:06 pm
'ಜನ ಗಣ ಮನ' ಗೀತೆಯನ್ನು ಬ್ರಿಟನ್ ರಾಣಿಯ ಹೊಗಳಲು ಬರೆ...
19-08-26 12:10 pm
ಬಿಜೆಪಿಯ ಯುವ ಮೋರ್ಚಾಗೆ ಹೊಸ ಸಾರಥಿ ; ತೇಜಸ್ವಿ ಸೂರ್...
18-08-26 02:42 pm
21-08-26 09:54 pm
HK News Staffer
Mfc Hotel Raid, Mangalorr: ಕೆಎಫ್ ಸಿ ಬಳಿಕ ಮಂಗಳ...
21-08-26 08:17 pm
ಬೆಂಗಳೂರು, ಮಂಗಳೂರು ಸೇರಿ ರಾಜ್ಯಾದ್ಯಂತ 36 ರೈಲ್ವೇ...
21-08-26 03:12 pm
ಬೆಳ್ತಂಗಡಿ ; ಹುಳ ಬಿದ್ದ ಪಡಿತರ ಅಕ್ಕಿ ಪೂರೈಕೆ, 50ಕ...
20-08-26 05:16 pm
ಪುತ್ತೂರು ; ಕಡಿದು ಬಿದ್ದ ವಿದ್ಯುತ್ ತಂತಿಯನ್ನು ಮರು...
19-08-26 08:40 pm
21-08-26 12:20 pm
HK News Staffer
ಇಷ್ಟದ ವಿದ್ಯಾರ್ಥಿಯನ್ನು ಕಂಡು “ಏಯ್ ಬಾಬೂ” ಎಂದಿದ್ದ...
21-08-26 11:03 am
ಎಸಿಪಿ ಕಚೇರಿ ಅಂಗಳದಲ್ಲೇ ಮಹಾಲಕ್ಷ್ಮಿ ದೇವಸ್ಥಾನಕ್ಕೆ...
20-08-26 08:06 pm
8.50 ಲಕ್ಷ ನಗದು ಹಣದೊಂದಿಗೆ ಬೈಕಿನಲ್ಲಿ ಬರುತ್ತಿದ್ದ...
20-08-26 05:33 pm
ಕೋಟೆಪುರ ಕೊಳೆತ ಶವ ಪತ್ತೆ ಪ್ರಕರಣ ; ವ್ಯಕ್ತಿಯ ಕೊಲೆ...
20-08-26 04:25 pm