ಬ್ರೇಕಿಂಗ್ ನ್ಯೂಸ್
12-12-20 09:57 pm Headline Karnataka News Network ದೇಶ - ವಿದೇಶ
ಚೆನ್ನೈ, ಡಿ.12: ಮಹತ್ವದ ಬೆಳವಣಿಗೆಯಲ್ಲಿ ಸಿಬಿಐ ವಶಕ್ಕೆ ಪಡೆದಿದ್ದ 103 ಕೇಜಿ ಚಿನ್ನ ನಾಪತ್ತೆಯಾಗಿರುವ ಶಂಕೆ ವ್ಯಕ್ತವಾಗಿದ್ದು ಮದ್ರಾಸ್ ಹೈಕೋರ್ಟ್ ತನಿಖೆಗೆ ಆದೇಶ ಮಾಡಿದೆ.
ಚೆನ್ನೈ ನಗರದ ಸುರಾನಾ ಕಂಪೆನಿಗೆ ಸೇರಿದ ಬಿಲ್ಡಿಂಗ್ ನಲ್ಲಿ 2012ರಲ್ಲಿ ಸಿಬಿಐ ದಾಳಿ ನಡೆಸಿದ್ದು, 400.47 ಕೇಜಿ ಚಿನ್ನದ ಗಟ್ಟಿ ಮತ್ತು ಆಭರಣಗಳು ಪತ್ತೆಯಾಗಿದ್ದವು. ಚಿನ್ನ ಮತ್ತು ಬೆಳ್ಳಿಯ ಆಮದು ವ್ಯವಹಾರವನ್ನು ಮಾಡಿಕೊಂಡಿದ್ದ ಸುರಾನಾ ಕಾರ್ಪೊರೇಷನ್ ಲಿಮಿಟೆಡ್, ವಿದೇಶಿ ಆಮದು ನೀತಿಯನ್ನು ಉಲ್ಲಂಘಿಸಿದ ವಿಚಾರದಲ್ಲಿ ಸಿಬಿಐ ದಾಳಿ ನಡೆದಿತ್ತು. ದಾಳಿ ಬಳಿಕ ಚಿನ್ನ ಇದ್ದ ಕಟ್ಟಡವನ್ನು ಸೀಲ್ ಮಾಡಿ ಸಿಬಿಐ ಅಧಿಕಾರಿಗಳು ತೆರಳಿದ್ದರು. ಆದರೆ, ಅಲ್ಲಿದ್ದ 400 ಕೇಜಿ ಚಿನ್ನದ ಸಂಗ್ರಹದ ಪೈಕಿ 103 ಕೇಜಿ ನಾಪತ್ತೆ ಆಗಿರುವ ಬಗ್ಗೆ ಕಳೆದ ಫೆಬ್ರವರಿಯಲ್ಲಿ ತಿಳಿದುಬಂದಿದ್ದು ಸುರಾನಾ ಸಂಸ್ಥೆಯ ಪರವಾಗಿ ಮದ್ರಾಸ್ ಹೈಕೋರ್ಟಿಗೆ ದೂರು ಸಲ್ಲಿಸಲಾಗಿತ್ತು. ವಿಚಾರಣೆ ನಡೆಸಿದ ಹೈಕೋರ್ಟ್, ಸಿಬಿಐ ಅಧಿಕಾರಿಗಳ ವಿರುದ್ಧ ಗರಂ ಆಗಿದ್ದಲ್ಲದೆ ತಮಿಳುನಾಡು ಪೊಲೀಸರ ಮೂಲಕ ತನಿಖೆಗೆ ಆದೇಶ ಮಾಡಿದೆ.
ಆದರೆ, ಸಿಬಿಐ ಪರ ವಕೀಲರು, ತಮಿಳುನಾಡು ಪೊಲೀಸರು ಸಿಬಿಐ ವಿರುದ್ಧ ತನಿಖೆ ಮಾಡುವುದಂದ್ರೆ ಸ್ವತಂತ್ರ ಸಂಸ್ಥೆಯ ಘನತೆಗೆ ಪೆಟ್ಟು ಬಿದ್ದಂತಾಗುತ್ತದೆ. ಸಿಬಿಐ ವಿಭಾಗದ ಮೇಲಧಿಕಾರಿಗಳು ಅಥವಾ ಎನ್ಐಎ ತಂಡದಿಂದ ತನಿಖೆ ನಡೆಸುವಂತೆ ಕೇಳಿಕೊಂಡಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಧೀಶರು, ಪೊಲೀಸರು ಮತ್ತು ಸಿಬಿಐ ಅಧಿಕಾರಿಗಳ ನಡುವೆ ಕೀಳಂದಾಜು ಮಾಡಬಾರದು. ಅವರು ಮೇಲು, ಇವರು ಕೀಳು ಎಂದು ಹೇಳುವಂತಿಲ್ಲ. ಸಿಬಿಐಗೆ ಇದು ಅಗ್ನಿಪರೀಕ್ಷೆ. ಪರೀಕ್ಷೆಯಲ್ಲಿ ಸತ್ಯ ಹೊರಬರಲಿ. ಕಾನೂನು ಎಲ್ಲರಿಗು ಒಂದೇ ಆಗಿರುತ್ತದೆ. ಹಾಗೆ ಭಾವಿಸಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಮಾರ್ಮಿಕ ಉತ್ತರ ನೀಡಿದೆ.
ಸೀಜ್ ಮಾಡಿದ ಬಳಿಕ ನಾವು ಸಿಬಿಐ ಕೋರ್ಟಿಗೆ ಅದರ ಕೀಯನ್ನು ಕೊಟ್ಟಿದ್ದೆವು. ಆದರೆ ಯಾವ ದಿನಾಂಕವೆಂದು ನಮೂದು ಮಾಡಿಲ್ಲ. ಅಲ್ಲದೆ, ಚಿನ್ನವನ್ನು ಪತ್ತೆ ಮಾಡಿದಾಗ ಕಲೆಕ್ಟಿವ್ ಆಗಿ ತೂಕ ಮಾಡಲಾಗಿತ್ತು. ಈಗ ಒಂದೊಂದಾಗೇ ಆಧುನಿಕ ಉಪಕರಣಗಳ ಮೂಲಕ ತೂಕ ಮಾಡಿದ್ದು ಕಡಿಮೆ ಬಂದಿರುವ ಸಾಧ್ಯತೆ ಇದೆ. ಇದರಲ್ಲಿ ಅಧಿಕಾರಿಗಳ ಪಾತ್ರ ಇಲ್ಲವೆಂದು ಸಿಬಿಐ ಪರ ವಕೀಲರು ವಾದಿಸಿದ್ದಕ್ಕೆ ಗರಂ ಆದ ನ್ಯಾಯಾಧೀಶರು, ಚಿನ್ನದ ಭಾರ ಕಡಿಮೆಯಾಗಿದೆ ಎನ್ನುವುದನ್ನು ಪ್ರೂವ್ ಮಾಡಲು ಏನೆಲ್ಲಾ ಹೇಳಬೇಡಿ. ಚಿನ್ನ ತನ್ನ ಭಾರ ಕಳೆದುಕೊಳ್ಳಲು ಅದು ಗಾಂಜಾ ಅಲ್ಲ. ನೂರು ಕೇಜಿ ಆಚೀಚೆ ಆಗಿದೆ ಅಂದರೆ ಅದೇನು ಸಾಮಾನ್ಯ ವಿಚಾರವೇ ಎಂದು ಪ್ರಶ್ನೆ ಮಾಡಿದ್ದಾರೆ.
ಕೊನೆಗೆ ತನಿಖೆಗೆ ಆದೇಶ ಮಾಡಿದ ಕೋರ್ಟ್, ಚೆನ್ನೈ ನಗರದ ಸಿಐಡಿಯ ಮೆಟ್ರೊ ವಿಂಗ್ ನಲ್ಲಿ ಕಳವು ಮತ್ತು ಮೋಸದ ಪ್ರಕರಣದಲ್ಲಿ ಎಫ್ಐಆರ್ ದಾಖಲು ಮಾಡಲು ಸೂಚನೆ ನೀಡಿದ್ದಲ್ಲದೆ ತನಿಖಾಧಿಕಾರಿಯಾಗಿ ಎಸ್ಪಿ ದರ್ಜೆಯ ಅಧಿಕಾರಿಯನ್ನು ನೇಮಿಸಿ ಆರು ತಿಂಗಳಲ್ಲಿ ತನಿಖೆ ಮಾಡಿ ವರದಿ ನೀಡಲು ಆದೇಶ ಮಾಡಿದೆ.
After nearly 100 kilos of gold was reported missing from CBI custody in Chennai, the Madras High Court on Ssaturday directed the Tamil Nadu Crime Branch-CID police to probe the case.
10-08-25 09:12 pm
HK News Desk
ಗುಜರಾತ್, ಮಹಾರಾಷ್ಟ್ರದಂತೆ ನಮಗೂ ಆದ್ಯತೆ ಕೊಡಿ, ಮೆಟ...
10-08-25 06:27 pm
PM Modi, Operation Sindhoor: ಆಪರೇಶನ್ ಸಿಂಧೂರಕ್...
10-08-25 06:06 pm
ಚಾಲಕ ರಹಿತ ಮೆಟ್ರೋ ಹಳದಿ ಮಾರ್ಗಕ್ಕೆ ಪ್ರಧಾನಿ ಮೋದಿ...
10-08-25 01:57 pm
ಗಿಟಾರಿಗೆ ಹೊದಿಕೆ ಹೊದಿಸಿ ಏಳನೇ ಕ್ಲಾಸ್ ಹುಡುಗನ ಸಾವ...
09-08-25 10:12 pm
09-08-25 11:09 pm
HK News Desk
ಯಾರ ಮುಂದೆಯೂ ಭಾರತ ತಲೆ ಬಾಗದು ; ಸಾವಿರ ಬಾರಿ ಯತ್ನಿ...
09-08-25 07:38 pm
ಭದ್ರತಾ ಸಲಹೆಗಾರ ಅಜಿತ್ ದೋವಲ್ - ರಷ್ಯಾ ಉಪ ಪ್ರಧಾನಿ...
09-08-25 02:49 pm
ಮಧ್ಯಪ್ರದೇಶದ ಈ ಜಾಗದಲ್ಲಿದ್ಯಂತೆ ಅಪಾರ ಪ್ರಮಾಣದ ಚಿನ...
07-08-25 10:02 pm
ಸಂಘರ್ಷ ನಿರತ ಜಗತ್ತಿಗೆ ಹಿಂದು ಧರ್ಮದಲ್ಲಿ ಮದ್ದು ಇದ...
07-08-25 09:42 pm
10-08-25 04:32 pm
Udupi Correspondent
Six Arrested, Dharmasthala Incident, Kudla Ra...
10-08-25 02:26 pm
Dharmasthala, Janardhan Poojary, SIT Probe: ದ...
10-08-25 01:01 pm
Mangalore Dharmasthala Case: ಧರ್ಮಸ್ಥಳ ಕೇಸ್ ;...
10-08-25 12:37 pm
No Evidence, Bahubali Hill in Dharmasthala: ಬ...
09-08-25 10:53 pm
08-08-25 10:07 pm
Bangalore Correspondent
ಮಸಾಜ್ ಹೆಸರಲ್ಲಿ ಪುರುಷರಿಗೆ ದೇಹ ಸುಖಕ್ಕೆ ಒತ್ತಾಯ,...
08-08-25 09:44 pm
ಹೆಚ್ಚು ಲೈಕ್ಸ್, ಫಾಲೋವರ್ಸ್ ಸಿಗ್ತಾರೆ ಅಂತ ಕುಖ್ಯಾತ...
08-08-25 12:30 pm
ಕುಖ್ಯಾತ ಕಳ್ಳನಿಗೆ ತನ್ನ ಮನೆಯಲ್ಲೇ ಆಶ್ರಯ ಕೊಟ್ಟಿದ್...
08-08-25 12:27 pm
2014 Kulai Sumathi Prabhu Murder Case: 2014 ರ...
08-08-25 12:21 pm