ಬ್ರೇಕಿಂಗ್ ನ್ಯೂಸ್
15-02-26 04:01 pm HK Desk ದೇಶ - ವಿದೇಶ
ಮಾಸ್ಕೋ, ಫೆ.14: ಮಗನಿಗಾಗಿ ತಂದೆ ಪ್ರೀತಿಯಿಂದ ಬರೋಬ್ಬರಿ 6 ಕೋಟಿ ರೂಪಾಯಿ ಮೌಲ್ಯದ BMW ಕಾರನ್ನು ಉಡುಗೊರೆಯಾಗಿ ನೀಡಿದ್ದರು. ಆದರೆ ಕಾರು ಖರೀದಿಸಿದ ಕೆಲವೇ ದಿನದಲ್ಲೇ ಮಗ ದುರಂತ ಅಂತ್ಯ ಕಂಡಿದ್ದ. ಮಗನ ಸಾವಿನ ನೋವಿನಲ್ಲಿ ಆತನಿಗಾಗಿ ತೆಗೆದಿದ್ದ ಕಾರನ್ನು ಉಳಿಸಿಕೊಳ್ಳದೆ ಮಗನ ಸಮಾಧಿ ಪಕ್ಕದಲ್ಲೇ ಹೊಸ BMW ಕಾರನ್ನು ಸಮಾಧಿ ಮಾಡಿದ್ದಾರೆ. ಇದರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ತಂದೆ, ತಾಯಿ ಪ್ರೀತಿಯಿಂದಲೇ ಮಗನನ್ನು ಬೆಳೆಸಿದ್ದರು. ಮಗ ಏನು ಕೇಳಿದರೂ ಪೋಷಕರು ಇಲ್ಲ ಎಂದಿರಲಿಲ್ಲ. ಮಗನ ಹುಟ್ಟುಹಬ್ಬಕ್ಕೆ ತಂದೆ ಬರೋಬ್ಬರಿ 6 ಕೋಟಿ ಮೌಲ್ಯದ ಐಷಾರಾಮಿ ಕಾರನ್ನು ಉಡುಗೊರೆ ನೀಡಿದ್ದರು. ಮಗನಿಗೆ ಗೊತ್ತಿಲ್ಲದೆ ಕಾರನ್ನು ಬುಕ್ ಮಾಡಿದ್ದರು. ಹುಟ್ಟುಹಬ್ಬದ ದಿನ ಅಚ್ಚರಿ ನೀಡಿದ್ದರು. ವಿಶೇಷ ಉಡುಗೊರೆ ನೋಡಿ ಮಗನೂ ಸಂಭ್ರಮಿಸಿದ್ದ. ಕಾರಿನಲ್ಲಿ ಪೋಷಕರನ್ನು ಕೂರಿಸಿ ಸುತ್ತಾಡಿದ್ದ.
ಕಾರು ಬಂದ ಕೆಲವೇ ದಿನದಲ್ಲಿ ಮಗ ದುರಂತ ಸಾವು;
ಕಾರು ಮನೆಗೆ ಬಂದ ಕೆಲವೇ ದಿನಗಳಲ್ಲಿ ಮಗ ದುರಂತ ಸಾವು ಕಂಡಿದ್ದಾನೆ. ಮಗನ ಕಳೆದುಕೊಂಡ ಪೋಷಕರು ಗೋಳಾಡಿದ್ದಾರೆ. ಮಗ ಇಲ್ಲದ ಮೇಲೆ ಪ್ರತಿ ದಿನ ಬೆಳಗ್ಗೆ ಆತನ ಕಾರು ನೋಡಿದಾಗ ತಂದೆ ದುಃಖ ಉಮ್ಮಳಿಸಿ ಬರುತ್ತಿತ್ತು. ಮಗನಿಲ್ಲದ ಮೇಲೆ ಆತನಿಗಾಗಿ ಕೊಡಿಸಿದ ಕಾರು ಯಾಕೆ ಎಂದು ತಂದೆ 6 ಕೋಟಿ ರೂಪಾಯಿ ಮೌಲ್ಯದ ಹೊಸ BMW ಕಾರನ್ನು ಸಮಾಧಿ ಮಾಡಲು ಮುಂದಾಗಿದ್ದಾರೆ.
ಮಗನ ಸಮಾಧಿ ಪಕ್ಕದಲ್ಲೇ ಕಾರು ಸಮಾಧಿ
ಹೊಸ BMW ಕಾರನ್ನು ಮಗನ ಸಮಾಧಿ ಪಕ್ಕದಲ್ಲೇ ಸಮಾಧಿ ಮಾಡಿದ್ದಾರೆ. ಸಮಾಧಿ ಸ್ಥಳದಿಂದ ಕಾರನ್ನೂ ಯಾರೂ ಕದಿಯಬಾರದು ಎಂದು ತಂದೆ ಕಾರನ್ನು ಹೂತು ಹಾಕಲು ಜೆಸಿಬಿ ಮೂಲಕ ಗುಂಡಿ ಅಗೆದಿದ್ದಾರೆ. ಬಳಿಕ ಕಾಂಕ್ರೀಟ್ ತಂದು ಕಾರಿನ ಮೇಲೆ ಸುರಿದಿದ್ದಾರೆ. ಸಂಪೂರ್ಣ ಕಾಂಕ್ರೀಟ್‌ನಿಂದ ಗುಂಡಿಯಲ್ಲಿ ಕಾರನ್ನಿಟ್ಟು ಮುಚ್ಚಲಾಗಿದೆ. ಕೊನೆಯಲ್ಲಿ ಕಾರಿನ ಕೀಯನ್ನು ಅದೇ ಗುಂಡಿಗೆ ಎಸೆದು ಕಾಂಕ್ರೀಟ್‌ನಿಂದ ಮುಚ್ಚಿ ಮಣ್ಣು ಹಾಕಲಾಗಿದೆ. ಇದರ ವಿಡಿಯೋ ನೋಡಿ ಹಲವರು ಕಣ್ಣೀರು ಹಾಕಿದ್ದಾರೆ.
In a heart-wrenching incident from Moscow, a grieving father buried a luxury BMW car worth nearly ₹6 crore beside his son’s grave after the young man’s untimely death. A video of the emotional act has gone viral on social media.
03-10-26 05:30 pm
HK News Staffer
Urdu Habba Row: ವಿಧಾನಸೌಧ ಮೆಟ್ಟಿಲುಗಳಲ್ಲಿ ಉರ್ದು...
01-10-26 10:50 pm
‘ಕನ್ನಡದ ಶಿವಮಣಿ’ ಖ್ಯಾತಿಯ ಡ್ರಮ್ಮರ್ ದೇವ್ ನಿಧನ ;...
27-09-26 03:21 pm
ಬೆಂಗಳೂರಿಗೆ ಬಂದ ಶಾಸಕರೆಲ್ಲ ಎರಡೆರಡು ಮದುವೆಯಾಗಿದ್ದ...
25-09-26 04:49 pm
ರಾಜ್ಯ ಸರ್ಕಾರಕ್ಕೆ ಆರ್ಥಿಕ ಸಂಕಷ್ಟ ; ಬೆಳಗಾವಿ ವಿಟಿ...
25-09-26 03:11 pm
05-10-26 08:56 pm
HK News Staffer
ಪಶ್ಚಿಮ ಬಂಗಾಳದಲ್ಲಿ ಏಕರೂಪ ನಾಗರಿಕ ಸಂಹಿತೆ ; ಲವ್ ಜ...
05-10-26 01:49 pm
ನಾನು ಸಾವಿಗೆ ಅಂಜಲ್ಲ, ವಿಮಾನ ಪತನವೇ ಉದ್ದೇಶವಾಗಿತ್ತ...
05-10-26 11:40 am
Ramesh Chennithala: ಕೇರಳದಲ್ಲಿ ಪಿಡಬ್ಲ್ಯೂಡಿ ರಸ್...
04-10-26 07:07 pm
Smith Machar, benjamin netanyahu: ಸ್ಮಿತ್ ಮಚ್ಚ...
04-10-26 12:34 pm
05-10-26 10:53 pm
Mangaluru Staffer
Mangalore News, Ekkaru Temple, Tirupati Templ...
05-10-26 12:35 pm
'ಮುಳಿಯ ಜುವೆಲ್ಲರಿ' ಮಾಲೀಕ ಪುತ್ತೂರಿನ ಮುಳಿಯ ಶ್ಯಾಮ...
05-10-26 11:41 am
brijesh chowta: ಹೈಕೋರ್ಟ್ ಪೀಠ ಸ್ಥಾಪನೆಗೆ ಒಗ್ಗಟ್...
03-10-26 09:56 pm
Tammanna Shetty, mysore kambala: ಮೈಸೂರು ದಸರಾ...
03-10-26 01:27 pm
05-10-26 08:26 pm
HK News Staffer
ಪುತ್ತೂರಿನಿಂದ ಕೇರಳಕ್ಕೆ ಹಿಂಸಾತ್ಮಕ ರೀತಿಯಲ್ಲಿ 11...
05-10-26 08:24 pm
Udupi News, Indrali Railway Station, Nizamudd...
05-10-26 12:28 pm
Belthangady News, Banakal Accident, Mudigere...
05-10-26 10:49 am
bantwal rain: ಕರಾವಳಿ ಭಾಗದಲ್ಲಿ ಹಿಂಗಾರು ಮಳೆ ಅಬ್...
05-10-26 10:04 am