ಬ್ರೇಕಿಂಗ್ ನ್ಯೂಸ್
12-05-25 11:23 am HK News Desk ದೇಶ - ವಿದೇಶ
ನವದೆಹಲಿ, ಮೇ 12 : ಅಮೆರಿಕದ ಮಧ್ಯಸ್ಥಿಕೆಯಿಂದಾಗಿ ಸದ್ಯಕ್ಕೆ ಭಾರತ ಮತ್ತು ಪಾಕಿಸ್ತಾನ ನಡುವೆ ಕದನ ವಿರಾಮ ಘೋಷಣೆಯಾಗಿದೆ. ಆದರೆ ಇದಕ್ಕೂ ಮೊದಲೇ ಭಾರತೀಯ ಸೇನಾಪಡೆ ಪಾಕಿಸ್ತಾನದ ಅನೇಕ ಸೇನಾ ನೆಲೆಗಳನ್ನು ನಾಶ ಮಾಡಿದೆ. ಇದೀಗ ಉತ್ತರ ಪಾಕಿಸ್ತಾನದಲ್ಲಿ ಸ್ವತಂತ್ರ ರಾಷ್ಟ್ಟಕ್ಕಾಗಿ ಹಂಬಲಿಸುತ್ತಿರುವ ಬಲೂಚಿಗರು ತಮ್ಮ ಹೋರಾಟ ತೀವ್ರಗೊಳಿಸಿದ್ದಾರೆ. ಪಾಕಿನ ಸೇನಾ ನೆಲೆ ಗುರಿಯಾಗಿಸಿ ದಾಳಿ ನಡೆಸುತ್ತಿದ್ದು ಬಲೂಚಿಸ್ತಾನ್ ಲಿಬರೇಶನ್ ಆರ್ಮಿ ಕಳೆದೊಂದು ವಾರದಲ್ಲಿ ಪಾಕಿಸ್ತಾನಿ ಸೇನೆ ಮತ್ತು ಪೊಲೀಸರಿಗೆ 39 ಕ್ಯಾಂಪ್ ಗಳನ್ನು ಧ್ವಂಸ ಮಾಡಿದ್ದಾರೆ.
ಮಾಹಿತಿ ಪ್ರಕಾರ, ಮೇ 8ರಿಂದ ಬಲೂಚಿಸ್ತಾನದಲ್ಲಿ ದಾಳಿ ತೀವ್ರತೆ ಹೆಚ್ಚಿದ್ದು ಪಾಕಿಸ್ತಾನದ ಕ್ವೆಟ್ಟಾ, ಕೆಚ್, ಪಂಜ್‌ಗುರ್, ನುಷ್ಕಿ, ಖುಜ್ದಾರ್ ಮತ್ತು ಇತರ ಜಿಲ್ಲೆಗಳಲ್ಲಿ 56 ಕ್ಕೂ ಹೆಚ್ಚು ದಾಳಿ ಘಟನೆಗಳಾಗಿವೆ. ಉತ್ತರ ಭಾಗದಲ್ಲಿ ಪ್ರತ್ಯೇಕ ಬಲೂಚಿಸ್ತಾನ್ ದೇಶ ಮಾಡುವುದಕ್ಕಾಗಿ ಬಂಡುಕೋರ ಗುಂಪು ಪಾಕಿಸ್ತಾನ ಸರ್ಕಾರದ ವಿರುದ್ಧ ಹೋರಾಡುತ್ತಿದೆ. ಕಳೆದ ಕೆಲವು ತಿಂಗಳುಗಳಲ್ಲಿ ಕಾರ್ಯಾಚರಣೆ ತೀವ್ರಗೊಳಿಸಿದ್ದು 39 ಪಾಕಿಸ್ತಾನಿ ಮಿಲಿಟರಿ ಮತ್ತು ಪೊಲೀಸ್ ನೆಲೆಗಳ ಮೇಲೆ ದಾಳಿ ಮಾಡಲು ಮುಂದಾಗಿದೆ. ಒಂದೆಡೆ ಭಾರತದ ದಾಳಿ, ಮತ್ತೊಂದೆಡೆ ಬಲೂಚಿಗರ ದಾಳಿಯಿಂದಾಗಿ ಪಾಕ್ ಸೇನಾ ಪಡೆ ಧೃತಿಗೆಟ್ಟಿದೆ. ಶತ್ರುವಿನ ಶಕ್ತಿ ಉಡುಗಿದಾಗಲೇ ಕಾರ್ಯ ಸಾಧನೆ ಮಾಡಬೇಕು ಎನ್ನುವ ತಂತ್ರದೊಂದಿಗೆ ಕಾರ್ಯಾಚರಣೆ ಮುಂದುವರಿಸಲಾಗುವುದು ಎಂದು ಲಿಬರೇಶನ್ ಆರ್ಮಿ ಹೇಳಿಕೆಯಲ್ಲಿ ತಿಳಿಸಿದೆ.
ಬಿಎಲ್‌ಎ ವಕ್ತಾರ ಜಿಯಾಂಡ್ ಬಲೂತ್ ಸುದ್ದಿ ಸಂಸ್ಥೆ ಎಎನ್‌ಐ ಜೊತೆ ಮಾತನಾಡಿದ್ದು, ಬಿಎಲ್‌ಎ ನಡೆಸಿದ ಇತ್ತೀಚಿನ ದಾಳಿಗಳು ಸ್ಥಳೀಯ ಪೊಲೀಸ್ ಠಾಣೆಗಳು, ಮಿಲಿಟರಿ ಬೆಂಗಾವಲು ಪಡೆಗಳು ಮತ್ತು ಪ್ರಮುಖ ಹೆದ್ದಾರಿಗಳಲ್ಲಿ ದಿಗ್ಬಂಧನಗಳು ಸೇರಿದಂತೆ ಮೂಲ ಸೌಕರ್ಯಗಳನ್ನು ಗುರಿಯಾಗಿಸಿದ್ದವು ಎಂದು ಹೇಳಿದ್ದಾರೆ. ಪಂಜ್‌ಗುರ್ ಮತ್ತು ಹೋಶಬ್ ಪ್ರದೇಶದಲ್ಲಿ ಬಲೂಚ್ ಲಿಬರೇಶನ್ ಆರ್ಮಿ ಸೈನಿಕರು ಪೊಲೀಸ್ ಠಾಣೆಗಳು ಸೇರಿದಂತೆ ಸರ್ಕಾರಿ ಕಟ್ಟಡಗಳನ್ನು ವಶಪಡಿಸಿದ್ದು ಪೊಲೀಸರ ಶಸ್ತ್ರಾಸ್ತ್ರಗಳನ್ನು ವಶಪಡಿಸಿದ್ದಾರೆ. ಪಾಕಿಸ್ತಾನಿ ಪೊಲೀಸರು ಪ್ರತಿ ದಾಳಿ ನಡೆಸಿ ವೃದ್ಧ ಬಲೂಚ್ ಕಾರ್ಯಕರ್ತರನ್ನು ಬಂಧಿಸಿದ್ದಾರೆ.
ತಾರತಮ್ಯ, ಆರ್ಥಿಕ ಶೋಷಣೆ ಮತ್ತು ಮಿಲಿಟರಿ ದಬ್ಬಾಳಿಕೆ ನಡೆಯುತ್ತಿದೆ ಎಂದು ಆರೋಪಿಸಿ ಬಲೂಚಿಗಳು ಹಿಂದಿನಿಂದಲೂ ಪ್ರತ್ಯೇಕತೆ ಬಯಸುತ್ತಿದ್ದಾರೆ. ಸ್ವತಂತ್ರ ಬಲೂಚಿಸ್ತಾನದ ಬೇಡಿಕೆ ಇರಿಸಿ ಹೋರಾಟ ನಡೆಸುತ್ತಿದ್ದಾರೆ. ಇತ್ತ ಭಾರತದಿಂದಲೂ ಪಾಕ್ ಮೇಲೆ ದಾಳಿ ಆಗಿರುವುದರಿಂದ ಬಲೂಚಿಗಳು ತಮ್ಮ ಹೋರಾಟ ತೀವ್ರಗೊಳಿಸಿದ್ದಾರೆ. ಸರ್ಕಾರಿ ಕಟ್ಟಡಗಳ ಮೇಲೆ ಬಲೂಚಿ ಬಾವುಟ ಹಾರಿಸುತ್ತಿದ್ದಾರೆ. ಇದರಿಂದ ಪಾಕಿಸ್ತಾನ ಮತ್ತೆ ವಿಭಜನೆ ಆಗುತ್ತಾ ಎನ್ನುವ ಆತಂಕ ಅಲ್ಲಿನ ಜನರಿಗಿದೆ.
In a press statement, the group stated that the operations are still underway and aim to achieve several strategic goals. The BLA’s recent activities signal a sharp escalation in its long-running demand for autonomy and control of local resources in Balochistan.
05-10-25 09:41 pm
HK News Desk
ನಾಯಿ ದಾಳಿಗೆ ಸ್ಥಳೀಯರ ಆಕ್ರೋಶ ; ಬೀದಿ ನಾಯಿಗಳ ಮೇಲೆ...
05-10-25 08:08 pm
ಲಿಂಗಾಯತರನ್ನು ಪ್ರತ್ಯೇಕಿಸುವುದು ಸಮಾಜ ವಿರೋಧಿ ಕೆಲಸ...
05-10-25 07:57 pm
ಬಿಹಾರ ಚುನಾವಣೆ ಬಳಿಕ ರಾಜ್ಯದಲ್ಲಿ ರಾಜಕೀಯ ಕ್ರಾಂತಿ...
05-10-25 07:38 pm
ಜಾತಿ ಗಣತಿ ತೆರಳಿದ್ದ ಶಿಕ್ಷಕಿ ಮತ್ತು ಪತಿಗೆ ಅಟ್ಟಾಡ...
05-10-25 07:18 pm
04-10-25 04:45 pm
HK Staffer
Rashmika Mandanna, Vijay Deverakonda Marriage...
04-10-25 03:11 pm
ಕಾಂತಾರ ಬ್ಲಾಕ್ ಬಸ್ಟರ್, ನಾವೆಲ್ಲ ಚಿತ್ರೋದ್ಯಮಿಗಳು...
04-10-25 01:11 pm
ಸರ್ಕಾರಿ ಪ್ರಾಯೋಜಿತ ಭಯೋತ್ಪಾದನೆ ನಿಲ್ಲಿಸದಿದ್ದರೆ ಭ...
03-10-25 09:09 pm
ಮಕ್ಕಳ ವಿಡಿಯೋ ಗೇಮ್ ನಲ್ಲೂ ಸೈಬರ್ ಅಪರಾಧ ; ಶಾಲಾ ಹಂ...
03-10-25 04:50 pm
04-10-25 10:29 pm
Mangalore Correspondent
103ನೇ ವರ್ಷದ ರಥಬೀದಿ 'ಮಂಗಳೂರು ಶಾರದಾ ಮಹೋತ್ಸವ' ಸಂ...
03-10-25 11:07 pm
Puttur Krishna Rao, Baby, Pratibha Kulai: ಕೃಷ...
03-10-25 05:59 pm
Ullal Dasara Issue, Mangalore 2025: ದಸರಾ ಶೋಭಾ...
03-10-25 02:11 pm
ಮಂಗಳೂರಿನಲ್ಲಿ ಗಣತಿ ಕಾರ್ಯಕ್ಕೆ 425 ಮಂದಿ ಗೈರು: ಶಿ...
02-10-25 11:05 pm
05-10-25 03:22 pm
Mangalore Correspondent
Shivamogga Murder, Mother: ಶಿವಮೊಗ್ಗ ; ಮಗಳನ್ನು...
04-10-25 02:57 pm
Karkala Murder, Crime: ಕಾರ್ಕಳ ; ಪ್ರೀತಿಸಿದ ಯುವ...
03-10-25 11:28 pm
ಸುಧಾಮೂರ್ತಿ, ನಿರ್ಮಲಾ ಸೀತಾರಾಮನ್ ಹೆಸರಲ್ಲಿ ಎಐ ವಿಡ...
01-10-25 02:39 pm
Ullal Gold Robbery, Mangalore, CCB police: ಜು...
29-09-25 01:24 pm