ಬ್ರೇಕಿಂಗ್ ನ್ಯೂಸ್
02-02-26 11:59 am HK News Desk ದೇಶ - ವಿದೇಶ
ನವದೆಹಲಿ, ಫೆ.2 : ಕೇಂದ್ರ ಸರ್ಕಾರವು 75 ವರ್ಷ ಹಳೆಯದಾದ 1961ರ ಆದಾಯ ತೆರಿಗೆ ಕಾಯ್ದೆಯನ್ನು ಬದಲಿಸಿ, ಹೊಸ 'ಆದಾಯ ತೆರಿಗೆ ಕಾಯ್ದೆ -2025' ಜಾರಿಗೆ ತರುತ್ತಿದೆ. ಏಪ್ರಿಲ್ 1, 2026 ರಿಂದ ಹೊಸ ಕಾಯ್ದೆ ಜಾರಿಗೆ ಬರಲಿದೆ. ಆದಾಯ ತೆರಿಗೆ ರಿಟರ್ನ್ಸ್ ಸೇರಿದಂತೆ ವಿವಿಧ ವ್ಯವಸ್ಥೆಗಳು ಸರಳಗೊಳಿಸುವ ಗುರಿಯನ್ನು ಹೊಸ ಕಾಯ್ದೆ ಹೊಂದಿರಲಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ವೇಳೆ ಹೇಳಿದ್ದಾರೆ.
ಈ ಬಾರಿಯ ಬಜೆಟ್‌ನಲ್ಲಿ ವೈಯಕ್ತಿಕ ಆದಾಯ ತೆರಿಗೆಯ ದರ ಅಥವಾ ಸ್ಲ್ಯಾಬ್‌ಗಳಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಇದು ಯಥಾಸ್ಥಿತಿಯಲ್ಲಿ ಮುಂದುವರಿಯಲಿದೆ. ಆದಾಯ ತೆರಿಗೆ ಸಲ್ಲಿಕೆಯನ್ನು ಸುಲಭಗೊಳಿಸಲು ಸರ್ಕಾರವು ಹಂತ ಹಂತದ ಸಮಯವನ್ನು ನಿಗದಿಪಡಿಸಿದೆ: ವೈಯಕ್ತಿಕ ಸಲ್ಲಿಕೆ (ITR 1 ಮತ್ತು 2) ಗೆ ಜುಲೈ 31ರ ವರೆಗೆ ಕಾಲಾವಕಾಶ ಇರಲಿದೆ.
ಉದ್ಯಮ ಮತ್ತು ಟ್ರಸ್ಟ್ ಐಟಿಆರ್ ಸಲ್ಲಿಸಲು ಆಗಸ್ಟ್ 31ರ ವರೆಗೆ ಕಾಲಾವಕಾಶ ವಿಸ್ತರಿಸಲಾಗಿದೆ. ಈ ಮೊದಲು ಡಿಸೆಂಬರ್ 31ಕ್ಕೆ ಇದ್ದ ಕಾಲಾವಕಾಶವನ್ನು ಮಾರ್ಚ್ 31ರ ವರೆಗೆ ಹೆಚ್ಚಿಸಲಾಗಿದೆ (ಅಲ್ಪ ಮೊತ್ತದ ದಂಡದೊಂದಿಗೆ).
ಕಾಯ್ದೆ ಸರಳೀಕರಣ, ವಿವಾದ ಮುಕ್ತಿ
ಹೊಸ ಕಾನೂನಿನಲ್ಲಿ ಸೆಕ್ಷನ್‌ಗಳ ಸಂಖ್ಯೆಯನ್ನು ಶೇ. 50 ರಷ್ಟು ಕಡಿಮೆ ಮಾಡಲಾಗಿದೆ. ಇದರಿಂದ ಕಾನೂನು ಗೋಜಲುಗಳು ತಪ್ಪಲಿವೆ. ಇನ್ಮುಂದೆ 'Assessment Year' ಮತ್ತು 'Previous Year' ಎಂಬ ಗೊಂದಲ ಇರುವುದಿಲ್ಲ. ಬದಲಾಗಿ ಕೇವಲ 'Tax Year' (ತೆರಿಗೆ ವರ್ಷ) ಎಂಬ ಒಂದೇ ವ್ಯವಸ್ಥೆ ಇರಲಿದೆ.
ನಿಗದಿತ ದಿನಾಂಕದ ನಂತರ ಐಟಿಆರ್ ಸಲ್ಲಿಸಿದರೂ ದಂಡವಿಲ್ಲದೆ ಟಿಡಿಎಸ್ (TDS) ಮರುಪಾವತಿ ಪಡೆಯಲು ಅವಕಾಶ ನೀಡಲಾಗಿದೆ. ಮೋಟಾರು ವಾಹನ ಅಪಘಾತ ವಿಮಾ ನ್ಯಾಯಮಂಡಳಿಯಿಂದ (MACT) ವ್ಯಕ್ತಿಗಳಿಗೆ ಸಿಗುವ ಬಡ್ಡಿಗೆ ತೆರಿಗೆ ಇರುವುದಿಲ್ಲ. ವಿದೇಶಿ ಪ್ರವಾಸ ಪ್ಯಾಕೇಜ್‌ಗಳು ಹಾಗೂ ವಿದೇಶಿ ಶಿಕ್ಷಣ ಮತ್ತು ವೈದ್ಯಕೀಯ ಚಿಕಿತ್ಸೆಯ ಹಣ ವರ್ಗಾವಣೆ ಮೇಲಿನ ಟಿಸಿಎಸ್ ದರವನ್ನು ಶೇ. 2 ಕ್ಕೆ ಇಳಿಸಲಾಗಿದೆ. 20 ಲಕ್ಷ ರೂ.ಗಿಂತ ಕಡಿಮೆ ಮೊತ್ತದ ವಿದೇಶಿ ಆಸ್ತಿ ಬಹಿರಂಗಪಡಿಸದಿದ್ದಲ್ಲಿ ಅಕ್ಟೋಬರ್ 1, 2024ರಿಂದ ಅನ್ವಯವಾಗುವಂತೆ ಶಿಕ್ಷೆಯಿಂದ ವಿನಾಯಿತಿ ನೀಡಲಾಗಿದೆ.
ಸಣ್ಣಪುಟ್ಟ ತಪ್ಪುಗಳಿಗಾಗಿ ಜೈಲು ಶಿಕ್ಷೆ ವಿಧಿಸುವುದನ್ನು ನಿಲ್ಲಿಸಿ, ಕೇವಲ ದಂಡ ವಿಧಿಸುವ ನಿರ್ಧಾರ ಕೈಗೊಳ್ಳಲಾಗಿದೆ. ದಾಖಲೆ ಪತ್ರಗಳ ಹಾಜರುಪಡಿಸುವಲ್ಲಿ ವಿಳಂಬ ರೀತಿಯ ಸಣ್ಣ ತಪ್ಪುಗಳನ್ನು ಕ್ರಿಮಿನಲ್ ಅಪರಾಧ ಎಂದು ಪರಿಗಣಿಸುವುದಿಲ್ಲ.
The Central government has announced the implementation of the new Income Tax Act, 2025, replacing the six-decade-old Income Tax Act of 1961. The new law will come into effect from April 1, 2026, with the objective of simplifying tax compliance and reducing legal complexities.
03-10-26 05:30 pm
HK News Staffer
Urdu Habba Row: ವಿಧಾನಸೌಧ ಮೆಟ್ಟಿಲುಗಳಲ್ಲಿ ಉರ್ದು...
01-10-26 10:50 pm
‘ಕನ್ನಡದ ಶಿವಮಣಿ’ ಖ್ಯಾತಿಯ ಡ್ರಮ್ಮರ್ ದೇವ್ ನಿಧನ ;...
27-09-26 03:21 pm
ಬೆಂಗಳೂರಿಗೆ ಬಂದ ಶಾಸಕರೆಲ್ಲ ಎರಡೆರಡು ಮದುವೆಯಾಗಿದ್ದ...
25-09-26 04:49 pm
ರಾಜ್ಯ ಸರ್ಕಾರಕ್ಕೆ ಆರ್ಥಿಕ ಸಂಕಷ್ಟ ; ಬೆಳಗಾವಿ ವಿಟಿ...
25-09-26 03:11 pm
05-10-26 08:56 pm
HK News Staffer
ಪಶ್ಚಿಮ ಬಂಗಾಳದಲ್ಲಿ ಏಕರೂಪ ನಾಗರಿಕ ಸಂಹಿತೆ ; ಲವ್ ಜ...
05-10-26 01:49 pm
ನಾನು ಸಾವಿಗೆ ಅಂಜಲ್ಲ, ವಿಮಾನ ಪತನವೇ ಉದ್ದೇಶವಾಗಿತ್ತ...
05-10-26 11:40 am
Ramesh Chennithala: ಕೇರಳದಲ್ಲಿ ಪಿಡಬ್ಲ್ಯೂಡಿ ರಸ್...
04-10-26 07:07 pm
Smith Machar, benjamin netanyahu: ಸ್ಮಿತ್ ಮಚ್ಚ...
04-10-26 12:34 pm
05-10-26 10:53 pm
Mangaluru Staffer
Mangalore News, Ekkaru Temple, Tirupati Templ...
05-10-26 12:35 pm
'ಮುಳಿಯ ಜುವೆಲ್ಲರಿ' ಮಾಲೀಕ ಪುತ್ತೂರಿನ ಮುಳಿಯ ಶ್ಯಾಮ...
05-10-26 11:41 am
brijesh chowta: ಹೈಕೋರ್ಟ್ ಪೀಠ ಸ್ಥಾಪನೆಗೆ ಒಗ್ಗಟ್...
03-10-26 09:56 pm
Tammanna Shetty, mysore kambala: ಮೈಸೂರು ದಸರಾ...
03-10-26 01:27 pm
05-10-26 08:26 pm
HK News Staffer
ಪುತ್ತೂರಿನಿಂದ ಕೇರಳಕ್ಕೆ ಹಿಂಸಾತ್ಮಕ ರೀತಿಯಲ್ಲಿ 11...
05-10-26 08:24 pm
Udupi News, Indrali Railway Station, Nizamudd...
05-10-26 12:28 pm
Belthangady News, Banakal Accident, Mudigere...
05-10-26 10:49 am
bantwal rain: ಕರಾವಳಿ ಭಾಗದಲ್ಲಿ ಹಿಂಗಾರು ಮಳೆ ಅಬ್...
05-10-26 10:04 am