ಬ್ರೇಕಿಂಗ್ ನ್ಯೂಸ್
18-06-25 09:54 pm HK News Desk ದೇಶ - ವಿದೇಶ
ನವದೆಹಲಿ, ಜೂನ್ 18 : ಪಾಕಿಸ್ತಾನ ಸೇನಾ ಮುಖ್ಯಸ್ಥ ಅಸೀಮ್ ಮುನೀರ್ ಜೊತೆಗೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಾಶ್ಮೀರ ವಿಚಾರದ ಬಗ್ಗೆ ಚರ್ಚೆ ನಡೆಸಲು ಮುಂದಾಗಿದ್ದಾರೆ. ಅಮೆರಿಕ ಪ್ರವಾಸದಲ್ಲಿರುವ ಅಸೀಮ್ ಮುನೀರ್ ಅವರನ್ನು ಟ್ರಂಪ್ ಭೇಟಿಯಾಗುವುದನ್ಜು ಶ್ವೇತಭವನ ಖಚಿತಪಡಿಸಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪಾಕಿಸ್ತಾನ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಜೊತೆಗೆ ಔತಣ ಕೂಟ ನಡೆಸಲಿದ್ದಾರೆ. ಇಸ್ರೇಲ್- ಇರಾನ್ ಬಿಕ್ಕಟ್ಟಿನ ಮಧ್ಯೆ ಅಮೆರಿಕ ಅಧ್ಯಕ್ಷ ಟ್ರಂಪ್ ಈ ನಡೆ ಚರ್ಚೆಗೆ ಗ್ರಾಸವಾಗಿದೆ.
ದಕ್ಷಿಣ ಏಷ್ಯಾ ವಿಶ್ಲೇಷಕ ಮೈಕೆಲ್ ಕುಗೆಲ್ಮನ್ ಅವರು ಟ್ವಿಟರ್ ಪೋಸ್ಟ್ನಲ್ಲಿ ಈ ಸಭೆಯ ಮಹತ್ವ ವಿವರಿಸಿದ್ದಾರೆ. "ಅಮೆರಿಕದ ಹಿರಿಯ ಅಧಿಕಾರಿಗಳು ಹೆಚ್ಚಾಗಿ ಪಾಕಿಸ್ತಾನಿ ಸೇನಾ ಮುಖ್ಯಸ್ಥರೊಂದಿಗೆ ವ್ಯವಹರಿಸುತ್ತಾರೆ, ಆದರೆ ಅಪರೂಪಕ್ಕೆ ಮಾತ್ರ ಅಮೆರಿಕ ಅಧ್ಯಕ್ಷರು ಶ್ವೇತಭವನದಲ್ಲಿ ಮುನೀರ್ ಜೊತೆ ಮಾತುಕತೆ ನಡೆಸಲಿದ್ದಾರೆ. ಟ್ರಂಪ್ ಅವರೊಂದಿಗಿನ ಮುನೀರ್ ಅವರ ನಿಗದಿತ ಸಭೆ ತುಂಬಾ ಮಹತ್ವದ್ದಾಗಿರಲು ಹಲವು ಕಾರಣಗಳಿವೆ. ವಿಶೇಷವಾಗಿ ಇರಾನ್ ಯುದ್ಧಕ್ಕೆ ಸಂಬಂಧಿಸಿ ಅಮೆರಿಕಾ ಆಯ್ಕೆಗಳನ್ನು ಪರಿಗಣಿಸುವುದರಿಂದ ಈ ಭೇಟಿ ಮಹತ್ವ ಪಡೆದುಕೊಂಡಿದೆ" ಎಂದು ಪೋಸ್ಟ್ ಮಾಡಿದ್ದಾರೆ.
ಟ್ರಂಪ್-ಮುನೀರ್ ಸಭೆಯನ್ನು ಇಸ್ರೇಲ್-ಇರಾನ್ ಯುದ್ಧದ ದೃಷ್ಟಿಯಿಂದ ಮಾತ್ರವೇ ನೋಡಬಾರದು. ಪಾಕಿಸ್ತಾನದಲ್ಲಿನ ಖನಿಜಗಳು, ಕ್ರಿಪ್ಟೋ ಮತ್ತು ಭಯೋತ್ಪಾದನಾ ನಿಗ್ರಹದ ಬಗ್ಗೆ ಯುಎಸ್-ಪಾಕ್ ಸಂಬಂಧಗಳಿವೆ. ಟ್ರಂಪ್ ಈ ಎಲ್ಲದರಲ್ಲೂ ವೈಯಕ್ತಿಕ ಆಸಕ್ತಿ ಹೊಂದಿದ್ದಾರೆ. ಮತ್ತು ಮುನೀರ್ ಈ ಎಲ್ಲದರ ಬಗ್ಗೆ ಮಾತನಾಡಲು ಅಧಿಕಾರ ಹೊಂದಿದ್ದಾರೆ. ಅಲ್ಲದೆ, ಕಾಶ್ಮೀರದ ಬಗ್ಗೆಯೂ ಮಾತನಾಡಲಿದ್ದಾರೆ ಎಂದು ಅವರು ಹೇಳಿದ್ದಾರೆ.
ಅಸೀಮ್ ಮುನೀರ್ ಐದು ದಿನಗಳ ಪ್ರವಾಸಕ್ಕಾಗಿ ಅಮೆರಿಕ ತೆರಳಿದ್ದು ಶ್ವೇತಭವನದಲ್ಲಿ ಟ್ರಂಪ್ ಅವರನ್ನು ಭೇಟಿಯಾಗುತ್ತಿರುವುದು ಪಾಕ್ ಪಾಲಿನ ರಾಜತಾಂತ್ರಿಕ ಹೆಚ್ಚುಗಾರಿಕೆ ಎಂಬ ಮಾತು ಪಾಕಿಸ್ತಾನದಲ್ಲಿ ವ್ಯಕ್ತವಾಗಿದೆ. ಭಾರತವು ಪಾಕ್ ವಿರುದ್ಧ ವಿಶ್ವ ರಾಷ್ಡ್ರಗಳನ್ನು ಒಗ್ಗೂಡಿಸುವ ಪ್ರಯತ್ನ ಮಾಡಿರುವಾಗಲೇ ಟ್ರಂಪ್ ತನ್ನ ಪರವಾಗಿದ್ದಾರೆಂದು ತೀರಿಸಿಕೊಳ್ಳಲು ಅಸೀಮ್ ಮುನೀರ್ ಮುಂದಾಗಿದ್ದಾರೆ. ಮತ್ತೊಂದೆಡೆ ಭಾರತ - ಪಾಕ್ ಮಧ್ಯೆ ಕದನ ವಿರಾಮಕ್ಕೆ ಟ್ರಂಪ್ ಕಾರಣ ಅಲ್ಲ ಎಂದು ಪ್ರಧಾನಿ ಮೋದಿ ಜಿ 7 ಸಭೆಯಲ್ಲಿ ಹೇಳಿದ ಬೆನ್ನಲ್ಲೇ ಟ್ರಂಪ್ ಈ ರೀತಿಯ ಹೊಸ ನಡೆ ಇಟ್ಟಿದ್ದಾರೆ.
On Wednesday in the White House, the kitchen will emit not just aroma of food but strategic signals too. Field Marshal Asim Munir, Pakistan’s army chief and de facto ruler, will sit down for lunch with President Donald Trump. This unusual meeting between a US president and the military commander of a nation with a patchy democratic record signals more than just routine bilateral engagement.
05-03-26 11:42 pm
HK News Desk
ಸಂಘರ್ಷದಿಂದ ಸಮಸ್ಯೆ ಪರಿಹರಿಸಲಾಗದು, ಪಶ್ಚಿಮ ಏಷ್ಯಾ,...
05-03-26 09:40 pm
Lokayukta Raid: 8 ಜಿಲ್ಲೆಗಳಲ್ಲಿ ಲೋಕಾಯುಕ್ತ ದಾಳ...
05-03-26 08:41 pm
ಪಾಠ ಮಾಡುತ್ತಿದ್ದಾಗಲೇ ಹೃದಯಾಘಾತ ; ಮಕ್ಕಳೆದುರೇ ಹಾಸ...
04-03-26 06:47 pm
ಅಡುಗೆ ವಿಚಾರದಲ್ಲಿ ಅತ್ತೆಯೊಂದಿಗೆ ಜಗಳ ಕಾದು ಯುವತಿ...
04-03-26 05:06 pm
05-03-26 08:51 pm
HK News Staffer
ಭಾರತ ಗಡಿಯಿಂದ ಸುಮಾರು 300 ಕಿ.ಮೀ. ದೂರದಲ್ಲೇ ಇರಾನ್...
05-03-26 05:02 pm
ಬಿಹಾರದಲ್ಲಿ ಕ್ಷಿಪ್ರ ರಾಜಕೀಯ ಬದಲಾವಣೆ ; 'ಸುದೀರ್ಘ...
04-03-26 11:13 pm
ಹರ್ಮುಜ್ ಜಲಸಂಧಿ ನಿರ್ಬಂಧ ಉಲ್ಲಂಘಿಸಿದ 10 ತೈಲ ಹಡಗಿ...
04-03-26 10:09 pm
ಇರಾನ್ ಹಡಗು ಸ್ಫೋಟ ಬೆನ್ನಲ್ಲೇ ಅಮೆರಿಕದ ಯುದ್ಧ ನೌಕೆ...
04-03-26 10:03 pm
05-03-26 07:38 pm
HK News Staffer
Dr Nagalakshmi Choudhary, Mangalore: ಸಾಕ್ಷಿಗಳ...
05-03-26 04:36 pm
ಅರಣ್ಯಾಧಿಕಾರಿ ಮನೆಗೆ ಕನ್ನ ಹಾಕಿದ ಕಳ್ಳರು ; ಹೊರಗೆ...
05-03-26 02:34 pm
Aadhaar Card Found, Mangalore: ಫರಂಗಿಪೇಟೆ ನದಿ...
05-03-26 12:42 pm
ತುಳು ಎರಡನೇ ಅಧಿಕೃತ ಭಾಷೆ; ಆಂಧ್ರಪ್ರದೇಶದಲ್ಲಿ ಕೈಗೊ...
04-03-26 09:31 pm
28-02-26 11:12 am
Mangalore Staffer
Mangalore Cybercrime,Fraud, Arrest: ಸ್ನೇಹಿತನಿ...
27-02-26 09:23 pm
Mangalore, Car Street, Fight: ನಡು ರಸ್ತೆಯಲ್ಲಿ...
27-02-26 01:32 pm
Shivamogga Fraud, Police: ಸೈಬರ್ ಅಪರಾಧಕ್ಕೆ ಬಳಸ...
27-02-26 12:34 pm
ಅಮೆರಿಕದ ಷೇರು ಹೆಸರಿನಲ್ಲಿ 1.77 ಕೋಟಿ ರೂ. ಹೂಡಿಕೆ...
26-02-26 11:04 pm