ಬ್ರೇಕಿಂಗ್ ನ್ಯೂಸ್
26-12-20 05:12 pm Headline Karnataka News Network ದೇಶ - ವಿದೇಶ
ನವದೆಹಲಿ, ಡಿ.26: ಉತ್ತರ ಪ್ರದೇಶದಲ್ಲಿ ಲವ್ ಜಿಹಾದ್ ವಿರುದ್ಧ ಕಾನೂನು ಜಾರಿಗೊಂಡು ಒಂದು ತಿಂಗಳು ಪೂರ್ತಿಯಾಗುತ್ತಿದ್ದು, 35ಕ್ಕೂ ಹೆಚ್ಚು ಮಂದಿಯನ್ನು ಹೊಸ ಕಾನೂನಿನಡಿ ಪೊಲೀಸರು ಬಂಧಿಸಿದ್ದಾರೆ.
ಉತ್ತರ ಪ್ರದೇಶ ಸರಕಾರ ಬಲವಂತದ ಮತಾಂತರದ ಹೆಸರಲ್ಲಿ ಲವ್ ಜಿಹಾದ್ ವಿರುದ್ಧ ನ.27ರಂದು ಸುಗ್ರೀವಾಜ್ಞೆ ಮೂಲಕ ಕಾನೂನು ಜಾರಿಗೆ ತಂದಿತ್ತು. ಕಾನೂನು ಜಾರಿಯಾದ ಒಂದೇ ದಿನದಲ್ಲಿ ಬರೇಲಿ ಜಿಲ್ಲೆಯಲ್ಲಿ ಮೊದಲ ಕೇಸು ದಾಖಲಾಗಿತ್ತು. ಆನಂತರ ಸರಣಿಯಂತೆ ಕೇಸುಗಳು ದಾಖಲಾಗುತ್ತಿದ್ದು ಈವರೆಗೆ ಡಜನ್ ಗಿಂತಲೂ ಹೆಚ್ಚು ಪ್ರಕರಣ ದಾಖಲಾಗಿರುವ ಬಗ್ಗೆ ಮಾಹಿತಿ ತಿಳಿದುಬರುತ್ತಿದೆ. ಇದೇ ವೇಳೆ, ಬಲವಂತದ ಮತಾಂತರದ ಪ್ರಕರಣಗಳಿಗೆ ಸಂಬಂಧಿಸಿ 35ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಈ ಪೈಕಿ ಇಟಾ ಜಿಲ್ಲೆಯಲ್ಲಿ ಎಂಟು ಮಂದಿ ಬಂಧನ ಆಗಿದ್ದರೆ, ಸೀತಾಪುರ್ ಜಿಲ್ಲೆಯಲ್ಲಿ ಏಳು, ಗ್ರೇಟರ್ ನೋಯ್ಡಾದಲ್ಲಿ ನಾಲ್ಕು, ಶಹಜಾನ್ ಪುರ್ ಮತ್ತು ಆಜಂಘಡ್ ನಲ್ಲಿ ತಲಾ ಮೂರು, ಮೊರಾದಬಾದ್, ಬಿಜ್ನೋರ್, ಮುಜಾಫರ್ ನಗರ, ಕನ್ನೋಜ್ ಜಿಲ್ಲೆಯಲ್ಲಿ ತಲಾ ಎರಡು ಹಾಗೂ ಬರೇಲಿ ಮತ್ತು ಬರ್ದೋಯಿ ಜಿಲ್ಲೆಯಲ್ಲಿ ಒಬ್ಬೊಬ್ಬರನ್ನು ಬಂಧಿಸಲಾಗಿದೆ.
ಬರೇಲಿ ಜಿಲ್ಲೆಯ ಶರೀಫ್ ನಗರದಲ್ಲಿ ನಡೆದ ಮೊದಲ ಪ್ರಕರಣದಲ್ಲಿ 20 ವರ್ಷದ ಹಿಂದು ಯುವತಿಯನ್ನು 22 ವರ್ಷದ ಉವಾಷ್ ಅಹ್ಮದ್ ಎಂಬಾತ ಬಲವಂತದಿಂದ ಮದುವೆಯಾಗಿ, ಮತಾಂತರಿಸಿದ್ದ. ಗೆಳೆಯನಂತೆ ನಟಿಸಿ ತನ್ನ ಮಗಳನ್ನು ವಂಚಿಸಿದ್ದಾನೆ ಎಂದು ಆಕೆಯ ತಂದೆ ತುಕಾರಾಮ್ ರಾಥೋರ್ ದೂರು ನೀಡಿದ್ದರು. ಪೊಲೀಸರು ಡಿ.3ರಂದು ಹೊಸ ಕಾನೂನಿನಡಿ ಆರೋಪಿಯನ್ನು ಬಂಧಿಸಿದ್ದರು.
Going full steam, the Uttar Pradesh police have made more than one arrest a day since the controversial anti-conversion ordinance came into effect a month ago, having apprehended about 35 people so far.
13-12-25 10:47 pm
HK News Desk
ಕುರ್ಚಿ ಗುದ್ದಾಟ ; ಪರಮೇಶ್ವರ್ ಸಿಎಂ ಆಗಲೆಂದು ಹಾರೈಸ...
13-12-25 08:38 pm
BJP MLA Subhash Guttedar: ಅಳಂದ ಮತಗಳವು ಪ್ರಕರಣ...
13-12-25 04:00 pm
Pet Parrot, Bangalore Youth Death: 2 ಲಕ್ಷ ರೂ....
12-12-25 08:47 pm
Yatnal, Dk Shivakumar, Vijayendra: ಡಿಕೆ ಸಿಎಂ,...
12-12-25 07:47 pm
13-12-25 08:34 pm
HK News Desk
ಕಾರ್ತಿಗೈ ದೀಪೋತ್ಸವ ವಿವಾದ ; ಮಸೀದಿಯವರೇ ಆಕ್ಷೇಪಿಸಿ...
12-12-25 11:00 pm
ಮೋದಿ ಉತ್ತರಾಧಿಕಾರಿ ಯಾರು ? ಆರೆಸ್ಸೆಸ್ ನಿರ್ಧರಿಸುತ...
11-12-25 04:24 pm
ಮಂಗಳೂರು ಏರ್ಪೋರ್ಟ್ಗೆ ವಿದೇಶಿ ನೇರ ವಿಮಾನ ವ್ಯವಸ್...
11-12-25 02:09 pm
ತಮಿಳುನಾಡಿನಲ್ಲಿ ಕಾರ್ತಿಗೈ ದೀಪಕ್ಕೆ ಹೈಕೋರ್ಟ್ ಅನುಮ...
10-12-25 11:13 pm
13-12-25 11:02 pm
Mangalore Correspondent
ಕೆಂಜಾರು ಬಳಿ ಗೋವುಗಳನ್ನು ಕಡಿದು ಹತ್ಯೆ ; ಪೊದೆಯಲ್ಲ...
13-12-25 04:36 pm
ಸತತ ನಾಲ್ಕು ಗಂಟೆ ಸ್ಕೇಟಿಂಗ್ ನಲ್ಲಿ ಶಾಸ್ತ್ರೀಯ ನೃತ...
12-12-25 10:28 pm
ದೈವ ನರ್ತನದ ಬಗ್ಗೆ ನಮಗೆ ಸಂಶಯಗಳಿಲ್ಲ, ಗ್ರಾಮ ದೈವಕ್...
12-12-25 07:32 pm
ಆಯುಷ್ ಇಲಾಖೆಯಲ್ಲಿ ಅವಧಿ ಮೀರಿದ ಔಷಧ ಪೂರೈಕೆ ; ಅಧಿಕ...
12-12-25 02:02 pm
13-12-25 12:51 pm
HK News Desk
ಹಣ್ಣಿನ ವ್ಯಾಪಾರಿಯನ್ನು ಅಡ್ಡಗಟ್ಟಿ 19 ಸಾವಿರ ನಗದು...
12-12-25 01:58 pm
Hassan Crime, Murder: ಸ್ನೇಹಿತನನ್ನು ಪಾರ್ಟಿಗೆ ಕ...
11-12-25 09:53 pm
Bangalore Crime, Blackmail, Suicide: ಬೆತ್ತಲೆ...
11-12-25 07:49 pm
Imprisonment in Malpe Case: ಮಲ್ಪೆಯಲ್ಲಿ ನೆಲೆಸಿ...
10-12-25 10:14 pm