ಬ್ರೇಕಿಂಗ್ ನ್ಯೂಸ್
26-12-25 09:41 pm HK News Desk ದೇಶ - ವಿದೇಶ
ತಿರುವನಂತಪುರಂ, ಡಿ.26 : ಇದೇ ಮೊದಲ ಬಾರಿಗೆ ತಿರುವನಂತಪುರಂ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಅಧಿಕಾರ ಹಿಡಿದಿದ್ದು 40 ವರ್ಷಗಳ ಎಡಪಂಥೀಯರ ಆಡಳಿತದ ಬಳಿಕ ವೃತ್ತಿಯಲ್ಲಿ ವಕೀಲರೂ ಆಗಿರುವ ವಿವಿ ರಾಜೇಶ್ ಹೊಸ ಮೇಯರ್ ಆಗುವುದರೊಂದಿಗೆ ಇತಿಹಾಸ ನಿರ್ಮಿಸಿದ್ದಾರೆ.
49 ವರ್ಷದ ರಾಜೇಶ್ ಕೇರಳ ರಾಜಧಾನಿ ತಿರುವನಂತಪುರ ಮಹಾನಗರ ಪಾಲಿಕೆಯಲ್ಲಿ ಬಿಜೆಪಿಯ ಮೊದಲ ಮೇಯರ್ ಆಗಿ ಅಧಿಕಾರ ಸ್ವೀಕರಿಸಿದ್ದಾರೆ. ನಾಲ್ಕು ದಶಕಗಳ ಎಡ ಪ್ರಜಾಸತ್ತಾತ್ಮಕ ರಂಗದ (ಎಲ್‌ಡಿಎಫ್) ಆಳ್ವಿಕೆ ಅಗತ್ಯವಾಗಿದ್ದು ವಿವಿ ರಾಜೇಶ್ ಮೇಯರ್ ಚುನಾವಣೆಯಲ್ಲಿ 51 ಮತಗಳನ್ನು ಪಡೆದು ಅಧಿಕಾರಕ್ಕೇರಿದರು. ಎರಡು ಮತಗಳನ್ನು ಅಮಾನ್ಯವೆಂದು ಘೋಷಿಸಲಾಯಿತು. ಪ್ರಮಾಣ ವಚನ ಸಮಾರಂಭದ ವೀಕ್ಷಣೆಗಾಗಿ ನೂರಾರು ಬಿಜೆಪಿ ಕಾರ್ಯಕರ್ತರು ಜಮಾಯಿಸಿದ್ದರು.
ಇತ್ತೀಚಿನ ಚುನಾವಣೆಯಲ್ಲಿ ಒಟ್ಟು 101 ಸ್ಥಾನಗಳಲ್ಲಿ ಐವತ್ತು ಸ್ಥಾನಗಳನ್ನು ಪಡೆಯುವ ಮೂಲಕ ಬಿಜೆಪಿ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಇಬ್ಬರು ಸ್ವತಂತ್ರ ಅಭ್ಯರ್ಥಿಗಳಲ್ಲಿ ಒಬ್ಬರಾದ ಕಣ್ಣಮೂಲ ವಾರ್ಡ್‌ನಿಂದ ಗೆದ್ದ ಪಟ್ಟೂರ್ ರಾಧಾಕೃಷ್ಣನ್ ಬಿಜೆಪಿಗೆ ಬೆಂಬಲ ವ್ಯಕ್ತಪಡಿಸಿದ್ದು ಇದರಿಂದಾಗಿ ಸರಳ ಬಹುಮತ ಪಡೆಯಿತು.
ಎಲ್‌ಡಿಎಫ್ ಮತ್ತು ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರಜಾಸತ್ತಾತ್ಮಕ ರಂಗ ಕ್ರಮವಾಗಿ 29 ಮತ್ತು 19 ಸ್ಥಾನಗಳನ್ನು ಗೆದ್ದಿವೆ. ಎರಡನೇ ಅವಧಿಗೆ ಪಾಲಿಕೆಗೆ ಆಯ್ಕೆಯಾಗಿರುವ ರಾಜೇಶ್, ಕೊಡಂಗನೂರು ವಾರ್ಡ್ ಪ್ರತಿನಿಧಿಸುತ್ತಾರೆ. ಪ್ರಮಾಣವಚನ ಸಮಾರಂಭದಲ್ಲಿ ಬಿಜೆಪಿ ರಾಜ್ಯ ಅಧ್ಯಕ್ಷ ರಾಜೀವ್ ಚಂದ್ರಶೇಖರ್, ಕೇಂದ್ರ ಸಚಿವ ಸುರೇಶ್ ಗೋಪಿ, ಮಾಜಿ ಅಧ್ಯಕ್ಷ ಕೆ. ಸುರೇಂದ್ರನ್, ಸಿ.ಕೆ ಪದ್ಮನಾಭನ್ ಮತ್ತು ಸಿಪಿಎಂನ ಮಾಜಿ ಸಚಿವ ಕಡಕಂಪಳ್ಳಿ ಸುರೇಂದ್ರನ್ ಭಾಗವಹಿಸಿದ್ದರು.
ಕಾನೂನು ಪದವೀಧರರಾದ ವಿ.ವಿ. ರಾಜೇಶ್ ಪ್ರಸ್ತುತ ಬಿಜೆಪಿಯ ರಾಜ್ಯ ಕಾರ್ಯದರ್ಶಿಯಾಗಿದ್ದಾರೆ. ಹಿಂದೆ, ಅವರು ಪಕ್ಷದ ತಿರುವನಂತಪುರಂ ಜಿಲ್ಲಾ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಬಿಜೆಪಿಯ ಉಪ ಮೇಯರ್ ಅಭ್ಯರ್ಥಿ ಜಿ.ಎಸ್. ಆಶಾನಾಥ್ ಮೂರನೇ ಬಾರಿಗೆ ಕೌನ್ಸಿಲರ್ ಆಗಿದ್ದಾರೆ. ಅವರು ಕರುಮಂ ವಾರ್ಡ್ ಪ್ರತಿನಿಧಿಸುತ್ತಾರೆ.
In a historic political shift, the Bharatiya Janata Party (BJP) has taken control of the Thiruvananthapuram Municipal Corporation for the first time, ending 40 years of uninterrupted Left Democratic Front (LDF) governance. Advocate V.V. Rajesh, 49, has been elected as the city’s first BJP Mayor after securing 51 votes in the mayoral election, with two votes declared invalid.
26-12-25 09:38 pm
HK News Desk
ಬೈಕ್ ಗೆ ಟಿಪ್ಪರ್ ಡಿಕ್ಕಿ ; ಚರ್ಚ್ ನಲ್ಲಿ ಕ್ರಿಸ್ ಮ...
26-12-25 01:35 pm
ಸದ್ಯಕ್ಕಿಲ್ಲ ಸಿಎಂ ಬದಲಾವಣೆ ! ರಾಜ್ಯದಿಂದ ಕೇಂದ್ರ ನ...
25-12-25 08:00 pm
Chitradurga Seabird Bus accident: ಚಿತ್ರದುರ್ಗ...
25-12-25 06:26 pm
SeaBird Bus Fire Accident, Chitradurga: ಕಂಟೈನ...
25-12-25 12:12 pm
26-12-25 09:41 pm
HK News Desk
ಕ್ರೈಸ್ತರ ಮೇಲೆ ದಾಳಿ ; ನೈಜೀರಿಯಾದಲ್ಲಿ ಐಸಿಸ್ ಉಗ್ರ...
26-12-25 05:50 pm
ರೈಲ್ವೆಯಲ್ಲಿ ಒಂದೇ ವರ್ಷಕ್ಕೆ ಎರಡನೇ ಬಾರಿ ಪ್ರಯಾಣ ದ...
26-12-25 03:04 pm
ಹೆತ್ತವರು ಮನೆಯಲ್ಲಿ ಆತ್ಮಹತ್ಯೆ ; ಬೆಳೆದು ನಿಂತ ಪುತ...
26-12-25 02:50 pm
ಜಗತ್ತಿನ ಅತಿ ದೊಡ್ಡ ಮುಸ್ಲಿಂ ದೇಶದಲ್ಲಿ 4500 ವರ್ಷ...
24-12-25 11:13 pm
26-12-25 10:34 pm
Mangalore Correspondent
Grace Ministry Christmas 2025: ಗ್ರೇಸ್ ಮಿನಿಸ್ಟ...
26-12-25 06:37 pm
ಎಂಆರ್ ಜಿ ಗ್ರೂಪಿನಿಂದ ಆಶಾ ಪ್ರಕಾಶ್ ಶೆಟ್ಟಿ ನೆರವು...
25-12-25 10:54 pm
ಡಿ.27ರಂದು 9ನೇ ವರ್ಷದ ಮಂಗಳೂರು ಕಂಬಳ ; ನವ ವರ್ಷ- ನ...
24-12-25 10:30 pm
ಬಜಪೆಯಲ್ಲಿ ಕಾಂಗ್ರೆಸ್ ಓಟಕ್ಕೆ ಎಸ್ಡಿಪಿಐ ಅಡ್ಡಗಾಲು...
24-12-25 06:07 pm
26-12-25 11:21 pm
Bangalore Correspondent
ಪಡುಬಿದ್ರೆ ; ನೇಮೊತ್ಸದಲ್ಲಿ ವೃದ್ಧೆಯ ಸರ ಕಳ್ಳತನ, ಮ...
26-12-25 11:06 pm
ವರದಕ್ಷಿಣೆಗಾಗಿ ದೌರ್ಜನ್ಯ- ಕಿರುಕುಳ ; ಗಂಡನ ಮನೆಯಲ್...
26-12-25 10:44 pm
ಬಾಂಗ್ಲಾದಲ್ಲಿ ಮತ್ತೊಬ್ಬ ಹಿಂದು ಯುವಕನ ಹತ್ಯೆ ; ಕೋಮ...
26-12-25 03:31 pm
ಶಂಕಿತ ಬಾಂಗ್ಲಾ ವ್ಯಕ್ತಿಗೆ ಪಾಸ್ಪೋರ್ಟ್ ; ಸಹೋದ್ಯೋಗ...
23-12-25 01:41 pm