ಬ್ರೇಕಿಂಗ್ ನ್ಯೂಸ್
24-12-25 11:13 pm HK News Desk ದೇಶ - ವಿದೇಶ
Photo credits : Archaeologists near Cairo have discovered a 4,500-year-old Sun Temple, believed to be one of the oldest ever found. Dating back to Egypt’s Fifth Dynasty, the structure reveals evidence of a sophisticated civilization that worshipped power, time, and celestial movements. Excavations uncovered a religious calendar, star and planetary symbols on the ceiling, carved white limestone blocks, and granite pillars—suggesting the temple also functioned as an ancient astronomical center.
ನವದೆಹಲಿ, ಡಿ.24 : ಮುಸ್ಲಿಂ ದೇಶ ಈಜಿಪ್ಟ್ ದೇಶದ ರಾಜಧಾನಿ ಕೈರೋ ಬಳಿ ನಡೆದ ಪುರಾತತ್ತ್ವ ಶಾಸ್ತ್ರದ ಉತ್ಖನನ ವೇಳೆ ಪ್ರಪಂಚದಲ್ಲೇ ಅತ್ಯಂತ ಹಳೆಯದು ಎನ್ನಲಾದ ಸೂರ್ಯ ದೇವಸ್ಥಾನದ ಕುರುಹು ಪತ್ತೆಯಾಗಿದೆ. 4,500 ವರ್ಷ ಹಿಂದೆ ದೇವಾಲಯ ಇದ್ದುದನ್ನು ಪತ್ತೆ ಮಾಡಿದ್ದಾರೆ.
ಈಜಿಪ್ಟ್ ತನ್ನ ಪಿರಮಿಡ್‌ಗಳು, ಮಮ್ಮಿಗಳಿಗೆ ಹೆಸರುವಾಸಿ. ಆದರೆ, ಈ ಸೂರ್ಯ ದೇವಾಲಯದ ಆವಿಷ್ಕಾರವು ಪ್ರಾಚೀನ ಈಜಿಪ್ಟ್‌ನಲ್ಲಿ ಹಿಂದು ಜೀವನ ಪದ್ಧತಿಯ ಬಗ್ಗೆ ಸಂಶಯ ಮೂಡಿಸಿದೆ. ಶಕ್ತಿ ಮತ್ತು ಆಕಾಶ ಶಕ್ತಿಗಳ ಆರಾಧನೆ ಅಲ್ಲಿ ಮುಖ್ಯವಾಗಿದ್ದವು ಎಂಬುದನ್ನು ತೋರಿಸುತ್ತದೆ. ತಜ್ಞರ ಪ್ರಕಾರ, ಈ ದೇವಾಲಯವು ಈಜಿಪ್ಟ್‌ನ ಐದನೇ ರಾಜವಂಶದ (ಕ್ರಿ.ಪೂ. 2465-2323) ಕಾಲದ್ದಾಗಿದೆ. ಇದನ್ನು ಕ್ರಿ.ಪೂ. 2420ರಿಂದ 2389ರ ವರೆಗೆ ಆಳಿದ ದೊರೆ ಫರೋ ನೆಸೆರೆ ನಿರ್ಮಿಸಿದ್ದನೆಂದು ನಂಬಲಾಗಿದೆ. ಆ ಸಮಯದಲ್ಲಿ, ಸೂರ್ಯ ದೇವರು ಬ್ರಹ್ಮಾಂಡದ ಸೃಷ್ಟಿಕರ್ತ ಎಂದು ಪರಿಗಣಿಸಲಾಗಿತ್ತು. ಅದಕ್ಕಾಗಿಯೇ ಸೂರ್ಯ ದೇವಾಲಯಗಳನ್ನು ಸ್ಥಾಪಿಸಿ ಆರಾಧಿಸುತ್ತಿದ್ದರು.
ಉತ್ಖನನದ ಸಮಯದಲ್ಲಿ ದೇವಾಲಯದ ಒಳಗೆ ಕಲ್ಲಿನ ಮೇಲೆ ಕೆತ್ತಿದ ಧಾರ್ಮಿಕ ಕ್ಯಾಲೆಂಡರ್ ಕಂಡುಬಂದಿದೆ. ಇದು ಸೋಕರ್, ಮಿನ್ ಮತ್ತು ರಾ ಜೊತೆ ಸಂಬಂಧಿಸಿದ ಹಬ್ಬಗಳನ್ನು ಉಲ್ಲೇಖಿಸುತ್ತದೆ. ದೇವಾಲಯದ ಛಾವಣಿಯಲ್ಲಿ ನಕ್ಷತ್ರಗಳು ಮತ್ತು ಗ್ರಹಗಳನ್ನು ಚಿತ್ರಿಸಿ ಅಧ್ಯಯನ ಮಾಡಲು ಬಳಸುತ್ತಿದ್ದರು. ಸೂರ್ಯ ದೇವಾಲಯವು ಕೇವಲ ಧಾರ್ಮಿಕ ಸ್ಥಳವಾಗಿರಲಿಲ್ಲ. ಇದು ಪ್ರಾಚೀನ ಈಜಿಪ್ಟ್‌ನಲ್ಲಿ ಖಗೋಳಶಾಸ್ತ್ರದ ಪ್ರಮುಖ ಕೇಂದ್ರವಾಗಿತ್ತು ಎಂದೂ ಸೂಚಿಸುತ್ತದೆ. ಈಜಿಪ್ಟಿನವರು ಆಕಾಶ, ಸಮಯ ಮತ್ತು ಹವಾಮಾನದ ಬಗ್ಗೆಯೂ ತಿಳಿದಿದ್ದರು ಎಂಬುದು ಕಂಡುಬರುತ್ತದೆ.
ದೇವಾಲಯದ ವ್ಯಾಪ್ತಿ 10,000 ಚದರ ಅಡಿ ವಿಸ್ತೀರ್ಣವನ್ನು ಹೊಂದಿದೆ. ಬಿಳಿ ಸುಣ್ಣದ ಕಲ್ಲಿನ ಕೆತ್ತನೆಗಳು, ಗ್ರಾನೈಟ್ ಸ್ತಂಭಗಳು, ಉದ್ದವಾದ ಕಾರಿಡಾರ್‌ಗಳು ಮತ್ತು ಛಾವಣಿಗೆ ಕರೆದೊಯ್ಯುವ ಮೆಟ್ಟಿಲುಗಳು ಇಲ್ಲಿನ ವೈಭವ ಸಾರುತ್ತದೆ. ಪ್ರಾಚೀನ ಈಜಿಪ್ಟಿನ ಸೆನೆಟ್ಕಾ ಮಡಿಕೆಗಳು, ಬಿಯರ್ ಗ್ಲಾಸ್‌ಗಳು ಮತ್ತು ಮರದ ತುಣುಕುಗಳು ಸಹ ದೇವಾಲಯದಲ್ಲಿ ಕಂಡುಬಂದಿವೆ.
4,500 ವರ್ಷಗಳಷ್ಟು ಹಳೆಯದಾದ ಈ ಸೂರ್ಯ ದೇವಾಲಯವು ಈಜಿಪ್ಟ್ ಕೇವಲ ಸಮಾಧಿ, ಪಿರಮಿಡ್ಗಳ ನಾಗರಿಕತೆ ಎಂಬ ಕಲ್ಪನೆಯ ಬಗ್ಗೆ ಪ್ರಶ್ನೆ ಮಾಡುತ್ತದೆ. ಪ್ರಾಚೀನ ಈಜಿಪ್ಟ್ ಜೀವನ, ಶಕ್ತಿ, ವಿಜ್ಞಾನ ಮತ್ತು ಬ್ರಹ್ಮಾಂಡದ ಆಳವಾದ ತಿಳುವಳಿಕೆಯನ್ನು ಹೊಂದಿದ್ದ ಅಭಿವೃದ್ಧಿ ಹೊಂದಿದ ಸಂಸ್ಕೃತಿಯಾಗಿತ್ತು ಎಂಬುದನ್ನು ತಿಳಿಸುತ್ತದೆ.
Archaeologists near Cairo have discovered a 4,500-year-old Sun Temple, believed to be one of the oldest ever found. Dating back to Egypt’s Fifth Dynasty, the structure reveals evidence of a sophisticated civilization that worshipped power, time, and celestial movements. Excavations uncovered a religious calendar, star and planetary symbols on the ceiling, carved white limestone blocks, and granite pillars—suggesting the temple also functioned as an ancient astronomical center.
24-12-25 11:20 pm
Bangalore Correspondent
ಶಿವಮೊಗ್ಗ ; ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಬಿದ್ದ...
24-12-25 10:26 pm
MLA Byrathi Basavaraj, Bikklu Shiva Murder Ca...
24-12-25 04:07 pm
ಗಾಳಿಯಲ್ಲಿ ಗುಂಡು ಹಾರಿಸಿ ಉಡಚಣ ಸ್ವಾಮೀಜಿ ರಂಪಾಟ ;...
22-12-25 11:09 pm
ಕ್ರಿಮಿನಲ್ ಹಿನ್ನೆಲೆಯ ವ್ಯಕ್ತಿಯ ಹುಟ್ಟುಹಬ್ಬದಲ್ಲಿ...
22-12-25 10:30 pm
24-12-25 11:13 pm
HK News Desk
ಅಯೋಧ್ಯೆ ಮಂದಿರಕ್ಕೆ ಚಿನ್ನ, ವಜ್ರ, ಪಚ್ಚೆ ಕಲ್ಲುಗಳಿ...
24-12-25 07:38 pm
ಹಿಂಸೆಗೆ ನಲುಗಿದ ಬಾಂಗ್ಲಾ ; ಹಿಂದುಗಳನ್ನು ಗುರಿಯಾಗಿ...
23-12-25 03:28 pm
ಭಾರತ ಹಿಂದೂ ರಾಷ್ಟ್ರ ಎನ್ನಲು ಸಾಂವಿಧಾನಿಕ ಅನುಮೋದನೆ...
22-12-25 06:32 pm
ಶಬರಿಮಲೆ ಚಿನ್ನ ಕಳವು ; ಬೆಂಗಳೂರಿನ ಜುವೆಲ್ಲರಿ ಮಾಲೀ...
20-12-25 01:51 pm
24-12-25 10:30 pm
Mangalore Correspondent
ಬಜಪೆಯಲ್ಲಿ ಕಾಂಗ್ರೆಸ್ ಓಟಕ್ಕೆ ಎಸ್ಡಿಪಿಐ ಅಡ್ಡಗಾಲು...
24-12-25 06:07 pm
ವಿದ್ಯಾರ್ಥಿಗಳ ಕುಸಿತ, ಅಸ್ತಿತ್ವ ಕಳಕೊಂಡ ಸಣ್ಣ ಕಾಲೇ...
24-12-25 12:23 pm
ಬಜಪೆ ಪಟ್ಟಣ ಪಂಚಾಯತ್ ಚುನಾವಣೆ ; ಬಿಜೆಪಿಗೆ ಸ್ಪಷ್ಟ...
24-12-25 12:02 pm
MLA Vedavyas Kamath: ಮಹಾನಗರ ಪಾಲಿಕೆ ಕಾಂಗ್ರೆಸ್...
23-12-25 10:51 pm
23-12-25 01:41 pm
Mangalore Correspondent
ನೀವು 24 ಸಾವಿರ ಕಟ್ಟಿದರೆ ತಿಂಗಳಿಗೆ 20 ಲಕ್ಷ, ಕೇಂದ...
22-12-25 04:00 pm
ಹುಬ್ಬಳ್ಳಿಯಲ್ಲಿ ಮರ್ಯಾದಾ ಹತ್ಯೆ ; 19 ವರ್ಷದ ಗರ್ಭಿ...
22-12-25 02:18 pm
Udupi Arrest, Pakistan: ಕೊಚ್ಚಿನ್ ಶಿಪ್ ಯಾರ್ಡ್...
22-12-25 01:06 pm
ಟ್ರಾಫಿಕ್ ದಂಡದ ಹೆಸರಲ್ಲಿ ಎಪಿಕೆ ಫೈಲ್ ಲಿಂಕ್ ; ಮೋಸ...
21-12-25 09:36 pm