ಬ್ರೇಕಿಂಗ್ ನ್ಯೂಸ್
16-01-25 09:01 pm HK News Desk ದೇಶ - ವಿದೇಶ
ಪ್ರಯಾಗರಾಜ್, ಜ.16: ಉತ್ತರ ಪ್ರದೇಶದ ಪ್ರಯಾಗರಾಜ್ ಜಿಲ್ಲೆಯಲ್ಲಿ ನಡೆಯುತ್ತಿರುವ ಮಹಾ ಕುಂಭ ಮೇಳ ಅತಿ ಹೆಚ್ಚು ಜನರು ಸೇರುವ ಜಗತ್ತಿನ ಅತಿದೊಡ್ಡ ಉತ್ಸವ ಎನ್ನುವ ಕಾರಣಕ್ಕೆ ವಿಶ್ವದ ಗಮನಸೆಳೆದಿದೆ. ಇಂಥ ಅತಿದೊಡ್ಡ ಮೇಳದ ಉಸ್ತುವಾರಿಯನ್ನು ಕರ್ನಾಟಕದ ಮೂಲದ ಐಎಎಸ್ ಅಧಿಕಾರಿ ವಹಿಸಿಕೊಂಡಿದ್ದು, ಅದರಲ್ಲೂ ಬೆಂಗಳೂರಿನವರು ಎನ್ನುವುದು ವಿಶೇಷ.
2009ರ ಉತ್ತರ ಪ್ರದೇಶ ಕೇಡರ್ ಐಎಎಸ್ ಅಧಿಕಾರಿಯಾಗಿರುವ ಬೆಂಗಳೂರಿನ ಇಂದಿರಾನಗರ ನಿವಾಸಿ ವಿಜಯ್ ಕಿರಣ್ ಆನಂದ್ ಈ ಹಿಂದೆ 2017ರಲ್ಲಿ ಮಾಘ ಮೇಳ, 2019ರಲ್ಲಿ ಅರ್ಧ ಕುಂಭ ಮೇಳದ ನಿರ್ವಹಣೆಯನ್ನೂ ಮಾಡಿದ್ದರು. ಈ ಅನುಭವದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ಈ ಬಾರಿ ಮಹಾಕುಂಭ ಮೇಳದ ಉಸ್ತುವಾರಿಯನ್ನು ವಿಜಯಕಿರಣ್ ಆನಂದ್ ಅವರಿಗೆ ವಹಿಸಿದ್ದಾರೆ.
ಈ ಹಿಂದೆ ಗೋರಖ್‌ಪುರ ಜಿಲ್ಲಾಧಿಕಾರಿಯೂ ಕೆಲಸ ಮಾಡಿದ್ದ ವಿಜಯ್ ಕಿರಣ್ ಕಾರ್ಯಕ್ಷಮತೆಯನ್ನು ಸಿಎಂ ಯೋಗಿ ಆದಿತ್ಯನಾಥ್ ಅರಿತುಕೊಂಡಿದ್ದರು. ಹೀಗಾಗಿಯೇ, ಸಿಎಂ ಯೋಗಿ ಅವರು ಮಹಾ ಕುಂಭ ಮೇಳದ ಉಸ್ತುವಾರಿ ಜವಾಬ್ದಾರಿಯನ್ನು ವಹಿಸಿದ್ದಾರೆ. ಚಾರ್ಟರ್ಡ್ ಅಕೌಂಟೆಂಟ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದ ವಿಜಯ್ ಕಿರಣ್ ಬಳಿಕ ಯುಪಿಎಸ್ಸಿ ತೇರ್ಗಡೆಗೊಂಡು ಕೇಂದ್ರ ಸೇವೆಗೆ ನಿಯೋಜಿತರಾಗಿದ್ದರು. ಮೊದಲ ಬಾರಿಗೆ ಬಾಗ್ಪತ್ ಜಿಲ್ಲೆಯಲ್ಲಿ ಎರಡು ವರ್ಷ ಉಪ ವಿಭಾಗಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ನಂತರ ಬಾರಾಬಂಕಿ ಜಿಲ್ಲೆಯ ಮುಖ್ಯ ಅಭಿವೃದ್ಧಿ ಅಧಿಕಾರಿ ಆಗಿದ್ದರು. ಆನಂತರ, ಮೈನ್‌ಪುರಿ, ಉನ್ನಾವೋ, ಫಿರೋಜಾಬಾದ್, ವಾರಣಾಸಿ, ಗೋರಖ್‌ಪುರ ಮತ್ತು ಶಹಜಹಾನ್‌ಪುರದಲ್ಲಿ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ.
ಈ ಬಾರಿ 144 ವರ್ಷಗಳ ಬಳಿಕದ ಮಹಾ ಕುಂಭ ಮೇಳ ನಡೆಯುತ್ತಿರುವುದರಿಂದ ಉತ್ತರ ಪ್ರದೇಶ ಸರಕಾರ ಒಟ್ಟು ನಿರ್ವಹಣೆಗೆ ವಿಶೇಷ ವ್ಯವಸ್ಥೆಯನ್ನು ಮಾಡಿದೆ. ಇದಕ್ಕಾಗಿ ಪ್ರಯಾಗರಾಜ್ ನಲ್ಲೇ ತಾತ್ಕಾಲಿಕವಾಗಿ ಮಹಾಕುಂಭ ಮೇಳ ವ್ಯಾಪ್ತಿಗೆ ಪ್ರತ್ಯೇಕ ಜಿಲ್ಲೆಯೊಂದನ್ನು ಘೋಷಿಸಿದೆ. ಇದರ ಅವಧಿ 2024ರ ಡಿಸೆಂಬರ್ 1ರಿಂದ 2025ರ ಮಾರ್ಚ್ 1ರ ವರೆಗೆ ಇರುತ್ತದೆ. ಇದಕ್ಕೆ ಮುಖ್ಯಾಧಿಕಾರಿಯಾಗಿಯೂ ವಿಜಯ್ ಕಿರಣ್ ಇರಲಿದ್ದಾರೆ. ಈ ಜಿಲ್ಲೆಯ ವ್ಯಾಪ್ತಿಯಲ್ಲಿ ನಾಲ್ಕು ತಾಲೂಕು ಹಾಗೂ 67 ಗ್ರಾಮಗಳು ಒಳಗೊಳ್ಳಲಿದ್ದು ಈ ವ್ಯಾಪ್ತಿಗೆ ಶಾಸನಾಧಿಕಾರದ ಸ್ಥಾನವನ್ನು ಜಿಲ್ಲಾಧಿಕಾರಿಗೆ ನೀಡಲಾಗಿದೆ.
45 ದಿನಗಳ ಕುಂಭ ಮೇಳ ಉತ್ಸವದಲ್ಲಿ 40 ಕೋಟಿಗೂ ಹೆಚ್ಚು ಜನರು ಪಾಲ್ಗೊಳ್ಳುತ್ತಿದ್ದಾರೆ. ಈಗಾಗಲೇ ಮೊದಲ ದಿವಸ 1.6 ಕೋಟಿ ಜನರು, ಎರಡನೇ ದಿವಸ ಅಂದರೆ ಮಕರ ಸಂಕ್ರಾಂತಿಯಂದು 3.5 ಕೋಟಿ ಜನರು ಗಂಗಾನದಿಯಲ್ಲಿ ಅಮೃತ ಸ್ನಾನ ಮಾಡಿದ್ದಾರೆ. ಇದಲ್ಲದೆ, ಪ್ರತಿ ದಿನವೂ 10 ಲಕ್ಷಕ್ಕೂ ಅಧಿಕ ವಿದೇಶೀಯರು ಭೇಟಿ ನೀಡುತ್ತಿದ್ದಾರೆ. ಇವರೆಲ್ಲರಿಗೂ ವ್ಯವಸ್ಥೆಗಳನ್ನು ಸರಕಾರದ ವತಿಯಿಂದ ಮಾಡಲಾಗುತ್ತಿದ್ದು, ಗಂಗಾ ನದಿ ತಟದ 40 ಕಿಮೀ ವ್ಯಾಪ್ತಿಯಲ್ಲಿ ತಾತ್ಕಾಲಿಕ ಟೆಂಟ್ ವ್ಯವಸ್ಥೆ ಮಾಡಲಾಗಿದೆ.
The Mahakumbh has commenced on the banks of the Sangam in Prayagraj. Tuesday marked the first Amrit Snan of this Mahakumbh, with thousands of sadhus and saints, alongside crores of people, taking a dip in the Sangam. Tight security arrangements are in place.
07-01-26 08:00 pm
HK News Desk
ಬಂಧನ ವೇಳೆ ಪೊಲೀಸರ ಎಳೆದಾಟ, ಹರಿದ ಮಹಿಳೆಯ ಬಟ್ಟೆ ;...
07-01-26 03:07 pm
ಮತಪಟ್ಟಿ ಪರಿಷ್ಕರಣೆ ; ಉತ್ತರ ಪ್ರದೇಶದಲ್ಲಿ 2.89 ಕೋ...
07-01-26 12:12 pm
ಬಳ್ಳಾರಿ ಕಾಂಗ್ರೆಸ್ ಕಾರ್ಯಕರ್ತನ ಕುಟುಂಬಕ್ಕೆ 25 ಲಕ...
06-01-26 08:23 pm
ಸಿನಿಮಾ ಥಿಯೇಟರ್ನ ಮಹಿಳಾ ಶೌಚಾಲಯದಲ್ಲಿ ವಿಡಿಯೋ ರೆ...
06-01-26 12:57 pm
07-01-26 09:37 pm
HK News Desk
ದೆಹಲಿಯಲ್ಲಿ ಹಿಂಸಾಚಾರ ; ಮಸೀದಿ ಆವರಣದಲ್ಲಿ ಅಕ್ರಮ ಕ...
07-01-26 04:47 pm
ತಮಿಳುನಾಡಿನ ದೀಪೋತ್ಸವಕ್ಕೆ ಹೈಕೋರ್ಟ್ ಅನುಮತಿ ; ಅವಕ...
07-01-26 01:53 pm
ಬಾಂಗ್ಲಾದಲ್ಲಿ ಒಂದೇ ದಿನ ಮತ್ತಿಬ್ಬರು ಹಿಂದುಗಳ ಹತ್ಯ...
06-01-26 12:40 pm
ಹರಿದ್ವಾರ - ಹೃಷಿಕೇಶ ಪರಿಸರದಲ್ಲಿ ಹಿಂದುಯೇತರ ವ್ಯಕ್...
05-01-26 02:13 pm
07-01-26 05:15 pm
Mangalore Correspondent
ಬೋಟನ್ನು ಎಳೆದು ಕಟ್ಟುತ್ತಿದ್ದಾಗ ನದಿಗೆ ಬಿದ್ದು ಮೀನ...
07-01-26 12:10 pm
ವಿಧವೆ ಮೊಮ್ಮಗಳು, ಮರಿ ಮಕ್ಕಳೊಂದಿಗಿದ್ದ ವೃದ್ಧೆಯ ಗು...
06-01-26 08:25 pm
ನವೋದಯ ಟ್ರಸ್ಟ್ ನಿಂದ ಮಹಿಳಾ ಸಬಲೀಕರಣಕ್ಕೆ ಕೊಡುಗೆ ;...
06-01-26 07:51 pm
ಕೋಳಿ ಅಂಕದ ಮೇಲೆ ತೋರುವ ಕಾಳಜಿ, ಸೂರಿಲ್ಲದೆ ಬೀದಿಗೆ...
06-01-26 04:09 pm
06-01-26 07:04 pm
Bangalore Correspondent
Kanachur Hospital, POSCO, Doctor: ಚಿಕಿತ್ಸೆಗೆ...
06-01-26 02:24 pm
ಯಲ್ಲಾಪುರ ; ಮದ್ವೆಗೆ ಒಪ್ಪಿಲ್ಲವೆಂದು ನಡುರಸ್ತೆಯಲ್ಲ...
04-01-26 11:02 pm
Ganja from Bihar: ಬಿಹಾರದಿಂದ ರೈಲಿನಲ್ಲಿ ಗಾಂಜಾ ತ...
04-01-26 06:15 pm
Bank of Baroda, Fraud, Mangalore: ಬ್ಯಾಂಕ್ ಆಫ್...
03-01-26 03:43 pm