ಬ್ರೇಕಿಂಗ್ ನ್ಯೂಸ್
07-02-24 01:27 pm HK News Desk ದೇಶ - ವಿದೇಶ
ನವದೆಹಲಿ, ಫೆ.7: ದೇಶದ ರಾಜಧಾನಿ ದೆಹಲಿಯಲ್ಲೇ ನಿಂತು ರಾಜ್ಯದ ಕಾಂಗ್ರೆಸ್ ನಾಯಕರು ಮೋದಿ ಸರ್ಕಾರದ ವಿರುದ್ಧ ಅಬ್ಬರಿಸಿದ್ದಾರೆ. ಬಿಜೆಪಿಯವರೇ ನೀವು ರಾಜ್ಯಕ್ಕೆ ದ್ರೋಹ ಮಾಡ್ತಿದ್ದೀರಿ.. ಕರ್ನಾಟಕದಲ್ಲಿ ನಿಮ್ಮ 27 ಸಂಸದರಿದ್ದಾರೆ. ಇಡೀ ದೇಶದಲ್ಲಿ ಎರಡನೇ ಅತಿ ಹೆಚ್ಚು ತೆರಿಗೆಯನ್ನು ಕೇಂದ್ರಕ್ಕೆ ಕರ್ನಾಟಕ ಕೊಡುತ್ತದೆ. ಆದರೆ, ನೀವು ರಾಜ್ಯಕ್ಕೆ ಮಲತಾಯಿ ಧೋರಣೆ ಮಾಡುತ್ತಿದ್ದೀರಿ. ರಾಜ್ಯ 1ಲಕ್ಷ 87 ಸಾವಿರ ಕೋಟಿ ರೂಪಾಯಿ ನಷ್ಟ ಮಾಡಿದ್ದೀರಿ ಎಂದು ಸಿಎಂ ಸಿದ್ದರಾಮಯ್ಯ ಕೇಂದ್ರ ಮೋದಿ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ದೆಹಲಿಯ ಜಂತರ್ ಮಂತರ್ ನಲ್ಲಿ ರಾಜ್ಯದ 136 ಶಾಸಕರು ಸೇರಿದಂತೆ ಕಾಂಗ್ರೆಸ್ ಮುಖಂಡರು ಪ್ರತಿಭಟನಾ ಧರಣಿ ನಡೆಸಿದ್ದು, ರಾಜ್ಯಕ್ಕೆ ಅನುದಾನದಲ್ಲಿ ಕೇಂದ್ರ ಸರಕಾರ ತಾರತಮ್ಯ ಮಾಡ್ತಾ ಇದೆಯೆಂದು ಆರೋಪಿಸಿದ್ದಾರೆ. 14ನೇ ಹಣಕಾಸು ಆಯೋಗದಲ್ಲಿ ದಕ್ಷಿಣ ಭಾರತದ ಗೋವಿಂದ ರಾವ್ ಇದ್ದರು. 15ನೇ ಹಣಕಾಸು ಆಯೋಗದಲ್ಲಿ ದಕ್ಷಿಣದವರು ಯಾರೂ ಇರಲಿಲ್ಲ. ಹೀಗಾಗಿ ಮೋದಿ ಅವರೇ ನಮಗೆ ದೋಖಾ ಮಾಡಿದ್ದಾರೆ. 15ನೇ ಹಣಕಾಸು ಆಯೋಗದ ಪ್ರಕಾರ, 62098 ಕೋಟಿ ನಷ್ಟ ಆಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. 2017-18ರಲ್ಲಿ ಕೇಂದ್ರ ಸರಕಾರದ ಬಜೆಟ್ ಗಾತ್ರ 21,46,735 ಕೋಟಿ ಇತ್ತು. ಅಂದು 31908 ಕೋಟಿ ಅನುದಾನ ಕರ್ನಾಟಕಕ್ಕೆ ದೊರಕಿತ್ತು. 2019-20ರಲ್ಲಿ ಕೇಂದ್ರ ಬಜೆಟ್ 27,27,819 ಕೋಟಿ ಇತ್ತು. ಕರ್ನಾಟಕದ ಅನುದಾನ 54,814 ಕೋಟಿ ಕೊಡಲಾಗಿತ್ತು. ಆದರೆ 2023-24ರಲ್ಲಿ ಕೇಂದ್ರ ಬಜೆಟ್ ಗಾತ್ರ 45 ಲಕ್ಷ ಕೋಟಿಗೇರಿದೆ. ರಾಜ್ಯಕ್ಕೆ ಅನುದಾನ ದೊರಕಿದ್ದು 50257 ಕೋಟಿ ಮಾತ್ರ. ಕೇಂದ್ರದ ಬಜೆಟ್ ಗಾತ್ರ ಡಬಲ್ ಆಗಿದ್ದರೆ, ನಮ್ಮ ಅನುದಾನ ಹೆಚ್ಚಲಿಲ್ಲ ಎಂದು ದೂರಿದರು.
ಕರ್ನಾಟಕದಿಂದಲೇ ಅತಿ ಹೆಚ್ಚು ತೆರಿಗೆ ಪಡೆದು, ಅನುದಾನ ಕೊಡದೇ ಇರುವುದು ಜನತೆಗೆ ಮಾಡಿದ ಅನ್ಯಾಯ ಅಲ್ಲವೇ ಎಂದು ಕೇಳಿದ ಸಿದ್ದರಾಮಯ್ಯ, ರಾಜ್ಯದಲ್ಲಿ ಇಷ್ಟೊಂದು ಸಂಸದರಿದ್ದರೂ ಮೋದಿ ಬಳಿ ಅನುದಾನ ಕೇಳುವ ತಾಕತ್ತು ಇಲ್ಲ. ಮೋದಿ ತಲೆ ಅಲ್ಲಾಡಿಸು ಅಂದ್ರೆ ಆಡಿಸುತ್ತಾರೆ, ಇಲ್ಲಾಂದ್ರೆ ತಲೆ ಬಗ್ಗಿಸುತ್ತಾರೆ, ಮೋದಿ ಮುಂದೆ ನಿಲ್ಲುವ ಧೈರ್ಯ ಸಂಸದರಿಗೆ ಇಲ್ಲ. ಈ ಬಾರಿ ರಾಜ್ಯದಲ್ಲಿ ಬರ ಬಂದಿದ್ದರಿಂದ ಪರಿಹಾರಕ್ಕಾಗಿ 17 ಸಾವಿರ ಕೋಟಿ ಕೊಡುವಂತೆ ಕೇಳಿದ್ದೆವು. ಒಂದು ರೂಪಾಯಿ ಕೊಟ್ಟಿಲ್ಲ. ತುರ್ತು ಪರಿಹಾರಕ್ಕಾಗಿ ಇರುವ ಎನ್ ಡಿಆರ್ ಎಫ್ ಗೂ ನಯಾಪೈಸೆ ಅನುದಾನ ಕೊಟ್ಟಿಲ್ಲ ಎಂದು ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಜಿಎಸ್ಟಿ ಸಂಗ್ರಹವನ್ನು ವೈಜ್ಞಾನಿಕ ರೀತಿಯಲ್ಲಿ ಮಾಡಿ ಎಂದು ಹೇಳಿದ್ದೆವು. ಸೆಸ್, ಸೇಲ್ಸ್ ಟ್ಯಾಕ್ಸ್ ನಲ್ಲಿ ರಾಜ್ಯಕ್ಕೆ ನಷ್ಟ ಆಗಿರೋದನ್ನು ತಿರುಗಿ ಕೊಡುತ್ತೇವೆ ಎಂದಿದ್ದರು. ಜಿಎಸ್ಟಿಯಲ್ಲಿ 15 ಪರ್ಸೆಂಟ್ ಹಿಂತಿರುಗಿ ಬರಬೇಕಿತ್ತು. ಇದರಲ್ಲಿ ಕರ್ನಾಟಕಕ್ಕೆ 59 ಸಾವಿರ ಕೋಟಿ ನಷ್ಟ ಆಗಿದೆ. ರಾಜ್ಯದಿಂದ 4 ಲಕ್ಷ ಕೋಟಿಗೂ ಹೆಚ್ಚು ತೆರಿಗೆ ಸಂಗ್ರಹ ಆಗುತ್ತಿದ್ದರೆ, ಇವರು ನಮಗೆ ತಿರುಗಿ ಕೊಡದೆ ಅನ್ಯಾಯ ಮಾಡುತ್ತಿದ್ದಾರೆ. ಅಂದರೆ, ನಾವು ನೂರು ರೂ. ಕೊಟ್ರೆ ಹಿಂತಿರುಗಿ ಬರೋದು 13 ರೂ. ಮಾತ್ರ ಎಂದು ಅಂಕಿ ಅಂಶಗಳ ಸಹಿತ ವಿವರಿಸಿದ್ದಾರೆ. ಬೆಳಗ್ಗೆ 11 ಗಂಟೆಯಿಂದ 1 ಗಂಟೆಯ ವರೆಗೆ ಧರಣಿ ನಡೆಸಿದ್ದು, ಕೇಂದ್ರ ಬಿಜೆಪಿ ಸರಕಾರದ ವಿರುದ್ಧ ಧಿಕ್ಕಾರ ಕೂಗಿದ್ದಾರೆ.
Congress leaders in the national capital stood in the national capital and shouted slogans against the Modi government. Bjp ji, you are betraying the state. You have 27 MPs in Karnataka. Karnataka pays the second highest tax to the Centre in the entire country. But you are giving step-motherly treatment to the state. Karnataka Chief Minister Siddaramaiah on Sunday said that the state has suffered a loss of Rs 1.87 lakh crore.
08-05-25 11:07 pm
Bangalore Correspondent
U T Khader, Dinesh Gundurao, Suhas Shetty Mur...
08-05-25 07:50 pm
Karwar high alert: ಕಾರವಾರದಲ್ಲಿ ಹೈ ಎಲರ್ಟ್ ; ಸಮ...
08-05-25 12:23 pm
Special Poojas, Indian Army, Minister Ramalin...
07-05-25 04:07 pm
ಭಾರತ - ಪಾಕ್ ಮಧ್ಯೆ ಉದ್ವಿಗ್ನ ಸ್ಥಿತಿ ; ಮೇ 7 ರಂದು...
06-05-25 11:23 pm
09-05-25 12:33 pm
HK News Desk
India - Pak War update: ಪಾಕಿಸ್ತಾನದ ಎಫ್ -16, ಎ...
09-05-25 12:00 am
New Pope, Robert Francis Prevost;140 ಕೋಟಿ ಸದಸ...
08-05-25 11:44 pm
Pak drone-missile attack; ಚೈನಾ ಮೇಡ್ ಲಾಹೋರ್ ಏರ...
08-05-25 04:57 pm
ರಾಷ್ಟ್ರಪತಿ ದ್ರೌಪದಿ ಮುರ್ಮು ಮೇ 18ರಂದು ಶಬರಿಮಲೆಗೆ...
08-05-25 12:47 pm
09-05-25 03:24 pm
Mangalore Correspondent
Suhas Shetty Murder Case, Speaker UT Khader,...
09-05-25 01:32 pm
Ullal accident, Mangalore: ರಸ್ತೆ ದಾಟುತ್ತಿದ್ದ...
08-05-25 10:54 pm
Satish Kumapla, Mangalore, U T Khader: ಮೂಡಾ ಅ...
08-05-25 09:06 pm
Mangalore Rohan Corporation, Shah Rukh Khan:...
08-05-25 04:52 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm