ಬ್ರೇಕಿಂಗ್ ನ್ಯೂಸ್
09-02-26 12:27 pm HK News Desk ದೇಶ - ವಿದೇಶ
ನವದೆಹಲಿ, ಫೆ.9 : ಇತ್ತೀಚೆಗೆ 'ಆಂಥ್ರೋಪಿಕ್' ಎಂಬ AI ಟೆಕ್ನಾಲಜಿ ಬಿಡುಗಡೆ ಮಾಡಿದ ಹೊಸ ಅಪ್‌ಡೇಟ್ ಸಾಫ್ಟ್‌ವೇರ್ ಜಾಗತಿಕ ಷೇರು ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿದೆ. ಹೂಡಿಕೆದಾರರು ಗಾಬರಿಯಿಂದ ಷೇರುಗಳನ್ನು ಮಾರಾಟ ಮಾಡಿದ್ದರಿಂದ, ಕಳೆದ ವಾರದ ನಾಲ್ಕು ದಿನಗಳಲ್ಲಿ ಪ್ರಮುಖ ಸಾಫ್ಟ್‌ವೇರ್ ಕಂಪನಿಗಳ ಒಟ್ಟು ಮಾರುಕಟ್ಟೆ ಮೌಲ್ಯದಲ್ಲಿ ಸುಮಾರು 285 ಬಿಲಿಯನ್ ಡಾಲರ್ (ಸುಮಾರು 24 ಲಕ್ಷ ಕೋಟಿ ರೂಪಾಯಿ) ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
ಆಂಥ್ರೋಪಿಕ್ ಕಂಪನಿ ತನ್ನ 'ಕ್ಲೋಡ್' (Claude) ಎಂಬ AI ಚಾಟ್‌ಬಾಟ್‌ಗಾಗಿ 11 ಹೊಸ 'ಓಪನ್ ಸೋರ್ಸ್ ಪ್ಲಗಿನ್'ಗಳನ್ನು ಬಿಡುಗಡೆ ಮಾಡಿದೆ. ಇವುಗಳಲ್ಲಿ ಮುಖ್ಯವಾಗಿ ಕಾನೂನು ಕೆಲಸಗಳಿಗೆ ಸಂಬಂಧಿಸಿದ ಟೂಲ್ ಮಾರುಕಟ್ಟೆಯಲ್ಲಿ ಭೀತಿ ಹುಟ್ಟಿಸಿದೆ. ಅಂದರೆ, ಷೇರು ಮಾರುಕಟ್ಟೆಯ ಹ್ಯಾಂಡ್ಲಿಂಗ್, ಇನ್ನಿತರ ಕೆಲಸವನ್ನು ಎಐ ಕ್ಲೋಡ್ ಸಾಫ್ಟ್‌ವೇರ್ ಗೆ ಕೊಟ್ಟಿದ್ದಾರೆ. ಕಳೆದ ಜನವರಿ ತಿಂಗಳಿನಿಂದ ಲೀಗಲ್, ಸೇಲ್ಸ್, ಮಾರ್ಕೆಟಿಂಗ್ ಮತ್ತು ಡಾಟಾ ಅನಾಲಿಸಿಸ್ ಅನ್ನು ಈ ಎಐ ಏಜಂಟ್ ಗಳು ಮಾಡುತ್ತಿವೆ. ಮಾರುಕಟ್ಟೆ ವಿಶ್ಲೇಷಕರು ಈ ಕುಸಿತವನ್ನು 'SaaSpocalypse' ಎಂದು ಕರೆದಿದ್ದಾರೆ. ಅಂದರೆ ಸಾಫ್ಟ್‌ವೇರ್ ಸೇವೆಗಳನ್ನು ಒದಗಿಸುವ (SaaS) ಕಂಪನಿಗಳಿಗೆ ಈ AI ನಿಂದ ದೊಡ್ಡ ಅಪಾಯವಿದೆ ಎಂಬ ವಿಶ್ಲೇಷಣೆ ನಡೆದಿದೆ.



ಯಾವ ಕಂಪನಿಗಳಿಗೆ ಹೊಡೆತ ?
ಕಾನೂನು ಮಾಹಿತಿ ನೀಡುವ ಥಾಮ್ಸನ್ ರಾಯಿಟರ್ಸ್ (Thomson Reuters) 15% ಕುಸಿತ ಕಂಡರೆ, ಲೀಗಲ್ ಜೂಮ್ (LegalZoom) 20% ಕುಸಿತ ಕಂಡಿದೆ. ಭಾರತದ ಐಟಿ ಕಂಪನಿಗಳಾದ ಇನ್ಫೋಸಿಸ್, ವಿಪ್ರೋ, ಮಹೀಂದ್ರಾ ಇನ್ನಿತರ ಐಟಿ ಸಂಬಂಧಿತ ಹಾಗೂ ಇನ್ನಿತರ ಕಂಪನಿ ಷೇರುಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ.
ಈ ಆಟೊಮೆಟಿಕ್ AI ಟೂಲ್ ಕಂಪನಿ ಒಪ್ಪಂದಗಳನ್ನು ಪರಿಶೀಲಿಸುವುದು (Contract review), ಅನುಸರಣೆ ತಪಾಸಣೆ (Compliance checks) ಮತ್ತು ಕಾನೂನು ವಿಷಯಗಳಿಗೆ ಸಂಬಂಧಿಸಿ ಸಂಕ್ಷಿಪ್ತ ವರದಿ ಸಿದ್ಧಪಡಿಸುವಂತಹ ಕೆಲಸಗಳನ್ನು ಸ್ವಯಂಚಾಲಿತ ಮಾಡಬಲ್ಲದು. ಇದುವರೆಗೆ ಕಂಪನಿಗಳು ಇಂತಹ ಕೆಲಸಗಳಿಗೆ ಸಾವಿರಾರು ಡಾಲರ್ ನೀಡಿ ಸಾಫ್ಟ್‌ವೇರ್ ಅಥವಾ ವಕೀಲರನ್ನು ಬಳಸುತ್ತಿದ್ದವು. ಈಗ AI ಇದನ್ನು ಸುಲಭವಾಗಿ ಮಾಡುತ್ತಿದೆ. ಇದರಿಂದಾಗಿ ಬಹಳಷ್ಟು ಉದ್ಯೋಗ ಕಡಿತದ ಭೀತಿ ಹೆಚ್ಚಿದೆ.
ಕಳೆದ ಎರಡು ವರ್ಷಗಳಿಂದ, ಮಾರುಕಟ್ಟೆಯಲ್ಲಿ AI ಉತ್ಪಾದಕತೆ ಹೆಚ್ಚಿಸುತ್ತದೆ ಮತ್ತು ತಂತ್ರಜ್ಞಾನ ಕಂಪನಿಗಳಿಗೆ ಹೊಸ ವ್ಯವಹಾರದ ಅವಕಾಶಗಳನ್ನು ಸೃಷ್ಟಿಸುತ್ತದೆ ಎಂಬ ನಂಬಿಕೆಯಿತ್ತು. ಇದರಿಂದಾಗಿ ಹೂಡಿಕೆದಾರರು AI ಸಂಬಂಧಿತ ಕಂಪನಿಗಳ ಮೇಲೆ ಹೂಡಿಕೆ ಸುರಿಮಳೆಗೈದಿದ್ದರು. ಇದು ಮಾರುಕಟ್ಟೆಯ ಮೌಲ್ಯವನ್ನು ದಾಖಲೆ ಮಟ್ಟಕ್ಕೆ ಏರಿಸಿತ್ತು. ಆದರೆ ಈಗ ಪರಿಸ್ಥಿತಿ ಬದಲಾಗುತ್ತಿದೆ.
Anthropic’s latest AI update for its Claude chatbot has triggered turmoil in global stock markets, with major software firms losing an estimated $285 billion in market value within four days. The rollout of new AI agents capable of handling legal, compliance, sales, and data analysis tasks has sparked fears of disruption in the SaaS sector, leading analysts to term the trend “SaaSpocalypse.”
09-02-26 01:30 pm
HK News Desk
ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ರ...
09-02-26 12:29 pm
Gadag, No phone, Tv: ಎಸ್ಸೆಸ್ಸೆಲ್ಸಿ ಮಕ್ಕಳ ಭವಿಷ...
07-02-26 05:09 pm
ಸಿದ್ದರಾಮಯ್ಯರೇ ಐದು ವರ್ಷ ಸಿಎಂ ; ಪುತ್ರ ಯತೀಂದ್ರ ಪ...
07-02-26 02:58 pm
Sanjana Bus Fire Accident, Nelamangala: ಮತ್ತೊ...
06-02-26 12:30 pm
09-02-26 12:27 pm
HK News Desk
ಬಿಜೆಪಿಯಿಂದ ನಮಗೆ ಅಚ್ಛೇ ದಿನ್ ಬಂದಿಲ್ಲ, ಸ್ವಯಂಸೇವಕ...
08-02-26 10:18 pm
25 ವರ್ಷಗಳ ಬಳಿಕ ಮುಂಬೈ ಪಾಲಿಕೆ ಬಿಜೆಪಿ ತೆಕ್ಕೆಗೆ ;...
07-02-26 10:53 pm
ಕಣ್ಣೆದುರೇ ನಡೆದ ಅಚ್ಚರಿ ; 1 ಲಕ್ಷ ರೂ. ಮೌಲ್ಯದ ಚಿನ...
06-02-26 10:58 pm
ಕೊರಿಯನ್ ವೆಬ್ ಸಿರೀಸ್ ವ್ಯಸನ, ತಂದೆಯ ಎರಡು ಕೋಟಿ ಸಾ...
06-02-26 08:47 pm
08-02-26 11:17 pm
HK News Desk
ಜಾಗತಿಕ ಪ್ರವಾಸಿ ತಾಣಗಳ ಅಭಿವೃದ್ಧಿ ; ಕೋಡಿ- ಕನ್ಯಾನ...
08-02-26 10:10 pm
ಬೈಂದೂರು ಕ್ಷೇತ್ರದ ಮಾಜಿ ಶಾಸಕ, ಜನತಾ ಪರಿವಾರದ ಹಿರಿ...
07-02-26 12:55 pm
DK Shivakumar, Puttur: ಪಕ್ಷ ಏನು ಹೇಳುತ್ತೋ ಅದೇ...
07-02-26 11:53 am
ಬಿಜೆಪಿಯವರು ತಿಪ್ಪರಲಾಗ ಹೊಡೆದ್ರೂ ಅಧಿಕಾರಕ್ಕೆ ಬರಲ್...
06-02-26 10:56 pm
09-02-26 02:04 pm
HK News Desk
ಬೆಳ್ತಂಗಡಿ ; ಕಾಲೇಜು ತೆರಳುತ್ತಿದ್ದ ಅಪ್ರಾಪ್ತ ಯುವತ...
09-02-26 11:26 am
Mangalore Jail Raid: ಮಂಗಳೂರು ಜೈಲಿನಲ್ಲಿ ಬರ್ಕೆ...
08-02-26 02:07 pm
MDMA ಮಾದಕ ವಸ್ತು ಮಾರಾಟ ಮಾಡುತ್ತಿದ್ದಾಗ ಪೊಲೀಸ್ ದಾ...
08-02-26 12:59 pm
Mangalore Robbery, Crime: ಕಳವಾರಿಗೆ ಮೆಹಂದಿ ಹೋಗ...
08-02-26 12:37 pm