ಬ್ರೇಕಿಂಗ್ ನ್ಯೂಸ್
22-06-25 10:58 am HK News Desk ದೇಶ - ವಿದೇಶ
ನವದೆಹಲಿ, ಜೂನ್ 22: ಇಸ್ರೇಲ್- ಇರಾನ್ ಸಂಘರ್ಷಕ್ಕೆ ಅಮೆರಿಕ ಮಿಲಿಟರಿ ಅಧಿಕೃತವಾಗಿ ಎಂಟ್ರಿಯಾಗಿದೆ. ಶನಿವಾರ ರಾತ್ರಿ (ಭಾರತೀಯ ಕಾಲಮಾನ) ಅಮೆರಿಕದ ಸೇನಾ ಪಡೆಯು ಇರಾನಿನ ಮೂರು ಅಣು ಸ್ಥಾವರಗಳ ಮೇಲೆ ದಾಳಿ ನಡೆಸಿದೆ. ದಾಳಿ ನಡೆಸಿರುವುದನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧಿಕೃತ ಘೋಷಣೆ ಮಾಡಿದ್ದಾರೆ. ಮಧ್ಯ ಪ್ರಾಚ್ಯದ ಎರಡು ದೇಶಗಳ ಯುದ್ಧಕ್ಕೆ ಮೂರನೇ ರಾಷ್ಟ್ರ ಎಂಟ್ರಿ ಕೊಟ್ಟಿರುವುದು ವಿಶ್ವ ಯುದ್ಧದ ಆತಂಕ ಮೂಡಿಸಿದೆ.
ಭಯೋತ್ಪಾದನೆಯನ್ನು ಪೋಷಿಸುತ್ತಿರುವ ನಂಬರ್ ವನ್ ರಾಷ್ಟ್ರವಾಗಿರುವ ಇರಾನ್ ಮೇಲೆ ಮಿಲಿಟರಿ ದಾಳಿ ನಡೆಸಲಾಗಿದೆ. ಶಾಂತಿ ನೆಲೆಸುವುದು ಕಷ್ಟ ಎನ್ನುವುದಾದರೆ ಮತ್ತಷ್ಟು ಬಾಂಬ್ ಸುರಿಯಬೇಕಾದ ಬೋಲ್ಡ್ ನಿರ್ಧಾರಕ್ಕೆ ಬರಬೇಕಾಗುತ್ತದೆ. ಭವಿಷ್ಯದ ದಾಳಿ ಇದಕ್ಕಿಂತಲೂ ಘೋರವಾಗಿರುತ್ತದೆ ಎಂದು ಟ್ರಂಪ್ ಗುಡುಗಿದ್ದಾರೆ. ಇರಾನ್ ಪರಮಾಣು ಬಾಂಬ್ ಸಾಮರ್ಥ್ಯ ಗಳಿಸಿಕೊಳ್ಳುವುದನ್ನು ನಿಲ್ಲಿಸುವುದು ನಮ್ಮ ಗುರಿ. ಭಯೋತ್ಪಾದನೆ ಪೋಷಿಸುತ್ತಿರುವ ನಂಬರ್ ವನ್ ರಾಷ್ಟ್ರವು ಪರಮಾಣು ಸಾಮರ್ಥ್ಯ ಗಳಿಸುವುದು ಜಗತ್ತಿಗೆ ಬೆದರಿಕೆಯಾಗುತ್ತದೆ ಎಂದು ಟ್ರಂಪ್ ಅಮೆರಿಕದ ವೈಟ್ ಹೌಸ್ ನಲ್ಲಿ ನಿಂತು ಮಾತನಾಡಿದ್ದಾರೆ.
ಅಮೆರಿಕವು ಇದೇ ಮೊದಲ ಬಾರಿಗೆ ಬಂಕರ್ ಸ್ಫೋಟಿಸುವ 30 ಸಾವಿರ ಪೌಂಡ್ ಸಾಮರ್ಥ್ಯವುಳ್ಳ ಜಿಬಿಯು-57 ಬಾಂಬ್ ಅನ್ನು ಬಳಕೆ ಮಾಡಿದೆ. ಇರಾನ್ ದೇಶದ ಪ್ರಮುಖ ಅಣು ಸ್ಥಾವರಗಳು ಮತ್ತು ಸಂಗ್ರಹಾಗಾರ ಎನ್ನಲಾದ ಫೋರ್ಡೋ, ನತಾಂಜ್ ಮತ್ತು ಇಸ್ಫಹಾನ್ ಎಂಬ ಮೂರು ಪ್ರದೇಶಗಳ ಮೇಲೆ ಅಮೆರಿಕ ಸೇನಾ ಪಡೆ ದಾಳಿ ನಡೆಸಿದೆ. ಬಿ-2 ಸ್ಟೆಲ್ತ್ ಬಾಂಬರ್ ಸದ್ಯಕ್ಕೆ ಅಮೆರಿಕದಲ್ಲಿ ಮಾತ್ರ ಇದ್ದು, ಮೊದಲ ಬಾರಿಗೆ ಅದನ್ನೇ ಬಳಕೆ ಮಾಡಿದ್ದು ಇರಾನಲ್ಲಿ ದೊಡ್ಡ ನಷ್ಟಕ್ಕೀಡು ಮಾಡಿದೆ. ಇರಾನ್- ಇಸ್ರೇಲ್ ಯುದ್ಧದ ವಿಚಾರದಲ್ಲಿ ಅಮೆರಿಕವು ಶಾಂತಿ ಮಾತುಕತೆಗೆ ಹೇಳುತ್ತ ಬಂದಿದ್ದರೂ, ಈಗ ನೇರವಾಗಿ ಮಿಲಿಟರಿ ಬಳಕೆ ಮಾಡಿರುವುದು ಜಗತ್ತಿನಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ.
ನೇರವಾಗಿ ಯುದ್ಧಕ್ಕಿಳಿದಿರುವ ಟ್ರಂಪ್ ನಡೆಗೆ ಅಮೆರಿಕದಲ್ಲಿಯೇ ವಿರೋಧ ವ್ಯಕ್ತವಾಗಿದೆ. ರಿಪಬ್ಲಿಕನ್ ಕಾಂಗ್ರೆಸ್ ಪಕ್ಷದ ನಾಯಕರು ವಿರೋಧಿಸಿದ್ದು, ಇದು ಅಸಾಂವಿಧಾನಿಕ ನಡೆಯೆಂದು ಟೀಕಿಸಿದ್ದಾರೆ. ಸೆನೆಟರ್ ಜ್ಯಾಕ್ ರೀಡ್ ಅವರು ಪ್ರೆಸಿಡೆಂಟ್ ಟ್ರಂಪ್ ಅತಿ ದೊಡ್ಡ ಗ್ಯಾಂಬ್ಲಿಂಗ್ ಆಡುತ್ತಿದ್ದಾರೆ. ಯಾರಿಗ್ಗೊತ್ತು, ಇದಕ್ಕೆ ಬೆಲೆ ತೆರುವ ದಿನವೂ ಬರಬಹುದು. ಯುದ್ಧ ಆರಂಭಿಸುವುದು ಸುಲಭ, ನಿಲ್ಲಿಸುವುದು ಕಷ್ಟ ಎಂದು ಹೇಳಿದ್ದಾರೆ. ಅಮೆರಿಕದ ವಿದೇಶ ಸಂಬಂಧಗಳ ಕಮಿಟಿಯ ಸದಸ್ಯ ಸೆನೆಟರ್ ಜೀನ್ ಶಹೀನ್, ಟ್ರಂಪ್ ಈ ನಿರ್ಧಾರ ದುರದೃಷ್ಟಕರ ಎಂದಿದ್ದಾರೆ. ವಿಶ್ವಸಂಸ್ಥೆ ಕಾರ್ಯದರ್ಶಿ ಆಂಟೋನಿಯೋ ಗುಟೆರಸ್ ಕೂಡ, ಇದೊಂದು ಅಪಾಯಕಾರಿ ನಿರ್ಧಾರ ಎಂದು ಜರೆದಿದ್ದು, ಅಂತಾರಾಷ್ಟ್ರೀಯ ಶಾಂತಿ ಮತ್ತು ಭದ್ರತೆಗೆ ನೇರ ಕೊಡಲಿಯೇಟು ಕೊಟ್ಟಿದ್ದಾರೆ. ಈ ರೀತಿಯ ನಡೆ ವಿಶ್ವ ಸಮುದಾಯಕ್ಕೆ ದೊಡ್ಡ ಆಪತ್ತಿಗೆ ಕಾರಣವಾದೀತು. ಇದರ ಪರಿಣಾಮ ನಿಯಂತ್ರಣಕ್ಕೆ ಸಿಗದೆ ಹೋಗಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
⚠️ 🚨 AS EXPECTED , TRUMP IS A TERRORIST WHO BOMBED THREE NUCLEAR FACILITIES OF IRAN: NATANZ , FORDO, ISFAHAN. ⚠️ 🚨 WORLD WAR III WILL BE A DEATH TO AMERICA. SHAME ON THE US! ⚠️ 🚨 RUSSIA & SOUTH ASIA ARE CLOSELY OBSERVING ALL DEVELOPMENTS ⚠️ 🚨#WorldWar3 pic.twitter.com/dnfJWsadOe
— Shehryar Sajid Khan (@Sskwrites) June 22, 2025
In a dramatic escalation of the ongoing Israel-Iran conflict, the United States has entered the fray, launching targeted airstrikes on three Iranian nuclear facilities using its advanced B-2 stealth bombers. The strikes mark a significant development in the volatile Middle East region, further heightening global concerns over a possible wider war.
04-10-25 10:54 pm
Bangalore Correspondent
ಸ್ವತಃ ಕಾಂಗ್ರೆಸ್ ನಾಯಕರೇ ಸಿದ್ದು ಯಾವಾಗ ಸಿಎಂ ಪಟ್ಟ...
04-10-25 10:16 pm
ಮಹಾರಾಷ್ಟ್ರದ ಸಮುದ್ರದಲ್ಲಿ ಘೋರ ದುರಂತ ; ಬೆಳಗಾವಿಯ...
04-10-25 09:18 pm
Belagavi Heart Attack, SSLC: ಬೆಳಗಾವಿ ; SSLC ಓ...
04-10-25 07:22 pm
ಐಟಿ ನಗರಿ ಬೆಂಗಳೂರು 'ಸೈಬರ್ ಕ್ರೈಮ್' ಕ್ಯಾಪಿಟಲ್...
03-10-25 06:08 pm
04-10-25 04:45 pm
HK Staffer
Rashmika Mandanna, Vijay Deverakonda Marriage...
04-10-25 03:11 pm
ಕಾಂತಾರ ಬ್ಲಾಕ್ ಬಸ್ಟರ್, ನಾವೆಲ್ಲ ಚಿತ್ರೋದ್ಯಮಿಗಳು...
04-10-25 01:11 pm
ಸರ್ಕಾರಿ ಪ್ರಾಯೋಜಿತ ಭಯೋತ್ಪಾದನೆ ನಿಲ್ಲಿಸದಿದ್ದರೆ ಭ...
03-10-25 09:09 pm
ಮಕ್ಕಳ ವಿಡಿಯೋ ಗೇಮ್ ನಲ್ಲೂ ಸೈಬರ್ ಅಪರಾಧ ; ಶಾಲಾ ಹಂ...
03-10-25 04:50 pm
04-10-25 10:29 pm
Mangalore Correspondent
103ನೇ ವರ್ಷದ ರಥಬೀದಿ 'ಮಂಗಳೂರು ಶಾರದಾ ಮಹೋತ್ಸವ' ಸಂ...
03-10-25 11:07 pm
Puttur Krishna Rao, Baby, Pratibha Kulai: ಕೃಷ...
03-10-25 05:59 pm
Ullal Dasara Issue, Mangalore 2025: ದಸರಾ ಶೋಭಾ...
03-10-25 02:11 pm
ಮಂಗಳೂರಿನಲ್ಲಿ ಗಣತಿ ಕಾರ್ಯಕ್ಕೆ 425 ಮಂದಿ ಗೈರು: ಶಿ...
02-10-25 11:05 pm
05-10-25 03:22 pm
Mangalore Correspondent
Shivamogga Murder, Mother: ಶಿವಮೊಗ್ಗ ; ಮಗಳನ್ನು...
04-10-25 02:57 pm
Karkala Murder, Crime: ಕಾರ್ಕಳ ; ಪ್ರೀತಿಸಿದ ಯುವ...
03-10-25 11:28 pm
ಸುಧಾಮೂರ್ತಿ, ನಿರ್ಮಲಾ ಸೀತಾರಾಮನ್ ಹೆಸರಲ್ಲಿ ಎಐ ವಿಡ...
01-10-25 02:39 pm
Ullal Gold Robbery, Mangalore, CCB police: ಜು...
29-09-25 01:24 pm