ಐಶ್ವರ್ಯಾ ರೈ ತನ್ನ ಗಂಡನಿಂದ ಬೇರ್ಪಟ್ಟರೆ ಮತಾಂತರ ಮಾಡಿ ಮದುವೆಯಾಗುತ್ತೇನೆ ; ಪಾಕಿಸ್ತಾನದ ಮುಸ್ಲಿಂ ಧರ್ಮ ಗುರು ಮಾತು ವೈರಲ್

28-11-25 10:42 pm       HK News Desk   ದೇಶ - ವಿದೇಶ

ಬಾಲಿವುಡ್ ನಟಿ ಐಶ್ವರ್ಯಾ ರೈ ಅವರು ತನ್ನ ಗಂಡನಿಂದ ದೂರವಾದರೆ ಅವರನ್ನು ಮತಾಂತರ ಮಾಡಿ ಮದುವೆ ಆಗುತ್ತೇನೆ ಎಂದು ಪಾಕಿಸ್ತಾನದ ಮುಸ್ಲಿಂ ಧರ್ಮ ಗುರು ಮುಫ್ತಿ ಅಬ್ದುಲ್ ಖಾವಿ ಎಂಬಾತ ನಾಲಿಗೆ ಹರಿಯಬಿಟ್ಟಿದ್ದಾನೆ. ಇದರ ವಿಡಿಯೋ ವೈರಲ್ ಆಗಿದೆ. ‌

ಮುಂಬೈ, ನ.28 : ಬಾಲಿವುಡ್ ನಟಿ ಐಶ್ವರ್ಯಾ ರೈ ಅವರು ತನ್ನ ಗಂಡನಿಂದ ದೂರವಾದರೆ ಅವರನ್ನು ಮತಾಂತರ ಮಾಡಿ ಮದುವೆ ಆಗುತ್ತೇನೆ ಎಂದು ಪಾಕಿಸ್ತಾನದ ಮುಸ್ಲಿಂ ಧರ್ಮ ಗುರು ಮುಫ್ತಿ ಅಬ್ದುಲ್ ಖಾವಿ ಎಂಬಾತ ನಾಲಿಗೆ ಹರಿಯಬಿಟ್ಟಿದ್ದಾನೆ. ಇದರ ವಿಡಿಯೋ ವೈರಲ್ ಆಗಿದೆ. ‌

ಸಂದರ್ಶನವೊಂದರಲ್ಲಿ ಮಾತನಾಡಿರುವ ಈ ವ್ಯಕ್ತಿ, ಐಶ್ವರ್ಯಾ ಮತ್ತು ಅಭಿಷೇಕ್ ನಡುವೆ ಸಮಸ್ಯೆಗಳಿವೆ ಮತ್ತು ಅವರು ಬೇರೆಯಾಗುವ ಸಾಧ್ಯತೆ ಇದೆ ಎನ್ನುವ ಮಾತುಗಳನ್ನು ಹಲವು ಸಮಯಗಳಿಂದ ಕೇಳಿದ್ದೇನೆ. ಒಂದು ವೇಳೆ ಅವರು ಬೇರ್ಪಟ್ಟರೆ, ಐಶ್ವರ್ಯಾ ರೈ ನನಗೆ ಮದುವೆಯ ಪ್ರಸ್ತಾಪವನ್ನು ಕಳುಹಿಸುತ್ತಾರೆಂಬ ಭಾವನೆ ನನಗಿದೆ ಎಂದಿದ್ದಾರೆ.

ಮುಸ್ಲಿಮೇತರ ವ್ಯಕ್ತಿಯನ್ನು ನೀವು ಹೇಗೆ ಮದುವೆಯಾಗಬಹುದು ಎಂದು ನಿರೂಪಕರು ಕೇಳಿದಾಗ, ರಾಖಿ ಸಾವಂತ್ ಇಸ್ಲಾಂ ಸ್ವೀಕರಿಸಿ ಫಾತಿಮಾ ಆದ ಉದಾಹರಣೆಯನ್ನು ಮುಫ್ತಿ ನೀಡಿದ್ದಾರೆ. ನಾನು ಐಶ್ವರ್ಯಾ ರೈ ಅವರನ್ನು ಮತಾಂತರ ಮಾಡಿ ಅವರ ಹೆಸರನ್ನು ಆಯೇಷಾ ರೈ ಎಂದು ಬದಲಾಯಿಸಿ, ಬಳಿಕ ಮದುವೆ ಆಗುತ್ತೇನೆ ಎಂದಿದ್ದಾರೆ. 

ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಬಚ್ಚನ್‌ ಕಳೆದ ಕೆಲ ಸಮಯದಿಂದ ಸೋಶಿಯಲ್‌ ಮೀಡಿಯಾದಲ್ಲಿ ಟ್ರೆಂಡ್‌ನಲ್ಲಿದ್ದಾರೆ. ಆಗಾಗ ಅವರ ಮದುವೆ ಜೀವನದ ಬಗ್ಗೆ ನಾನಾ ರೀತಿಯ ಮಾತುಗಳು ಕೇಳಿಬರುತ್ತಿವೆ. ಪತಿ ಅಭಿಷೇಕ್‌ ಬಚ್ಚನ್‌ - ಐಶ್ವರ್ಯಾ ರೈ ನಡುವೆ ಮನಸ್ತಾಪ ಇದೆ. ಹೀಗಾಗಿ ಇಬ್ಬರು ಅಂತರ ಕಾಯ್ದುಕೊಂಡಿದ್ದಾರೆ ಎನ್ನುವ ಗಾಸಿಪ್ ಮಾತುಗಳು ಕೆಲ ಸಮಯದ ಹಿಂದೆ ಬಾಲಿವುಡ್‌ ನಲ್ಲಿ ಹರಿದಾಡಿದ್ದವು.

A controversial statement made by Pakistani Muslim cleric Mufti Abdul Qavi has gone viral on social media. The cleric said that if Bollywood actress Aishwarya Rai separates from her husband, he is willing to convert her and marry her.