ವಾಹನ ಸವಾರರಿಗೆ ಗುಡ್​ ನ್ಯೂಸ್​ ; ಮತ್ತೆ 50% ದಂಡ ವಿನಾಯಿತಿ ಆಫರ್​, ಯಾವಾಗಿಂದ ? 

21-11-25 10:19 am       Bangalore Correspondent   ಕರ್ನಾಟಕ

ರಾಜ್ಯ ಕಾಂಗ್ರೆಸ್ ಸರ್ಕಾರ ಮತ್ತೆ ವಾಹನ ಸವಾರರಿಗೆ ಗುಡ್​ ನ್ಯೂಸ್ ನೀಡಿದೆ. ಈ ಹಿಂದೆ ತಂದಿದ್ದ ಶೇ.50ರಷ್ಟು ಟ್ರಾಫಿಕ್ ದಂಡ ರಿಯಾಯಿತಿಯನ್ನ ಇದೀಗ ಮತ್ತೆ ಜಾರಿಗೆ ತಂದಿದೆ. ಈ ಬಗ್ಗೆ ಸರ್ಕಾರ ಮಹತ್ತರ ಘೋಷಣೆ ಮಾಡಿದ್ದು, ಆದೇಶ ಹೊರಡಿಸಿದೆ. 

ಬೆಂಗಳೂರು, ನ.21 : ರಾಜ್ಯ ಕಾಂಗ್ರೆಸ್ ಸರ್ಕಾರ ಮತ್ತೆ ವಾಹನ ಸವಾರರಿಗೆ ಗುಡ್​ ನ್ಯೂಸ್ ನೀಡಿದೆ. ಈ ಹಿಂದೆ ತಂದಿದ್ದ ಶೇ.50ರಷ್ಟು ಟ್ರಾಫಿಕ್ ದಂಡ ರಿಯಾಯಿತಿಯನ್ನ ಇದೀಗ ಮತ್ತೆ ಜಾರಿಗೆ ತಂದಿದೆ. ಈ ಬಗ್ಗೆ ಸರ್ಕಾರ ಮಹತ್ತರ ಘೋಷಣೆ ಮಾಡಿದ್ದು, ಆದೇಶ ಹೊರಡಿಸಿದೆ. 

50 ಪರ್ಸೆಂಟ್ ದಂಡ ವಿನಾಯಿತಿ

ವಾಹನ ಸವಾರರಿಗೆ ಬಾಕಿ ಇರುವ ಸಂಚಾರ ದಂಡದ ಕಟ್ಟಲು ಸುಲಭವಾಗುವಂತೆ ರಾಜ್ಯ ಸರ್ಕಾರ ಬಿಗ್​ ಆಫರ್​ ನೀಡಿದೆ. ಈ ಹಿಂದೆ ಕೂಡ 50 ಪರ್ಸೆಂಟ್ ದಂಡ ವಿನಾಯಿತಿಗೆ ಭರ್ಜರಿ ರಿಯಾಯಿತಿ ಸಿಕ್ಕಿತ್ತು. ಇದೀಗ ಮತ್ತೆ ವಾಹನ ಸವಾರರಿಗೆ ಮೇಲೆ ಶೇ.50  ರಿಯಾಯಿತಿ ಘೋಷಿಸಿದೆ. ರಾಜ್ಯ ಸಾರಿಗೆ ಇಲಾಖೆ ಅಧೀನ ಕಾರ್ಯದರ್ಶಿ ರಂಗಪ್ಪ ಕರಿಗಾರ ಅಧಿಕೃತ ಆದೇಶ ಹೊರಡಿಸಿದ್ದಾರೆ.

ಸಂಚಾರ ನಿಯಮ ಉಲ್ಲಂಘನೆ ದಂಡದಲ್ಲಿ ಮತ್ತೆ ಆಫರ್ ನೀಡಿದ್ದು, ಸರ್ಕಾರದ ಆದೇಶದಂತೆ (ನವೆಂಬರ್ 21) ರಾಜ್ಯದಾದ್ಯಂತ 50% ದಂಡ ರಿಯಾಯಿತಿ ಯೋಜನೆ ಜಾರಿಗೆ ಬರಲಿದ್ದು, ಈ ಅವಕಾಶ ಡಿಸೆಂಬರ್ 12 ರವರೆಗೆ ಮಾತ್ರ ಲಭ್ಯವಿರಲಿದೆ. ಚಾಲಕರು ಈ ಅವಧಿಯೊಳಗೆ ತಮ್ಮ ಬಾಕಿ ಇರುವ ಸಂಚಾರ ದಂಡಗಳನ್ನು 50% ರಿಯಾಯಿತಿಯಲ್ಲಿ ಪಾವತಿಸಬಹುದು.

ಹಲವು ತಿಂಗಳಿಂದ ದಂಡ ಪಾವತಿ ಉಳಿಸಿಕೊಂಡಿರುವ ವಾಹನ ಸವಾರರು ಇದೀಗ ಆಫರ್​ ಬಳಸಿ ದಂಡ ಪಾವತಿಸಬಹುದಾಗಿದೆ. ಬೆಂಗಳೂರಿನಲ್ಲಿ ಸಂಚಾರ ಪೊಲೀಸ್‌ ಠಾಣೆಗಳು, ಸಂಚಾರ ನಿರ್ವಹಣಾ ಕೇಂದ್ರ, ಕರ್ನಾಟಕ ಒನ್‌ ಹಾಗೂ ಬೆಂಗಳೂರು ಒನ್‌ ವೆಬ್‌ ಸೈಟ್‌ ಗಳಲ್ಲಿ ದಂಡದ ವಿವರ ಪಡೆದು ಅಲ್ಲೇ ಹಣ ಪಾವತಿಸಬಹುದು. ರಿಯಾತಿ ಬಳಸಿಕೊಳ್ಳಲು ಸರ್ಕಾರ ಸೂಚಿಸಿದೆ. ಕಳೆದ ಬಾರಿ ಕೂಡ ಆಫರ್​​ ನೀಡಲಾಗಿದ್ದು, ಭರ್ಜರಿ ದಂಡದ ಕಲೆಕ್ಷನ್​ ಆಗಿತ್ತು.

The Karnataka Congress government has once again brought good news for vehicle owners by reintroducing the 50% traffic fine rebate scheme. The state government has issued a new order announcing the revival of the earlier rebate offer.