ಬ್ರೇಕಿಂಗ್ ನ್ಯೂಸ್
02-05-24 09:25 pm HK News Desk ದೇಶ - ವಿದೇಶ
ನವದೆಹಲಿ, ಮೇ.2: ಕುಡಿದು ಡ್ಯಾನ್ಸ್ ಮಾಡುವುದು ಅಥವಾ ಆಡಂಭರದ ಸಮಾರಂಭ ಮಾಡಿದ ಮಾತ್ರಕ್ಕೆ ಅದನ್ನು ಹಿಂದು ವಿವಾಹ ಪದ್ಧತಿ ಎಂದು ಹೇಳಲಾಗುವುದಿಲ್ಲ. ವಿಧಿಬದ್ಧ ಸಂಸ್ಕಾರಯುತ ಕ್ರಮಗಳು ಇಲ್ಲದೇ ಇದ್ದಲ್ಲಿ ಅದನ್ನು ಹಿಂದು ವಿವಾಹ ಎಂದು ಕರೆಯಲಾಗದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಜಸ್ಟಿಸ್ ಬಿವಿ ನಾಗರತ್ನ ಮತ್ತು ಆಗಸ್ಟಿನ್ ಜಾರ್ಜ್ ಮಸೀಹ ಅವರಿದ್ದ ನ್ಯಾಯಪೀಠವು ಈ ಅಭಿಪ್ರಾಯ ನೀಡಿದ್ದು, ಹಿಂದು ವಿವಾಹ ಪದ್ಧತಿ ಎನ್ನುವುದು ಸಂಸ್ಕಾರ, ಪವಿತ್ರ ವಿಧಿ. ಭಾರತೀಯ ಸಮಾಜದಲ್ಲಿ ಹಿಂದು ವಿವಾಹ ಕಾರ್ಯಕ್ರಮಕ್ಕೆ ಶ್ರೇಷ್ಠ ಸ್ಥಾನ ಇದೆ ಎಂದು ಹೇಳಿದೆ. ಇಬ್ಬರು ಪೈಲಟ್ಗಳು ಹಿಂದು ವಿವಾಹ ಪದ್ಧತಿ ಪ್ರಕಾರ ಮದುವೆಯನ್ನೇ ಆಗದೆ ವಿಚ್ಛೇದನ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಪೀಠ, ನೀವು ಅಂಥ ಸಂಬಂಧ ಏರ್ಪಡಿಸುವುದಕ್ಕೂ ಮುನ್ನ ಚೆನ್ನಾಗಿ ಯೋಚಿಸಿ. ಹಿಂದು ವಿವಾಹ ಎನ್ನುವುದಕ್ಕೆ ಭಾರತೀಯ ಸಮಾಜದಲ್ಲಿ ಉನ್ನತ ಮೌಲ್ಯ ಇದೆ, ಅದೊಂದು ಸಂಸ್ಕಾರಯುತ ಕರ್ಮವಾಗಿದೆ.
ಹಿಂದುಗಳಲ್ಲಿ ಮದುವೆ ಎನ್ನುವುದು ಸಾಂಗ್ ಹಾಕಿ ಕುಣಿಯುವುದಲ್ಲ. ಕುಡಿದು ಪಾರ್ಟಿ ಮಾಡುವುದೂ ಅಲ್ಲ. ಮದುವೆ ಹೆಸರಲ್ಲಿ ವರದಕ್ಷಿಣೆ, ಒತ್ತಡದ ಮೇಲೆ ದುಬಾರಿ ಗಿಫ್ಟ್ ವಿನಿಯಮ ಮಾಡಿಕೊಳ್ಳುವುದು ಅನಪೇಕ್ಷಿತ ಘಟನೆಗಳಿಗೆ ಆಸ್ಪದ ನೀಡುತ್ತದೆ. ಮದುವೆ ಎನ್ನುವುದು ವಾಣಿಜ್ಯಿಕವಾದ ಸಂಬಂಧಕ್ಕೂ ಆಸ್ಪದ ಕೊಡಬಾರದು. ಹೆಣ್ಣು ಮತ್ತು ಗಂಡಿನ ನಡುವೆ ಪತಿ- ಪತ್ನಿ ಎನ್ನುವ ಸಮಾಜ ಒಪ್ಪಿತ ಪವಿತ್ರ ಸಂಬಂಧ ಏರ್ಪಡುವುದಕ್ಕೆ ಮದುವೆ ಸಾಕ್ಷಿಯಾಗುತ್ತದೆ. ಭಾರತೀಯ ಸಮಾಜದಲ್ಲಿ ಇದೊಂದು ಮೂಲಸ್ತರದ ಪವಿತ್ರ ಬಂಧ ಎಂಬುದಾಗಿ ಸುಪ್ರೀಂ ಕೋರ್ಟ್ ಅಭಿಪ್ರಾಯ ಪಟ್ಟಿದೆ.
ಎರಡು ವ್ಯಕ್ತಿತ್ವಗಳ ನಡುವೆ ಸುದೀರ್ಘ ಕಾಲದ ಬಂಧನ ಮದುವೆಯಲ್ಲಿರುತ್ತದೆ. ಸಮಾಜದ ನಡುವೆ ವಿಧಿಬದ್ಧ ಸಂಸ್ಕಾರ ರಹಿತವಾಗಿ ಸಂಬಂಧಗಳನ್ನು ಏರ್ಪಡಿಸಿದರೆ ಅದು ಪತಿ- ಪತ್ನಿಯ ಸಂಬಂಧ ಆಗುವುದಿಲ್ಲ. ಯುವಕ- ಯುವತಿಯರು ಇದನ್ನು ತಿಳಿದುಕೊಳ್ಳಬೇಕಾಗಿದೆ. ಸಪ್ತಪದಿ ಇಲ್ಲದೆ ಹಿಂದು ವಿವಾಹ ಪದ್ಧತಿ ಪೂರ್ಣವಾಗಲ್ಲ. ಅಗ್ನಿಯ ಎದುರಲ್ಲಿ ಗಂಡು, ಹೆಣ್ಣನ್ನು ತನ್ನ ಅರ್ಧಾಂಗಿಯಾಗಿ ಜೀವನ ಪರ್ಯಂತ ಸಮಾನವಾಗಿ ನೋಡಿಕೊಳ್ಳುತ್ತೇನೆಂದು ಶಪಥ ಸ್ವೀಕರಿಸುತ್ತಾನೆ. ಹಿಂದು ವಿವಾಹ ಕಾಯ್ದೆಯಲ್ಲಿ ಮದುವೆಯ ಸಂಸ್ಕಾರವನ್ನು ಪವಿತ್ರವೆಂದು ಹೇಳಲಾಗಿದೆ. ಭಾರತೀಯ ಸಮಾಜದಲ್ಲಿ ನೂರಾರು ವರ್ಷಗಳಿಂದ ಈ ಪದ್ಧತಿ ನಡೆದುಬಂದಿದ್ದು, ಹೊಸ ಕುಟುಂಬಕ್ಕೆ ಮದುವೆ ನಾಂದಿ ಹಾಡುತ್ತದೆ ಎಂದು ನ್ಯಾಯಪೀಠ ಹೇಳಿದೆ. ಕೊನೆಗೆ ಈ ಕುರಿತು ಪತ್ನಿ ಕಡೆಯವರು ಸಲ್ಲಿಸಿದ್ದ ವರದಕ್ಷಿಣೆ ಕಿರುಕುಳ ಕುರಿತ ಅರ್ಜಿ ಮತ್ತು ವಿಚ್ಛೇದನ ಅರ್ಜಿಯನ್ನು ಕೋರ್ಟ್ ವಜಾ ಮಾಡಿದೆ.
A Hindu marriage is not an event for “song and dance”, “wining and dining” or a commercial transaction, the Supreme Court has observed and said it cannot be recognised in the “absence of a valid ceremony” under the Hindu Marriage Act.
16-08-25 10:03 pm
Bangalore Correspondent
ಸೆ.9ರಂದು ಉಪ ರಾಷ್ಟ್ರಪತಿ ಚುನಾವಣೆ ; ಬಿಹಾರ ರಾಜ್ಯಪ...
16-08-25 09:58 pm
Dharmasthala, Eshwar kandre: ಧರ್ಮಸ್ಥಳ ತಲೆಬುರು...
16-08-25 09:15 pm
BJP, Dharmasthala, DK Shivakumar, SIT Probe:...
16-08-25 08:05 pm
ಧರ್ಮಸ್ಥಳ ಪ್ರಕರಣದಲ್ಲಿ ಸುಳ್ಳು ಹೇಳಿ, ಅಪಪ್ರಚಾರ ಮಾ...
15-08-25 10:29 pm
17-08-25 09:09 pm
HK News Desk
ಜಮ್ಮು, ಕಾಶ್ಮೀರದಲ್ಲಿ ಮತ್ತೆ ಮೇಘ ಸ್ಫೋಟ, ಏಳು ಮಂದಿ...
17-08-25 03:02 pm
ಭಾರತಕ್ಕೆ ಮರಳಿದ ಗಗನಯಾತ್ರಿ ಶುಭಾಂಶು ಶುಕ್ಲಾ ; ದೆಹ...
17-08-25 12:54 pm
Dharmasthala, Dk Shivakumar, Pralhad Joshi: ಧ...
16-08-25 03:34 pm
ಕೆಂಪುಕೋಟೆಯಲ್ಲಿ ಸತತ 12ನೇ ಬಾರಿಗೆ ಸ್ವಾತಂತ್ರ್ಯೋತ್...
15-08-25 08:46 pm
17-08-25 11:06 pm
Mangalore Correspondent
Mangalore Rain, School Holiday: ಚಂಡಮಾರುತಕ್ಕೆ...
17-08-25 10:50 pm
Mangalore, Thokottu, Police: ತೊಕ್ಕೊಟ್ಟು ಮೊಸರು...
17-08-25 05:26 pm
Mangalore, Talapady Toll Plaza Fight: ಟೋಲ್ ತಪ...
17-08-25 04:13 pm
Landslide at Shiradi Ghat: ಭಾರೀ ಮಳೆಗೆ ಶಿರಾಡಿ...
16-08-25 11:11 pm
17-08-25 10:07 pm
Mangalore Correspondent
Mangalore Police, Drugs, Arrest: ಗಾಂಜಾ ಸೇವನೆ...
16-08-25 10:49 pm
Bengaluru Woman Hurls Abuses at Traffic Cops:...
16-08-25 07:06 pm
ಉತ್ತರ ಪ್ರದೇಶದಲ್ಲಿ ಮತ್ತೊಂದು ಮತಾಂತರ ಜಾಲ ; ಹಿಂದು...
16-08-25 11:25 am
Gold Robbery, Mangalore, Kerala: ಕೇರಳದ ಚಿನ್ನದ...
16-08-25 10:20 am