ಬ್ರೇಕಿಂಗ್ ನ್ಯೂಸ್
25-12-20 06:12 pm Headline Karnataka News Network ದೇಶ - ವಿದೇಶ
ನವದೆಹಲಿ, ಡಿ.25: ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಭಾರತ ಸರಕಾರ ತೆಗೆದುಹಾಕಿದ ಬಳಿಕ ಪಾಕಿಸ್ತಾನೀಯರ ಟಾರ್ಗೆಟ್ ಕಾಶ್ಮೀರವೇ ಆಗುತ್ತಿದೆ. ಕಾಶ್ಮೀರವನ್ನು ವಶಕ್ಕೆ ತೆಗೆದುಕೊಳ್ಳಬೇಕೆಂಬ ಹಪಹಪಿಯನ್ನು ಅಲ್ಲಿನವರು ವ್ಯಕ್ತಪಡಿಸುತ್ತಲೇ ಇದ್ದಾರೆ. ಈಗ ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್ ಅಖ್ತರ್ ಸರದಿ. ಮುಸ್ಲಿಮರು ಕಾಶ್ಮೀರವನ್ನು ಮೊದಲು ವಶಕ್ಕೆ ಪಡೆಯಲಿದ್ದಾರೆ. ಆಮೇಲೆ ಭಾರತದ ಮೇಲೆ ಆಕ್ರಮಣ ಮಾಡಲಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.
ಪಾಕಿಸ್ತಾನದ ಸಮಾ ಟಿವಿಗೆ ಸಂದರ್ಶನ ನೀಡಿದ ಸಂದರ್ಭದಲ್ಲಿ ಶೋಯೆಬ್ ಅಖ್ತರ್, ಘಾಜ್ವಾ ಇ–ಹಿಂದ್ ಪರವಾಗಿ ಹೇಳಿಕೆ ನೀಡಿದ್ದಾನೆ. ಹಳೆಯ ಸಂದರ್ಶನದ ವಿಡಿಯೋ ತುಣುಕು ಈಗ ವೈರಲ್ ಆಗಿದ್ದು, ಶೋಯೆಬ್ ಅಖ್ತರನ ಮಾನಸಿಕ ಸಣ್ಣತನವನ್ನು ಜಗತ್ತಿನ ಮುಂದೆ ತೆರೆದಿಟ್ಟಿದೆ. ಘಾಜ್ವಾ ಇ –ಹಿಂದ್ ಎಂದರೆ ಭಾರತದ ವಿರುದ್ಧ ಧರ್ಮಯುದ್ಧ ಎಂದರ್ಥ.
‘ನಮ್ಮ ಧರ್ಮ ಗ್ರಂಥಗಳಲ್ಲಿ ಘಾಜ್ವಾ ಇ-ಹಿಂದ್ ವಿಚಾರವನ್ನು ಉಲ್ಲೇಖ ಮಾಡಿದೆ. ಅಲ್ಲಿನ ನದಿಗಳಲ್ಲಿ ಮತ್ತೊಮ್ಮೆ ರಕ್ತದ ಕೋಡಿ ಹರಿಯಲಿದೆ. ಅಫ್ಘಾನಿಸ್ತಾನದ ಪಡೆಗಳು ಕಾಶ್ಮೀರದ ಅಟಾಕ್ ನದಿಯತ್ತ ನುಗ್ಗಿ ಬರಲಿದೆ. ಉಜ್ಬೆಕಿಸ್ತಾನದ ಹೊಸ ಶಕ್ತಿ ಉದಯಿಸಲಿದೆ. ಲಾಹೋರಿನ ವರೆಗೆ ವ್ಯಾಪ್ತಿ ಹೊಂದಿದ್ದ ಖೊರಸಾನ್ ಮತ್ತೆ ಉದಯವಾಗಲಿದೆ ’ ಎಂದು ವಿಡಿಯೋದಲ್ಲಿ ಹೇಳಿದ್ದಾರೆ.

ಘಾಜ್ವಾ ಇ-ಹಿಂದ್ ಪದವನ್ನು ಹೆಚ್ಚಾಗಿ ಪಾಕಿಸ್ತಾನದಲ್ಲಿ ಮೂಲಭೂತವಾದಿ ಇಸ್ಲಾಮಿಕ್ ಧರ್ಮ ಬೋಧಕರು ಹೇಳಿಕೊಂಡು ಬಂದಿದ್ದಾರೆ. ಜೆಇಎಂ ಭಯೋತ್ಪಾದಕರು ಇದೇ ನೀತಿಯನ್ನು ಬಳಸಿಕೊಂಡು ತಮ್ಮ ಪಡೆಗಳಿಗೆ ಯುವಕರನ್ನು ಸೇರಿಸಿಕೊಳ್ಳುತ್ತಾರೆ. ಅದರ ಪ್ರಕಾರ, ಸಿರಿಯಾದಿಂದ ಕಪ್ಪು ಬಾವುಟ ಹಿಡಿದು ಮೊದಲ್ಗೊಳ್ಳುವ ಈ ಧರ್ಮ ಯುದ್ಧ ಭಾರತದತ್ತ ಬರಲಿದೆ. ಇಸ್ಲಾಮಿಕ್ ಸ್ಟೇಟ್ಸ್ ಸ್ಥಾಪಿಸುವ ಸಲುವಾಗಿ ಆಗ ಹಿಂದು ದೇಶದಲ್ಲಿ ಹಿಂದುಗಳು ಮತ್ತು ಮುಸ್ಲಿಮರ ಮಧ್ಯೆ ಯುದ್ಧವಾಗಲಿದೆ. ಯುದ್ಧದಲ್ಲಿ ಮುಸ್ಲಿಮರು ಗೆಲುವು ಸಾಧಿಸಲಿದ್ದಾರೆ. ಬಳಿಕ ಬೃಹತ್ ಇಸ್ಲಾಮಿಕ್ ಸ್ಟೇಟ್ ನಿರ್ಮಾಣ ಆಗಲಿದೆ ಎಂದು ಜನರ ತಲೆ ತುಂಬಲಾಗುತ್ತದೆ.
ಭಾರತದಲ್ಲಿ ಜೈಶ್ ಇ ಮೊಹಮ್ಮದ್ ಉಗ್ರರು ಕೂಡ ತಮ್ಮ ಸಂಘಟನೆಗಳಿಗೆ ಮುಸ್ಲಿಮ್ ಯುವಕರನ್ನು ಸೇರಿಸಿಕೊಳ್ಳುವಾಗ ಇದೇ ರೀತಿಯ ಮಾತುಗಳನ್ನು ತಲೆಗೆ ತುಂಬಿಸುತ್ತಾರೆ. ಈ ರೀತಿಯ ಹೋರಾಟದಲ್ಲಿ ಪಾಲ್ಗೊಳ್ಳುವುದು ಪವಿತ್ರವಾಗಿರುತ್ತದೆ. ಈ ಹೋರಾಟದಲ್ಲಿ ಸತ್ತರೆ ಸ್ವರ್ಗ ಸಿಗುತ್ತದೆ ಎಂದು ನಂಬಿಸಲಾಗುತ್ತದೆ.
ಮಾಜಿ ವೇಗದ ಬೌಲರ್ ಆಗಿರುವ ಶೋಯೆಬ್ ಅಖ್ತರ್ ಈ ರೀತಿಯ ಹೇಳಿಕೆ ನೀಡಿರುವುದು ವಿವಾದ ಸೃಷ್ಟಿಸಿದೆ. ಟ್ವಿಟರ್ ಖಾತೆಯಲ್ಲಿ ಭಾರೀ ಪರ- ವಿರೋಧ ಟೀಕೆಗಳು ಕಾಣಿಸಿಕೊಂಡಿದೆ.
.@TimesNow's story on @pakistan_untold's expose on Shoaib Akhtar. https://t.co/Lc3XUyXnQq
— Pakistan Untold (@pakistan_untold) December 25, 2020
Batting for ‘Ghazwa-e-Hind’, former Pakistan pacer Shoaib Akhtar said that Muslims will capture Kashmir and then invade India.
12-01-26 08:20 pm
Mangaluru
ಮನೆ ಕಟ್ಟಲು ಅಡಿಪಾಯ ತೆಗೆಯುವ ವೇಳೆ 1 ಕೆಜಿಯಷ್ಟು ನಿ...
10-01-26 10:28 pm
"ಡ್ಯಾಡಿ ಈಸ್ ಹೋಮ್" ಎಐ ವಿಡಿಯೋ ರಿಲೀಸ್ ; ರಾಜ್ಯ ರಾ...
10-01-26 04:29 pm
ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಅಡ್ಡ ನಿಂತ ಒಂಟಿ ಸಲಗ...
10-01-26 03:00 pm
Purushottam Bilimale, Legal Battle Against Ma...
10-01-26 01:17 pm
12-01-26 11:00 pm
HK staffer
ಕುಂಬಳೆ ಟೋಲ್ ಗೇಟ್ ವಿರುದ್ಧ ರಸ್ತೆ ತಡೆದು ಪ್ರತಿಭಟನ...
12-01-26 05:01 pm
ಎಕ್ಸ್ ನಲ್ಲಿ ಅಶ್ಲೀಲ ಕಂಟೆಂಟ್ ; ಐಟಿ ಸಚಿವಾಲಯದ ಒತ್...
11-01-26 06:07 pm
ವೆನಿಜುವೆಲಾ ತೈಲದ ನಿಯಂತ್ರಣಕ್ಕೆ ಮುಂದಾದ ಅಮೆರಿಕ ;...
10-01-26 03:22 pm
ಶಬರಿಮಲೆ ಚಿನ್ನ ಕಳವು ಪ್ರಕರಣ ; ಪ್ರಧಾನ ತಂತ್ರಿ ಕಂಠ...
09-01-26 11:00 pm
12-01-26 08:03 pm
Mangaluru Staffer
ಭಾರತ ರಕ್ತಪಾತಕ್ಕೆ ಇನ್ನಷ್ಟು ಸಿದ್ಧವಾಗಬೇಕು ; ಚೀನಾ...
11-01-26 10:39 pm
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
ಅಮೆರಿಕ ಬಿಟ್ಟು ಚೀನಾ ಜೊತೆಗೆ ಬಾಂಧವ್ಯ ಬೆಳೆಸಬೇಕಿದೆ...
11-01-26 12:56 pm
Cm Siddaramaiah, Mangalore: ಕರಾವಳಿ ಪ್ರವಾಸೋದ್ಯ...
10-01-26 10:45 pm
12-01-26 06:28 pm
Mangaluru Staffer
Mangalore Crime: ಬಾಂಗ್ಲಾದವನೆಂದು ಹೇಳಿ ವಲಸೆ ಕಾರ...
12-01-26 01:54 pm
Sharmila Death, Murder, Bangalore: ಮಂಗಳೂರಿನ ಟ...
12-01-26 01:31 pm
ಅಯ್ಯಪ್ಪ ಸ್ವಾಮಿಗಳ ಪೂಜೆ ಸಂದರ್ಭದಲ್ಲಿ ಮುಸ್ಲಿಂ ವ್ಯ...
11-01-26 09:59 pm
ಆರು ವರ್ಷದ ಬಾಲಕಿಯನ್ನು ಅಪಹರಿಸಿ, ಕೊಲೆ ; ತಾಯಿ ಜಗಳ...
07-01-26 10:45 pm