ಭಾರತದ ವಿರುದ್ಧ ಟ್ರಂಪ್ ಸುಂಕಾಸ್ತ್ರಕ್ಕೆ ಅಮೆರಿಕದ ತಜ್ಞರಿಂದಲೇ ಟೀಕೆ ; ದೊಡ್ಡ ಬೆಲೆ ತೆರಬೇಕಾದೀತು, ಮೂರ್ಖತನದ್ದು ಎಂದ ಅರ್ಥಶಾಸ್ತ್ರಜ್ಞರು, ಮಾಜಿ ಭದ್ರತಾ ಸಲಹೆಗಾರರು

09-08-25 11:09 pm       HK News Desk   ದೇಶ - ವಿದೇಶ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ವಿರುದ್ಧ 50 ಪರ್ಸೆಂಟ್ ಸುಂಕ ವಿಧಿಸಿರುವುದಕ್ಕೆ ಟ್ರಂಪ್ ಅವರ ಒಂದು ಕಾಲದ ಗೆಳೆಯ ಹಾಗೂ ಅಮೆರಿಕದ ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾನ್ ಬಾಲ್ಟನ್ ಟೀಕಿಸಿದ್ದಾರೆ. ಭಾರತದ ವಿರುದ್ಧ ದುಬಾರಿ ತೆರಿಗೆ ವಿಧಿಸಿದ್ದು ತಪ್ಪು ನಡೆಯಾಗಿದ್ದು ಇದರಿಂದ ಭಾರತವು ರಷ್ಯಾ, ಚೀನಾದ ಜೊತೆ ಹತ್ತಿರವಾಗಲು ದಾರಿ ಮಾಡಿ ಕೊಟ್ಟಂತಾಗಿದೆ ಎಂದು ಹೇಳಿದ್ದಾರೆ.

ನವದೆಹಲಿ, ಆ.9 : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ವಿರುದ್ಧ 50 ಪರ್ಸೆಂಟ್ ಸುಂಕ ವಿಧಿಸಿರುವುದಕ್ಕೆ ಟ್ರಂಪ್ ಅವರ ಒಂದು ಕಾಲದ ಗೆಳೆಯ ಹಾಗೂ ಅಮೆರಿಕದ ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾನ್ ಬಾಲ್ಟನ್ ಟೀಕಿಸಿದ್ದಾರೆ. ಭಾರತದ ವಿರುದ್ಧ ದುಬಾರಿ ತೆರಿಗೆ ವಿಧಿಸಿದ್ದು ತಪ್ಪು ನಡೆಯಾಗಿದ್ದು ಇದರಿಂದ ಭಾರತವು ರಷ್ಯಾ, ಚೀನಾದ ಜೊತೆ ಹತ್ತಿರವಾಗಲು ದಾರಿ ಮಾಡಿ ಕೊಟ್ಟಂತಾಗಿದೆ ಎಂದು ಹೇಳಿದ್ದಾರೆ.

ಟ್ರಂಪ್ ಅವರ ಈ ನಡೆಯಿಂದಾಗಿ ಅಮೆರಿಕಕ್ಕೇ ನಷ್ಟವಾಗಲಿದೆ. ಟ್ರಂಪ್ ಸುಂಕ ನೀತಿಗೆ ಭಾರತವು ತುಂಬ ನೆಗೆಟಿವ್ ಆಗಿಯೇ ಪ್ರತಿಕ್ರಿಯೆ ನೀಡಿದೆ. ಚೀನಾದ ಮೇಲೂ ಇದೇ ರೀತಿಯ ತೆರಿಗೆ ವಿಧಿಸಿ ಅದು ಯಾವ ರೀತಿ ತೋರಿತ್ತೋ ಅದೇ ಹಾದಿಯಲ್ಲಿ ಭಾರತವೂ ವರ್ತನೆ ತೋರಿದೆ. 25 ಶೇಕಡಾ ತೆರಿಗೆ ವಿಧಿಸಿದ ಮೇಲೆ ಮತ್ತೆ ದಂಡದ ರೂಪದಲ್ಲಿ 25 ಶೇಕಡಾ ಸುಂಕ ವಿಧಿಸಿದ್ದು ರಷ್ಯಾವನ್ನೂ ಭಾರತಕ್ಕೆ ಹತ್ತಿರವಾಗುವಂತೆ ಮಾಡಿದೆ. ರಷ್ಯಾ, ಚೀನಾದಿಂದ ಭಾರತವನ್ನು ದೂರ ಇಡುವಂತೆ ಹತ್ತು ವರ್ಷಗಳಿಂದ ಅಮೆರಿಕ ಮಾಡಿದ್ದ ಪ್ರಯತ್ನಕ್ಕೆ ಟ್ರಂಪ್ ಅವರು ಎಳ್ಳುನೀರು ಬಿಟ್ಟಿದ್ದಾರೆ ಎಂದು ಬಾಲ್ಟನ್ ಟೀಕಿಸಿದ್ದಾರೆ.

ಯುಎಸ್ ವಿದೇಶಾಂಗ ನೀತಿಯ ಎಕ್ಸ್ ಪರ್ಟ್ ಕ್ರಿಸ್ಟೋಫರ್ ಪಾಡಿಲ್ಲಾ ಅವರೂ ಟ್ರಂಪ್ ನಡೆಯನ್ನು ಟೀಕಿಸಿದ್ದು, ಈ ರೀತಿಯ ನಡೆ ಭಾರತ- ಅಮೆರಿಕದ ನಡುವಿನ ಸಂಬಂಧಕ್ಕೆ ದೀರ್ಘ ಕಾಲದ ಅಪಾಯ ತರಲಿದೆ. ಇದರಿಂದ ಅಮೆರಿಕ ನಂಬಿಕೆಗೆ ಅರ್ಹವಾದ ರಾಷ್ಟ್ರವೇ ಅನ್ನುವ ಪ್ರಶ್ನೆ ಏಳುವಂತೆ ಮಾಡುತ್ತದೆ. ತೆರಿಗೆ ಪ್ರಹಾರದ ಯಾವತ್ತಿಗೂ ಕೆಟ್ಟ ನೆನಪಾಗಿ ಉಳಿಯುತ್ತದೆ ಎಂದಿದ್ದಾರೆ.

ಇದಲ್ಲದೆ, ಅಮೆರಿಕದ ಅರ್ಥಶಾಸ್ತ್ರಜ್ಞ ಮತ್ತು ಜಾನ್ ಹಾಪ್ಕಿನ್ಸ್ ಯುನಿವರ್ಸಿಟಿ ಪ್ರೊಫೆಸರ್ ಆಗಿರುವ ಸ್ಟೀವ್ ಹಾಂಕೆ ಅವರು ಟ್ರಂಪ್ ನಡೆಯನ್ನು ತೀವ್ರ ಟೀಕೆ ಮಾಡಿದ್ದು, ಟ್ರಂಪ್ ಅವರು ತಮ್ಮ ಸ್ವಂತಿಕೆಯನ್ನೇ ಹಾಳು ಗೆಡವುತ್ತಿದ್ದಾರೆ. ಅತಿರೇಕಕದ ತೆರಿಗೆ ವಿಧಿಸಿರುವುದು ಮೂರ್ಖತನದ ನಿರ್ಧಾರ ಎಂದು ಹೇಳಿದ್ದಾರೆ.

Former US National Security Advisor John Bolton, once a close ally of Donald Trump, has sharply criticized the US President’s decision to impose a 50% tariff on India. Calling the move a strategic blunder, Bolton said the excessive tariff would push India closer to Russia and China — undoing years of US diplomatic efforts.