ಬ್ರೇಕಿಂಗ್ ನ್ಯೂಸ್
27-12-20 10:08 pm Headline Karnataka News Network ದೇಶ - ವಿದೇಶ
ಲಕ್ನೋ, ಡಿ.27: ಕೆಲವರಿಗೆ ವಾಹನಗಳಲ್ಲಿ ತಮ್ಮ ಹೆಸರು, ತಾಯಿ ಆಶೀರ್ವಾದ, ತಮ್ಮ ಜಾತಿಯ ಹೆಸರು, ಗೆಳೆಯ- ಗೆಳತಿಯರ ಹೆಸರು ಹೀಗೆ ಏನೇನೊ ಬರೆದುಕೊಳ್ಳುವುದು ಹವ್ಯಾಸ. ಸ್ಟಿಕ್ಕರ್ ಇಲ್ಲವೇ ನಂಬರ್ ಪ್ಲೇಟಲ್ಲೇ ತಮ್ಮ ಜಾತಕ ಬರೆದುಕೊಳ್ಳುವ ಮಂದಿಯೂ ಇದ್ದಾರೆ. ಆದರೆ, ಹೀಗೆ ಏನೆಲ್ಲಾ ಬರೆದುಕೊಳ್ಳುವ ಮಂದಿಗೆ ಅಂತಲೇ ಉತ್ತರ ಪ್ರದೇಶ ಸರಕಾರ ಹೊಸತೊಂದು ಕಾನೂನು ಜಾರಿ ಮಾಡಿದೆ.
ನೀವು ಏನೇ ಬರೆದುಕೊಳ್ಳಿ. ವಾಹನಗಳ ಮೇಲೆ ನಿಮ್ಮ ಜಾತಿಯನ್ನು ಸೂಚಿಸುವ ಪದಗಳನ್ನು ಅಥವಾ ಜಾತಿ ಹೆಸರನ್ನು ಬರೆದುಕೊಂಡಲ್ಲಿ ನಿಮ್ಮ ವಾಹನಗಳನ್ನೇ ಸೀಜ್ ಮಾಡಲಾಗುವುದು ಎಂದು ಯೋಗಿ ಸರಕಾರ ಆದೇಶ ಮಾಡಿದೆ. ಈಗಾಗ್ಲೇ ಲವ್ ಜಿಹಾದ್ ವಿರುದ್ಧ ಕಾನೂನು ಜಾರಿಗೊಳಿಸಿ ಸುದ್ದಿಯಾಗಿರುವ ಉತ್ತರ ಪ್ರದೇಶ ಸರಕಾರ ಈಗ ವಾಹನದಲ್ಲಿ ಜಾತಿ ಬಳಸುವುದನ್ನು ನಿಷೇಧಿಸಿ ಆದೇಶ ಜಾರಿ ಮಾಡಿದೆ.

ಪ್ರಧಾನಿ ಕಚೇರಿಯಿಂದ ಬಂದ ಸೂಚನೆ ಮೇರೆಗೆ ಉತ್ತರ ಪ್ರದೇಶದ ಸರಕಾರ ಸಾರಿಗೆ ಇಲಾಖೆ ಮೂಲಕ ಈ ಕ್ರಮ ಕೈಗೊಂಡಿದೆ. ಸಾರಿಗೆ ಅಧಿಕಾರಿಗಳು ವಾಹನ ತಪಾಸಣೆ ಮಾಡುವ ವೇಳೆ ಜಾತಿ ಹೆಸರು ಕಂಡುಬಂದರೆ ಅಂಥ ವಾಹನಗಳನ್ನು ಮುಲಾಜಿಲ್ಲದೆ ಜಪ್ತಿ ಮಾಡಲು ಸಾರಿಗೆ ಇಲಾಖೆ ಆದೇಶ ಮಾಡಿದೆ.
ಇಂಥ ಸೂಚನೆ ಏಕಾಗಿ ?
ಉತ್ತರ ಪ್ರದೇಶದಲ್ಲಿ ಜಾಟ್, ಯಾದವ್, ಗುಜ್ಜಾರ್, ಬ್ರಾಹ್ಮಣ, ಪಂಡಿತ್, ಖತ್ರಿ, ಮೌರ್ಯ ಹೀಗೆ ತಮ್ಮ ತಮ್ಮ ಜಾತಿಗಳ ಹೆಸರುಗಳನ್ನು ವಾಹನಗಳಲ್ಲಿ ನಮೂದಿಸಿಕೊಂಡು ಸಾಮಾನ್ಯವಾಗಿದೆ. ಹೆಚ್ಚಿನ ಮಂದಿ ತಮ್ಮ ಜಾತಿಗಳನ್ನೇ ಪ್ರತಿಷ್ಠೆಯಾಗಿ ತೋರಿಸಲು ಹೆಸರಿನ ಜೊತೆಗೆ ಅಥವಾ ಖಾಲಿ ಜಾತಿ ಸೂಚಕ ಪದಗಳನ್ನೇ ವಾಹನಗಳಲ್ಲಿ ಬರೆದುಕೊಳ್ಳುತ್ತಾರೆ. ಉತ್ತರ ಪ್ರದೇಶದಲ್ಲಿ ಇದು ಸಾಮಾನ್ಯವಾಗಿದ್ದು, ಪ್ರತೀ 20 ವಾಹನಗಳಲ್ಲಿ ಒಂದರಲ್ಲಿ ಹೀಗೆ ಹೆಸರು ಬರೆದಿದ್ದು ಕಾಣಸಿಗುತ್ತದೆ.
ನಂಬರ್ ಪ್ಲೇಟ್, ವಾಹನದ ಗ್ಲಾಸ್ ಗಳಲ್ಲಿ ಹೀಗೆ ಹೆಸರು ಬರೆಯುವುದನ್ನು, ಸ್ಟಿಕ್ಕರ್ ಅಂಟಿಸುವುದನ್ನು ನಿಷೇಧಿಸಬೇಕು. ಇದರಿಂದ ಸಮಾಜದ ಸಾಮರಸ್ಯಕ್ಕೆ ಅಪಾಯ ಎಂದು ಶಿಕ್ಷಕ ಹರ್ಷಲ್ ಪ್ರಭು ಎಂಬವರು ಪ್ರಧಾನಿ ಮೋದಿಗೆ ಪತ್ರ ಬರೆದಿದ್ದರು. ಅದರಂತೆ, ಪ್ರಧಾನಿ ಕಚೇರಿಯಿಂದ ಉತ್ತರ ಪ್ರದೇಶ ಸರಕಾರಕ್ಕೆ ಸೂಚನೆ ಬಂದಿತ್ತು.
The fad of many people taking pride in ‘boldly’ displaying their caste identities on windscreens or number plates of their vehicles is gaining ground rapidly in Uttar Pradesh, the state where caste has always been pivotal to electoral politics.
22-08-26 11:10 am
HK News Staffer
ದೇಶದ ರಾಜಕೀಯದಲ್ಲಿ ಬಹುದೊಡ್ಡ ಬಿರುಗಾಳಿ; ವಿರುದ್ಧ ಧ...
21-08-26 03:42 pm
ಆಟೋಗಳ ರೀತಿ ಗಂಟೆಗೆ 55 ಕಿಮೀ ಓಡುವ ರೈಲುಗಳನ್ನೇ ‘ಸೂ...
19-08-26 09:55 pm
ಬೆಂಗಳೂರಿನಲ್ಲಿ ಎಚ್1ಎನ್1 ಸೋಂಕು ಹೆಚ್ಚಳ ; ಖಾಸಗಿ ಶ...
19-08-26 09:52 pm
ಹನೂರು ಎನ್ಕೌಂಟರ್; ತಮಿಳುನಾಡು ಕ್ಯಾತೆ ಬೆನ್ನಲ್ಲೇ...
19-08-26 05:38 pm
20-08-26 10:55 am
HK News Staffer
ತಮಿಳುನಾಡು ಮಹಿಳಾ ಸರ್ಕಾರಿ ನೌಕರರಿಗೆ ಸರ್ಕಾರದ ಬಂಪರ...
19-08-26 02:13 pm
ಲಷ್ಕರ್ ಸ್ಥಾಪಕ ಹಫೀಜ್ ಸಯೀದ್ 10,000 ಯುವಕರನ್ನು ಕಾ...
19-08-26 01:06 pm
'ಜನ ಗಣ ಮನ' ಗೀತೆಯನ್ನು ಬ್ರಿಟನ್ ರಾಣಿಯ ಹೊಗಳಲು ಬರೆ...
19-08-26 12:10 pm
ಬಿಜೆಪಿಯ ಯುವ ಮೋರ್ಚಾಗೆ ಹೊಸ ಸಾರಥಿ ; ತೇಜಸ್ವಿ ಸೂರ್...
18-08-26 02:42 pm
22-08-26 01:37 pm
HK News Staffer
ಮಂಗಳೂರು ರೈಲ್ವೇ ಕೊನೆಗೂ ಕರ್ನಾಟಕಕ್ಕೆ ಸೇರ್ಪಡೆ ; ಅ...
21-08-26 09:54 pm
Mfc Hotel Raid, Mangalorr: ಕೆಎಫ್ ಸಿ ಬಳಿಕ ಮಂಗಳ...
21-08-26 08:17 pm
ಬೆಂಗಳೂರು, ಮಂಗಳೂರು ಸೇರಿ ರಾಜ್ಯಾದ್ಯಂತ 36 ರೈಲ್ವೇ...
21-08-26 03:12 pm
ಬೆಳ್ತಂಗಡಿ ; ಹುಳ ಬಿದ್ದ ಪಡಿತರ ಅಕ್ಕಿ ಪೂರೈಕೆ, 50ಕ...
20-08-26 05:16 pm
22-08-26 12:43 pm
HK News Staffer
ಬಾಳೆಹಣ್ಣಿಗೆ ಕೃತಕ ಬಣ್ಣ, ಕೆಮಿಕಲ್ ಬಳಸಿ ಹಣ್ಣಾಗಿಸು...
21-08-26 12:20 pm
ಇಷ್ಟದ ವಿದ್ಯಾರ್ಥಿಯನ್ನು ಕಂಡು “ಏಯ್ ಬಾಬೂ” ಎಂದಿದ್ದ...
21-08-26 11:03 am
ಎಸಿಪಿ ಕಚೇರಿ ಅಂಗಳದಲ್ಲೇ ಮಹಾಲಕ್ಷ್ಮಿ ದೇವಸ್ಥಾನಕ್ಕೆ...
20-08-26 08:06 pm
8.50 ಲಕ್ಷ ನಗದು ಹಣದೊಂದಿಗೆ ಬೈಕಿನಲ್ಲಿ ಬರುತ್ತಿದ್ದ...
20-08-26 05:33 pm