ಬ್ರೇಕಿಂಗ್ ನ್ಯೂಸ್
07-05-25 10:28 pm HK News Desk ದೇಶ - ವಿದೇಶ
ನವದೆಹಲಿ, ಮೇ 7 : ಪಾಕಿಸ್ತಾನದ ಉಗ್ರವಾದಿ ಶಿಬಿರಗಳ ಮೇಲೆ ಭಾರತೀಯ ಸೇನೆ ಏರ್ ಸ್ಟ್ರೈಕ್ ಮಾಡಿರುವ ಬಗ್ಗೆ ವಾಯುಪಡೆಯ ಇಬ್ಬರು ಮಹಿಳಾ ಅಧಿಕಾರಿಗಳು ಮಾಧ್ಯಮಕ್ಕೆ ಅಧಿಕೃತ ಮಾಹಿತಿ ಹಂಚಿಕೊಂಡಿದ್ದಾರೆ. ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಮತ್ತು ಕರ್ನಲ್ ಸೊಫಿಯಾ ಖುರೇಶಿ, ಪಿಓಕೆ ಮತ್ತು ಪಾಕಿಸ್ತಾನದ ಒಳಗಿನ 9 ಪ್ರದೇಶಗಳಲ್ಲಿ ದಾಳಿ ನಡೆಸಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.
ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ತಮ್ಮ ಪತಿಯರನ್ನು ಕಳಕೊಂಡ ಮಹಿಳೆಯರಿಗೆ ಗೌರವ ನೀಡುವ ಸಲುವಾಗಿ ಭಾರತೀಯ ಸೇನೆ ನಡೆಸಿದ ಈ ದಾಳಿಗೆ ಆಪರೇಶನ್ ಸಿಂಧೂರ ಎಂದು ಹೆಸರಿಸಲಾಗಿತ್ತು. ಮಹಿಳೆಯರ ಸಿಂಧೂರ ಅಳಿಸಿದವರಿಗೆ ತಕ್ಕ ಉತ್ತರ ನೀಡಿದ್ದೇವೆ ಇದರ ಅರ್ಥವಾಗಿತ್ತು. ಪಹಲ್ಗಾಮ್ ದಾಳಿಯಲ್ಲಿ ಒಬ್ಬ ನೇಪಾಳಿ ಪ್ರಜೆ ಸೇರಿ 26 ಮಂದಿ ಮಡಿದಿದ್ದರು. ಸಾವನ್ನಪ್ಪಿದವರೆಲ್ಲ ಪುರುಷರೇ ಆಗಿದ್ದರು. ಪ್ರಧಾನಿ ಮೋದಿಯವರೇ ಆಪರೇಶನ್ ಸಿಂಧೂರ ಹೆಸರನ್ನು ಸೂಚಿಸಿದ್ದು, ಇಡೀ ಜಗತ್ತಿನಲ್ಲಿ ಆಕರ್ಷಣೆಗೆ ಕಾರಣವಾಗಿದೆ. ನಿನ್ನೆ ರಾತ್ರಿಯಿಡೀ ಮೋದಿ ನಿದ್ದೆ ಮಾಡದೆ ದಾಳಿ ಬಗ್ಗೆ ಸ್ವತಃ ನಿಗಾ ಇಟ್ಟಿದ್ದರು. ಸಿಂಧೂರ ಅಳಿಸಿದ ಉಗ್ರರ ಹುಟ್ಟಗಿಸಿದ್ದ ಬಗ್ಗೆ ಮಾಹಿತಿ ಹಂಚಿಕೊಳ್ಳುವುದಕ್ಕೂ ಮಹಿಳಾ ಅಧಿಕಾರಿಗಳನ್ನೇ ನೇಮಿಸಲಾಗಿತ್ತು.





ದಾಳಿ ಸಂದರ್ಭದಲ್ಲಿ ಪಾಕಿಸ್ತಾನದ ಮಿಲಿಟರಿಯನ್ನು ಗುರಿಯಾಗಿಸಿಲ್ಲ. ಕೇವಲ ಉಗ್ರವಾದಿ ಶಿಬಿರಗಳನ್ನಷ್ಟೇ ಟಾರ್ಗೆಟ್ ಮಾಡಿ ಹೊಡೆಯಲಾಗಿತ್ತು. ಖಚಿತ ಮಾಹಿತಿ ಆಧರಿಸಿ ಗಡಿಯಲ್ಲಿ ಉಗ್ರ ಕೃತ್ಯಗಳನ್ನು ನಡೆಸುತ್ತಿರುವ ಉಗ್ರವಾದಿ ಸಂಘಟನೆಗಳ ನೆಲೆಗಳನ್ನು ಗುರಿಯಾಗಿಸಿ 9 ಕಡೆ ದಾಳಿ ನಡೆಸಲಾಗಿದೆ ಎಂದು ಕರ್ನಲ್ ಸೂಫಿಯಾ ಖುರೇಷಿ ಹೇಳಿದ್ದಾರೆ. ಉಗ್ರವಾದಿ ಕೃತ್ಯಗಳಿಗೆ ಸೂಕ್ತ ಪ್ರತ್ಯುತ್ತರ ನೀಡುತ್ತೇವೆ ಎನ್ನುವುದನ್ನು ಭಾರತೀಯ ಸೇನೆ ತೋರಿಸಿಕೊಟ್ಟಿದೆ. ಪಾಕಿಸ್ತಾನ ಕಡೆಯಿಂದ ಆಗುವ ಯಾವುದೇ ರೀತಿಯ ದಾಳಿಯನ್ನೂ ಎದುರಿಸಲು ಸೇನೆ ಸರ್ವ ಸನ್ನದ್ಧವಾಗಿದೆ ಎಂದು ವ್ಯೋಮಿಕಾ ಸಿಂಗ್ ಹೇಳಿದರು.
ಮಧ್ಯರಾತ್ರಿ 1.05ರಿಂದ ತೊಡಗಿ 25 ನಿಮಿಷಗಳ ಕಾಲ ಸೇನಾ ಕಾರ್ಯಾಚರಣೆ ನಡೆದಿತ್ತು. ಒಂಬತ್ತು ಪ್ರದೇಶಗಳಲ್ಲಿ 24 ಕ್ಷಿಪಣಿಗಳನ್ನು ಎಸೆಯಲಾಗಿತ್ತು. ದಾಳಿ ವೇಳೆ 70 ಉಗ್ರರು ಮಡಿದಿದ್ದು, 60ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆಂದು ಸೇನಾ ಮೂಲಗಳು ತಿಳಿಸಿವೆ. ಪಿಓಕೆ ಆಡಳಿತ ಕೇಂದ್ರ ಮುಜಾಫರಾಬಾದ್, ಕೋಟ್ಲಿ, ಬಹವಾಲ್ಪುರ, ರಾವಲ್ಕೋಟ್, ಚಕ್ ಸ್ವಾರಿ, ಭೀಂಬರ್, ನೀಲಂ ವ್ಯಾಲಿ, ಜೀಲಂ, ಚಕ್ವಾ ಎನ್ನುವ ಜಾಗಗಳ ಮೇಲೆ ಬಾಂಬ್ ದಾಳಿ ಮಾಡಲಾಗಿದೆ.
ಯಾರಿವರು ಮಹಿಳಾ ಅಧಿಕಾರಿಗಳು?
ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ವಾಯುಪಡೆಯಲ್ಲಿ ಹೆಲಿಕಾಪ್ಟರ್ ಪೈಲಟ್ ಆಗಿದ್ದಾರೆ. ಎನ್ ಸಿಸಿ ಮೂಲಕ ವಿದ್ಯಾರ್ಥಿ ಜೀವನ, ಆಬಳಿಕ ಇಂಜಿನಿಯರಿಂಗ್ ಪೂರೈಸಿ ವಾಯುಪಡೆಗೆ ಸೇರಿದ್ದರು. ವಾಯುಪಡೆಯಲ್ಲಿ ಅತ್ಯಾಧುನಿಕ ಎನ್ನಲಾದ ಚೇತಕ್ ಮತ್ತು ಚೀತಾ ಹೆಲಿಕಾಪ್ಟರನ್ನು ಜಮ್ಮು ಕಾಶ್ಮೀರ, ಈಶಾನ್ಯ ರಾಜ್ಯಗಳ ಅತಿ ಎತ್ತರದ ಶಿಖರ ಪ್ರದೇಶಗಳಲ್ಲಿ ಮುನ್ನಡೆಸಿದ ಅನುಭವ ಹೊಂದಿದ್ದಾರೆ. ಪ್ರಮುಖ ರಕ್ಷಣಾ ಕಾರ್ಯಾಚರಣೆಗಳಲ್ಲೂ ವ್ಯೋಮಿಕಾ ಸಿಂಗ್ ಪಾಲ್ಗೊಂಡಿದ್ದಾರೆ.
ಕರ್ನಲ್ ಸೊಫಿಯಾ ಖುರೇಷಿ ಭೂಸೇನೆಯಲ್ಲಿ ಕರ್ತವ್ಯದಲ್ಲಿದ್ದು, ಪುಣೆಯಲ್ಲಿ ನಡೆದ ಹಲವು ದೇಶಗಳು ಪಾಲ್ಗೊಂಡಿದ್ದ ಸೇನಾ ಅಭ್ಯಾಸ ಶಿಬಿರದಲ್ಲಿ ಭಾರತೀಯ ಪಡೆಯನ್ನು ಮುನ್ನಡೆಸಿದ್ದರು. ಭಾರತೀಯ ನೆಲದಲ್ಲಿ ನಡೆಸಿದ ಅತಿ ದೊಡ್ಡ ಮಿಲಿಟರಿ ಅಭ್ಯಾಸ ಇದಾಗಿತ್ತು.
India's briefing on 'Operation Sindoor' today gave a strong and significant message as two women officers - Wing Commander Vyomika Singh and Colonel Sofiya Qureshi - took the lead, sharing details of the military's precision strikes on terror targets in Pakistan in response to the April 22 Pahalagam terror attack in which 26 people died.
10-01-26 10:28 pm
HK News Desk
"ಡ್ಯಾಡಿ ಈಸ್ ಹೋಮ್" ಎಐ ವಿಡಿಯೋ ರಿಲೀಸ್ ; ರಾಜ್ಯ ರಾ...
10-01-26 04:29 pm
ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಅಡ್ಡ ನಿಂತ ಒಂಟಿ ಸಲಗ...
10-01-26 03:00 pm
Purushottam Bilimale, Legal Battle Against Ma...
10-01-26 01:17 pm
ಮಲಯಾಳ ಭಾಷಾ ಮಸೂದೆಯಿಂದ ಕಾಸರಗೋಡು ಕನ್ನಡಿಗರಿಗೆ ಧಕ್...
09-01-26 04:42 pm
12-01-26 05:01 pm
Mangaluru Staffer
ಎಕ್ಸ್ ನಲ್ಲಿ ಅಶ್ಲೀಲ ಕಂಟೆಂಟ್ ; ಐಟಿ ಸಚಿವಾಲಯದ ಒತ್...
11-01-26 06:07 pm
ವೆನಿಜುವೆಲಾ ತೈಲದ ನಿಯಂತ್ರಣಕ್ಕೆ ಮುಂದಾದ ಅಮೆರಿಕ ;...
10-01-26 03:22 pm
ಶಬರಿಮಲೆ ಚಿನ್ನ ಕಳವು ಪ್ರಕರಣ ; ಪ್ರಧಾನ ತಂತ್ರಿ ಕಂಠ...
09-01-26 11:00 pm
ಟ್ರಂಪ್ ಕೈಗಳು ಸಾವಿರಾರು ಇರಾನಿಗರ ರಕ್ತದಿಂದ ಒದ್ದೆಯ...
09-01-26 08:30 pm
11-01-26 10:39 pm
Mangaluru Staffer
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
ಅಮೆರಿಕ ಬಿಟ್ಟು ಚೀನಾ ಜೊತೆಗೆ ಬಾಂಧವ್ಯ ಬೆಳೆಸಬೇಕಿದೆ...
11-01-26 12:56 pm
Cm Siddaramaiah, Mangalore: ಕರಾವಳಿ ಪ್ರವಾಸೋದ್ಯ...
10-01-26 10:45 pm
ಡೀಮ್ಡ್ ಯುನಿವರ್ಸಿಟಿಗಳಲ್ಲಿ ಭಾಷೆಯ ಅವಜ್ಞೆ ; ಸಾಹಿತ...
10-01-26 07:57 pm
12-01-26 06:28 pm
Mangaluru Staffer
Mangalore Crime: ಬಾಂಗ್ಲಾದವನೆಂದು ಹೇಳಿ ವಲಸೆ ಕಾರ...
12-01-26 01:54 pm
Sharmila Death, Murder, Bangalore: ಮಂಗಳೂರಿನ ಟ...
12-01-26 01:31 pm
ಅಯ್ಯಪ್ಪ ಸ್ವಾಮಿಗಳ ಪೂಜೆ ಸಂದರ್ಭದಲ್ಲಿ ಮುಸ್ಲಿಂ ವ್ಯ...
11-01-26 09:59 pm
ಆರು ವರ್ಷದ ಬಾಲಕಿಯನ್ನು ಅಪಹರಿಸಿ, ಕೊಲೆ ; ತಾಯಿ ಜಗಳ...
07-01-26 10:45 pm