ಬ್ರೇಕಿಂಗ್ ನ್ಯೂಸ್
07-05-25 12:20 pm HK News Desk ದೇಶ - ವಿದೇಶ
ಕಾಸರಗೋಡು, ಮೇ 7 : ಕರ್ನಾಟಕ – ಕೇರಳ ಗಡಿಭಾಗ ತಲಪಾಡಿಯಿಂದ ತೊಡಗಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾಸರಗೋಡು ವರೆಗೆ ಆರು ಪಥದ ಹೆದ್ದಾರಿ ನಿರ್ಮಾಣ ಬಹುತೇಕ ಪೂರ್ತಿಯಾಗಿದ್ದು, ಚೆರ್ಕಳ ವರೆಗೂ 90 ಶೇಕಡಾ ಕಾಮಗಾರಿ ಆಗಿದೆ. ಇದೇ ವೇಳೆ, ತಾತ್ಕಾಲಿಕ ನೆಲೆಯಲ್ಲಿ ಕುಂಬಳೆ ಬಳಿಯ ಆರಿಕ್ಕಾಡಿಯಲ್ಲಿ ಟೋಲ್ ಪ್ಲಾಜಾ ನಿರ್ಮಾಣಕ್ಕೆ ತೆರೆಮರೆಯ ಪ್ರಯತ್ನ ನಡೆಯುತ್ತಿದ್ದು, ಈ ಪ್ರಸ್ತಾಪಕ್ಕೆ ಶಾಸಕರು, ಸಂಸದರ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಹೆದ್ದಾರಿ ಪ್ರಾಧಿಕಾರ ನಿಮಯ ಪ್ರಕಾರ, 60 ಕಿಮೀ ನಡುವೆ ಮಾತ್ರ ಟೋಲ್ ಪ್ಲಾಜಾ ಇರಬೇಕು. ಆದರೆ ತಲಪಾಡಿಯಿಂದ ಕುಂಬಳೆಗೆ 20 ಕಿಮೀ ದೂರವಿದ್ದು, ಇಲ್ಲಿ ಟೋಲ್ ಪ್ಲಾಜಾ ಮಾಡುವುದು ಕಾನೂನಿಗೆ ವಿರುದ್ಧ. ತಾತ್ಕಾಲಿಕ ನೆಪದಲ್ಲಿ ಟೋಲ್ ಪ್ಲಾಜಾ ಮಾಡಿ ಬಳಿಕ ದೀರ್ಘ ಕಾಲ ಜನರಿಂದ ಟೋಲ್ ವಸೂಲಿ ಮಾಡಲಾಗುತ್ತದೆ. ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳನ್ನು ನಂಬಲು ಸಾಧ್ಯವಿಲ್ಲ. ಹಿಂದೆ ಮಂಗಳೂರಿನ ಸುರತ್ಕಲ್ ನಲ್ಲಿ ಇದೇ ರೀತಿ ತಾತ್ಕಾಲಿಕ ಎಂದು ಟೋಲ್ ಪ್ಲಾಜಾ ಆರಂಭಿಸಿ, ಎಂಟು ವರ್ಷಗಳ ವರೆಗೆ ಶುಲ್ಕ ವಸೂಲಿ ನಡೆದಿತ್ತು. ಇಲ್ಲಿ ಯಾವುದೇ ಕಾರಣಕ್ಕೂ ಟೋಲ್ ಮಾಡುವುದಕ್ಕೆ ನಾವು ಬಿಡುವುದಿಲ್ಲ ಎಂದು ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್ ತಿಳಿಸಿದ್ದಾರೆ.
ಕಾಸರಗೋಡು ಶಾಸಕ ಎನ್.ಎ. ನೆಲ್ಲಿಕುನ್ನು, ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್, ಕಾಸರಗೋಡು ಸಂಸದ ರಾಜಮೋಹನ್ ಉಣ್ಣಿತ್ತಾನ್ ನೇತೃತ್ವದಲ್ಲಿ ಸರ್ವಪಕ್ಷಗಳ ಮುಖಂಡರು ಮತ್ತು ಕಾರ್ಯಕರ್ತರು ಕುಂಬಳೆಯಲ್ಲಿ ಟೋಲ್ ಪ್ಲಾಜಾ ನಿರ್ಮಾಣಕ್ಕೆ ನಿಗದಿಪಡಿಸಿರುವ ಜಾಗದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಟೋಲ್ ಪ್ಲಾಜಾಕ್ಕೆ ಪಿಲ್ಲರ್ ಹಾಕಲು ತೆಗೆದಿಟ್ಟ ಗುಂಡಿಗೆ ಮಣ್ಣು ಮುಚ್ಚಿ ಪ್ರತಿಭಟನೆ ತೋರಿದ್ದಾರೆ. ತಲಪಾಡಿಯಿಂದ ಚೆರ್ಕಳ ವರೆಗಿನ 39 ಕಿಮೀ ಹೆದ್ದಾರಿಯನ್ನು ಕೇರಳದ ಉರಾಲುಂಗಾಲ್ ಲೇಬರ್ ಕಾಂಟ್ರಾಕ್ಟ್ ಕೋಆಪರೇಟಿವ್ ಸೊಸೈಟಿ (ಯುಎಲ್ ಸಿಸಿಎಸ್) ಕಾಮಗಾರಿ ನಿರ್ವಹಿಸುತ್ತಿದ್ದು, ಮೂರೇ ವರ್ಷದಲ್ಲಿ ಕೆಲಸ ಪೂರ್ತಿಗೊಳಿಸಿದೆ. ಆದರೆ, ಚೆರ್ಕಳದಿಂದ ನೀಲೇಶ್ವರ- ತಳಿಪರಂಬ ವರೆಗಿನ ಹೆದ್ದಾರಿಯನ್ನು ಹೈದರಾಬಾದ್ ಮೂಲದ ಮೇಘಾ ಇಂಜಿನಿಯರಿಂಗ್ ಅಂಡ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ ಕಂಪನಿ ನಿರ್ವಹಿಸುತ್ತಿದ್ದು ಇನ್ನೂ ಕಾಮಗಾರಿ ಮಾಡಿಲ್ಲ.
ತಲಪಾಡಿಯಿಂದ 60 ಕಿಮೀ ದೂರದ ಪ್ರಕಾರ, ಚೆರ್ಕಳ ಬಳಿಯ ಚಾಲಿಂಗಾಲ್ ಎಂಬಲ್ಲಿ ಟೋಲ್ ವೇ ನಿರ್ಮಾಣ ಆಗಬೇಕಾಗುತ್ತದೆ. ಅಲ್ಲಿ ಇನ್ನೂ ಹೆದ್ದಾರಿ ಕಾಮಗಾರಿ ಆಗದಿರುವುದರಿಂದ ಟೋಲ್ ವಸೂಲಿ ವಿಳಂಬವಾಗುತ್ತದೆಂದು ತಾತ್ಕಾಲಿಕ ನೆಲೆಯಲ್ಲಿ ಕುಂಬಳೆಯ ಆರಿಕ್ಕಾಡಿಯಲ್ಲಿ ಟೋಲ್ ಪ್ಲಾಜಾ ನಿರ್ಮಾಣಕ್ಕೆ ಸಿದ್ಧತೆ ನಡೆದಿದೆ. ಯುಎಲ್ ಸಿಸಿ ಸೊಸೈಟಿಯವರು ಇದಕ್ಕಾಗಿ ಹೆದ್ದಾರಿ ಪ್ರಾಧಿಕಾರದಿಂದ ಅನುಮತಿಯನ್ನು ಪಡೆದುಕೊಂಡಿದ್ದಾರೆ. ಆದರೆ ಈ ಭಾಗದ ಶಾಸಕರು ಮತ್ತು ಸಂಸದರು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಟೋಲ್ ಪ್ಲಾಜಾ ನಿರ್ಮಾಣಕ್ಕೆ ಅವಕಾಶ ಕೊಡುವುದಿಲ್ಲ ಎಂದಿದ್ದಾರೆ. ಸಂಸದ ರಾಜಮೋಹನ್, ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿಯನ್ನು ಭೇಟಿಯಾಗಿ ವಿರೋಧ ಸೂಚಿಸಿದ್ದಾರೆ. ಇದೇ ವೇಳೆ, 2022ರಲ್ಲಿ ಸಂಸತ್ತಿನಲ್ಲಿ ಸಚಿವ ಗಡ್ಕರಿ 60 ಕಿಮೀ ನಡುವೆ ಮಾತ್ರ ಟೋಲ್ ಪ್ಲಾಜಾ ನಿರ್ಮಾಣ ಮಾಡಬೇಕು. ಇದಕ್ಕೆ ತಪ್ಪಿದಲ್ಲಿ ಅಂತಹ ಪ್ಲಾಜಾಗಳನ್ನು ಕೂಡಲೇ ಬಂದ್ ಮಾಡಬೇಕು ಎಂದು ಹೇಳಿದ್ದ ವಿಡಿಯೋಗಳನ್ನು ವೈರಲ್ ಮಾಡಲಾಗಿದೆ.
ಕಾಸರಗೋಡು ಭಾಗದಿಂದ ಅತಿ ಹೆಚ್ಚು ಜನರು ಕಾಲೇಜು, ಉದ್ಯೋಗ, ಆರೋಗ್ಯ ವಿಚಾರಕ್ಕೆ ಕರ್ನಾಟಕದ ಮಂಗಳೂರಿಗೆ ಬರುತ್ತಿದ್ದಾರೆ. ತಲಪಾಡಿ ಟೋಲ್ ಗೇಟ್ ನಲ್ಲಿ ಶುಲ್ಕ ನೀಡಿಯೇ ಪ್ರವೇಶ ಮಾಡಬೇಕಾಗಿದ್ದು ಇದರ ನಡುವೆ 20 ಕಿಮೀ ದೂರದ ಕುಂಬಳೆಯಲ್ಲಿ ಮತ್ತೊಂದು ಟೋಲ್ ನಿರ್ಮಿಸಿದರೆ ಜನರಿಗೆ ಶುಲ್ಕದ ಬರೆ ಬೀಳುತ್ತದೆ. ಇದಕ್ಕಾಗಿ ಸ್ಥಳೀಯರು ಸೇರಿದಂತೆ ಕಾಸರಗೋಡಿನ ಜನರು ಕುಂಬಳೆಯಲ್ಲಿ ಟೋಲ್ ಪ್ಲಾಜಾ ನಿರ್ಮಿಸುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಕಾಸರಗೋಡು ಜಿಲ್ಲಾಧಿಕಾರಿ ಮೂಲಕವೂ ಈ ಕುರಿತು ನಿರ್ಣಯ ಮಾಡಿಸಿ, ಹೆದ್ದಾರಿ ಪ್ರಾಧಿಕಾರಕ್ಕೆ ವಿರೋಧ ಸೂಚಿಸಿದ್ದಾರೆ. ಕಾಸರಗೋಡು ಜಿಲ್ಲಾ ಪಂಚಾಯತ್ ಸೇರಿದಂತೆ ಎಲ್ಲ ಸ್ಥಳೀಯಾಡಳಿತಗಳಲ್ಲಿಯೂ ವಿರೋಧ ನಿರ್ಣಯ ಸ್ವೀಕರಿಸಲಾಗಿದೆ.
The first flashpoint over toll collection on the 600-km six-lane NH 66 cutting through Kerala has erupted in Kasaragod, with the National Highways Authority of India (NHAI) proposing a 'temporary' toll plaza at Arikady in Kumbla.
05-10-25 09:41 pm
HK News Desk
ನಾಯಿ ದಾಳಿಗೆ ಸ್ಥಳೀಯರ ಆಕ್ರೋಶ ; ಬೀದಿ ನಾಯಿಗಳ ಮೇಲೆ...
05-10-25 08:08 pm
ಲಿಂಗಾಯತರನ್ನು ಪ್ರತ್ಯೇಕಿಸುವುದು ಸಮಾಜ ವಿರೋಧಿ ಕೆಲಸ...
05-10-25 07:57 pm
ಬಿಹಾರ ಚುನಾವಣೆ ಬಳಿಕ ರಾಜ್ಯದಲ್ಲಿ ರಾಜಕೀಯ ಕ್ರಾಂತಿ...
05-10-25 07:38 pm
ಜಾತಿ ಗಣತಿ ತೆರಳಿದ್ದ ಶಿಕ್ಷಕಿ ಮತ್ತು ಪತಿಗೆ ಅಟ್ಟಾಡ...
05-10-25 07:18 pm
04-10-25 04:45 pm
HK Staffer
Rashmika Mandanna, Vijay Deverakonda Marriage...
04-10-25 03:11 pm
ಕಾಂತಾರ ಬ್ಲಾಕ್ ಬಸ್ಟರ್, ನಾವೆಲ್ಲ ಚಿತ್ರೋದ್ಯಮಿಗಳು...
04-10-25 01:11 pm
ಸರ್ಕಾರಿ ಪ್ರಾಯೋಜಿತ ಭಯೋತ್ಪಾದನೆ ನಿಲ್ಲಿಸದಿದ್ದರೆ ಭ...
03-10-25 09:09 pm
ಮಕ್ಕಳ ವಿಡಿಯೋ ಗೇಮ್ ನಲ್ಲೂ ಸೈಬರ್ ಅಪರಾಧ ; ಶಾಲಾ ಹಂ...
03-10-25 04:50 pm
04-10-25 10:29 pm
Mangalore Correspondent
103ನೇ ವರ್ಷದ ರಥಬೀದಿ 'ಮಂಗಳೂರು ಶಾರದಾ ಮಹೋತ್ಸವ' ಸಂ...
03-10-25 11:07 pm
Puttur Krishna Rao, Baby, Pratibha Kulai: ಕೃಷ...
03-10-25 05:59 pm
Ullal Dasara Issue, Mangalore 2025: ದಸರಾ ಶೋಭಾ...
03-10-25 02:11 pm
ಮಂಗಳೂರಿನಲ್ಲಿ ಗಣತಿ ಕಾರ್ಯಕ್ಕೆ 425 ಮಂದಿ ಗೈರು: ಶಿ...
02-10-25 11:05 pm
05-10-25 03:22 pm
Mangalore Correspondent
Shivamogga Murder, Mother: ಶಿವಮೊಗ್ಗ ; ಮಗಳನ್ನು...
04-10-25 02:57 pm
Karkala Murder, Crime: ಕಾರ್ಕಳ ; ಪ್ರೀತಿಸಿದ ಯುವ...
03-10-25 11:28 pm
ಸುಧಾಮೂರ್ತಿ, ನಿರ್ಮಲಾ ಸೀತಾರಾಮನ್ ಹೆಸರಲ್ಲಿ ಎಐ ವಿಡ...
01-10-25 02:39 pm
Ullal Gold Robbery, Mangalore, CCB police: ಜು...
29-09-25 01:24 pm