ಬ್ರೇಕಿಂಗ್ ನ್ಯೂಸ್
23-06-25 04:37 pm HK News Desk ದೇಶ - ವಿದೇಶ
ನವದೆಹಲಿ, ಜೂನ್ 23 : ಟಾಮಿ ಜೆನೆಸಿಸ್ ಎಂದೇ ಹೆಸರಾಗಿರುವ ಕೆನಡಾದಲ್ಲಿ ನೆಲೆಸಿರುವ ಭಾರತ ಮೂಲದ ರ‍್ಯಾಪರ್ ಜೆನೆಸಿಸ್ ಯಾಸ್ಮಿನ್ ಮೋಹನರಾಜ್ ಹೊಸ ವಿವಾದಕ್ಕೆ ಸಿಲುಕಿದ್ದಾರೆ. ಹೊಸ ಆಲ್ಬಂ ವೀಡಿಯೊದಲ್ಲಿ ಅವರು ನೀಲಿ ದೇಹದ ಬಣ್ಣ, ಚಿನ್ನದ ಆಭರಣಗಳು ಮತ್ತು ಕೆಂಪು ಬಿಂದಿಯೊಂದಿಗೆ ಹಿಂದೂ ದೇವತೆಯಂತೆ ಕಾಣಿಸಿಕೊಂಡಿದ್ದು, ಅಲ್ಲದೆ, ಕ್ರಿಶ್ಚಿಯನ್ನರು ಪವಿತ್ರ ಎಂದು ನಂಬುವ ಶಿಲುಬೆಯನ್ನು ನೆಕ್ಕುವಂತೆ ವರ್ತಿಸಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ವೀಡಿಯೊದಲ್ಲಿ ಜೆನೆಸಿಸ್ ಶಿಲುಬೆಯನ್ನು ನೆಕ್ಕುವುದು ಮತ್ತು ಅದನ್ನು ಎದೆಯ ಮೇಲಿಟ್ಟುಕೊಂಡು ಪೋಸ್ ನೀಡುವುದನ್ನು ಕಾಣಬಹುದು. ಈ ದೃಶ್ಯವು ಹಿಂದೂ ಮತ್ತು ಕ್ರಿಶ್ಚಿಯನ್ ಸಮುದಾಯಗಳ ಜನರನ್ನು ಕೆರಳಿಸಿದ್ದು 'ದೇವದೂಷಣೆ' ಎಂದು ಕರೆದಿದ್ದಾರೆ.
ಮೈಯ್ಯೆಲ್ಲಾ ಕಡು ನೀಲಿ ಬಣ್ಣವನ್ನು ಬಳಿದುಕೊಂಡು ಚಿನ್ನದ ಆಭರಣಗಳು ಹಾಗೂ ಮೈಯ್ಯೆಲ್ಲಾ ಕಾಣುವಂತೆ ಅರೆಬರೆ ಉಡುಗೆ ಧರಿಸಿದ್ದಾಳೆ. ಹಣೆಗೆ ಕುಂಕುಮ ಇಟ್ಟುಕೊಂಡಿದ್ದಾಳೆ. ಇಡೀ ವಿಡಿಯೋದಲ್ಲಿ ಅಶ್ಲೀಲವೆನಿಸುವಂಥ ಭಂಗಿಯಲ್ಲಿ ಕಾಣಿಸಿಕೊಂಡು ಮಂದಗತಿಯಲ್ಲಿ ನೃತ್ಯ ಮಾಡುತ್ತಾ, ತಾನು ಕೈಯ್ಯಲ್ಲಿ ಹಿಡಿದಿರುವ ಶಿಲುಬೆಯನ್ನು ನೆಕ್ಕುತ್ತಾಳೆ. ಅಷ್ಟೇ ಅಲ್ಲ ಅಂಗಾತ ಮಲಗಿ, ಒಂದು ಪುಸ್ತಕವನ್ನು ತನ್ನ ಕಿಬ್ಬೊಟ್ಟೆಯ ಮೇಲೆ ಇಟ್ಟುಕೊಂಡು ಶಿಲುಬೆಯನ್ನು ತನ್ನ ಹೊಟ್ಟೆಯ ಮೇಲ್ಭಾಗದಲ್ಲಿ ಇಟ್ಟಿರುವ ವಿಡಿಯೋ ವೈರಲ್ ಆಗಿದೆ.
ಸಾಮಾಜಿಕ ಮಾಧ್ಯಮ ಬಳಕೆದಾರರು ರ‍್ಯಾಪರ್ ಟಾಮಿ ಜೆನೆಸಿಸ್ ಅವರ 'ಟ್ರೂ ಬ್ಲೂ' ಸಂಗೀತ ವೀಡಿಯೊದಲ್ಲಿನ ಈ ದೃಶ್ಯಗಳಿಗಾಗಿ ಬಲವಾಗಿ ಟೀಕಿಸಿದ್ದಾರೆ. ಧಾರ್ಮಿಕ ಸಮುದಾಯಗಳನ್ನು ಪ್ರಚೋದಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಹಿಂದೂ ಭಾವನೆಗಳನ್ನು ನೋಯಿಸಲು ಉದ್ದೇಶಪೂರ್ವಕವಾಗಿ ಈ ರೀತಿ ಮಾಡಿದ್ದಾಳೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಯಾಸ್ಮಿನ್ ಮೋಹನರಾಜ್ ಕೆನಡಾದ ವ್ಯಾಂಕೋವರ್‌ನಲ್ಲಿ ಜನಿಸಿದ್ದು ತಮಿಳು ಮತ್ತು ಸ್ವೀಡಿಷ್ ಹಿನ್ನೆಲೆಯಿಂದ ಬಂದವರು. ದಿಟ್ಟ ಶೈಲಿಗೆ ಹೆಸರಾಗಿದ್ದು ಆಗಾಗ್ಗೆ ಪ್ರಚೋದನಕಾರಿ ಹಾಡುಗಳೊಂದಿಗೆ ಜಾಲತಾಣದಲ್ಲಿ ಕಾಣಿಸುತ್ತಾರೆ. ಪ್ರಚಾರಕ್ಕಾಗಿ ಚೀಪ್ ಸ್ಟಂಟ್ ಮಾಡಿರುವಂತೆ ತೋರುತ್ತಿದೆ.
Tommy Genesis, the Canadian rapper of Indian origin whose real name is Genesis Yasmine Mohanraj, has landed in controversy following the release of her latest music video. In the video for her new album, she appears with blue body paint, gold jewelry, a red bindi, and attire resembling Hindu deity iconography—while also engaging with Christian symbols in a provocative manner.
11-07-25 06:36 pm
Bangalore Correspondent
ಸಿಎಂ ಬದಲಾವಣೆ ಎಲ್ಲ ಮುಗಿದ ಕಥೆ, ಸೆಪ್ಟೆಂಬರ್ನಲ್ಲಿ...
11-07-25 05:41 pm
24 ಗಂಟೆಯಲ್ಲಿ ಭಟ್ಕಳ ನಗರವನ್ನು ಸ್ಫೋಟಿಸುತ್ತೇನೆ ;...
11-07-25 04:36 pm
Heart Attack, Belagavi, Bidar: ಹೃದಯಾಘಾತ ; ರಸ್...
11-07-25 04:22 pm
ನಾನೇ ಐದು ವರ್ಷಕ್ಕೆ ಸಿಎಂ ; ದೆಹಲಿ ಅಂಗಳದಲ್ಲೂ ಹೂಂಕ...
10-07-25 09:53 pm
11-07-25 12:08 pm
HK News Desk
1500ಕ್ಕೂ ಹೆಚ್ಚು ಹಿಂದು ಮಹಿಳೆಯರನ್ನು ಇಸ್ಲಾಮಿಗೆ ಮ...
10-07-25 11:07 pm
Bangle Seller, Changur Baba Arrest, Uttar Pra...
10-07-25 03:24 pm
Amit Shah; ರಾಜಕೀಯ ನಿವೃತ್ತಿ ಬಳಿಕ ವೇದ, ಉಪನಿಷತ್...
10-07-25 01:00 pm
ಗೋಮಾಂಸ ತಿನ್ನಿಸಿ ಮತಾಂತರಕ್ಕೆ ಯತ್ನ ; ಫೇಸ್ಬುಕ್ಕಲ್...
07-07-25 08:45 pm
11-07-25 08:55 pm
Mangalore Correspondent
Dc Mangalore, Darshan; ಯುವ ಜಿಲ್ಲಾಧಿಕಾರಿ ಚುರುಕ...
10-07-25 07:23 pm
Mangalore, Traffic Constable, Lokayukta, Tasl...
10-07-25 04:01 pm
ಮಂಗಳೂರಿನ ಟೈಲರಿಂಗ್ ಶಾಪಲ್ಲೇ ಕುಸಿದು ಬಿದ್ದಿದ್ದ ನವ...
09-07-25 10:25 pm
Mangalore Home Minister Parameshwara, Peace M...
09-07-25 10:17 pm
11-07-25 07:13 pm
Mangalore Correspondent
Rape case in Ramanagar: 14 ವರ್ಷದ ಬಾಲಕಿ ಮೇಲೆ ಆ...
10-07-25 08:09 pm
Kerala Couple, Chit Fund Scam; ಚಿಟ್ ಫಂಡ್ ಹೆಸರ...
10-07-25 01:05 pm
Double Murder Hassan, crime: ಆಸ್ತಿ ವಿಚಾರಕ್ಕೆ...
10-07-25 12:04 pm
Drugs News, Mangalore: ಮಂಗಳೂರಿಗೆ ಡ್ರಗ್ಸ್ ಪೂರೈ...
09-07-25 10:56 pm