ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆ ; ಯುಡಿಎಫ್ ಅತಿ ಹೆಚ್ಚು ಗಳಿಕೆ, ರಾಜಧಾನಿ ತಿರುವನಂತಪುರದಲ್ಲಿ ಇತಿಹಾಸ ಸೃಷ್ಟಿಸಿದ ಬಿಜೆಪಿ, ಪಾಲಕ್ಕಾಡ್ ಮತ್ತೆ ಕಮಲದ ತೆಕ್ಕೆಗೆ 

13-12-25 08:34 pm       HK News Desk   ದೇಶ - ವಿದೇಶ

ಕೇರಳ ರಾಜ್ಯದಲ್ಲಿ ಏಕಕಾಲದಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ ಅತಿ ಹೆಚ್ಚು ಸ್ಥಾನಗಳನ್ನು ಪಡೆದು ಭರ್ಜರಿ ಗೆಲುವು ಸಾಧಿಸಿದೆ. ಇದೇ ವೇಳೆ, ಬಿಜೆಪಿ ನೇತೃತ್ವದ ಎನ್‌ಡಿಎ ಇದೇ ಮೊದಲ ಬಾರಿಗೆ ರಾಜಧಾನಿ ತಿರುವನಂತಪುರಂ ಪಾಲಿಕೆಯಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಪಡೆದು ಜಯಭೇರಿ ಸಾಧಿಸಿದ್ದು ಹೊಸ ಇತಿಹಾಸ ಸೃಷ್ಟಿಸಿದೆ. 

ತಿರುವನಂತಪುರಂ, ಡಿ.13 : ಕೇರಳ ರಾಜ್ಯದಲ್ಲಿ ಏಕಕಾಲದಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ ಅತಿ ಹೆಚ್ಚು ಸ್ಥಾನಗಳನ್ನು ಪಡೆದು ಭರ್ಜರಿ ಗೆಲುವು ಸಾಧಿಸಿದೆ. ಇದೇ ವೇಳೆ, ಬಿಜೆಪಿ ನೇತೃತ್ವದ ಎನ್‌ಡಿಎ ಇದೇ ಮೊದಲ ಬಾರಿಗೆ ರಾಜಧಾನಿ ತಿರುವನಂತಪುರಂ ಪಾಲಿಕೆಯಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಪಡೆದು ಜಯಭೇರಿ ಸಾಧಿಸಿದ್ದು ಹೊಸ ಇತಿಹಾಸ ಸೃಷ್ಟಿಸಿದೆ. 

ಕೊಲ್ಲಂ, ಕೊಚ್ಚಿ, ತ್ರಿಶೂರ್ ಮತ್ತು ಕಣ್ಣೂರು ಮಹಾನಗರ ಪಾಲಿಕೆಗಳನ್ನು ಯುಡಿಎಫ್ ಗೆದ್ದಿದೆ. ಎಲ್ ಡಿಎಫ್ ಕೋಝಿಕ್ಕೋಡ್ ಪಾಲಿಕೆಯನ್ನು ಉಳಿಸಿಕೊಂಡಿದೆ. ಆದರೆ ಎನ್ ಡಿಎ ತಿರುವಂನಪುರಂ ಪಾಲಿಕೆಯಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಪಡೆದು ಎಲ್ ಡಿಎಫ್ ನಿಂದ ಅಧಿಕಾರ ಕಿತ್ತುಕೊಂಡಿದೆ.

59 ಜಿಲ್ಲಾ ಪಂಚಾಯತ್‌ಗಳು, 1,063 ಬ್ಲಾಕ್ ಪಂಚಾಯತ್‌ಗಳು ಮತ್ತು 7,451 ಗ್ರಾಮ ಪಂಚಾಯತ್‌ಗಳಲ್ಲಿ ಯುಡಿಎಫ್ ಅಧಿಕಾರ ಹಿಡಿದಿದ್ದು ಮುಂದಿನ ಅಸೆಂಬ್ಲಿ ಚುನಾವಣೆಯಲ್ಲಿ‌ ಎಡರಂಗದಿಂದ ಅಧಿಕಾರವನ್ನು ಕಿತ್ತುಕೊಳ್ಳುವ ಲಕ್ಷಣ ತೋರಿಸಿದೆ. ಎಡರಂಗ ನೇತೃತ್ವದ ಎಲ್ ಡಿಎಫ್ 30 ಜಿಲ್ಲಾ ಪಂಚಾಯಿತಿಗಳು, 823 ಬ್ಲಾಕ್ ಪಂಚಾಯಿತಿಗಳು ಮತ್ತು 6,137 ಗ್ರಾಮ ಪಂಚಾಯಿತಿಗಳಲ್ಲಿ ಅಧಿಕಾರ ಪಡೆದಿದೆ. ಎನ್‌ಡಿಎ ಒಂದು ಜಿಲ್ಲಾ ಪಂಚಾಯಿತಿ, 50 ಬ್ಲಾಕ್ ಪಂಚಾಯಿತಿಗಳು ಮತ್ತು 1,363 ಗ್ರಾಮ ಪಂಚಾಯಿತಿಗಳನ್ನು ಗೆದ್ದುಕೊಂಡಿದೆ.

101 ಸದಸ್ಯ ಬಲದ ತಿರುವನಂತಪುರಂ ಮಹಾನಗರ ಪಾಲಿಕೆಯಲ್ಲಿ ಎನ್ ಡಿಎ 50 ಸ್ಥಾನಗಳನ್ನು ಪಡೆದಿದ್ದು ಅತಿ ಹೆಚ್ಚು ಸ್ಥಾನಗಳೊಂದಿಗೆ ಕ್ಲೀನ್ ಸ್ವೀಪ್ ಸಾಧನೆ ಮಾಡಿದೆ. ಎನ್ ಡಿಎ 50, ಎಲ್ ಡಿಎಫ್ 29 ಹಾಗೂ ಯುಡಿಎಫ್ 19 ಸ್ಥಾನಗಳನ್ನು ಪಡೆದಿದೆ. 2020ರಲ್ಲಿ ಎಲ್ ಡಿಎಫ್ 52, ಎನ್ ಡಿಎ 33, ಯುಡಿಎಫ್ 10 ಸ್ಥಾನಗಳನ್ನು ಪಡೆದಿತ್ತು. ವಿಶೇಷ ಅಂದರೆ, ಎಡರಂಗ ಬಲಿಷ್ಠವಾಗಿರುವ ಪ್ರದೇಶದಲ್ಲೇ ಬಿಜೆಪಿ ಸದಸ್ಯರು ಗೆದ್ದುಕೊಂಡಿದ್ದಾರೆ.‌ ಸಿಪಿಐ ರಾಜ್ಯ ಕಚೇರಿ ಇರುವ ಎಕೆಜಿ ಸೆಂಟರ್ ಭಾಗದಲ್ಲಿಯೇ ಬಿಜೆಪಿ ಗೆದ್ದಿದೆ.‌ ಆಮೂಲಕ ಎಡರಂಗದ ಮತ ಬ್ಯಾಂಕನ್ನು ಬಿಜೆಪಿ ಸೆಳೆದಿರುವುದು ಸ್ಪಷ್ಟವಾಗಿದೆ. 

ತಿರುವನಂತಪುರಂ ಪಾಲಿಕೆ ಅಸ್ತಿತ್ವಕ್ಕೆ ಬಂದ 45 ವರ್ಷಗಳ ಬಳಿಕ ಎಡರಂಗ ಅಧಿಕಾರ ಕಳಕೊಂಡಿದೆ. ಎಡರಂಗವೇ ಇಲ್ಲಿ ಮೊದಲಿನಿಂದಲೂ ಅಧಿಕಾರ ನಡೆಸುತ್ತ ಬಂದಿದೆ. ಯುಡಿಎಫ್ ಮತ್ತು ಎನ್ ಡಿಎ ಕೂಟಗಳು ಅತಿ ಹೆಚ್ಚು ಸ್ಥಾನ ಗಳಿಸಿರುವುದನ್ನು ತಿರುವನಂತಪುರ ಕಾಂಗ್ರೆಸ್ ಸಂಸದ ಶಶಿ ತರೂರ್, ಇದುವೇ ಪ್ರಜಾಪ್ರಭುತ್ವದ ಸೌಂದರ್ಯ. ಎಡರಂಗದ ಆಡಳಿತ ಅಂತ್ಯಗೊಳಿಸಲು ನಾವು ಪ್ರಚಾರ ಮಾಡಿದ್ದೆವು. ಜನರು ಬಿಜೆಪಿಯನ್ನು ಆರಿಸಿದ್ದಾರೆ. ಜನಮತವನ್ನು ನಾವು ಗೌರವಿಸಬೇಕು ಎಂದಿದ್ದಾರೆ.

In the simultaneous local body elections held across Kerala, the Congress-led United Democratic Front (UDF) emerged as the biggest gainer, securing the highest number of local bodies and delivering a strong performance ahead of the upcoming Assembly elections.