ಬ್ರೇಕಿಂಗ್ ನ್ಯೂಸ್
23-12-20 08:51 pm Headline Karnataka News Network ದೇಶ - ವಿದೇಶ
ಇಸ್ಲಮಾಬಾದ್, ಡಿ.23: ಪಾಕಿಸ್ತಾನದಲ್ಲಿ ತೀವ್ರ ಆರ್ಥಿಕ ಬಿಕ್ಕಟ್ಟು ಎದುರಾಗಿದೆ. ಜೊತೆಗೆ ಹಣದುಬ್ಬರವೂ ಏರಿಕೆಯಾಗಿದ್ದು, ಅಲ್ಲಿ ನಿತ್ಯವಸ್ತುಗಳ ಬೆಲೆ ಗಗನಕ್ಕೇರಿದೆ.
ಅಲ್ಲಿನ ಪರಿಸ್ಥಿತಿ ಎಲ್ಲಿಗೆ ಮುಟ್ಟಿದೆ ಅಂದ್ರೆ, ಕೋಳಿ ಮೊಟ್ಟೆಯ ದರ 30 ರೂಪಾಯಿ ಆಗಿದೆ. ಮೊಟ್ಟೆ ಸಾಮಾನ್ಯವಾಗಿ ಅತಿ ಹೆಚ್ಚು ಬಳಕೆಯಾಗುವ ವಸ್ತು. ಆದರೆ, ಜನಸಾಮಾನ್ಯರು ಅಲ್ಲೀಗ ಮೊಟ್ಟೆ ಕೊಂಡು ತಿನ್ನುವ ಹಾಗಿಲ್ಲ. ಡಜನ್ ಮೊಟ್ಟೆಯನ್ನು ಕೊಳ್ಳುವುದಾದರೆ 240 ರೂ.ಗೆ ನೀಡಲಾಗುತ್ತದೆ. ಒಂದು ಮೊಟ್ಟೆ ಖರೀದಿಸಲು ಬಂದರೆ 30 ರೂಪಾಯಿ ನೀಡಬೇಕಾಗುತ್ತದೆ.
ಇನ್ನು ಕೋಳಿ ಮಾಂಸದ ದರವೂ ವಿಪರೀತವಾಗಿ ಏರಿಕೆಯಾಗಿದೆ. ಕೋಳಿ ಮಾಂಸ ಕೇಜಿಗೆ 300 ರೂ.ಗೆ ಏರಿದ್ದು ಚಳಿಗಾಲದಲ್ಲಿ ಮಾಂಸ ಪ್ರಿಯರು ಕೈಸುಟ್ಟುಕೊಂಡಿದ್ದಾರೆ. ಇದರ ಜೊತೆ ಶುಂಠಿಯ ದರವೂ ಭಾರೀ ಏರಿಕೆ ಕಂಡಿದೆ. ಶುಂಠಿಗೆ ಕೇಜಿಗೆ ಒಂದು ಸಾವಿರಕ್ಕಿಂತಲೂ ಹೆಚ್ಚು ಬೆಲೆಯಾಗಿದೆ. ಸಾಮಾನ್ಯವಾಗಿ ಚಳಿಗಾಲದಲ್ಲಿ ಪಾಕಿಸ್ತಾನದ ಜನರು ಮೊಟ್ಟೆ ಮತ್ತು ಶುಂಠಿಯನ್ನು ಹೆಚ್ಚಾಗಿ ಬಳಸುತ್ತಾರೆ. ಇದಲ್ಲದೆ ದಿನವಹಿ ಬಳಸುವ ಬಹುತೇಕ ವಸ್ತುಗಳ ದರವೂ ದುಪ್ಪಟ್ಟಾಗಿದೆ. ಸಕ್ಕರೆ ಬೆಲೆ ಕೇಜಿಗೆ 100 ರೂ. ಗಡಿ ದಾಟಿದ್ದರೆ, ಗೋಧಿ ಬೆಲೆ ಕೇಜಿಗೆ 60 ರೂ. ಆಗಿದೆ. ಗೋಧಿ ಹಿಟ್ಟಿನ ದರ ಇನ್ನಷ್ಟು ಹೆಚ್ಚಿರುವ ಬಗ್ಗೆ ಅಲ್ಲಿನ ವರದಿಗಳು ಹೇಳುತ್ತವೆ. ಪಾಕಿಸ್ತಾನದಲ್ಲಿ ಶೇ.25ರಿಂದ 30 ಪರ್ಸೆಂಟ್ ಜನರು ಬಡತನ ರೇಖೆಗಿಂತ ಕೆಳಗಿದ್ದು ಎರಡು ಹೊತ್ತಿನ ಊಟಕ್ಕೂ ಪರದಾಡುವ ಸ್ಥಿತಿ ಉಂಟಾಗಿದೆ.
ಪಾಕಿಸ್ತಾನದಲ್ಲಿ ಇಮ್ರಾನ್ ಖಾನ್ ಸರಕಾರ ಆಡಳಿತಕ್ಕೆ ಬಂದ ಮೇಲೆ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿದೆ ಎನ್ನಲಾಗುತ್ತಿದ್ದು, ದಿನವಹಿ ವಸ್ತುಗಳ ದರ ಗಗನಮುಖಿಯಾಗುತ್ತಿರುವುದು ಬಡಜನರ ಮೇಲೆ ಬರೆ ಎಳೆದಿದೆ. ಪಾಕಿಸ್ತಾನದ ಬಹುತೇಕ ರಾಜ್ಯಗಳಲ್ಲಿ ನಿತ್ಯಸಾಮಗ್ರಿಗಳ ದರ ಏರಿಕೆಯಾಗಿದ್ಯಂತೆ.
Various poultry products are getting dearer by the day. The rate of eggs reached Rs240 per dozen mark on Wednesday, breaking all the previous records of the increase in the price in winters.
12-01-26 08:20 pm
Mangaluru
ಮನೆ ಕಟ್ಟಲು ಅಡಿಪಾಯ ತೆಗೆಯುವ ವೇಳೆ 1 ಕೆಜಿಯಷ್ಟು ನಿ...
10-01-26 10:28 pm
"ಡ್ಯಾಡಿ ಈಸ್ ಹೋಮ್" ಎಐ ವಿಡಿಯೋ ರಿಲೀಸ್ ; ರಾಜ್ಯ ರಾ...
10-01-26 04:29 pm
ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಅಡ್ಡ ನಿಂತ ಒಂಟಿ ಸಲಗ...
10-01-26 03:00 pm
Purushottam Bilimale, Legal Battle Against Ma...
10-01-26 01:17 pm
12-01-26 11:00 pm
HK staffer
ಕುಂಬಳೆ ಟೋಲ್ ಗೇಟ್ ವಿರುದ್ಧ ರಸ್ತೆ ತಡೆದು ಪ್ರತಿಭಟನ...
12-01-26 05:01 pm
ಎಕ್ಸ್ ನಲ್ಲಿ ಅಶ್ಲೀಲ ಕಂಟೆಂಟ್ ; ಐಟಿ ಸಚಿವಾಲಯದ ಒತ್...
11-01-26 06:07 pm
ವೆನಿಜುವೆಲಾ ತೈಲದ ನಿಯಂತ್ರಣಕ್ಕೆ ಮುಂದಾದ ಅಮೆರಿಕ ;...
10-01-26 03:22 pm
ಶಬರಿಮಲೆ ಚಿನ್ನ ಕಳವು ಪ್ರಕರಣ ; ಪ್ರಧಾನ ತಂತ್ರಿ ಕಂಠ...
09-01-26 11:00 pm
12-01-26 08:03 pm
Mangaluru Staffer
ಭಾರತ ರಕ್ತಪಾತಕ್ಕೆ ಇನ್ನಷ್ಟು ಸಿದ್ಧವಾಗಬೇಕು ; ಚೀನಾ...
11-01-26 10:39 pm
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
ಅಮೆರಿಕ ಬಿಟ್ಟು ಚೀನಾ ಜೊತೆಗೆ ಬಾಂಧವ್ಯ ಬೆಳೆಸಬೇಕಿದೆ...
11-01-26 12:56 pm
Cm Siddaramaiah, Mangalore: ಕರಾವಳಿ ಪ್ರವಾಸೋದ್ಯ...
10-01-26 10:45 pm
12-01-26 06:28 pm
Mangaluru Staffer
Mangalore Crime: ಬಾಂಗ್ಲಾದವನೆಂದು ಹೇಳಿ ವಲಸೆ ಕಾರ...
12-01-26 01:54 pm
Sharmila Death, Murder, Bangalore: ಮಂಗಳೂರಿನ ಟ...
12-01-26 01:31 pm
ಅಯ್ಯಪ್ಪ ಸ್ವಾಮಿಗಳ ಪೂಜೆ ಸಂದರ್ಭದಲ್ಲಿ ಮುಸ್ಲಿಂ ವ್ಯ...
11-01-26 09:59 pm
ಆರು ವರ್ಷದ ಬಾಲಕಿಯನ್ನು ಅಪಹರಿಸಿ, ಕೊಲೆ ; ತಾಯಿ ಜಗಳ...
07-01-26 10:45 pm