ಬ್ರೇಕಿಂಗ್ ನ್ಯೂಸ್
27-12-25 01:46 pm HK News Desk ದೇಶ - ವಿದೇಶ
ಢಾಕಾ, ಡಿ.27 : ಬಾಂಗ್ಲಾದೇಶದಲ್ಲಿ ಹೆಚ್ಚುತ್ತಿರುವ ಅರಾಜಕತೆಯಿಂದಾಗಿ ಅಲ್ಲಿನ ಹಿಂದುಗಳು ಭಯಭೀತರಾಗಿದ್ದು ಗಡಿ ಪ್ರದೇಶಕ್ಕೆ ಬಂದು ಸೇರುತ್ತಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಗಡಿಯನ್ನು ಭಾರತೀಯ ಸೇನಾಪಡೆ ಸೀಲ್ ಮಾಡಿದ್ದರೆ, ನಿರಂತರ ದೌರ್ಜನ್ಯಗಳಿಂದ ಬೇಸತ್ತಿರುವ ಹಿಂದು ಸಮುದಾಯ ತಮಗೆ ಭಾರತಕ್ಕೆ ಬರಲು ಬಿಡಿ, ಗಡಿಯನ್ನು ತೆರೆಯಿರಿ ಎಂದು ಗೋಳಿಡುತ್ತಿದ್ದಾರೆ. ಗಡಿಯನ್ನು ಮುಕ್ತಗೊಳಿಸುವಂತೆ ಹಾಗೂ ತಮ್ಮನ್ನು ಭಾರತಕ್ಕೆ ಕರೆಯಿಸಿಕೊಳ್ಳುವಂತೆ ಮೋದಿ ಸರ್ಕಾರಕ್ಕೆ ಮನವಿ ಸಲ್ಲಿಸುತ್ತಿದ್ದಾರೆ.
ಇತ್ತೀಚೆಗೆ, ಬಾಂಗ್ಲಾದೇಶದಲ್ಲಿ ನಡೆದಿದ್ದ ದೀಪು ಚಂದ್ರ ದಾಸ್ ಮತ್ತು ಅಮೃತ್ ಮಂಡಲ್ ಅವರ ಭೀಕರ ಹತ್ಯೆಗಳಿಂದಾಗಿ ಭಯಗೊಂಡಿರುವ ಹಿಂದೂಗಳು ಇಸ್ಲಾಮಿಕ್ ಗುಂಪುಗಳ ದಾಳಿಯಿಂದ ತಪ್ಪಿಸಿಕೊಳ್ಳಲು ಭಾರತಕ್ಕೆ ಬರುವುದೊಂದೇ ಸದ್ಯಕ್ಕೆ ಮುಂದಿರುವ ಮಾರ್ಗ ಎಂಬ ಯೋಚನೆಯಲ್ಲಿದ್ದಾರೆ. ರಂಗಪುರ, ಚಿತ್ತಗಾಂಗ್, ಢಾಕಾ ಮತ್ತು ಮೈಮನ್ಸಿಂಗ್ಗಳಲ್ಲಿ ವಾಸಿಸುವ ಹಿಂದೂಗಳು ಈ ಬಗ್ಗೆ ಟೈಮ್ಸ್ ಆಫ್ ಇಂಡಿಯಾಕ್ಕೆ ಮಾತನಾಡಿದ್ದು ತಮ್ಮ ಆತಂಕವನ್ನು ಹೇಳಿಕೊಂಡಿದ್ದಾರೆ.
ಬಾಂಗ್ಲಾದೇಶದಿಂದ ಗಡೀಪಾರು ಆಗಿರುವ ಬಾಂಗ್ಲಾದೇಶದ ಸನಾತನ ಜಾಗರಣ್ ಮಂಚ್ ನಾಯಕ ನಿಹಾರ್ ಹಲ್ದಾರ್ ಅವರ ಸಹಾಯದಿಂದ ಅಲ್ಲಿನ ಹಿಂದೂ ಸಂಘಟನೆಗಳ ಕಾರ್ಯಕರ್ತರ ಜೊತೆಗೆ ಫೋನ್ ಮಾತುಕತೆ ನಡೆಸಿದ್ದಾರೆ. ನಿಹಾರ್ ಹಲ್ದಾರ್ ಅವರು ಮಾಜಿ ಇಸ್ಕಾನ್ ಸನ್ಯಾಸಿ ಚಿನ್ಮಯ್ ಕೃಷ್ಣದಾಸ್ ಅವರೊಂದಿಗೆ ದೇಶದ್ರೋಹದ ಆರೋಪ ಎದುರಿಸುತ್ತಿದ್ದಾರೆ.
ಹಿಂದೂಗಳೆಂಬ ಏಕೈಕ ಕಾರಣಕ್ಕಾಗಿ ನಾವು ನಿರಂತರ ಅವಮಾನಗಳನ್ನು ಎದುರಿಸುತ್ತಿದ್ದೇವೆ. ಪದೇ ಪದೇ ಆಗುತ್ತಿರುವ ಕಿರುಕುಳಕ್ಕೆ ಬೇಸತ್ತಿದ್ದೇವೆ. ಈ ಬಗ್ಗೆ ಯಾರಲ್ಲೂ ಹೇಳಿಕೊಳ್ಳದ ಸ್ಥಿತಿಯಲ್ಲಿದ್ದೇವೆ. ರಸ್ತೆಯಲ್ಲಿ ನಡೆಯುವಾಗ ಕೇಳಿಬರುವ ಅಣಕಗಳು ಶೀಘ್ರದಲ್ಲೇ ಗುಂಪು ಹತ್ಯೆಗಳಾಗಿ ಮಾರ್ಪಡಾಗುವ ಅಪಾಯಗಳಿವೆ. ನಾವು ಇಲ್ಲಿ ಭಯದಲ್ಲಿ ಸಿಲುಕಿಕೊಂಡಿದ್ದೇವೆ. ಬೇರೆಲ್ಲಿಯೂ ಹೋಗಲು ನಮಗೆ ದಾರಿಯಿಲ್ಲ. ನಾವು ಭಯದಲ್ಲೇ ಜೀವನ ಮಾಡುವಂತಾಗಿದೆ ಎಂದು ರಂಗಪುರದ 52 ವರ್ಷದ ನಿವಾಸಿ ತಿಳಿಸಿದ್ದಾರೆ.
ಫೆಬ್ರವರಿಯಲ್ಲಿ ನಡೆಯುವ ಚುನಾವಣೆ ನಂತರ ಬಿಎನ್ ಪಿ ಪಕ್ಷ ಅಧಿಕಾರಕ್ಕೆ ಬರುವ ಸಾಧ್ಯತೆಯಿದೆ. ಅದು ಹಿಂದೂಗಳ ಪಾಲಿಗೆ ದೊಡ್ಡ ಚಿಂತೆಯಾಗಿದೆ. ಏಕೆಂದರೆ ಆ ಪಕ್ಷವು ಅಲ್ಪಸಂಖ್ಯಾತ ಹಿಂದೂಗಳಿಗೆ ಯಾವುದೇ ನೆರವು ಕೊಡುವುದಿಲ್ಲ. ನಾವು ಭಾರತಕ್ಕೆ ಪಲಾಯನ ಮಾಡಿದರೆ ಮಾತ್ರ ನೆಮ್ಮದಿಯಿಂದ ಇರಲು ಸಾಧ್ಯ ಎಂದು ರಂಗಪುರದ ನಿವಾಸಿಯೊಬ್ಬರು ಹೇಳಿದ್ದಾರೆ.
ಬಾಂಗ್ಲಾದೇಶದಲ್ಲಿ 2.5 ಕೋಟಿ ಹಿಂದೂಗಳಿದ್ದಾರೆ. ಇದು ಸಣ್ಣ ಸಂಖ್ಯೆಯಲ್ಲ. ಭಾರತದಲ್ಲಿರುವ ಹಿಂದೂ ಸಂಘಟನೆಗಳು ಕೇವಲ ಬಾಯಿಮಾತಿನ ಸೇವೆ ಮಾಡುತ್ತಿವೆ. ನಾವು ಇಲ್ಲಿ ಸಾಮೂಹಿಕ ಹತ್ಯೆಯನ್ನು ಎದುರಿಸುತ್ತಿದ್ದೇವೆ. ನಾವು ಇಲ್ಲಿ ಬದುಕಿ ಉಳಿಯುತ್ತೇವೆ ಎಂಬ ನಂಬಿಕೆ ಇಲ್ಲ ಎಂದು ಸನಾತನ ಜಾಗರಣ್ ಮಂಚ್ನ ಮತ್ತೊಬ್ಬ ಕಾರ್ಯಕರ್ತ ಹೇಳಿದ್ದಾರೆ. ಗಡಿ ತೆರೆದ ಕೂಡಲೇ ಹಿಂದುಗಳ ಸಂಕಷ್ಟ ನಿವಾರಣೆಯಾಗಲ್ಲ. ಆದರೆ ಮನೆ, ಬದುಕು ಕಳಕೊಂಡವರಿಗೆ ಕನಿಷ್ಠ ಭದ್ರತೆ ಸಿಗುತ್ತದೆ. ನಾವು ಕೆಟ್ಟ ಜೀವನ ಮಾಡುತ್ತಿದ್ದೇವೆ. ಭಾರತ ಗಡಿಗಳನ್ನು ತೆರೆಯುವುದರಿಂದ ಕಿರುಕುಳ ಎದುರಿಸುತ್ತಿರುವವರಿಗೆ ಕನಿಷ್ಠ ಪಲಾಯನ ಮಾರ್ಗ ಸಿಗುತ್ತದೆ ಎಂದು ಢಾಕಾದ ಹಿಂದು ಕಾರ್ಯಕರ್ತರು ಹೇಳಿದ್ದಾರೆ.
The growing lawlessness in Bangladesh has created a climate of fear among the Hindu community, forcing many to flee towards the India–Bangladesh border. As a precaution, the Indian Army has sealed the border, but persecuted Hindus—suffering continuous atrocities—are pleading, “Please open the border, let us enter India. Give us at least a chance to stay alive.” They have appealed directly to the Modi government to open the border and allow them to take refuge in India.
27-12-25 02:40 pm
Bangalore Correspondent
ಚಿತ್ರದುರ್ಗ ಬಸ್ ದುರಂತ ; ಗಾಯಗೊಂಡಿದ್ದ ಸೀಬರ್ಡ್...
26-12-25 09:38 pm
ಬೈಕ್ ಗೆ ಟಿಪ್ಪರ್ ಡಿಕ್ಕಿ ; ಚರ್ಚ್ ನಲ್ಲಿ ಕ್ರಿಸ್ ಮ...
26-12-25 01:35 pm
ಸದ್ಯಕ್ಕಿಲ್ಲ ಸಿಎಂ ಬದಲಾವಣೆ ! ರಾಜ್ಯದಿಂದ ಕೇಂದ್ರ ನ...
25-12-25 08:00 pm
Chitradurga Seabird Bus accident: ಚಿತ್ರದುರ್ಗ...
25-12-25 06:26 pm
27-12-25 04:29 pm
HK News Desk
ನಮ್ಮನ್ನಿಲ್ಲಿ ಬದುಕಲು ಬಿಡುತ್ತಿಲ್ಲ, ಗಡಿಯನ್ನು ತೆರ...
27-12-25 01:46 pm
ತಿರುವನಂತಪುರಂ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಮೇಯರ್...
26-12-25 09:41 pm
ಕ್ರೈಸ್ತರ ಮೇಲೆ ದಾಳಿ ; ನೈಜೀರಿಯಾದಲ್ಲಿ ಐಸಿಸ್ ಉಗ್ರ...
26-12-25 05:50 pm
ರೈಲ್ವೆಯಲ್ಲಿ ಒಂದೇ ವರ್ಷಕ್ಕೆ ಎರಡನೇ ಬಾರಿ ಪ್ರಯಾಣ ದ...
26-12-25 03:04 pm
26-12-25 10:34 pm
Mangalore Correspondent
Grace Ministry Christmas 2025: ಗ್ರೇಸ್ ಮಿನಿಸ್ಟ...
26-12-25 06:37 pm
ಎಂಆರ್ ಜಿ ಗ್ರೂಪಿನಿಂದ ಆಶಾ ಪ್ರಕಾಶ್ ಶೆಟ್ಟಿ ನೆರವು...
25-12-25 10:54 pm
ಡಿ.27ರಂದು 9ನೇ ವರ್ಷದ ಮಂಗಳೂರು ಕಂಬಳ ; ನವ ವರ್ಷ- ನ...
24-12-25 10:30 pm
ಬಜಪೆಯಲ್ಲಿ ಕಾಂಗ್ರೆಸ್ ಓಟಕ್ಕೆ ಎಸ್ಡಿಪಿಐ ಅಡ್ಡಗಾಲು...
24-12-25 06:07 pm
27-12-25 02:28 pm
Bangalore Correspondent
ಪ್ಯಾಲೆಸ್ ಗ್ರೌಂಡ್ನಲ್ಲಿ ಅದ್ದೂರಿ ರಿಸೆಪ್ಷನ್, ಶ್...
26-12-25 11:21 pm
ಪಡುಬಿದ್ರೆ ; ನೇಮೊತ್ಸದಲ್ಲಿ ವೃದ್ಧೆಯ ಸರ ಕಳ್ಳತನ, ಮ...
26-12-25 11:06 pm
ವರದಕ್ಷಿಣೆಗಾಗಿ ದೌರ್ಜನ್ಯ- ಕಿರುಕುಳ ; ಗಂಡನ ಮನೆಯಲ್...
26-12-25 10:44 pm
ಬಾಂಗ್ಲಾದಲ್ಲಿ ಮತ್ತೊಬ್ಬ ಹಿಂದು ಯುವಕನ ಹತ್ಯೆ ; ಕೋಮ...
26-12-25 03:31 pm