ಭಾರತದ ಮೇಲೆ ದಾಳಿಗೆ ಟರ್ಕಿ ಡ್ರೋಣ್ ಬಳಕೆ ; ಒಂದೇ ರಾತ್ರಿ ಹಾರಾಡಿದ್ದವು 300ಕ್ಕೂ ಹೆಚ್ಚು ಡ್ರೋಣ್, ಪಾಕ್ ನೆರವಿಗೆ ನಿಂತ ಟರ್ಕಿ, ಅಜರ್ ಬೈಜಾನ್ ವಿರುದ್ಧ ಅಭಿಯಾನ, ಭಾರತೀಯರ ಪ್ರವಾಸಿ ಪ್ಯಾಕೇಜ್ ರದ್ದು, ವ್ಯಾಪಾರ ಸಂಬಂಧ ಮುರಿಯಲು ಆಗ್ರಹ 

11-05-25 06:25 pm       HK News Desk   ದೇಶ - ವಿದೇಶ

ಭಾರತ- ಪಾಕಿಸ್ತಾನ ಮಧ್ಯೆ ಸಂಘರ್ಷ ಏರ್ಪಟ್ಟಿರುವ ಮಧ್ಯೆ ಟರ್ಕಿ ಮತ್ತು ಅಜರ್ ಬೈಜಾನ್ ದೇಶಗಳು ಪಾಕಿಸ್ತಾನಕ್ಕೆ ಸೇನಾ ನೆರವು ನೀಡಿದ್ದಕ್ಕೆ ಭಾರತೀಯರಲ್ಲಿ ಆಕ್ರೋಶ ಉಂಟಾಗಿದೆ. ಈ ಎರಡು ದೇಶಗಳೊಂದಿಗೆ ಭಾರತವು ಟೂರಿಸಂ, ಆಯಿಲ್ ಉದ್ಯಮ ಸೇರಿದಂತೆ ಅನೇಕ ವಿಷಯಗಳಲ್ಲಿ ಸಂಬಂಧ ಹೊಂದಿದ್ದು, ಇದಕ್ಕೆಲ್ಲ ಈಗ ಕಡಿವಾಣ ಬೀಳಲಿದೆ.

ನವದೆಹಲಿ, ಮೇ 11 : ಭಾರತ- ಪಾಕಿಸ್ತಾನ ಮಧ್ಯೆ ಸಂಘರ್ಷ ಏರ್ಪಟ್ಟಿರುವ ಮಧ್ಯೆ ಟರ್ಕಿ ಮತ್ತು ಅಜರ್ ಬೈಜಾನ್ ದೇಶಗಳು ಪಾಕಿಸ್ತಾನಕ್ಕೆ ಸೇನಾ ನೆರವು ನೀಡಿದ್ದಕ್ಕೆ ಭಾರತೀಯರಲ್ಲಿ ಆಕ್ರೋಶ ಉಂಟಾಗಿದೆ. ಈ ಎರಡು ದೇಶಗಳೊಂದಿಗೆ ಭಾರತವು ಟೂರಿಸಂ, ಆಯಿಲ್ ಉದ್ಯಮ ಸೇರಿದಂತೆ ಅನೇಕ ವಿಷಯಗಳಲ್ಲಿ ಸಂಬಂಧ ಹೊಂದಿದ್ದು, ಇದಕ್ಕೆಲ್ಲ ಈಗ ಕಡಿವಾಣ ಬೀಳಲಿದೆ.

ಭಾರತದ ಪ್ರಮುಖ ಟ್ರಾವೆಲ್ ಏಜನ್ಸಿಗಳಾದ EaseMyTrip ಮತ್ತು Cox & Kings ಕಂಪನಿಗಳು ಟರ್ಕಿ ಮತ್ತು ಅಜರ್ ಬೈಜಾನಿಗೆ ತೆರಳುವ ಎಲ್ಲ ಪ್ಯಾಕೇಜ್ ಗಳನ್ನು ರದ್ದುಪಡಿಸಿದೆ. ಭಾರತವು ಭಯೋತ್ಪಾದಕರ ವಿರುದ್ಧ ಪಾಕಿಸ್ತಾನದ ಉಗ್ರವಾದಿ ನೆಲೆಗಳ ಮೇಲೆ ಸೇನಾ ಕಾರ್ಯಾಚರಣೆ ನಡೆಸಿದ್ದಕ್ಕೆ ಪ್ರತಿಯಾಗಿ ಟರ್ಕಿ, ಅಜರ್ ಬೈಜಾನ್ ದೇಶಗಳು ಪಾಕ್ ಪರವಾಗಿ ನಿಂತಿದ್ದಲ್ಲದೆ, ಸೇನಾ ನೆರವು ಘೋಷಿಸಿತ್ತು. Travomint ಕಂಪನಿಯವರೂ ಈ ದೇಶಗಳಿಗೆ ಪ್ರವಾಸ ಪ್ಯಾಕೇಜ್ ಗಳನ್ನು ರದ್ದುಪಡಿಸಿದ್ದು, ಪ್ರವಾಸಿಗರು ಈ ದೇಶಕ್ಕೆ ತೆರಳದಂತೆ ಕೇಳಿಕೊಂಡಿದ್ದಾರೆ.

EaseMyTrip, Cox & Kings and Travomint Suspend All Bookings to Turkey and  Azerbaijan Over Support for Pakistan After 'Operation Sindoor' | 📰 LatestLY

ಮಾಹಿತಿ ಪ್ರಕಾರ, ಭಾರತ ಕಡೆಯ ಟೂರಿಸಂ ಪ್ಯಾಕೇಜಿನದ್ದೇ ದೊಡ್ಡ ವಹಿವಾಟು. ಟರ್ಕಿ ಮತ್ತು ಅಜರ್ ಬೈಜಾನ್ ದೇಶಗಳಿಗೆ ವಾರ್ಷಿಕ ಭಾರತದಿಂದ 12 ಬಿಲಿಯನ್ ಡಾಲರ್ ಮೊತ್ತದ ಟೂರಿಸಂ ವಹಿವಾಟು ಆಗುತ್ತದಂತೆ. ವಿದೇಶಾಂಗ ಇಲಾಖೆಯ ಮೂಲಗಳ ಪ್ರಕಾರ, ಅಜರ್ ಬೈಜಾನ್ ಪಾಲಿಗೆ ಕಚ್ಚಾ ತೈಲ ಖರೀದಿ ದೇಶಗಳ ಪೈಕಿ ಭಾರತ ಮೂರನೇ ಅತಿದೊಡ್ಡದು. ಈ ದೇಶದೊಂದಿಗೆ ಭಾರತದ ಬಾಂಧವ್ಯ ಮೊದಲಿನಿಂದಲೂ ಗಟ್ಟಿಯಾಗಿತ್ತು. ಇಂಧನ ಸೇರಿದಂತೆ ಇನ್ನಿತರ ಉಭಯ ದೇಶಗಳ ರಫ್ತು- ಆಮದು ವಹಿವಾಟಿನಲ್ಲಿ 2005ರಲ್ಲಿ 50 ಮಿಲಿಯನ್ ಡಾಲರ್ ಇದ್ದುದು 2023ರ ವೇಳೆಗೆ 1.435 ಬಿಲಿಯನ್ ಡಾಲರ್ ನಷ್ಟು ಏರಿಕೆಯಾಗಿತ್ತು.

Pakistan Uses Turkish-Made SONGAR Drones To Attack India | All You Need To  Know About Lethal Weapon

ಭಾರತ ವಿರುದ್ಧ ಟರ್ಕಿ ಡ್ರೋಣ್ ಬಳಕೆ  

ಮೇ 8ರ ರಾತ್ರಿ ಭಾರತವು ಪೂರ್ವೋತ್ತರ ಮತ್ತು ಪಶ್ಚಿಮ ಗಡಿಭಾಗದಲ್ಲಿ ಲೆಕ್ಕವಿಲ್ಲದಷ್ಟು ಡ್ರೋಣ್ ದಾಳಿಯನ್ನು ಎದುರಿಸಿತ್ತು. ಏಕಕಾಲದಲ್ಲಿ 300ರಿಂದ 400ರಷ್ಟು ಮಾನವ ರಹಿತ ಡ್ರೋಣ್ ಗಳ ಹಾರಾಟವು ಪಾಕಿಸ್ತಾನ ಗಡಿಭಾಗದ 36 ಕಡೆಗಳಲ್ಲಿ ಕಂಡುಬಂದಿದ್ದವು. ಉತ್ತರದ ಲೇಹ್ ನಿಂದ ತೊಡಗಿ ಪಾಕಿಸ್ತಾನದ ಕೊನೆಯ ತೀರ ಸರ್ ಕ್ರೀಕ್ ವರೆಗೂ ಈ ರೀತಿಯ ಡ್ರೋಣ್ ದಾಳಿಯಾಗಿತ್ತು. ವಹುತೇಕ ಇವನ್ನು ಹೊಡೆದುರುಳಿಸಿದ ಬಳಿಕ ಭಾರತೀಯ ವಾಯುಪಡೆ ಅಧಿಕಾರಿಗಳು ಈ ಡ್ರೋಣ್ ಗಳನ್ನು ಟರ್ಕಿಯ ರಕ್ಷಣಾ ಇಲಾಖೆಯಿಂದ ತಯಾರಿಸಲಾಗಿತ್ತು ಎಂಬುದನ್ನು ಪತ್ತೆ ಮಾಡಿದೆ. ಪ್ರಾಥಮಿಕ ಮಾಹಿತಿ ಪ್ರಕಾರ, ಇವು ಟರ್ಕಿಯ ಅಸಿಸ್ ಗಾರ್ಡ್ ಕಂಪನಿಯಿಂದ ತಯಾರಿಸಲ್ಪಟ್ಟ ಸೋಂಗಾರ್ ಶಸ್ತ್ರಸಹಿತ ಡ್ರೋಣ್ ಗಳೆಂದು ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಹೇಳಿದ್ದರು.

Flight Op at Karachi Airport suspended until midnight: PCAA

ಕರಾಚಿಗೆ ಬಂದಿತ್ತು ಗ್ರೆನೇಡ್ ಸಹಿತ ಡ್ರೋಣ್

ಎಪ್ರಿಲ್ 27ರಂದು ಟರ್ಕಿಯ ಸಿ-130 ಹರ್ಕ್ಯುಲಸ್ ಮಿಲಿಟರಿ ಏರ್ ಕ್ರಾಫ್ಟ್ ಕರಾಚಿ ಏರ್ಪೋರ್ಟ್ ಬಂದಿಳಿದಿತ್ತು. ಅದರಲ್ಲಿ ಭಾರೀ ಪ್ರಮಾಣದಲ್ಲಿ ಗ್ರೆನೇಡ್ ಬಳಸಬಲ್ಲ ಡ್ರೋಣ್ ಗಳನ್ನು ಟರ್ಕಿ ಕಳುಹಿಸಿಕೊಟ್ಟಿತ್ತು ಮತ್ತು ಅದೇ ಡ್ರೋಣ್ ಗಳನ್ನು ಭಾರತದ ವಿರುದ್ಧ ಬಳಸಲಾಗಿತ್ತು ಎಂದು ವಾಯುಪಡೆ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಇದಲ್ಲದೆ, ಟರ್ಕಿಯ ಉನ್ನತ ದರ್ಜೆಯ ಮಿಲಿಟರಿ ಅಧಿಕಾರಿ ಲೆ.ಜನರಲ್ ಯಾಸರ್ ಕಾಡಿಯೊಗ್ಲು ಮೂರು ದಿನಗಳ ನಂತರ ಪಾಕಿಸ್ತಾನ ವಾಯುಪಡೆ ಪ್ರಧಾನ ಕಚೇರಿಗೆ ಭೇಟಿ ನೀಡಿದ್ದು, ಶಸ್ತ್ರಾಸ್ತ್ರಗಳ ಬಗ್ಗೆ ಮಾಹಿತಿ ನೀಡಿದ್ದರು. ಈ ಬೆಳವಣಿಗೆಯು ಟರ್ಕಿ- ಪಾಕ್ ಸಂಬಂಧ ಬಲಗೊಂಡಿದ್ದಲ್ಲದೆ, ಸೇನಾ ಮೈತ್ರಿ ಏರ್ಪಟ್ಟಿದ್ದ ಸೂಚನೆಯಾಗಿತ್ತು.

Indian booking platforms halt new travel offerings to Turkey, Azerbaijan

ಈ ಹಿನ್ನೆಲೆಯಲ್ಲಿ ಪಾಕಿಸ್ತಾನಕ್ಕೆ ನೆರವು ನೀಡಿರುವ ಚೀನಾ, ಟರ್ಕಿ, ಅಜರ್ ಬೈಜಾನ್ ದೇಶಗಳೊಂದಿಗೆ ಭಾರತವು ಎಲ್ಲ ರೀತಿಯ ವ್ಯಾಪಾರ ಸಂಬಂಧಗಳನ್ನು ಕಡಿದುಕೊಳ್ಳಬೇಕು ಎನ್ನುವ ಆಗ್ರಹ ಕೇಳಿಬಂದಿದೆ. ಜಾಲತಾಣದಲ್ಲಿ ಟರ್ಕಿಗೆ ಬುದ್ಧಿ ಕಲಿಸಬೇಕು ಎನ್ನುವ ವಾದವೂ ಇದೆ. ಆದರೆ ಈ ಬಗ್ಗೆ ಭಾರತ ಸರಕಾರವು ಯಾವುದೇ ರೀತಿಯ ಅಧಿಕೃತ ಮಾಹಿತಿಗಳನ್ನು ನೀಡಿಲ್ಲ. ಟರ್ಕಿ, ಅಜರ್ ಬೈಜಾನ್ ಕಡೆಯಿಂದ ಮುಂಬೈ ಮತ್ತು ದೆಹಲಿಗೆ ನೇರ ವಿಮಾನ ಸಂಚಾರ ಇದೆ. ಭಾರತ- ಚೀನಾ ಮಧ್ಯೆ ನೇರ ವಿಮಾನ ಸಂಚಾರ ಸದ್ಯಕ್ಕೆ ಇಲ್ಲ.

Amid India-Pakistan “low-intensity” conflict, Turkey and China provided more than weapons support to Islamabad. Both Beijing and Ankara also joined the information war on Pakistan’s side, spreading and providing a global reach to the Pakistan Army’s disinformation campaign.