ಬ್ರೇಕಿಂಗ್ ನ್ಯೂಸ್
03-09-25 07:18 pm HK News Desk ದೇಶ - ವಿದೇಶ
ಅಫ್ಘಾನಿಸ್ತಾನ್, ಸೆ 03 : ಅಫ್ಘಾನಿಸ್ತಾನದ ಸಂಭವಿಸಿದ ಪ್ರಬಲ ಭೂಕಂಪದಲ್ಲಿ 1,400 ಮಂದಿ ಮೃತಪಟ್ಟಿದ್ದು, 3 ಸಾವಿರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ತಾಲಿಬಾನ್ ಸರ್ಕಾರದ ವಕ್ತಾರ ಜಬಿಹುಲ್ಲಾ ಮುಜಾಹಿದ್ ತಿಳಿಸಿದ್ದಾರೆ.
ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಮುಜಾಹಿದ್, ತೀವ್ರ ಹಾನಿಗೊಳಗಾದ ಕುನಾರ್ ಪ್ರಾಂತ್ಯವೊಂದರಲ್ಲಿಯೇ 1,411 ಜನರು ಸಾವನ್ನಪ್ಪಿದ್ದಾರೆ ಮತ್ತು 3,124 ಜನರು ಗಾಯಗೊಂಡಿದ್ದಾರೆ ಎಂದು ಹೇಳಿದ್ದಾರೆ.

![]()




ಕಳೆದ ಭಾನುವಾರ ಸಂಭವಿಸಿದ ಪ್ರಬಲ 6.0 ತೀವ್ರತೆಯ ಭೂಕಂಪದಿಂದ ಧ್ವಂಸಗೊಂಡ ಪರ್ವತ ಮತ್ತು ದೂರದ ಪ್ರದೇಶವನ್ನು ತಲುಪಲು ರಕ್ಷಣಾ ಪಡೆಗಳು ಸಮಯದ ವಿರುದ್ಧದ ಓಟದಲ್ಲಿ ತೊಡಗಿದ್ದಾರೆ ಎಂದು ವಿಶ್ವಸಂಸ್ಥೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸಾವುನೋವುಗಳ ಸಂಖ್ಯೆಯಲ್ಲಿ ಘಾತೀಯ ಏರಿಕೆಯ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.
ಇನ್ನು ಅಫ್ಘಾನಿಸ್ತಾನದಲ್ಲಿ ಹೆಚ್ಚು ಮಣ್ಣಿನ ಮನೆಗಳನ್ನು ನಿರ್ಮಿಸಲಾಗಿದ್ದು ಸಾವಿನ ಸಂಖ್ಯೆ ಏರಿಕೆಯಾಗಲು ಇದೇ ಪ್ರಮುಖ ಕಾರಣ ಎನ್ನಲಾಗಿದೆ. ಗುಣಮಟ್ಟ ಇಲ್ಲದ ಕಾರಣ ಸ್ವಲ್ಪ ಭೂಕಂಪ ಆದ್ರೆ ಸಾಕು ಕಟ್ಟಡಲು ಮುರಿದು ಬೀಳುತ್ತವೆ. ಇದೇ ಇಷ್ಟೊಂದು ಸಾವಿಗೆ ಪ್ರಮುಖ ಕಾರಣ ಎನ್ನಲಾಗಿದೆ.


)



ನೆರೆಮನೆ ಅಫ್ಘಾನಿಸ್ತಾನ ಪ್ರಬಲ ಭೂಕಂಪಕ್ಕೆ ತತ್ತರಿಸಿದ್ದು ಭಾರತ ಮಾನವೀಯ ನೆರವು ಘೋಷಿಸಿದೆ. ಟನ್ಗಟ್ಟಲೇ ತುರ್ತು ಆಹಾರ ಸಾಮಗ್ರಿ, ವೈದ್ಯಕೀಯ ಸಾಮಗ್ರಿಗಳು ಅಫ್ಘಾನಿಸ್ತಾನ ರಾಜಧಾನಿ ಕಾಬೂಲ್ ತಲುಪಿದ್ದು ಅಲ್ಲಿಂದ ಕುನಾರ್ ಪ್ರಾಂತ್ಯ ತಲುಪಿವೆ.
ಇನ್ನು ತಾಲಿಬಾನಿಗಳು 2021ರಲ್ಲಿ ಹೊಸ ಸರ್ಕಾರ ರಚನೆ ಮಾಡಿದ ಬಳಿಕ ಸಂಭವಿಸುತ್ತಿರುವ 3ನೇ ಅತಿ ಭೀಕರ ಭೂಕಂಪ ಇದಾಗಿದೆ. ಹಣಕಾಸಿನ ನೆರವು ಕಡಿತ, ದುರ್ಬಲಕ ಆರ್ಥಿಕತೆ, ಇರಾನ್ ಹಾಗೂ ಪಾಕಿಸ್ತಾನದಿಂದ ಲಕ್ಷಾಂತರ ಜನರು ಬಲವಂತವಾಗಿ ಮರಳಿದ್ದರಿಂದ ತತ್ತರಿಸಿರುವ ಅಫ್ಘಾನಿಸ್ತಾನಕ್ಕೆ ಭೂಕಂಪ ದೊಡ್ಡ ಬಿಕ್ಕಟ್ಟಾಗಿ ಪರಿಣಮಿಸಿದೆ. ಮತ್ತೊಂದೆಡೆ ಅಮೆರಿಕ ಸೇರಿ ಹಲವು ರಾಷ್ಟ್ರಗಳು ಅಫ್ಘಾನಿಸ್ತಾನಕ್ಕೆ ನೆರವು ನೀಡುವುದನ್ನು ನಿಲ್ಲಿಸಿರುವುದು ದೊಡ್ಡ ಹೊಡೆತವಾಗಿದೆ.
ಈ ಮಧ್ಯೆ ಅಫ್ಘಾನಿಸ್ತಾನದಲ್ಲಿ ಇವತ್ತು ಮತ್ತೆ ಭೂಕಂಪ ಸಂಭವಿಸಿದೆ. ಅಫ್ಘಾನಿಸ್ತಾನದ ದಕ್ಷಿಣ ಭಾಗದಲ್ಲಿ 5.5 ತೀವ್ರತೆ ಭೂಕಂಪ ದಾಖಲಾಗಿದ್ದು ಇನ್ನೂ ಸಾವು-ನೋವಿನ ವರದಿಯಾಗಿಲ್ಲ. ಪದೇ ಪದೇ ಭೂಕಂಪದ ಹೊಡೆತಕ್ಕೆ ಸಿಲುಕಿ ಅಫ್ಘಾನ್ ಜನರು ನರಳುತ್ತಿದ್ದು ವಿಶ್ವಸಮುದಾಯ ಮಾನವೀಯ ನೆಲೆಯಲ್ಲಿ ನೆರವಿಗೆ ನಿಲ್ಲಬೇಕಿದೆ.
ಭೂಕಂಪದ ಸುದ್ದಿ ತಿಳಿಯುತ್ತಿದ್ದಂತೆ ನವದೆಹಲಿಯಲ್ಲಿ ವಾಸವಾಗಿರುವ ಅಫ್ಗಾನಿಸ್ತಾನದ ವಲಸಿಗರು ಭಾನುವಾರ ಇಡೀ ರಾತ್ರಿ ನಿದ್ರೆಯಿಲ್ಲದೆ ಕಳೆದರು. ತಮ್ಮ ಪುಟ್ಟ ಅಂಗಡಿಗಳು, ಬಾಡಿಗೆ ಕೋಣೆಗಳಲ್ಲಿ ಮೊಬೈಲ್ ಹಿಡಿದುಕೊಂಡು ಕುಳಿತಿದ್ದ ಅವರು ಅಫ್ಗಾನಿಸ್ತಾನದಲ್ಲಿರುವ ತಮ್ಮ ಕುಟುಂಬಸ್ಥರು, ಬಂಧುಗಳನ್ನು ಸಂಪರ್ಕಿಸಲು ಪ್ರಯತ್ನಿಸುತ್ತಲೇ ಇದ್ದರು. ಭೂಕಂಪದ ಬೆನ್ನಲ್ಲೇ ದೂರವಾಣಿ ಸಂಪರ್ಕ ಸ್ಥಗಿತಗೊಂಡಿದ್ದು ವಲಸಿಗರ ಆತಂಕ ಹೆಚ್ಚಿಸಿತ್ತು.
A powerful earthquake has struck Afghanistan, killing more than 1,400 people and injuring over 3,000 others, according to Taliban government spokesperson Zabihullah Mujahid.
10-01-26 10:28 pm
HK News Desk
"ಡ್ಯಾಡಿ ಈಸ್ ಹೋಮ್" ಎಐ ವಿಡಿಯೋ ರಿಲೀಸ್ ; ರಾಜ್ಯ ರಾ...
10-01-26 04:29 pm
ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಅಡ್ಡ ನಿಂತ ಒಂಟಿ ಸಲಗ...
10-01-26 03:00 pm
Purushottam Bilimale, Legal Battle Against Ma...
10-01-26 01:17 pm
ಮಲಯಾಳ ಭಾಷಾ ಮಸೂದೆಯಿಂದ ಕಾಸರಗೋಡು ಕನ್ನಡಿಗರಿಗೆ ಧಕ್...
09-01-26 04:42 pm
11-01-26 06:07 pm
HK News
ವೆನಿಜುವೆಲಾ ತೈಲದ ನಿಯಂತ್ರಣಕ್ಕೆ ಮುಂದಾದ ಅಮೆರಿಕ ;...
10-01-26 03:22 pm
ಶಬರಿಮಲೆ ಚಿನ್ನ ಕಳವು ಪ್ರಕರಣ ; ಪ್ರಧಾನ ತಂತ್ರಿ ಕಂಠ...
09-01-26 11:00 pm
ಟ್ರಂಪ್ ಕೈಗಳು ಸಾವಿರಾರು ಇರಾನಿಗರ ರಕ್ತದಿಂದ ಒದ್ದೆಯ...
09-01-26 08:30 pm
ರಷ್ಯಾ ಹಡಗು ವಶಕ್ಕೆ ಪಡೆದ ಬೆನ್ನಲ್ಲೇ ಅಮೆರಿಕಕ್ಕೆ ತ...
08-01-26 11:21 pm
11-01-26 12:56 pm
Mangaluru Staffer
Cm Siddaramaiah, Mangalore: ಕರಾವಳಿ ಪ್ರವಾಸೋದ್ಯ...
10-01-26 10:45 pm
ಡೀಮ್ಡ್ ಯುನಿವರ್ಸಿಟಿಗಳಲ್ಲಿ ಭಾಷೆಯ ಅವಜ್ಞೆ ; ಸಾಹಿತ...
10-01-26 07:57 pm
Dr Meenakshi Jain at Mangaluru Lit Fest: ಉಪನಿ...
10-01-26 07:21 pm
ಕರಾವಳಿ ಟೂರಿಸಂ ಅಭಿವೃದ್ಧಿಗೆ ಜನಪ್ರನಿಧಿಗಳು, ಉದ್ಯಮ...
10-01-26 06:23 pm
07-01-26 10:45 pm
Bangalore Correspondent
ಸಮಾಧಿಯಲ್ಲಿ ಡ್ರಗ್ಸ್ ಬಚ್ಚಿಟ್ಟು ಮಾರಾಟ ; 3.5 ಕೋಟಿ...
06-01-26 07:04 pm
Kanachur Hospital, POSCO, Doctor: ಚಿಕಿತ್ಸೆಗೆ...
06-01-26 02:24 pm
ಯಲ್ಲಾಪುರ ; ಮದ್ವೆಗೆ ಒಪ್ಪಿಲ್ಲವೆಂದು ನಡುರಸ್ತೆಯಲ್ಲ...
04-01-26 11:02 pm
Ganja from Bihar: ಬಿಹಾರದಿಂದ ರೈಲಿನಲ್ಲಿ ಗಾಂಜಾ ತ...
04-01-26 06:15 pm