ಬ್ರೇಕಿಂಗ್ ನ್ಯೂಸ್
01-12-25 09:28 pm HK News Desk ದೇಶ - ವಿದೇಶ
ನವದೆಹಲಿ, ಡಿ.1 : ದೇಶಾದ್ಯಂತ ಡಿಜಿಟಲ್ ಅರೆಸ್ಟ್ ಪ್ರಕರಣಗಳು ಹೆಚ್ಚುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದ ಸುಪ್ರೀಂ ಕೋರ್ಟ್, ದೇಶದ ಎಲ್ಲ ಸೈಬರ್ ಅಪರಾಧದ ತನಿಖೆಯ ಜವಾಬ್ದಾರಿಯನ್ನು ಸಿಬಿಐಗೆ ವಹಿಸಿ ಆದೇಶ ಮಾಡಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ಪೀಠವು, ಡಿಜಿಟಲ್ ಅರೆಸ್ಟ್ ಎನ್ನುವುದು ಇತರ ಸೈಬರ್ ಅಪರಾಧಗಳಿಗಿಂತ ಭಿನ್ನವಾಗಿದ್ದು ವ್ಯಕ್ತಿಗಳನ್ನು ಹೆಚ್ಚು ಅಪಾಯಕಾರಿ ರೀತಿಯಲ್ಲಿ ಗುರಿಯಾಗಿಸುತ್ತದೆ. ಆದ್ದರಿಂದ, ಇದರ ತನಿಖೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸ್ಪಷ್ಟಪಡಿಸಿದೆ.
ನ್ಯಾಯಾಲಯದ ನಿರ್ದೇಶನವನ್ನು ಅನುಸರಿಸಿ, ಸಿಬಿಐ ದೇಶಾದ್ಯಂತ ಡಿಜಿಟಲ್ ಬಂಧನ ಪ್ರಕರಣಗಳ ಸಮಗ್ರ ತನಿಖೆಯನ್ನು ನಡೆಸಲಿದೆ. ಬ್ಯಾಂಕಿಂಗ್ ಜಾಲವನ್ನು ಬಳಸಿಕೊಂಡು ಡಿಜಿಟಲ್ ಅರೆಸ್ಟ್ ಹೆಸರಲ್ಲಿ ಅಕ್ರಮ ಎಸಗುತ್ತಿರುವ ಬಗ್ಗೆ ಸ್ವತಂತ್ರ ತನಿಖೆ ನಡೆಸಲು ಪೀಠವು ಸಿಬಿಐಗೆ ನಿರ್ದೇಶನ ನೀಡಿದೆ. ಡಿಜಿಟಲ್ ಅರೆಸ್ಟ್ ಅಕ್ರಮಗಳಿಗೆ ಬ್ಯಾಂಕ್ ಖಾತೆಗಳನ್ನು ಬಳಸಲಾಗುತ್ತಿದೆ. ಹೀಗಾಗಿ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಈ ವಿಚಾರದಲ್ಲಿ ಬ್ಯಾಂಕ್ ಅಧಿಕಾರಿಗಳ ಪಾತ್ರವನ್ನು ಪರಿಶೀಲಿಸಬಹುದು ಎಂದು ನ್ಯಾಯಾಲಯ ಹೇಳಿದೆ. ಈ ನಿಟ್ಟಿನಲ್ಲಿ ನ್ಯಾಯಾಲಯವು ಸಿಬಿಐಗೆ ಸಂಪೂರ್ಣ ಅಧಿಕಾರವನ್ನು ನೀಡಿದೆ.
ಈ ಕುರಿತಾಗಿ ಕೋರ್ಟ್, ರಿಸರ್ವ್ ಬ್ಯಾಂಕ್‌ಗೆ ನೋಟಿಸ್ ಜಾರಿ ಮಾಡಿದ್ದು, ಪ್ರಕರಣದಲ್ಲಿ ಪ್ರತಿವಾದಿಯನ್ನಾಗಿ ಮಾಡಿದೆ. ಅನುಮಾನಾಸ್ಪದ ಬ್ಯಾಂಕ್ ಖಾತೆಗಳನ್ನು ಗುರುತಿಸಲು ಮತ್ತು ಕ್ರಿಮಿನಲ್ ಆದಾಯವನ್ನು ತಡೆಯಲು ಕೃತಕ ಬುದ್ಧಿಮತ್ತೆ ಆಧಾರಿತ ವ್ಯವಸ್ಥೆಗಳನ್ನು ಜಾರಿಗೆ ತರುವ ವಿಚಾರದಲ್ಲಿ ನ್ಯಾಯಾಲಯವು ಆರ್‌ಬಿಐಗೆ ಪ್ರಶ್ನೆ ಮಾಡಿದೆ. ಇದಲ್ಲದೆ, ಮಾಹಿತಿ ತಂತ್ರಜ್ಞಾನ ಕಾಯ್ದೆ 2021ರ ಅಡಿಯಲ್ಲಿ ಎಲ್ಲಾ ರಾಜ್ಯಗಳ ತನಿಖಾ ಸಂಸ್ಥೆಗಳು ಸಿಬಿಐ ಜೊತೆಗೆ ಸಹಕರಿಸಬೇಕು ಎಂದು ನ್ಯಾಯಾಲಯವು ನಿರ್ದೇಶಿಸಿದೆ. ಡಿಜಿಟಲ್ ಪುರಾವೆಗಳನ್ನು ಸಂಗ್ರಹಿಸುವಲ್ಲಿ ಯಾವುದೇ ವಿಳಂಬವನ್ನು ಸಹಿಸಲಾಗುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಇದರಿಂದಾಗಿ ಸಿಬಿಐ ದೇಶಾದ್ಯಂತ ಏಕರೂಪ ಮತ್ತು ಸಮಗ್ರ ತನಿಖೆಗೆ ದಾರಿಯಾಗಲಿದೆ.
ಅಗತ್ಯವಿದ್ದರೆ ಇಂಟರ್‌ಪೋಲ್‌ನಿಂದ ಸಹಾಯ ಪಡೆಯಲು ಮತ್ತು ದೇಶದ ಹೊರಗೆ ಕಾರ್ಯ ನಿರ್ವಹಿಸುತ್ತಿರುವ ಸೈಬರ್ ವಂಚನೆ ಜಾಲಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸುವುದಕ್ಕೂ ನ್ಯಾಯಾಲಯವು ಸಿಬಿಐಗೆ ಸೂಚಿಸಿದೆ. ಟೆಲಿಕಾಂ ಸೇವೆಗಳಲ್ಲಿ ಹೆಚ್ಚುತ್ತಿರುವ ಅಕ್ರಮಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್, ಒಬ್ಬ ವ್ಯಕ್ತಿಯ ಹೆಸರಿನಲ್ಲಿ ಹಲವಾರು ಸಿಮ್ ಕಾರ್ಡ್‌ಗಳನ್ನು ನೀಡುವುದನ್ನು ಯಾಕೆ ತಡೆಯಲಾಗುತ್ತಿಲ್ಲ. ಸಿಮ್ ಕಾರ್ಡ್‌ಗಳ ವಿತರಣೆಯಲ್ಲಿ ಕಠಿಣ ಮಾನದಂಡಗಳನ್ನು ಜಾರಿಗೆ ತರಲು ಎಲ್ಲಾ ಟೆಲಿಕಾಂ ಕಂಪನಿಗಳಿಗೆ ನಿರ್ದೇಶನ ನೀಡುವಂತೆ ದೂರಸಂಪರ್ಕ ಇಲಾಖೆಗೂ ಆದೇಶ ನೀಡಿದೆ.
The Supreme Court of India, led by Chief Justice Surya Kant, has expressed serious concern over the increasing number of “digital arrest” cybercrime cases across the country. Noting that digital arrest scams pose greater danger than other cybercrimes, the Court has handed over nationwide investigation responsibility to the CBI, granting it full authority to conduct an in-depth probe, including examining the misuse of banking networks and the role of bank officials under the Prevention of Corruption Act.
01-12-25 10:59 pm
Bangalore Correspondent
ಸಿಎಂ, ಡಿಸಿಎಂ ಭೇಟಿಯಾಗಿ ಹೊಟ್ಟೆ ತುಂಬ ಉಪಹಾರ ಸೇವನೆ...
01-12-25 08:28 pm
Bangalore Suicide: ಎರಡು ವರ್ಷದ ಹಿಂದೆ ಗಂಡನ ಸಾವು...
01-12-25 08:18 pm
Honnavar, Mysuru Bus Accident, student death:...
01-12-25 03:03 pm
CM Siddaramaiah, DK Shivakumar: ನಾನು ಸಿಎಂ ಬ್ರ...
01-12-25 02:58 pm
01-12-25 10:18 pm
HK News Desk
ಡಿಜಿಟಲ್ ಅರೆಸ್ಟ್ ಪ್ರಕರಣ ಹೆಚ್ಚಳ ; ಗಂಭೀರ ಪರಿಗಣಿಸ...
01-12-25 09:28 pm
ಇಡುಕ್ಕಿ ಸ್ಕೈ ಡೈನ್ ವೈಫಲ್ಯ ; 120 ಅಡಿ ಎತ್ತರದಲ್ಲಿ...
30-11-25 10:59 pm
Puttur Honey Gains National Attention, PM Mod...
30-11-25 03:53 pm
WhatsApp, Telegram, Snapchat, ShareChat, Cybe...
30-11-25 03:37 pm
01-12-25 09:25 pm
Mangalore Correspondent
ಕ್ರಿಸ್ಮಸ್ ವೇಳೆಗೆ ಮಂಗಳೂರು- ಮುಂಬೈ ನಡುವೆ ವಾರದ ಎಲ...
01-12-25 03:08 pm
Kapu Accident, Udupi, Five Killed: ಕಾಪು ಬಳಿ...
30-11-25 06:03 pm
DK Trasnsport Mangalore, Joel: ಡಿಕೆ ಟ್ರಾನ್ಸ್...
29-11-25 10:01 pm
Moodushedde, Mangalore, Daughter Assaults Mot...
29-11-25 04:26 pm
01-12-25 04:50 pm
Udupi Correspondent
ಗಿಫ್ಟ್ ಕೊಡಲಿಕ್ಕಿದೆಯೆಂದು ಸ್ವರ್ಣ ಜುವೆಲ್ಲರಿಯಿಂದ...
29-11-25 10:57 pm
Davanagere, Police Steal Gold: ದಾವಣಗೆರೆಯಲ್ಲಿ...
28-11-25 06:23 pm
ಡಿಜಿಪಿ ಓಂ ಪ್ರಕಾಶ್ ಹತ್ಯೆ ಕೇಸ್ ; ಪ್ರಮುಖ ಆರೋಪಿ ಪ...
28-11-25 02:16 pm
9 ಕ್ಯಾರೆಟ್ ಚಿನ್ನ ಮಂಗಳೂರಿನ ಮಾರುಕಟ್ಟೆಗೆ ಲಗ್ಗೆ ಇ...
27-11-25 09:14 pm