ಬ್ರೇಕಿಂಗ್ ನ್ಯೂಸ್
25-12-20 12:51 pm Headline Karnataka News Network ದೇಶ - ವಿದೇಶ
ಮೀರತ್, ಡಿ.25 : ಜೀನ್ಸ್ ತೊಡಲ್ಲ, ಡ್ಯಾನ್ಸ್ ಮಾಡಲ್ಲವೆಂದ ಪತ್ನಿಗೆ ವ್ಯಕ್ತಿಯೊಬ್ಬ ತ್ರಿಪಲ್ ತಲಾಖ್ ನೀಡಿದ ವಿಲಕ್ಷಣ ಘಟನೆ ಉತ್ತರಪ್ರದೇಶದಲ್ಲಿ ಬೆಳಕಿಗೆ ಬಂದಿದೆ.
ಮೀರತ್ ಬಳಿಯ ಹಾಪುರದ ಪಿಲ್ಖುವಾ ನಿವಾಸಿ ಅನಾಸ್ ತನ್ನ ಪತ್ನಿಗೆ ತಲಾಖ್ ನೀಡಿದ ಭೂಪ. ನಗರದ ಲಿಸಾರಿ ಗೇಟ್ ಪೊಲೀಸ್ ಠಾಣಾ ವ್ಯಾಪ್ತಿಯ ನ್ಯೂ ಇಸ್ಮಾಯಿಲ್ ನಗರದ ನಿವಾಸಿ ಅಮೀರುದ್ದೀನ್ ಅವರು 8 ವರ್ಷಗಳ ಹಿಂದೆ ತನ್ನ ಮಗಳನ್ನು ಅನಾಸ್ ಗೆ ಮದುವೆ ಮಾಡಿಕೊಟ್ಟಿದ್ದರು.
ದೆಹಲಿಯಲ್ಲಿ ಕೆಲಸ ಮಾಡುತ್ತಿದ್ದ ಅನಾಸ್ ತನ್ನ ಪತ್ನಿಗೆ ಜೀನ್ಸ್ ಹಾಕುವಂತೆ ಒತ್ತಾಯಿಸುತ್ತಿದ್ದ. ಅಲ್ಲದೆ ಡ್ಯಾನ್ಸ್ ಮಾಡು, ಹಾಡು ಹೇಳು ಎಂದೆಲ್ಲ ಕಿರುಕುಳ ನೀಡುತ್ತಿದ್ದ. ಆದರೆ ಪತಿಯ ಈ ವರ್ತನೆಯನ್ನು ಪತ್ನಿ ನಿರಾಕರಿಸುತ್ತಿದ್ದಳು. ಇದರಿಂದ ಸಿಟ್ಟಿಗೆದ್ದ ಅನಾಸ್, ಡಿಸೆಂಬರ್ 22ರಂದು ಪತ್ನಿಗೆ ತ್ರಿವಳಿ ತಲಾಖ್ ನೀಡಿದ್ದಾನೆ.

ಪತ್ನಿಯನ್ನು ಆಕೆಯ ತಾಯಿ ಮನೆಗೆ ಕಳಿಸಿಕೊಟ್ಟಿದ್ದಾನೆ. ತಲಾಖ್ ನೀಡಿದ ಬಳಿಕ ಅನಾಸ್ ನೇರವಾಗಿ ಆಕೆಯ ತವರು ಮನೆಗೆ ಬಂದಿದ್ದಾನೆ. ನಂತರ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾನೆ. ಕೂಡಲೇ ಪತ್ನಿ ಕುಟುಂಬಸ್ಥರು ಬೆಂಕಿ ನಂದಿಸುವ ಮೂಲಕ ಅನಾಸ್ ನನ್ನು ರಕ್ಷಣೆ ಮಾಡಿದ್ದಾರೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಈ ಹಿಂದೆ, ಜೀನ್ಸ್ ತೊಟ್ಟರೆ, ಹಾಡು ಹಾಡಿರೆ, ಡ್ಯಾನ್ಸ್ ಮಾಡಿದರೆ ಇಸ್ಲಾಂ ವಿರುದ್ಧ ಎಂದು ಫತ್ವಾ ನೀಡುವ ಪರಿಪಾಠ ಇತ್ತು. ಕೆಲವು ಮೂಲಭೂತವಾದಿ ಮೌಲ್ವಿಗಳು ಈಗಲೂ ಇಂಥ ಫತ್ವಾ ಹೇರಿಕೆಯನ್ನು ಮಾಡುತ್ತಾರೆ. ಆದರೆ, ಇಲ್ಲೊಬ್ಬ ಮುಸ್ಲಿಂ ಅದರ ವಿರುದ್ಧವೇ ವರ್ತಿಸಿದ್ದಲ್ಲದೆ, ಅದಕ್ಕಾಗಿ ಪತ್ನಿಯನ್ನೇ ಅಗಲುವ ಹಂತಕ್ಕೆ ಹೋಗಿದ್ದಾನೆ.
In a shocking incident reported from the Meerut district of Uttar Pradesh, a man pronounced triple talaq to his wife after she allegedly refused to dance and wear jeans.
21-11-25 05:25 pm
HK News Desk
ವಾಹನ ಸವಾರರಿಗೆ ಗುಡ್ ನ್ಯೂಸ್ ; ಮತ್ತೆ 50% ದಂಡ ವ...
21-11-25 10:19 am
CM. Siddaramaiah, CM SEAT: ಯಾವ ಕ್ರಾಂತಿಯೂ ಇಲ್ಲ...
20-11-25 03:30 pm
DK Suresh, CM Siddaramaiah : ಸಿಎಂ ಕುರ್ಚಿ ಕ್ಲೈ...
20-11-25 03:01 pm
ಆನೇಕಲ್ ನಲ್ಲಿ ಕಚಡಾ ಡಾಕ್ಟರ್ ; ಇನ್ಪೆಕ್ಟರ್ ಅಮಾನತಿ...
19-11-25 02:16 pm
21-11-25 06:10 pm
HK News Desk
ಶಬರಿಮಲೆ ಚಿನ್ನ ಲೂಟಿ ಪ್ರಕರಣ ; ಕೊನ್ನಿ ಕ್ಷೇತ್ರದ ಸ...
21-11-25 02:26 pm
ಶ್ರೀಲಂಕಾದಲ್ಲಿ ನ್ಯೂಜಿಲೆಂಡ್ ಮಹಿಳೆಯ ಜೊತೆ ಯುವಕನ ಅ...
19-11-25 06:47 pm
ಕೆಂಪು ಕೋಟೆ ಬ್ಲಾಸ್ಟ್ ಕೇಸ್ ; ಅಲ್ ಫಲಾಹ್ ವಿವಿಗೆ ಸ...
19-11-25 11:10 am
ಬಾಂಗ್ಲಾದಲ್ಲಿ ವಿದ್ಯಾರ್ಥಿಗಳ ಮಾರಣ ಹೋಮಕ್ಕೆ ಅವರೇ ಕ...
17-11-25 10:58 pm
21-11-25 10:39 pm
Mangalore Correspondent
ನವೆಂಬರ್ 23ರಿಂದ ಪ್ರತಿ ವಾರ 'ಸಂಸದ್ ಖೇಲ್ ಮಹೋತ್ಸವ'...
21-11-25 10:03 pm
ಸುರತ್ಕಲ್- ನಂತೂರು- ಬಿಸಿ ರೋಡ್ ಹೆದ್ದಾರಿ ಎನ್ಎಚ...
21-11-25 09:55 pm
Snake Bite, Mangalore, Detection Kit: ಹಾವು ಕಚ...
21-11-25 08:45 pm
ಮಾನಸಿಕ ಖಿನ್ನತೆ ; ಶಿಕ್ಷಕಿ ತಾಯಿಯನ್ನು ಕಾಲೇಜು ಬಿಟ...
20-11-25 10:48 pm
21-11-25 11:07 pm
Bangalore Correspondent
ಮಲ್ಪೆ ಶಿಪ್ ಯಾರ್ಡ್ ನಿಂದ ಪಾಕಿಸ್ತಾನಕ್ಕೆ ಮಾಹಿತಿ ಸ...
21-11-25 05:11 pm
ಬೆಂಗಳೂರು ಎಟಿಎಂ ಹಣ ದರೋಡೆ ಪ್ರಕರಣ ; ತಿರುಪತಿಯಲ್ಲಿ...
20-11-25 10:53 pm
BMR Group Fraud, Money, Mangalore, Surathkal:...
20-11-25 06:01 pm
Bangalore ATM Van Robbery, Update: ಬೆಂಗಳೂರಿನ...
20-11-25 11:51 am