ಬ್ರೇಕಿಂಗ್ ನ್ಯೂಸ್
15-12-20 06:25 pm Headline Karnataka News Network ದೇಶ - ವಿದೇಶ
ನವದೆಹಲಿ, ಡಿ.15: ಈ ದೇಶದಲ್ಲಿ ಬಿಜೆಪಿಯೇ ನಿಜವಾದ ತುಕ್ಡೇ ತುಕ್ಡೇ ಗ್ಯಾಂಗ್. ಪಂಜಾಬಿನಲ್ಲಿ ರೈತರ ಪ್ರತಿಭಟನೆ ಮುಂದಿಟ್ಟು ಹಿಂದುಗಳನ್ನು ಸಿಖ್ಖರ ವಿರುದ್ಧ ಎತ್ತಿಕಟ್ಟುತ್ತಿದೆ. ಸೌಹಾರ್ದತೆ ನೆಲೆಸಿದ್ದ ನಾಡಿನಲ್ಲಿ ಹಿಂಸೆ ಸೃಷ್ಟಿಸುತ್ತಿದೆ ಎಂದು ಶಿರೋಮಣಿ ಅಕಾಲಿದಳ್ ಘಟಕದ ಅಧ್ಯಕ್ಷ ಸುಖಬೀರ್ ಸಿಂಗ್ ಬಾದಲ್ ಆರೋಪಿಸಿದ್ದಾರೆ.
ರೈತರ ಪ್ರತಿಭಟನೆ ಹಿನ್ನೆಲೆಯಲ್ಲಿ ಬಾದಲ್ ಈ ರೀತಿ ಟ್ವೀಟ್ ಮಾಡಿದ್ದಾರೆ. ದೇಶದಲ್ಲಿ ಹಿಂದು- ಮುಸ್ಲಿಮರನ್ನು ಒಡೆಯುವಂತೆ ಮಾಡಿದ್ರು. ಈಗ ಶಾಂತಿ ನೆಲೆಸಿದ್ದ ಪಂಜಾಬಿನಲ್ಲಿ ಹಿಂದುಗಳನ್ನು ಎತ್ತಿಕಟ್ಟುತ್ತಿದ್ದಾರೆ. ಹಿಂಸೆಗೆ ದೂಡುತ್ತಿದ್ದಾರೆ. ಎನ್ ಡಿಎ ಸರಕಾರ ರಾಜ್ಯಗಳ ಅಧಿಕಾರವನ್ನು ಬದಿಗೊತ್ತಿ ಕೃಷಿ ಕಾನೂನುಗಳನ್ನು ಹೇರುತ್ತಿದೆ. ಅಕಾಲಿ ದಳ ಹಿಂದೆ ಅಧಿಕಾರ ವಿಕೇಂದ್ರೀಕರಣದ ಬಗ್ಗೆ ಮಾತನಾಡಿದಾಗ ನಮ್ಮನ್ನು ಪ್ರತ್ಯೇಕತಾವಾದಿಗಳು ಎಂದಿದ್ದರು. ಈಗ ಎಲ್ಲರೂ ಈ ಬಗ್ಗೆ ದನಿ ಎತ್ತುತ್ತಿದ್ದಾರೆ. ವಿಕೇಂದ್ರೀಕರಣವೇ ಸರಿ ಎನ್ನುತ್ತಿದ್ದಾರೆ ಎಂದು ಟ್ವೀಟ್ ನಲ್ಲಿ ಹೇಳಿದ್ದಾರೆ.
ಈಗಿನ ಸ್ಥಿತಿ ಹೇಗಿದೆ ಎಂದ್ರೆ ಕೇಂದ್ರ ಸರಕಾರವನ್ನು ಒಪ್ಪಿದವರು ಮಾತ್ರ ದೇಶಭಕ್ತರು. ವಿರೋಧಿಸಿದರೆ ಅವರೆಲ್ಲ ದೇಶ ವಿರೋಧಿಗಳು ಅನ್ನುವ ಸ್ಥಿತಿ ಇದೆ. ಕೇಂದ್ರ ಸರಕಾರದ ಕೃಷಿ ನೀತಿ ವಿರೋಧಿಸಿ ಪ್ರಕಾಶ್ ಸಿಂಗ್ ಬಾದಲ್ ಪದ್ಮ ಪ್ರಶಸ್ತಿ ನಿರಾಕರಿಸಿದ್ದು, ಕೇಂದ್ರ ಸಚಿವ ಸ್ಥಾನಕ್ಕೆ ಹರ್ ಸಿಮ್ರತ್ ಕೌರ್ ಬಾದಲ್ ರಾಜಿನಾಮೆ ನೀಡಿದ್ದೆಲ್ಲ ದೇಶದ್ರೋಹಿ ಚಟುವಟಿಕೆ ಎನ್ನುವಂತಾಗಿದೆ. ಈಗಿನ ಕೃಷಿ ನೀತಿ ವಿರೋಧಿಸಿ ನಡೆಸುತ್ತಿರುವ ಪ್ರತಿಭಟನೆಯನ್ನು ಹಿಂದು- ಸಿಕ್ಖರ ನಡುವಿನ ಸಂಘರ್ಷ ಎನ್ನುವಂತೆ ಬಿಂಬಿಸುತ್ತಿರುವುದು ಖಂಡನೀಯ ಎಂದು ಹೇಳಿದ್ದಾರೆ.
12-01-26 08:20 pm
Mangaluru
ಮನೆ ಕಟ್ಟಲು ಅಡಿಪಾಯ ತೆಗೆಯುವ ವೇಳೆ 1 ಕೆಜಿಯಷ್ಟು ನಿ...
10-01-26 10:28 pm
"ಡ್ಯಾಡಿ ಈಸ್ ಹೋಮ್" ಎಐ ವಿಡಿಯೋ ರಿಲೀಸ್ ; ರಾಜ್ಯ ರಾ...
10-01-26 04:29 pm
ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಅಡ್ಡ ನಿಂತ ಒಂಟಿ ಸಲಗ...
10-01-26 03:00 pm
Purushottam Bilimale, Legal Battle Against Ma...
10-01-26 01:17 pm
12-01-26 11:00 pm
HK staffer
ಕುಂಬಳೆ ಟೋಲ್ ಗೇಟ್ ವಿರುದ್ಧ ರಸ್ತೆ ತಡೆದು ಪ್ರತಿಭಟನ...
12-01-26 05:01 pm
ಎಕ್ಸ್ ನಲ್ಲಿ ಅಶ್ಲೀಲ ಕಂಟೆಂಟ್ ; ಐಟಿ ಸಚಿವಾಲಯದ ಒತ್...
11-01-26 06:07 pm
ವೆನಿಜುವೆಲಾ ತೈಲದ ನಿಯಂತ್ರಣಕ್ಕೆ ಮುಂದಾದ ಅಮೆರಿಕ ;...
10-01-26 03:22 pm
ಶಬರಿಮಲೆ ಚಿನ್ನ ಕಳವು ಪ್ರಕರಣ ; ಪ್ರಧಾನ ತಂತ್ರಿ ಕಂಠ...
09-01-26 11:00 pm
12-01-26 08:03 pm
Mangaluru Staffer
ಭಾರತ ರಕ್ತಪಾತಕ್ಕೆ ಇನ್ನಷ್ಟು ಸಿದ್ಧವಾಗಬೇಕು ; ಚೀನಾ...
11-01-26 10:39 pm
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
ಅಮೆರಿಕ ಬಿಟ್ಟು ಚೀನಾ ಜೊತೆಗೆ ಬಾಂಧವ್ಯ ಬೆಳೆಸಬೇಕಿದೆ...
11-01-26 12:56 pm
Cm Siddaramaiah, Mangalore: ಕರಾವಳಿ ಪ್ರವಾಸೋದ್ಯ...
10-01-26 10:45 pm
12-01-26 06:28 pm
Mangaluru Staffer
Mangalore Crime: ಬಾಂಗ್ಲಾದವನೆಂದು ಹೇಳಿ ವಲಸೆ ಕಾರ...
12-01-26 01:54 pm
Sharmila Death, Murder, Bangalore: ಮಂಗಳೂರಿನ ಟ...
12-01-26 01:31 pm
ಅಯ್ಯಪ್ಪ ಸ್ವಾಮಿಗಳ ಪೂಜೆ ಸಂದರ್ಭದಲ್ಲಿ ಮುಸ್ಲಿಂ ವ್ಯ...
11-01-26 09:59 pm
ಆರು ವರ್ಷದ ಬಾಲಕಿಯನ್ನು ಅಪಹರಿಸಿ, ಕೊಲೆ ; ತಾಯಿ ಜಗಳ...
07-01-26 10:45 pm