ಬ್ರೇಕಿಂಗ್ ನ್ಯೂಸ್
11-11-25 03:28 pm HK News Desk ದೇಶ - ವಿದೇಶ
ನವದೆಹಲಿ, ನ.11 : ಕೆಂಪುಕೋಟೆ ಬಳಿಯ ಕಾರು ಬಾಂಬ್ ಸ್ಫೋಟ ಕೃತ್ಯದಲ್ಲಿ ಪಾಕಿಸ್ತಾನದ ಉಗ್ರವಾದಿ ಸಂಘಟನೆ ಜೈಶ್ ಇ-ಮೊಹಮ್ಮದ್ ಕೈವಾಡದ ಅನುಮಾನ ವ್ಯಕ್ತವಾಗಿದೆ. ಇದಲ್ಲದೆ, ಇತ್ತೀಚೆಗೆ ಜೈಶ್ ಉಗ್ರರು ಆರಂಭಿಸಿದ್ದ ಮಹಿಳಾ ಉಗ್ರವಾದಿ ಗುಂಪಿನ ಕೈವಾಡದ ಲಿಂಕ್ ಬಗ್ಗೆಯೂ ಸಂಶಯ ಕೇಳಿಬಂದಿದೆ.
ಭಾರತೀಯ ಸೇನೆ ನಡೆಸಿದ ಆಪರೇಶನ್ ಸಿಂಧೂರ ಕಾರ್ಯಾಚರಣೆಗೆ ಪ್ರತಿಯಾಗಿ ಭಾರತದ ವಿರುದ್ಧ ಸೇಡು ತೀರಿಸಿಕೊಳ್ಳಲು ಜೈಶ್ ಉಗ್ರರು ಮಹಿಳೆಯರ ಗುಂಪನ್ನು ಆರಂಭಿಸಿದ್ದರು. ಅದಕ್ಕೆ ಆಪರೇಶನ್ ಸಿಂಧೂರ್ ನಲ್ಲಿ ಮಡಿದಿದ್ದ ಜೈಶ್ ಉಗ್ರ ಯೂಸುಫ್ ಅಝರ್ ಪತ್ನಿ ಸಾದಿಯಾ ಅಜರ್ ಳನ್ನು ಕಮಾಂಡರ್ ಆಗಿ ನೇಮಿಸಿದ್ದರು. ಇದಲ್ಲದೆ, ಇದರ ಪರವಾಗಿ ಆನ್ಲೈನ್ ಕ್ಲಾಸ್ ನಡೆಸುವುದು, ಉಗ್ರರಿಗೆ ಫಂಡ್ ರೈಸಿಂಗ್ ಮಾಡುವುದು ನಡೆದಿತ್ತು.




ಜಮಾತ್ ಉಲ್ ಮುಮ್ಮಿನಾತ್ ಎನ್ನುವ ಹೆಸರಿನ ಮಹಿಳಾ ವಿಂಗ್ ಅನ್ನು ಸಾದಿಯಾ ಮುನ್ನಡೆಸುತ್ತಿದ್ದು ಇದರ ಪರವಾಗಿ ಕಾಶ್ಮೀರ ಮತ್ತು ಉತ್ತರ ಭಾರತದಲ್ಲಿ ಮಹಿಳೆಯರನ್ನು ಸೇರ್ಪಡೆಗೊಳಿಸುವ ಯತ್ನ ನಡೆದಿತ್ತು. ಇವರಿಗೆ ಸಾದಿಯಾ ಮತ್ತು ಆಕೆಯ ಸೋದರಿ ಸಮೈರಾ ಆನ್ಲೈನ್ ಕ್ಲಾಸ್ ನಡೆಸುತ್ತಿದ್ದರು ಎಂಬುದು ಇತ್ತೀಚೆಗೆ ಗುಪ್ತಚರ ಮೂಲಗಳಿಂದ ಬಯಲಾಗಿತ್ತು. ಆರ್ಥಿಕವಾಗಿ ದುರ್ಬಲವಾಗಿರುವ ಮಹಿಳೆಯರನ್ನು ಆಮಿಷವೊಡ್ಡಿ ಸಂಘಟನೆಗೆ ಸೇರಿಸುವ ಯತ್ನ ನಡೆದಿತ್ತು. ಇದೀಗ ಕೆಂಪುಕೋಟೆ ಕಾರ್ ಬ್ಲಾಸ್ಟ್ ಪ್ರಕರಣದಲ್ಲಿ ದೆಹಲಿ ಪೊಲೀಸರು ಪುಲ್ವಾಮಾ ಮತ್ತು ಜೈಶ್ ಲಿಂಕ್ ಅನ್ನು ಕಂಡುಕೊಂಡಿದ್ದಾರೆ.
ಮೊನ್ನೆ ಭಾನುವಾರ ಸಂಜೆ ಹರ್ಯಾಣದ ಫರೀದಾಬಾದ್ ನಲ್ಲಿ ಭಯೋತ್ಪಾದಕ ನಿಗ್ರಹ ದಳ ನಡೆಸಿದ ಕಾರ್ಯಾಚರಣೆಯಲ್ಲಿ 3 ಸಾವಿರ ಕೇಜಿಯಷ್ಟು ಸ್ಫೋಟಕ್ ಸಾಮಗ್ರಿಗಳನ್ನು ಪತ್ತೆ ಮಾಡಲಾಗಿತ್ತು. ಈ ವೇಳೆ ವೈದ್ಯಕೀಯ ವೃತ್ತಿಯಲ್ಲಿದ್ದ ಶಹೀನಾ ಶಹೀದ್ ಎಂಬ ಮಹಿಳೆಯ ಕಾರಿನಲ್ಲಿ ಎಕೆ 47 ರೈಫಲ್ ಮತ್ತು ಸ್ಫೋಟಕಗಳು ಪತ್ತೆಯಾಗಿದ್ದವು. ಶಮೀನಾ ಮತ್ತು ಡಾ.ಮುಜಾಮಿಲ್ ಶಕೀಲ್ ಫರೀದಾಬಾದ್ ನಗರದ ಅಲ್-ಫಲಾಹ್ ಆಸ್ಪತ್ರೆಯಲ್ಲಿ ವೈದ್ಯರಾಗಿದ್ದರು. ಇವರಿಬ್ಬರನ್ನೂ ಸ್ಫೋಟಕ ಸಾಮಗ್ರಿ ಸಾಗಣೆ ಆರೋಪದಲ್ಲಿ ಎನ್ಐಎ ಬಂಧಿಸಿತ್ತು. ಶಹೀನಾ ಶಮೀದ್ ಭಾರತದಲ್ಲಿ ಜೈಶ್ ಮಹಿಳಾ ವಿಂಗ್ ಮುಖ್ಯಸ್ಥೆ ಆಗಿರುವ ಸಾಧ್ಯತೆಯಿದೆ ಇದೆ ಎಂದು ಎನ್ ಡಿಟಿವಿ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿದೆ.
ದೆಹಲಿ ಹೊರವಲಯದ ಫರೀದಾಬಾದ್ ನಲ್ಲಿ ಭಾರೀ ಪ್ರಮಾಣದ ಸ್ಫೋಟಕ ವಶಕ್ಕೆ ಪಡೆದ ಕೆಲವೇ ಗಂಟೆಗಳಲ್ಲಿ ಕೆಂಪುಕೋಟೆ ಬಳಿ ಕಾರು ಬ್ಲಾಸ್ಟ್ ಆಗಿತ್ತು. ಹೀಗಾಗಿ ಜೈಶ್ ಉಗ್ರರು ಸ್ಫೋಟಕಗಳನ್ನು ಭಾರತದಲ್ಲಿ ದೊಡ್ಡ ಪ್ರಮಾಣದ ವಿಧ್ವಂಸಕ ಕೃತ್ಯ ಎಸಗುವುದಕ್ಕಾಗಿ ಒಯ್ಯುತ್ತಿದ್ದರು. ಅಲ್ಲದೆ, ಸ್ಫೋಟಕ ಪತ್ತೆ ಬೆನ್ನಲ್ಲೇ ದೆಹಲಿಯಲ್ಲಿ ಸ್ಫೋಟ ಸಂಭವಿಸಿದ್ದು, ಆ ಕಾರಿನಲ್ಲೂ ಸ್ಫೋಟಕ ಸಾಮಗ್ರಿ ಒಯ್ಯುತ್ತಿದ್ದಾಗಲೇ ಹಠಾತ್ ಸ್ಫೋಟ ಉಂಟಾಗಿರುವ ಸಾಧ್ಯತೆ ಬಗ್ಗೆ ಹೇಳಲಾಗುತ್ತಿದೆ.
ವಾರದ ಹಿಂದೆ ಉತ್ತರ ಪ್ರದೇಶದ ಸಹರಾಣ್ ಪುರ್ ಎಂಬಲ್ಲಿ ಡಾ.ಆದಿಲ್ ಅಹ್ಮದ್ ರಾಥರ್ ಎನ್ನುವ ವೈದ್ಯನನ್ನು ಜೈಶ್ ಉಗ್ರರ ಲಿಂಕ್ ನಲ್ಲಿ ಪೊಲೀಸರು ಬಂಧಿಸಿದ್ದರು. ಮೂವರು ವೈದ್ಯರ ಬಂಧನ ಬೆನ್ನಲ್ಲೇ ಕೆಂಪುಕೋಟೆ ಕಾರು ಬ್ಲಾಸ್ಟ್ ಕೇಸ್ ನಲ್ಲಿ ಜಮ್ಮು ಕಾಶ್ಮೀರದ ಪುಲ್ವಾಮಾದ ಡಾ.ಉಮರ್ ಮೊಹಮ್ಮದ್ ಎನ್ನುವ ಮತ್ತೊಬ್ಬ ವೈದ್ಯನ ಲಿಂಕ್ ಪತ್ತೆಯಾಗಿದೆ. ಹೀಗಾಗಿ ವೈಟ್ ಕಾಲರ್ ಜಾಬಲ್ಲಿದ್ದವರನ್ನೇ ಗುರಿಯಾಗಿಸಿ ಉಗ್ರರು ಉತ್ತರ ಭಾರತದಲ್ಲಿ ವಿಧ್ವಂಸಕ ಕೃತ್ಯಕ್ಕೆ ಯೋಜನೆ ತಯಾರಿಸಿದ್ದರು ಎನ್ನುವ ವಿಷಯ ಬಯಲಾಗಿದೆ.
ಸದ್ಯಕ್ಕೆ ದೆಹಲಿ ಮತ್ತು ಹರ್ಯಾಣ ಪೊಲೀಸರು ಪುಲ್ವಾಮಾದ ಡಾ.ಉಮರ್ ಮೊಹಮ್ಮದ್ ಪತ್ತೆಗೆ ಮುಂದಾಗಿದ್ದಾರೆ. ಆತನ ಸಹಚರ ಎನ್ನಲಾದ ಸಜ್ಜಾದ್ ಎನ್ನುವಾತನನ್ನು ವಶಕ್ಕೆ ಪಡೆದಿದ್ದಾರೆ. ಇದಲ್ಲದೆ, ಕಾರು ಸ್ಫೋಟದ ಹಿಂದೆ ಯಾರಿದ್ದಾರೆ ಎನ್ನುವ ಬಗ್ಗೆ ಅಧಿಕೃತವಾಗಿ ಯಾವುದೇ ಸಂಘಟನೆ ಹೊಣೆ ಹೊತ್ತುಕೊಂಡಿಲ್ಲ. ಪಾಕಿಸ್ತಾನದ ಉಗ್ರವಾದಿ ಗುಂಪಿನ ಕೈವಾಡದ ಬಗ್ಗೆ ಶಂಕೆ ಬಲವಾಗಿದ್ದು ಪ್ರಧಾನಿ ಮೋದಿ, ಅಮಿತ್ ಷಾ ಯಾವುದೇ ಕಾರಣಕ್ಕೂ ಇದರ ಹಿಂದಿರುವ ಶಕ್ತಿಗಳನ್ನು ಮಟ್ಟ ಹಾಕದೆ ಬಿಡುವುದಿಲ್ಲ ಎಂದಿದ್ದಾರೆ.
A powerful explosion ripped through a Hyundai i20 car near the Red Fort Metro Station in Old Delhi on November 10, killing at least 8 people and injuring dozens. The Delhi Police and National Investigation Agency (NIA) are investigating the blast under the Unlawful Activities (Prevention) Act amid suspicions of a terror plot. CCTV footage captured flames and chaos as several nearby vehicles caught fire.
10-11-25 07:17 pm
Bangalore Correspondent
54 ಹೆಕ್ಟೇರ್ ಅರಣ್ಯ ನಾಶ ಭೀತಿ ; ಶರಾವತಿ ಪಂಪ್ಡ್ ಸ್...
10-11-25 02:58 pm
'ನೋ ಚೇರ್ ಇನ್ ನವೆಂಬರ್' ಎಐ ವಿಡಿಯೋ ಹಂಚಿಕೊಂಡ ಬಿಜೆ...
10-11-25 01:23 pm
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ನಮಾಜ್ ವಿಡಿಯೋ ವೈರಲ...
10-11-25 12:22 pm
ಮುಸ್ಲಿಂ, ಕ್ರೈಸ್ತರು ಆರೆಸ್ಸೆಸ್ ಶಾಖೆಗೆ ಬರಬಹುದಾ?...
09-11-25 06:53 pm
11-11-25 03:28 pm
HK News Desk
ಐ-20 ಕಾರು ಕೆಂಪುಕೋಟೆ ಸಿಗ್ನಲ್ ನಲ್ಲಿದ್ದಾಗ ಬ್ಲಾಸ್...
10-11-25 11:07 pm
ದೆಹಲಿಯಲ್ಲಿ ಭಾರೀ ಬಾಂಬ್ ಸ್ಫೋಟ ; ಛಿದ್ರಗೊಂಡು ಚದುರ...
10-11-25 09:08 pm
ರಾಜಧಾನಿ ದೆಹಲಿಯಲ್ಲಿ ಪ್ರಬಲ ಬಾಂಬ್ ಸ್ಫೋಟ ; ಒಂಬತ್ತ...
10-11-25 08:23 pm
ಫರಿದಾಬಾದ್ ; ಕಾಶ್ಮೀರಿ ವೈದ್ಯನ ಮಾಹಿತಿಯಂತೆ 300 ಕ...
10-11-25 03:04 pm
08-11-25 08:31 pm
Mangalore Correspondent
ಬೆಂಗಳೂರು- ಮಂಗಳೂರು ಹೈಸ್ಪೀಡ್ ಕಾರಿಡಾರ್ ; ಶಿರಾಡ...
07-11-25 10:58 pm
ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಫೆ.21ರಂದು ನಾರಾಯಣ ಗ...
07-11-25 07:23 pm
ಗೋಡಂಬಿ ಉದ್ಯಮಕ್ಕೆ ನೂರು ವರ್ಷ ; ನ.14-16ರಂದು ದೇಶದ...
07-11-25 05:25 pm
ನೆಲ್ಯಾಡಿಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಅಭಿಷೇ...
07-11-25 02:18 pm
09-11-25 10:27 pm
Mangalore Correspondent
ಬಹುಕೋಟಿ ವಂಚಕ ರೋಷನ್ ಸಲ್ದಾನಗೆ ಸೇರಿದ 2.85 ಕೋಟಿ ಮ...
09-11-25 03:50 pm
ಕೋಮುದ್ವೇಷದ ಕೊಲೆ ; ಪ್ರತೀಕಾರಕ್ಕೆ ಪ್ರಚೋದಿಸಿ ಇನ್...
08-11-25 11:15 pm
Digital Arrest Scam, Mangalore Online Fraud:...
08-11-25 04:08 pm
ಆರೋಪಿಗೆ ಜಾಮೀನು ನೀಡಲು ಹೋಗಿ ತಾನೇ ತಗ್ಲಾಕ್ಕೊಂಡ !...
07-11-25 11:20 pm