ಬ್ರೇಕಿಂಗ್ ನ್ಯೂಸ್
24-11-25 03:37 pm HK News Desk ದೇಶ - ವಿದೇಶ
ಮುಂಬೈ, ನ.24 : ಬಾಲಿವುಡ್ ಚಿತ್ರರಂಗದ ದಂತಕಥೆ, ಹೀ ಮ್ಯಾನ್ ಖ್ಯಾತಿಯ ನಟ ಧರ್ಮೇಂದ್ರ(89) ನಿಧನ ಹೊಂದಿದ್ದಾರೆ. ಹಲವು ಸಮಯದಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಇಂದು ಕೊನೆಯುಸಿರೆಳೆದಿದ್ದಾರೆ.
ಇದೇ ಡಿಸೆಂಬರ್ 8ರಂದು ಧರ್ಮೇಂದ್ರ ಅವರಿಗೆ 90ನೇ ವರ್ಷದ ಜನ್ಮದಿನ ಆಚರಿಸಿಕೊಳ್ಳಬೇಕಿತ್ತು. ಆದರೆ ಅದಕ್ಕೆ ಎರಡು ವಾರ ಇರುವಾಗಲೇ ಇಹಲೋಕ ತ್ಯಜಿಸಿದ್ದಾರೆ. 80ರ ದಶಕದಲ್ಲಿ ಬಾಲಿವುಡ್ ಚಿತ್ರರಂಗವನ್ನು ಆಳಿದ್ದ ದಿಗ್ಗಜ ನಟ ಇನ್ನಿಲ್ಲವಾಗಿದ್ದಾರೆ.





ಬಾಲಿವುಡ್ನಲ್ಲಿ ‘ಹಿ ಮ್ಯಾನ್’ ಎಂದೇ ಫೇಮಸ್ ಆಗಿದ್ದ ಧರ್ಮೇಂದ್ರ ಅವರ ನಗು ಅದೆಷ್ಟೋ ಮಹಿಳಾ ಅಭಿಮಾನಿಗಳ ನಿದ್ದೆಗೆಡಿಸಿತ್ತು. ಅವರು ತೆರೆಮೇಲೆ ಕಾಣಿಸಿಕೊಂಡರೆ, ಅವರ ಚಾರ್ಮ್, ನಗುವನ್ನು ಕಂಡು ಅಭಿಮಾನಿಗಳು ಕುಣಿದು ಕುಪ್ಪಳಿಸುತ್ತಿದ್ದರು. ಪಂಜಾಬಿ ಮೂಲದ ಕುಟುಂಬದ ಕುಡಿ ಮುಂಬೈ ಚಿತ್ರರಂಗವನ್ನು ಆಳಿದ್ದೇ ರೋಚಕ.
ಧರ್ಮೇಂದ್ರ 1935ರಲ್ಲಿ ಪಂಜಾಬಿ ಕುಟುಂಬದಲ್ಲಿ ಜನಿಸಿದ್ದರು. ಅಲ್ಲಿನ ಸಣ್ಣ ಪಟ್ಟಣದಿಂದ ಕುಟುಂಬದ ಜೊತೆಗೆ ಬಂದಿದ್ದ ಅವರು, ಚಿತ್ರರಂಗದಲ್ಲಿ ಅತಿ ಪ್ರೀತಿಯ ಹೀರೋ ಆಗಿ ಮೆರೆದಿದ್ದರು. 1960ರ ವೇಳೆಗೆ ಹಿಂದಿ ಚಿತ್ರರಂಗಕ್ಕೆ ಬಂದ ಅವರು, ಹೊಸತನಕ್ಕೆ ನಾಂದಿ ಹಾಡಿದ್ದರು. 1966ರ ‘ಫೂಲ್ ಔರ್ ಪತ್ತರ್’ ಸಿನಿಮಾ ಅವರಿಗೆ ದೊಡ್ಡ ಯಶಸ್ಸು ನೀಡಿತ್ತು. ಚಿತ್ರದಲ್ಲಿ ಡಿಟೆಕ್ಟಿವ್ ಅಧಿಕಾರಿ ಆಗಿ ಕಾಣಿಸಿಕೊಂಡು ಅಪಾರ ಅಭಿಮಾನಿಗಳನ್ನು ಗಳಿಸಿದ್ದರು. ಶರ್ಟ್ ಬಟನ್ ತೆಗೆದು ಚಿತ್ರದಲ್ಲಿ ಎದೆ ತೋರಿಸುವ ಶೈಲಿಯನ್ನು ಪ್ರಚಲಿತಕ್ಕೆ ತಂದಿದ್ದೂ ಧರ್ಮೇಂದ್ರ. ವಿಶಾಲ ಎದೆಯೇ ಅವರ ಎದೆಗಾರಿಕೆಯ ಪ್ಲಸ್ ಆಗಿತ್ತು. 1970ರ ವೇಳೆ ‘ಶೋಲೆ’, ‘ಡ್ರೀಮ್ ಗರ್ಲ್’, ‘ಸೀತಾ ಔರ್ ಗೀತಾ’, ‘ಜುಗ್ಣು’, ‘ರಾಜಾ ರಾಣಿ’ ಸಿನಿಮಾಗಳಲ್ಲಿ ನಟಿಸಿ ಗಮನ ಸೆಳೆದರು. 1980ರ ಬಳಿಕ ಹೀರೋ ಪಾತ್ರಗಳಿಂದ ದೂರ ಸರಿದರೂ ಚಿತ್ರರಂಗದಲ್ಲಿ ಅವರೇ ಛಾಪು ಮೂಡಿಸಿದ್ದರು. ರಾಜಕೀಯ ಸೇರ್ಪಡೆಯಾಗಿ 2004ರಿಂದ 2009ರ ವರೆಗೆ ಬಿಜೆಪಿ ಸಂಸದರಾಗಿಯೂ ಕಾರ್ಯ ನಿರ್ವಹಿಸಿದ್ದರು.
ಕಳೆದೊಂದು ತಿಂಗಳಿಂದ ಅವರ ಆರೋಗ್ಯ ಸ್ಥಿತಿ ಬಿಗಡಾಯಿಸಿತ್ತು. ಒಂದು ವಾರದ ಹಿಂದೆ ನಿಧನದ ಬಗ್ಗೆಯೂ ಸುದ್ದಿ ಹಬ್ಬಿತ್ತು. ಆಸ್ಪತ್ರೆಯಲ್ಲಿದ್ದ ಧರ್ಮೇಂದ್ರ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದ ಹಿನ್ನೆಲೆ ಮನೆಯಲ್ಲೇ ಚಿಕಿತ್ಸೆ ಮುಂದುವರೆಸಲಾಗಿತ್ತು. 12 ದಿನಗಳ ಹಿಂದಷ್ಟೇ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಮರಳಿದ್ದರು. ಧರ್ಮೇಂದ್ರ ಎರಡನೇ ಪತ್ನಿಯಾಗಿ ಖ್ಯಾತ ನಟಿ ಹೇಮಾ ಮಾಲಿನಿ ಅವರನ್ನು ಮದುವೆಯಾಗಿದ್ದರು. ಇವರಿಗೆ ಖ್ಯಾತ ನಟ ಸನ್ನಿ ಡಿಯೋಲ್, ಬಾಬಿ ಡಿಯೋಲ್, ಇಶಾ ಡಿಯೋಲ್ ಸೇರಿದಂತೆ ಆರು ಜನ ಮಕ್ಕಳಿದ್ದಾರೆ. 2012ರಲ್ಲಿ ಧರ್ಮೇಂದ್ರ ಅವರನ್ನು ಭಾರತ ಸರ್ಕಾರ ಅತ್ಯುನ್ನತ ನಾಗರಿಕ ಗೌರವ ‘ಪದ್ಮಭೂಷಣ’ ನೀಡಿ ಗೌರವಿಸಿದೆ.
Legendary Bollywood actor and ‘He-Man’ fame star Dharmendra (89) has passed away. He had been suffering from age-related health issues for quite some time and breathed his last today.
25-06-26 09:10 pm
HK News Staffer
ಗೃಹಲಕ್ಷ್ಮಿ ಯೋಜನೆಯಲ್ಲಿ ಭಾರೀ ಕಳ್ಳಾಟ ! 19 ಸಾವಿರ...
24-06-26 05:55 pm
ಅಡ್ಡ ಮತದಾನ ; ರಾಜ್ಯ ನಾಯಕತ್ವದ ನಿರ್ಲಕ್ಷ್ಯವೇ ಕಾರಣ...
23-06-26 05:58 pm
ಅಡ್ಡ ಮತದಾನ; ಧರ್ಮಸ್ಥಳದಲ್ಲಿ ಶಾಸಕರು ಬಂದು ಆಣೆ ಮಾಡ...
22-06-26 08:18 pm
ವಿಧಾನ ಪರಿಷತ್ ಚುನಾವಣೆಗೂ ಮುನ್ನ ರಹಸ್ಯ ಸಭೆ ; ಬಿಜೆ...
22-06-26 03:44 pm
25-06-26 12:13 pm
HK News Staffer
ಕೂಲ್ ಸಿಟಿ ಯುರೋಪಿನಲ್ಲೀಗ ಬಿಸಿಲ ಹೊಡೆತ ; ಫ್ರಾನ್ಸ್...
24-06-26 01:51 pm
ಮಾಹಿತಿ ಹಕ್ಕು ನಿಯಮಗಳಿಗೆ ಮಹಾರಾಷ್ಟ್ರ ಸರ್ಕಾರ ತಿದ್...
23-06-26 10:47 pm
ಟಿಎಂಸಿಯಲ್ಲಿ ರಾಜಕೀಯ ಭೂಕಂಪ ; ಮಮತಾ ಬ್ಯಾನರ್ಜಿ ಅಧ...
23-06-26 12:21 pm
ಕತಾರ್ ಕೈಗಾರಿಕಾ ಪ್ರದೇಶದಲ್ಲಿ ಭಾರೀ ಸ್ಫೋಟ ; 54 ಜನ...
22-06-26 12:55 pm
25-06-26 10:56 pm
HK News Staffer
Mangalore Drugs, Police: ಒಂದು ವರ್ಷದಲ್ಲಿ 400 ಡ...
25-06-26 10:48 pm
ಸಂಪುಟ ವಿಸ್ತರಣೆ ವಿಳಂಬ ; ಪ್ರಕೃತಿ ವಿಕೋಪ ಮೇಲುಸ್ತು...
25-06-26 02:39 pm
ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ನಿಧನ; ‘ಸಮಾಜ ಕಳೆ...
23-06-26 06:02 pm
ಬಸ್ ಚಲಿಸುತ್ತಿದ್ದಾಗಲೇ ಬಿಪಿ ಲೋ ಆಗಿ ಕುಸಿದ ಚಾಲಕ !...
23-06-26 03:18 pm
25-06-26 09:40 pm
HK News Staffer
ಮಂಡ್ಯದಲ್ಲಿ ಸೆಲ್ಫಿ ಹುಚ್ಚಿಗೆ ಐವರ ಬಲಿ ; ಕಾವೇರಿ ನ...
25-06-26 01:00 pm
ಹಸೆಮಣೆ ಏರಬೇಕಿದ್ದವಳೇ ಭಾವಿ ಪತಿಯನ್ನು ಫೋಟೊ ಶೂಟ್ ನ...
24-06-26 09:28 pm
30 ಲಕ್ಷ ಸಾಲ, ಲಿವ್-ಇನ್ ಸಂಬಂಧಕ್ಕೆ ಪೋಷಕರ ವಿರೋಧ ;...
24-06-26 08:53 pm
ರಾಮ ಮಂದಿರವನ್ನ ಸ್ಫೋಟಿಸಲು ಪ್ಲಾನ್ ಮಾಡಿದ್ವಿ ! ;...
24-06-26 07:53 pm