India strikes terror camps in Pak; ಪಾಕಿಸ್ತಾನದ ಒಂಬತ್ತು ಉಗ್ರರ ನೆಲೆಗಳು ಉಡೀಸ್, ಲಾಹೋರ್ ಬಳಿಯ ಹಫೀಜ್ ಸಯೀದ್, ಮಸೂದ್ ಅಜರ್ ನಿವಾಸದ ಮೇಲೂ ಬಾಂಬ್ ದಾಳಿ, ಆಪರೇಶನ್ ಸಿಂಧೂರ- ನಡುರಾತ್ರಿಯಲ್ಲಿ ಪಾಕಿಗಳಿಗೆ ಮರ್ಮಾಘಾತ ! 

07-05-25 09:54 am       HK News Desk   ದೇಶ - ವಿದೇಶ

ಪಹಲ್ಗಾಮ್ ದಾಳಿಯ ಪ್ರತೀಕಾರ ರೂಪದಲ್ಲಿ ಭಾರತೀಯ ವಾಯುಪಡೆಯಿಂದ ಪಾಕಿಸ್ತಾನದ ಉಗ್ರರ ನೆಲೆಗಳನ್ನು ಗುರಿಯಾಗಿಸಿ ಕ್ಷಿಪಣಿ ದಾಳಿ ಮಾಡಲಾಗಿದೆ. ನಿನ್ನೆ ಮಧ್ಯರಾತ್ರಿ 1.44ರಿಂದ ಅರ್ಧ ಗಂಟೆ ಕಾಲ ಒಂಬತ್ತು ಉಗ್ರರ ನೆಲೆಗಳನ್ನು ಗುರಿಯಾಗಿಸಿ ಬಾಂಬ್ ದಾಳಿ ಎಸಗಿದ್ದು, ನೂರಾರು ಉಗ್ರರು ಮಡಿದಿರುವ ಶಂಕೆ ವ್ಯಕ್ತವಾಗಿದೆ.

ನವದೆಹಲಿ, ಮೇ 7: ಪಹಲ್ಗಾಮ್ ದಾಳಿಯ ಪ್ರತೀಕಾರ ರೂಪದಲ್ಲಿ ಭಾರತೀಯ ವಾಯುಪಡೆಯಿಂದ ಪಾಕಿಸ್ತಾನದ ಉಗ್ರರ ನೆಲೆಗಳನ್ನು ಗುರಿಯಾಗಿಸಿ ಕ್ಷಿಪಣಿ ದಾಳಿ ಮಾಡಲಾಗಿದೆ. ನಿನ್ನೆ ಮಧ್ಯರಾತ್ರಿ 1.44ರಿಂದ ಅರ್ಧ ಗಂಟೆ ಕಾಲ ಒಂಬತ್ತು ಉಗ್ರರ ನೆಲೆಗಳನ್ನು ಗುರಿಯಾಗಿಸಿ ಬಾಂಬ್ ದಾಳಿ ಎಸಗಿದ್ದು, ನೂರಾರು ಉಗ್ರರು ಮಡಿದಿರುವ ಶಂಕೆ ವ್ಯಕ್ತವಾಗಿದೆ.

ಪಿಓಕೆಯಲ್ಲಿರುವ ಉಗ್ರರ ನೆಲೆಗಳು, ಪಂಜಾಬ್ ಪ್ರಾಂತ್ಯದ ಉಗ್ರರ ಶಿಬಿರಗಳು, ಲಾಹೋರ್ ಬಳಿಯಿರುವ ಉಗ್ರರ ನೆಲೆಗಳಿಗೂ ದಾಳಿಯಾಗಿದ್ದು, ವಾಯುಪಡೆ ವಿಮಾನಗಳು ರಾತ್ರೋರಾತ್ರಿ ಪಾಕಿಸ್ತಾನಕ್ಕೆ ಊಹನೆ ಮಾಡದ ರೀತಿಯ ಮರ್ಮಾಘಾತ ಕೊಟ್ಟಿದೆ. ಲಾಹೋರ್ ಬಳಿಯಿರುವ ಲಷ್ಕರ್ ಇ-ತೊಯ್ಬಾ ಉಗ್ರ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀಸ್ ವಾಸವಿದ್ದ ಮಸೀದಿ ಮತ್ತು ಆತನ ಟ್ರೈನಿಂಗ್ ಕ್ಯಾಂಪ್ ಮೇಲೆ ಬಾಂಬ್ ದಾಳಿ ಮಾಡಲಾಗಿದೆ. ಮುಜಫರಾಬಾದ್ ನಲ್ಲಿರುವ ಉಗ್ರರ ನೆಲೆಗೂ ಬಾಂಬ್ ದಾಳಿಯಾಗಿದೆ. ಉಗ್ರರನ್ನು ಆಯ್ಕೆ ಮಾಡಿ ತರಬೇತಿ ಕೊಡುತ್ತಿದ್ದ ಬಹವಾಲ್ಪುರ್, ಉಗ್ರರಿಗೆ ಅಡ್ವಾನ್ಸ್ ಟ್ರೈನಿಂಗ್ ಮತ್ತು ಸುಸೈಡ್ ಬಾಂಬರ್ ಗಳನ್ನು ತಯಾರಿಸುತ್ತಿರುವ ಬಾಲಾಕೋಟ್ ಮೇಲೂ ಏರ್ ಸ್ಟ್ರೈಕ್ ಮಾಡಲಾಗಿದೆ.

ನಟೋರಿಯಸ್ ಉಗ್ರ ಮೌಲಾನಾ ಮಸೂದ್ ಅಜರ್ ವಾಸವಿರುವ ಫಿರೋಜ್ ಪುರದ ಮನೆ ಮತ್ತು ಆತನ ಟ್ರೈನಿಂಗ್ ಕ್ಯಾಂಪ್ ಮೇಲೆ ದಾಳಿಯಾಗಿದೆ. ಬ್ಯಾಡ್ಮಿಂಟನ್ ಕೋರ್ಟ್ ಮತ್ತು ಸ್ವಿಮ್ಮಿಂಗ್ ಪೂಲ್ ಇರುವ ಏಕೈಕ ಮಸೀದಿ ಈತನದ್ದಾಗಿದ್ದು, ಅದನ್ನು ಧ್ವಂಸ ಮಾಡಲಾಗಿದೆ. ಜೈಶ್ ಮಹಮ್ಮದ್ ಉಗ್ರ ಸಂಘಟನೆಯ ಪ್ರಮುಖ ನೆಲೆಯಾಗಿರುವ ಸವಾಯ್ ನಾಲಾ ಮೇಲೆ ಬಾಂಬ್ ದಾಳಿಯಾಗಿದೆ. ಜೈಶ್ ಮಹಮ್ಮದ್ ಹೆಡ್ ಕ್ವಾರ್ಟರ್ ಇದಾಗಿದ್ದು, ಕೋಡ್ ವರ್ಡ್ ಮೂಲಕ ಉಗ್ರರ ನಡುವೆ ಕಮ್ಯುನಿಕೇಶನ್ ಮಾಡಲು ಇದನ್ನು ಬಳಸಲಾಗುತ್ತಿತ್ತು. ಸರ್ಜಾಪುರ್ ಉಗ್ರರ ನೆಲೆ ಮತ್ತು ಹಿಜ್ಬುಲ್ಲಾ ಉಗ್ರರ ಹೆಡ್ ಕ್ವಾರ್ಟರ್ ಸಿಯಾಲ್ ಕೋಟ್ ಮೇಲೂ ಕ್ಷಿಪಣಿ ದಾಳಿಯಾಗಿದೆ.

ಆಪರೇಶನ್ ಸಿಂಧೂರ ಹೆಸರಲ್ಲಿ ಈ ದಾಳಿಗಳನ್ನು ಮಾಡಲಾಗಿದ್ದು, ಇದು ವಾಯುಪಡೆ ವಿಮಾನಗಳ ಮೂಲಕ 60-70 ಕಿಮೀ ದೂರದಿಂದ ಕ್ಷಿಪಣಿ ದಾಳಿ ಮಾಡುವುದಾಗಿದೆ. ನಡುರಾತ್ರಿಯಲ್ಲಿ ಮೊದಲೇ ನಿಗದಿಯಾಗಿದ್ದ ಒಂಬತ್ತು ಉಗ್ರರ ನೆಲೆಗಳಿಗೆ ಮಾತ್ರ ಬಾಂಬ್ ದಾಳಿ ಮಾಡಲಾಗಿದ್ದು, ಉಗ್ರರ ಶಿಬಿರಗಳು ಉಡೀಸ್ ಆಗಿವೆ. ಉಗ್ರರ ನೆಲೆಗಳನ್ನು ಬಿಟ್ಟರೆ ಬೇರಾವುದೇ ಜನವಸತಿ ಇರುವ ಪ್ರದೇಶಕ್ಕೆ ಬಾಂಬ್ ದಾಳಿ ಆಗಿಲ್ಲ ಎಂದು ನಿವೃತ್ತ ವಿಂಗ್ ಕಮಾಂಡರ್ ಸುದರ್ಶನ್ ಮಾಧ್ಯಮ ಒಂದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

ವಾಯುಪಡೆ ಅತ್ಯಂತ ಕರಾರುವಾಕ್ಕಾಗಿ ದಾಳಿ ನಡೆಸಿರುವುದನ್ನು ನಾವು ಅಭಿನಂದಿಸಬೇಕು. ಇದಕ್ಕೆ ಪಾಕಿಸ್ತಾನ ತನ್ನ ಮರ್ಯಾದೆ ಉಳಿಸಿಕೊಳ್ಳಲು ತಿರುಗಿ ದಾಳಿ ನಡೆಸುತ್ತದೆ. ಎಲ್ಲಿ, ಹೇಗೆ ದಾಳಿಯಾಗುತ್ತದೆ ಎನ್ನುವುದನ್ನು ನೋಡಿಕೊಂಡು ನಾವು ರೆಡಿಯಾಗಿರಬೇಕು. ಇದಕ್ಕಾಗಿ ಭಾರತದ ಎಲ್ಲ ಜನರು ಸೇನಾಪಡೆಯ ಜೊತೆಗಿರಬೇಕು ಎಂದು ಸುದರ್ಶನ್ ಹೇಳಿದ್ದಾರೆ. ಪಾಕಿಸ್ತಾನದ ಸೇನಾಪಡೆ ಭಾರತಕ್ಕೆ ಹೋಲಿಸಿದರೆ ಏನೂ ಅಲ್ಲ. ಅವರಿಗೆ ಭಾರತದ ಸೇನೆ ಜೊತೆಗೆ ಯುದ್ಧ ಮಾಡುವಷ್ಟು ತಾಕತ್ತೂ ಇಲ್ಲ. ಇದಕ್ಕಾಗಿ ಈ ಉಗ್ರರನ್ನು ಛೂಬಿಟ್ಟು ನಮ್ಮನ್ನು ಕೆಣಕುತ್ತಲೇ ಇದೆ. ಇದಕ್ಕಾಗಿ ಸೂಕ್ತ ಉತ್ತರ ನೀಡಬೇಕಾಗಿತ್ತು. ಇದನ್ನು ಮಾಡುತ್ತಲೇ ಇರಬೇಕು. ಪಾಕಿಸ್ತಾನಕ್ಕೆ ಇಂತಹ ಮರ್ಮಾಘಾತ ಆದರಷ್ಟೇ ಬುದ್ಧಿ ಬರುತ್ತದೆ. ಈಗಲೇ ಬಲೂಚಿಸ್ತಾನ, ಪಂಜಾಬ್ ಅಂತ ನಾಲ್ಕು ಕಡೆಗಳಿಂದ ಪಾಕಿನಲ್ಲೇ ಅಂತರ್ಯುದ್ಧ ಇದ್ದು, ಅದೇ ಗುರಿ ಇಟ್ಟುಕೊಂಡು ಪಾಕಿಸ್ತಾನವನ್ನು ನಾಲ್ಕಾಗಿ ವಿಭಜಿಸಿದರೆ ಈ ಉಗ್ರವಾದ ನಿಲ್ಲಬಹುದು ಎಂದು ಸುದರ್ಶನ್ ಅಭಿಪ್ರಾಯ ಪಟ್ಟಿದ್ದಾರೆ.

Hello @RahulGandhi and @ArvindKejriwal

Here is the video proof of Air Strike on Pakistan and its terror bases.

Now don't dare to ask for proof from my beloved Indian Army.#OperationSindoor pic.twitter.com/0DkkYqeEjw

— Sunanda Roy 👑 (@SaffronSunanda) May 6, 2025

ಜಮ್ಮು ಕಾಶ್ಮೀರದ ಪಹಲ್ಗಾಮ್ ನಲ್ಲಿ ಪ್ರವಾಸಿಗರ ಮೇಲೆ ದಾಳಿ ನಡೆಸಿದ ಘಟನೆಯಲ್ಲಿ 26 ಮಂದಿ ಬಲಿಯಾಗಿದ್ದರು. ಈ ಘಟನೆಯ ಬಳಿಕ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಬೇಕು, ಯುದ್ಧ ಘೋಷಿಸಬೇಕು ಎಂಬ ಒತ್ತಾಯ ದೇಶಾದ್ಯಂತ ಕೇಳಿಬಂದಿತ್ತು. ಇದಕ್ಕೆ ವಿಶ್ವಸಂಸ್ಥೆಯಲ್ಲೂ ಜಗತ್ತಿನ ಬಹುತೇಕ ರಾಷ್ಟ್ರಗಳ ಬೆಂಬಲ ಸಿಕ್ಕಿತ್ತು. ಚೀನಾ ಹೊರತುಪಡಿಸಿದರೆ ಪಾಕಿಸ್ತಾನಕ್ಕೆ ಬೇರಾವುದೇ ರಾಷ್ಟ್ರ ಬಹಿರಂಗ ಬೆಂಬಲ ಘೋಷಿಸಿಲ್ಲ. ಭಾರತದ ಪರವಾಗಿ ರಷ್ಯಾ, ಜಪಾನ್, ಇಸ್ರೇಲ್, ಅಮೆರಿಕ ನಿಂತಿದ್ದು, ಪ್ರಧಾನಿ ಮೋದಿಗೆ ಬಲ ಸಿಕ್ಕಂತಾಗಿದೆ. ಇದರ ಬೆನ್ನಲ್ಲೇ ಉಗ್ರರ ನೆಲೆಗಳನ್ನು ಗುರಿಯಾಗಿಸಿ ದಾಳಿ ನಡೆಸಲು ಗ್ರೀನ್ ಸಿಗ್ನಲ್ ನೀಡಿದ್ದಾರೆ.

 The Indian armed forces early Wednesday carried out missile attacks on nine terror targets in Pakistan and Pakistan-Occupied Kashmir, including Muridke and Bahawalpur, which are the strongholds of terror groups Lashkar-e-Taiba and Jaish-e-Mohammed, respectively.