ಬ್ರೇಕಿಂಗ್ ನ್ಯೂಸ್
20-10-25 08:34 pm HK News Desk ದೇಶ - ವಿದೇಶ
ಪಣಜಿ, ಅ.20: ಪ್ರಧಾನಿ ನರೇಂದ್ರ ಮೋದಿ ಅವರು ಗೋವಾದಲ್ಲಿರುವ ಐಎನ್ಎಸ್ ವಿಕ್ರಾಂತ್ ಯುದ್ಧ ನೌಕೆಯಲ್ಲಿ ಸೈನಿಕರೊಂದಿಗೆ ದೀಪಾವಳಿ ಹಬ್ಬದ ಆಚರಿಸಿದ್ದಾರೆ. ಇದೇ ವೇಳೆ, ಐಎನ್ಎಸ್ ವಿಕ್ರಾಂತ್, ಬ್ರಹ್ಮೋಸ್ ಕ್ಷಿಪಣಿ, ಬಲಿಷ್ಠ ಭಾರತೀಯ ಸೈನ್ಯದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ನಮ್ಮ ಸರ್ಕಾರವು ಭಾರತವನ್ನು ಜಗತ್ತಿನ ಅತಿದೊಡ್ಡ ರಕ್ಷಣಾ ಸಲಕರಣೆ ರಫ್ತು ದೇಶವನ್ನಾಗಿಸುವ ಗುರಿಯನ್ನು ಹೊಂದಿದೆ. 2014 ರಿಂದ 40ಕ್ಕೂ ಅಧಿಕ ಯುದ್ಧ ನೌಕೆ ಹಾಗೂ ಜಲಾಂತರ್ಗಾಮಿ ನೌಕೆಗಳನ್ನು ನಿರ್ಮಿಸಲಾಗಿದೆ. ಸ್ವದೇಶಿ ನಿರ್ಮಿತ ಬ್ರಹ್ಮೋಸ್ ಕ್ಷಿಪಣಿ ಬಗ್ಗೆ ಜಗತ್ತಿನಾದ್ಯಂತ ಭಾರೀ ಬೇಡಿಕೆ ಬಂದಿದೆ ಎಂದು ಹೇಳಿದ್ದಾರೆ.
ಪ್ರತಿಯೊಬ್ಬರು ತಮ್ಮ ಕುಟುಂಬದೊಂದಿಗೆ ದೀಪಾವಳಿ ಹಬ್ಬವನ್ನು ಆಚರಿಸಲು ಬಯಸುತ್ತಾರೆ. ನೀವು ನನ್ನ ಕುಟುಂಬವಿದ್ದಂತೆ. ನಿಮ್ಮೊಂದಿಗೆ ಈ ಹಬ್ಬವನ್ನು ಆಚರಿಸುತ್ತಿರುವುದು ಅತೀವ ಸಂತಸ ತಂದಿದೆ ಎಂದು ಹೇಳಿದ ಮೋದಿ, ಭಾರತದ ಮೊದಲ ಸ್ಥಳೀಯ ವಿಮಾನವಾಹಕ ನೌಕೆಯಾದ ಐಎನ್ಎಸ್ ವಿಕ್ರಾಂತ್ ಭಾರತದ ಸಶಸ್ತ್ರ ಪಡೆಗಳ ಸಾಮರ್ಥ್ಯವನ್ನು ಪ್ರತಿಬಿಂಬಿಸುತ್ತದೆ. ಇದು ಕೇವಲ ಯುದ್ಧನೌಕೆಯಲ್ಲ, 21ನೇ ಶತಮಾನದಲ್ಲಿ ಭಾರತದ ಕಠಿಣ ಪರಿಶ್ರಮ, ಪ್ರತಿಭೆ, ಸಾಮರ್ಥ್ಯ ಮತ್ತು ಬದ್ಧತೆಗೆ ಸಾಕ್ಷಿಯಾಗಿದೆ ಎಂದಿದ್ದಾರೆ.





'ಕೆಲವೇ ತಿಂಗಳ ಹಿಂದೆ, ವಿಕ್ರಾಂತ್ ಹೇಗೆ ಪಾಕಿಸ್ತಾನವನ್ನು ನಿದ್ದೆಗೆಡಿಸುವಂತೆ ಮಾಡಿತ್ತು ಎಂದು ನಾವು ನೋಡಿದ್ದೇವೆ. ಭಾರತದ ನೌಕಾಪಡೆ ಹುಟ್ಟುಹಾಕಿದ "ಭಯ", ವಾಯುಪಡೆಯು ಪ್ರದರ್ಶಿಸಿದ "ಅಸಾಧಾರಣ ಕೌಶಲ್ಯ" ಮತ್ತು ಭೂಸೇನೆಯ "ಶೌರ್ಯ", ಮೂರೂ ಸೇನಾಪಡೆಗಳ "ಅಸಾಧಾರಣ ಸಮನ್ವಯ" ಆಪರೇಷನ್ ಸಿಂಧೂರ ಸಮಯದಲ್ಲಿ ಕೆಲವೇ ದಿನಗಳಲ್ಲಿ ಪಾಕಿಸ್ತಾನವನ್ನು ಮಂಡಿಯೂರುವಂತೆ ಮಾಡಿತ್ತು ಎಂದು ಸ್ಮರಿಸಿದರು.
ಆಪರೇಷನ್ ಸಿಂಧೂರ್ ಸಮಯದಲ್ಲಿ ಬ್ರಹ್ಮೋಸ್ ಮತ್ತು ಆಕಾಶ್ನಂತಹ ಕ್ಷಿಪಣಿಗಳು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿವೆ. ಇದರಿಂದಾಗಿ ಪ್ರಪಂಚದ ಹಲವು ದೇಶಗಳು ಈಗ ಈ ಕ್ಷಿಪಣಿಗಳನ್ನು ಖರೀದಿಸಲು ಆಸಕ್ತಿ ಹೊಂದಿವೆ ಎಂದರು. ನಾನು ಮಿಲಿಟರಿ ಉಪಕರಣಗಳ ಗಮನಿಸುತ್ತಿದ್ದೆ. ಈ ದೊಡ್ಡ ಹಡಗುಗಳು, ಗಾಳಿಗಿಂತ ವೇಗವಾಗಿ ಚಲಿಸುವ ವಿಮಾನಗಳು, ಜಲಾಂತರ್ಗಾಮಿ ನೌಕೆಗಳು ಪ್ರಭಾವಶಾಲಿಯಾಗಿವೆ, ಆದರೆ ಅವುಗಳನ್ನು ನಿಜವಾಗಿಯೂ ಪ್ರಭಾವಶಾಲಿಯಾಗಿಸಿದ್ದು ನಮ್ಮ ಯೋಧರ ಧೈರ್ಯ ಎಂದಿದ್ದಾರೆ.
Prime Minister Narendra Modi celebrated Diwali with Indian Navy personnel aboard the indigenous aircraft carrier INS Vikrant in Goa. During his address, he lauded the strength of India’s armed forces and emphasized the growing global demand for the homegrown BrahMos missile. Modi stated that since 2014, India has built over 40 warships and submarines and aims to become the world’s leading defense exporter.
04-03-26 06:47 pm
HK News Staffer
ಅಡುಗೆ ವಿಚಾರದಲ್ಲಿ ಅತ್ತೆಯೊಂದಿಗೆ ಜಗಳ ಕಾದು ಯುವತಿ...
04-03-26 05:06 pm
ಚಿತ್ತೂರು ಬಳಿ ಭೀಕರ ರಸ್ತೆ ಅಪಘಾತ; ಕಂಟೇನರ್ ವಾಹನಕ್...
04-03-26 01:33 pm
ಮಾರ್ಚ್ 10ಕ್ಕೆ ಎಲ್ಲ ಶಾಸಕರು, ಸಚಿವರಿಗೆ ಡಿಕೆಶಿ ಡಿ...
04-03-26 01:27 pm
ಇರಾನ್ಗೆ ತೆರಳಿದ್ದ ಕಾಫಿನಾಡಿನ ಯುವಕ ನಾಪತ್ತೆ ; ಮಗ...
04-03-26 11:51 am
05-03-26 05:02 pm
HK News Staffer
ಬಿಹಾರದಲ್ಲಿ ಕ್ಷಿಪ್ರ ರಾಜಕೀಯ ಬದಲಾವಣೆ ; 'ಸುದೀರ್ಘ...
04-03-26 11:13 pm
ಹರ್ಮುಜ್ ಜಲಸಂಧಿ ನಿರ್ಬಂಧ ಉಲ್ಲಂಘಿಸಿದ 10 ತೈಲ ಹಡಗಿ...
04-03-26 10:09 pm
ಇರಾನ್ ಹಡಗು ಸ್ಫೋಟ ಬೆನ್ನಲ್ಲೇ ಅಮೆರಿಕದ ಯುದ್ಧ ನೌಕೆ...
04-03-26 10:03 pm
ಇರಾನ್ ಸರ್ವೋಚ್ಚ ನಾಯಕರಾಗಿ ಖಮೇನಿ ಪುತ್ರ ಮೊಜ್ತಾಬಾ...
04-03-26 12:58 pm
05-03-26 04:36 pm
HK News Staffer
ಅರಣ್ಯಾಧಿಕಾರಿ ಮನೆಗೆ ಕನ್ನ ಹಾಕಿದ ಕಳ್ಳರು ; ಹೊರಗೆ...
05-03-26 02:34 pm
Aadhaar Card Found, Mangalore: ಫರಂಗಿಪೇಟೆ ನದಿ...
05-03-26 12:42 pm
ತುಳು ಎರಡನೇ ಅಧಿಕೃತ ಭಾಷೆ; ಆಂಧ್ರಪ್ರದೇಶದಲ್ಲಿ ಕೈಗೊ...
04-03-26 09:31 pm
ಉಡುಪಿ; ಲವ್ ಮ್ಯಾಟರ್ ರಾಜಿ ವೇಳೆ ಮೀನುಗಾರ ಮುಖಂಡನಿಗ...
04-03-26 10:54 am
28-02-26 11:12 am
Mangalore Staffer
Mangalore Cybercrime,Fraud, Arrest: ಸ್ನೇಹಿತನಿ...
27-02-26 09:23 pm
Mangalore, Car Street, Fight: ನಡು ರಸ್ತೆಯಲ್ಲಿ...
27-02-26 01:32 pm
Shivamogga Fraud, Police: ಸೈಬರ್ ಅಪರಾಧಕ್ಕೆ ಬಳಸ...
27-02-26 12:34 pm
ಅಮೆರಿಕದ ಷೇರು ಹೆಸರಿನಲ್ಲಿ 1.77 ಕೋಟಿ ರೂ. ಹೂಡಿಕೆ...
26-02-26 11:04 pm