DK Suresh, CM Siddaramaiah : ಸಿಎಂ ಕುರ್ಚಿ ಕ್ಲೈಮ್ಯಾಕ್ಸ್ ;  ನನ್ನಣ್ಣನಿಗೆ ಅದೃಷ್ಟ ಇದ್ದರೆ ಸಿಎಂ ಆಗ್ತಾರೆ ;  ಶ್ರಮಕ್ಕೆ ಪ್ರತಿಫಲ ಸಿಗುತ್ತೆ, ಸಿದ್ದರಾಮಯ್ಯ ಕೊಟ್ಟ ಮಾತು ತಪ್ಪಲ್ಲ, ಸಿದ್ದುಗೆ ಅಧಿಕಾರ ಹಂಚಿಕೆಯ ವಾಗ್ದಾನ ನೆನಪಿಸಿದ್ರಾ ಡಿಕೆ ಸುರೇಶ್ ?

20-11-25 03:01 pm       Bangalore Correspondent   ಕರ್ನಾಟಕ

ಕೊಟ್ಟ ಮಾತಿನಂತೆ ನಡೆಯುವವರು ಸಿಎಂ ಸಿದ್ದರಾಮಯ್ಯ. ನನ್ನಣ್ಣನಿಗೆ ಅದೃಷ್ಟ ಇದ್ದರೆ ಸಿಎಂ ಆಗ್ತಾರೆ ಎಂದು ಮಾಜಿ ಸಂಸದ ಡಿಕೆ ಸುರೇಶ್ ಮಾರ್ಮಿಕ ಮಾತು ಆಡಿದ್ದಾರೆ. ಬೆಂಗಳೂರಿನಲ್ಲಿ ಗುರುವಾರ ಮಾತನಾಡಿದ ಅವರು, ಎಲ್ಲದಕ್ಕೂ ಹೈಕಮಾಂಡ್ ಸೂಕ್ತ ಸಂದರ್ಭದಲ್ಲಿ ಉತ್ತರ ಕೊಡುತ್ತದೆ ಎಂದರು.

ಬೆಂಗಳೂರು, ನ 20 : ಕೊಟ್ಟ ಮಾತಿನಂತೆ ನಡೆಯುವವರು ಸಿಎಂ ಸಿದ್ದರಾಮಯ್ಯ. ನನ್ನಣ್ಣನಿಗೆ ಅದೃಷ್ಟ ಇದ್ದರೆ ಸಿಎಂ ಆಗ್ತಾರೆ ಎಂದು ಮಾಜಿ ಸಂಸದ ಡಿಕೆ ಸುರೇಶ್ ಮಾರ್ಮಿಕ ಮಾತು ಆಡಿದ್ದಾರೆ. ಬೆಂಗಳೂರಿನಲ್ಲಿ ಗುರುವಾರ ಮಾತನಾಡಿದ ಅವರು, ಎಲ್ಲದಕ್ಕೂ ಹೈಕಮಾಂಡ್ ಸೂಕ್ತ ಸಂದರ್ಭದಲ್ಲಿ ಉತ್ತರ ಕೊಡುತ್ತದೆ ಎಂದರು.

ಕೊಟ್ಟ ಮಾತಿನಂತೆ ನಡೆಯುವವರು ಸಿದ್ದರಾಮಯ್ಯ. ಸಿದ್ದರಾಮಯ್ಯಗೂ ಜವಾಬ್ದಾರಿ ಇದೆ. ಸಿದ್ದರಾಮಯ್ಯ ಯಾರಿಗೂ ಕೊಟ್ಟ ಮಾತಿಗೆ ತಪ್ಪಿಲ್ಲ. ಹಿಂದಿನ ಸರ್ಕಾರದಲ್ಲಿ ಕೂಡ ಮಾತಿನ ಪ್ರಕಾರವೇ ನಡೆದಿದ್ದಾರೆ. ಈಗಿನ ಸರ್ಕಾರದಲ್ಲೂ ಕೂಡ ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಿದ್ದಾರೆ ಹಾಗೂ ಮುಂದೆಯೂ ಕೊಟ್ಟ ಮಾತಿನ ಪ್ರಕಾರವೇ ನಡೆದುಕೊಳ್ಳುತ್ತಾರೆ ಎಂದರು.

ಶ್ರಮಕ್ಕೆ ಫ್ರತಿಫಲ ಖಂಡಿತವಾಗಿ ಇದೆ. ಅದಕ್ಕೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದು. ಒಂದಲ್ಲ ಒಂದು ದಿನ ಡಿಕೆ ಶಿವಕುಮಾರ್ ಶ್ರಮಕ್ಕೆ ಪ್ರತಿಫಲ ಸಿಗುತ್ತದೆ ಕಾದು ನೋಡಬೇಕು ಎಂದು ಹೇಳಿದರು.

ಭರವಸೆ ಮೇಲೆಯೇ ನಾವೆಲ್ಲ ಬದುಕುತ್ತಾ ಇರುವುದು. ನಂಬಿಕೆ ಮೇಲೆಯೇ ಇರುವುದು ಎಲ್ಲರೂ. ನನಗೇನಾದರೂ ಒಳ್ಳೆಯದಾಗತ್ತೆ ಎಂದೇ ನೀವೂ ಕೆಲಸ ಮಾಡ್ತಿರೋದು. ವಚನ ಭ್ರಷ್ಟತೆಯ ಬಗ್ಗೆ ಹೈಕಮಾಂಡ್ ಅನ್ನು ಕೇಳಬೇಕು.‌ನಾನು ಹೈಕಮಾಂಡ್ ಭೇಟಿ ಮಾಡಿದ್ದು ರಾಜಕೀಯ ಕಾರಣಕ್ಕಲ್ಲ. ನ್ಯಾಯಾಲಯದ ಕೇಸ್ ಸಲುವಾಗಿ ನಾನು ದೆಹಲಿಗೆ ಹೋಗಿದ್ದು.ಸಿಎಂ ನಮಗೇನೂ ಹೊಸಬರಲ್ಲ, ಸಿಎಂ ಹಳಬರು. ನಮ್ಮ ಸಿಎಂ ಹತ್ರ ನಾನು ಮಾತಾಡುವುದಕ್ಕೆಆತಂಕ ಏನಿದೆ? ನಾನು ಬಿಜೆಪಿ ಸಿಎಂ ಹತ್ರ ಮಾತಾಡಿದ್ದೀನಾ. ನಮ್ಮ ಸಿಎಂ ಹತ್ರ ನಾನು ಮಾತಾಡಿದ್ದಕ್ಕೆ ಬೇಜಾರು ಯಾಕೆ ಮಾಡ್ಕೋತಿರಿ? ಎಂದು ಪ್ರಶ್ನಿಸಿದರು.

ಯಾರೇ ಅಧ್ಯಕ್ಷರಾಗಿ ಕೆಲಸ ಮಾಡಿದರೂ ಅವರಿಗೆ ಡಿಕೆಶಿವಕುಮಾರ್ ಸಹಕಾರ ಕೊಡ್ತಾರೆ. ರಿಸೈನ್ ಮಾಡಲ್ಲ ಕೆಪಿಸಿಸಿಗೆ ಅಂತ ಡಿಕೆಶಿ ನಿಮ್ಮ ಹತ್ತಿರ ಏನೂ ಹೇಳಿಲ್ವಲ್ಲ. ಪಕ್ಷದ ಕೆಲಸವನ್ನು ಡಿಕೆಶಿವಕುಮಾರ್ ಏನೆಲ್ಲ ಮಾಡಬೇಕೋ ಮಾಡಿದ್ದಾರೆ ಎಂದರು.

ಕೆಲವರು ಕಾರ್ಯಕರ್ತರ ಉತ್ಸಾಹ ಕುಗ್ಗಿಸುವ ಮಾತನಾಡುತ್ತಿರುತ್ತಾರೆ. ಕಾರ್ಯಕರ್ತರಿಗೆ ಆತ್ಮ ಸ್ಥೈರ್ಯ ತುಂಬುವುದು ಪಕ್ಷದ ಅಧ್ಯಕ್ಷರ ಜವಾಬ್ದಾರಿ. ಡಿಕೆ ಶಿವಕುಮಾರ್ ಗೆ ಏನೋ ದಾಖಲೆ ಅವಧಿ ಮಾಡಬೇಕು ಎಂಬುದಿಲ್ಲ. ಡಿಕೆಶಿ ಕನಸು ದಾಖಲೆ ಮಾಡಬೇಕು ಎಂಬುದೇನಿಲ್ಲ. ನಾವು ರಾಜಕಾರಣದಲ್ಲಿ ಶಾಶ್ವತವಾಗಿ ಇರಬೇಕು ಅಂತಂದ್ರೆ ಯಾರಿಗೇ ಆದ್ರೂ ನಾವು ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು ಎಂದು ಮಾರ್ಮಿಕವಾಗಿ ಹೇಳಿದರು.

Former MP DK Suresh made a striking remark on Thursday, stating that if his brother DK Shivakumar has the luck, he will certainly become the Chief Minister of Karnataka. Speaking to the media in Bengaluru, Suresh said that Chief Minister Siddaramaiah is known for keeping his word and that the Congress high command will respond at the right time regarding the leadership issue.