ಬ್ರೇಕಿಂಗ್ ನ್ಯೂಸ್
07-08-25 10:02 pm HK News Desk ದೇಶ - ವಿದೇಶ
ಇಂದೋರ್, ಆ.7 : ಮಧ್ಯಪ್ರದೇಶದ ಜಬಲ್ಪುರ ಜಿಲ್ಲೆಯ ಸಿಹೋರಾ ತಹಸಿಲ್ ಎಂಬಲ್ಲಿ ಅಪಾರ ಪ್ರಮಾಣದ ಚಿನ್ನದ ನಿಕ್ಷೇಪಗಳನ್ನು ಭೂವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. ಮಹಾಂಗ್ವಾ ಕೆವಾಲ್ರಿ ಎನ್ನುವ ಗ್ರಾಮದಲ್ಲಿಹಲವು ವರ್ಷಗಳ ಕಾಲ ನಡೆಸಿದ ಭೂವೈಜ್ಞಾನಿಕ ಸಮೀಕ್ಷೆಗಳ ನಂತರ ಇಲ್ಲಿ ಅಪಾರ ಚಿನ್ನದ ನಿಕ್ಷೇಪ ಇರುವುದನ್ನು ವಿಜ್ಞಾನಿಗಳು ತಿಳಿಸಿದ್ದಾರೆ.
ಪ್ರಾಥಮಿಕ ವರದಿಗಳ ಪ್ರಕಾರ, ಈ ಭಾಗದಲ್ಲಿ ಚಿನ್ನದ ನಿಕ್ಷೇಪಗಳು ಸುಮಾರು 100 ಹೆಕ್ಟೇರ್ ಪ್ರದೇಶದಲ್ಲಿ ಹರಡಿಕೊಂಡಿವೆ ಮತ್ತು ಇದರ ಪ್ರಮಾಣವು ಲಕ್ಷ ಟನ್ಗಳಷ್ಟು ಇರಬಹುದು ಎಂದು ಅಂದಾಜಿಸಿದ್ದಾರೆ. ಈ ಪ್ರದೇಶದಿಂದ ತೆರೆಯಲ್ಪಟ್ಟ ಮಣ್ಣಿನ ಮಾದರಿಗಳನ್ನು ರಾಸಾಯನಿಕ ವಿಶ್ಲೇಷಣೆಗೆ ಒಳಪಡಿಸಿದ ಬಳಿಕ ಚಿನ್ನದ ಕುರುಹುಗಳನ್ನು ಪತ್ತೆ ಮಾಡಲಾಗಿದೆ. ಇದಲ್ಲದೆ, ಈ ಜಾಗದಲ್ಲಿ ತಾಮ್ರ ಮತ್ತು ಇತರ ಅಮೂಲ್ಯ ಲೋಹಗಳನ್ನೂ ಪತ್ತೆ ಮಾಡಲಾಗಿದೆ.

ಜಬಲ್ಪುರವು ಈಗಾಗಲೇ ಕಬ್ಬಿಣ, ಮ್ಯಾಂಗನೀಸ್, ಸುಣ್ಣದ ಕಲ್ಲು ಮತ್ತು ಸಿಲಿಕಾ ಮರಳಿನಿಂದಾಗಿ ಖ್ಯಾತಿ ಹೊಂದಿದೆ. ಈಗಾಗಲೇ ವಿವಿಧ ಮಾದರಿಯ ಈ ಭಾಗದಲ್ಲಿ 42 ಗಣಿಗಳಿದ್ದು ಹೊಸತಾಗಿ ಚಿನ್ನದ ಗಣಿಯೂ ಸೇರಿಕೊಳ್ಳುವ ಸಾಧ್ಯತೆಯಿದೆ. ಪಕ್ಕದ ಕತ್ನಿ ಜಿಲ್ಲೆಯಲ್ಲು ವರ್ಷಗಳ ಹಿಂದೆ ಚಿನ್ನದ ನಿಕ್ಷೇಪ ಇದೆಯೆಂದು ಸುದ್ದಿಯಾಗಿತ್ತು. ಆದರೆ ಅದನ್ನು ಹೊರ ತೆಗೆಯಲು ಯಾವುದೇ ಕಂಪನಿ ಮುಂದೆ ಬಂದಿರಲಿಲ್ಲ. ಇದೀಗ ಜಬಲ್ಪುರದಲ್ಲಿಯೂ ಚಿನ್ನದ ನಿಕ್ಷೇಪ ಇದೆಯೆಂಬ ಸುದ್ದಿ ಬಂದಿರುವುದರಿಂದ ದೇಶದ ಗಮನ ಸೆಳೆದಿದೆ. ಸದ್ಯಕ್ಕೆ ಚಿನ್ನದ ನಿಕ್ಷೇಪ ಇದೆ ಎನ್ನಲಾದ ಪ್ರದೇಶದಲ್ಲಿ ಆಳ, ಅಗಲದ ಬಗ್ಗೆ ಮತ್ತು ಆರ್ಥಿಕ ಬೇಡಿಕೆ ವಿಚಾರದಲ್ಲಿ ಇನ್ನಷ್ಟು ಅಧ್ಯಯನ ಅಗತ್ಯ ಇದೆಯೆಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
In a significant geological discovery, massive gold reserves have reportedly been found in the Sihora tehsil of Jabalpur district in Madhya Pradesh. After years of geological surveys in the Mahangwa Cavalry region, experts have now confirmed the presence of substantial gold deposits in the area.
06-10-26 09:32 am
HK News Staffer
ರಾಜ್ಯಕ್ಕೆ 7,142.64 ಕೋಟಿ ರೂ. ಬರ ಪರಿಹಾರ ನೀಡಿ ;...
03-10-26 05:30 pm
Urdu Habba Row: ವಿಧಾನಸೌಧ ಮೆಟ್ಟಿಲುಗಳಲ್ಲಿ ಉರ್ದು...
01-10-26 10:50 pm
‘ಕನ್ನಡದ ಶಿವಮಣಿ’ ಖ್ಯಾತಿಯ ಡ್ರಮ್ಮರ್ ದೇವ್ ನಿಧನ ;...
27-09-26 03:21 pm
ಬೆಂಗಳೂರಿಗೆ ಬಂದ ಶಾಸಕರೆಲ್ಲ ಎರಡೆರಡು ಮದುವೆಯಾಗಿದ್ದ...
25-09-26 04:49 pm
06-10-26 02:46 pm
HK News Staffer
Russia, pneumonic plague: ರಷ್ಯಾದಲ್ಲಿ ಹೊಸ ರೀತಿ...
06-10-26 12:58 pm
ಫ್ಲೈದುಬೈ ಹೈಜಾಕ್ ಯತ್ನದ ಹಿಂದೆ ಇರಾನ್ ಕೈವಾಡ ಎಂದ ಟ...
06-10-26 10:11 am
Nigerian aircraft: ನೈಜೀರಿಯಾದಲ್ಲಿ ವಾಯುಪಡೆ ವಿಮಾ...
06-10-26 09:30 am
Emergency Funds: ಆರ್ಥಿಕ ಸ್ಥಿತಿ ಮತ್ತಷ್ಟು ಹದಗೆಡ...
05-10-26 08:56 pm
05-10-26 10:53 pm
Mangaluru Staffer
Mangalore News, Ekkaru Temple, Tirupati Templ...
05-10-26 12:35 pm
'ಮುಳಿಯ ಜುವೆಲ್ಲರಿ' ಮಾಲೀಕ ಪುತ್ತೂರಿನ ಮುಳಿಯ ಶ್ಯಾಮ...
05-10-26 11:41 am
brijesh chowta: ಹೈಕೋರ್ಟ್ ಪೀಠ ಸ್ಥಾಪನೆಗೆ ಒಗ್ಗಟ್...
03-10-26 09:56 pm
Tammanna Shetty, mysore kambala: ಮೈಸೂರು ದಸರಾ...
03-10-26 01:27 pm
06-10-26 03:27 pm
HK News Staffer
ಹುಲಿವೇಷದ ತರಬೇತಿಗೆ ಬಂದು ಪಣಂಬೂರು ಬೀಚ್ ತೆರಳಿದ್ದ...
06-10-26 01:23 pm
DIG Somashekar: ಸುಪ್ರೀಂ ಕೋರ್ಟ್ ಆದೇಶ ಸೃಷ್ಟಿಸಿ...
05-10-26 08:26 pm
ಪುತ್ತೂರಿನಿಂದ ಕೇರಳಕ್ಕೆ ಹಿಂಸಾತ್ಮಕ ರೀತಿಯಲ್ಲಿ 11...
05-10-26 08:24 pm
Udupi News, Indrali Railway Station, Nizamudd...
05-10-26 12:28 pm