ಬ್ರೇಕಿಂಗ್ ನ್ಯೂಸ್
05-01-24 09:35 pm HK News Desk ದೇಶ - ವಿದೇಶ
ಚಂಡೀಗಢ, ಜ 05: ಹರ್ಯಾಣ ರಾಜ್ಯದ ಕಾಂಗ್ರೆಸ್ ಶಾಸಕರೊಬ್ಬರ ಮನೆ ಮೇಲೆ ದಾಳಿ ನಡೆಸಿದ ಇಡಿ ಅಧಿಕಾರಿಗಳು ಬೆಚ್ಚಿ ಬಿದ್ದಿದ್ದಾರೆ.
ಹರ್ಯಾಣದ ಕಾಂಗ್ರೆಸ್ ಶಾಸಕ ಸುರೀಂದರ್ ಪನ್ವಾರ್ ಮನೆಯಲ್ಲಿ ಬರೋಬ್ಬರಿ 5 ಕೋಟಿ ರೂ. ನಗದು ಹಣ ಸಿಕ್ಕಿದೆ. 100 ವಿದೇಶಿ ಮದ್ಯದ ಬಾಟಲ್‌ಗಳು ಸಿಕ್ಕಿವೆ. ದೇಶೀಯ ಹಾಗೂ ವಿದೇಶೀ ನಿರ್ಮಿತ 300 ಬಂದೂಕುಗಳು, ಮದ್ದು ಗುಂಡುಗಳೂ ಸಿಕ್ಕಿವೆ. ಜೊತೆಯಲ್ಲೇ ಚಿನ್ನಾಭರಣ, ಚಿನ್ನದ ಬಿಸ್ಕೇಟ್‌ಗಳೂ ಸಿಕ್ಕಿವೆ.
ಈತನ ವಿರುದ್ಧ ಅಕ್ರಮ ಗಣಿಗಾರಿಕೆ ನಡೆಸಿದ ಆರೋಪ ಕೇಳಿ ಬಂದಿತ್ತು. ರಾಷ್ಟ್ರೀಯ ಲೋಕ ದಳದ ಮಾಜಿ ಶಾಸಕ ದಿಲ್ಬಾಗ್ ಸಿಂಗ್ ಎಂಬಾತ ಕೂಡಾ ಕಾಂಗ್ರೆಸ್ ಶಾಸಕನ ಸಹವರ್ತಿ ಆಗಿದ್ದ. ಇವರಿಬ್ಬರೂ ಸೇರಿ ಸಾಕಷ್ಟು ಅಕ್ರಮ ನಡೆಸಿದ್ದಾರೆ ಅನ್ನೋ ಆರೋಪಗಳು ಕೇಳಿ ಬಂದಿದ್ದವು.
ಈ ಆರೋಪಗಳ ಹಿನ್ನೆಲೆಯಲ್ಲಿ ಗುರುವಾರ ಸಂಜೆಯೇ ಕಾಂಗ್ರೆಸ್ ಶಾಸಕ ಸುರೀಂದರ್ ಪನ್ವಾರ್ ಹಾಗೂ ಮಾಜಿ ಶಾಸಕ ದಿಲ್ಬಾಗ್ ಮನೆ ಮೇಲೆ ಇಡಿ ಪ್ರತ್ಯೇಕ ದಾಳಿ ನಡೆಸಿತ್ತು. ದಾಳಿ ವೇಳೆ ಸುರೀಂದರ್ ಪನ್ವಾರ್ ಮನೆಯನ್ನೇ ಪ್ರಮುಖವಾಗಿ ಕೇಂದ್ರೀಕರಿಸಲಾಗಿತ್ತು. ಸುಮಾರು 15 ರಿಂದ 20 ಇಡಿ ಅಧಿಕಾರಿಗಳು ಸುರೀಂದರ್ ಪನ್ವಾರ್ ಮನೆ ಮೇಲೆ ದಾಳಿ ನಡೆಸಿದರು. 6 ವಾಹನಗಳಲ್ಲಿ ಧಾವಿಸಿದ್ದ ಅಧಿಕಾರಿಗಳು, ಶಾಸಕರ ಮನೆ, ಕಚೇರಿ ಹಾಗೂ ಇನ್ನಿತರ ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿ ಪರಿಶೀಲನೆ ನಡೆಸಿದರು.
ದಾಳಿ ವೇಳೆ ಇಡಿ ಅಧಿಕಾರಿಗಳು ನಿಯಮಗಳ ಪ್ರಕಾರ ಶಾಸಕರು ಹಾಗೂ ಅವರ ಕುಟುಂಬಸ್ಥರು, ನೌಕರರ ಫೋನ್‌ಗಳನ್ನು ಮೊದಲು ವಶಕ್ಕೆ ಪಡೆದರು. ಬಳಿಕ ನಡೆದ ತಪಾಸಣೆ ವೇಳೆ ಇಷ್ಟೊಂದು ವಸ್ತುಗಳು ಸಿಕ್ಕಿವೆ.
ಹರ್ಯಾಣದ ಸೋನಿಪತ್ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿರುವ ಸುರೀಂದರ್ ಪನ್ವಾರ್ ಮನೆ, ಐಎನ್‌ಎಲ್‌ಡಿ ಪಕ್ಷದ ಯಮುನಾನಗರ ಮಾಜಿ ಶಾಸಕ ದಿಲ್ಬಾಗ್ ಸಿಂಗ್ ನಿವಾಸ ಸೇರಿದಂತೆ ಯಮುನಾ ನಗರ, ಸೋನಿಪತ್, ಮೊಹಾಲಿ, ಫರೀದಾಬಾದ್, ಚಂಡೀಗಢ, ಹಾಗೂ ಕರ್ನಾಲ್ ನಗರಗಳಲ್ಲಿ ದಾಳಿ ನಡೆಸಿದ ಇಡಿ ಅಧಿಕಾರಿಗಳು ಇಷ್ಟೊಂದು ದೊಡ್ಡ ಮೊತ್ತದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ಇನ್ನು ಇಡಿ ವಶಕ್ಕೆ ಪಡೆದಿರುವ ಚಿನ್ನದ ಬಿಸ್ಕತ್‌ಗಳ ತೂಕವೇ 4 ರಿಂದ 5 ಕೆಜಿ ಇದೆ ಎಂದು ತಿಳಿದು ಬಂದಿದೆ. ಕೇವಲ ಮೂರೇ ಮೂರೂ ಚಿನ್ನದ ಬಿಸ್ಕತ್‌ಗಳ ಗಾತ್ರ 5 ಕೆ. ಜಿ. ಇದೆ!
ಆರೋಪಿ ಶಾಸಕನ ವಿರುದ್ಧ ಅಕ್ರಮ ಗಣಿಗಾರಿಕೆ, ಅಕ್ರಮ ಹಣ ವರ್ಗಾವಣೆ, ಮರಳು ಗಣಿಗಾರಿಕೆ ಸೇರಿದಂತೆ ಹಲವು ಆಪಾದನೆಗಳು ಇದ್ದವು. ಈ ಸಂಬಂಧ 2013ರಲ್ಲೇ ಪ್ರಕರಣಗಳು ದಾಖಲಾಗಿದ್ದವು. ಹರ್ಯಾಣ ಪೊಲೀಸರು ಹಲವು ಪ್ರಕರಣಗಳನ್ನು ದಾಖಲಿಸಿದ್ದರು. ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಕೂಡಾ ಶಾಸಕನಿಂದ ಪ್ರಾಕೃತಿಕ ಸಂಪತ್ತು ಲೂಟಿ ಆಗುತ್ತಿದೆ ಎಂದು ಕಿಡಿ ಕಾರಿತ್ತು.
The enforcement directorate (ED) on Thursday raided the residences of Haryana Congress MLA Surender Panwar and former Indian National Lok Dal (INLD) legislator Dilbagh Singh in Sonepat and Yamunanagar respectively in connection with a money laundering case linked to illegal mining, officials aware of the development said.
08-05-25 11:07 pm
Bangalore Correspondent
U T Khader, Dinesh Gundurao, Suhas Shetty Mur...
08-05-25 07:50 pm
Karwar high alert: ಕಾರವಾರದಲ್ಲಿ ಹೈ ಎಲರ್ಟ್ ; ಸಮ...
08-05-25 12:23 pm
Special Poojas, Indian Army, Minister Ramalin...
07-05-25 04:07 pm
ಭಾರತ - ಪಾಕ್ ಮಧ್ಯೆ ಉದ್ವಿಗ್ನ ಸ್ಥಿತಿ ; ಮೇ 7 ರಂದು...
06-05-25 11:23 pm
09-05-25 06:49 pm
HK News Desk
India Pak War: ಭಾರತ ವಾಯುಪಡೆಯಿಂದ ಭೀಕರ ಪ್ರತಿದಾಳ...
09-05-25 12:33 pm
India - Pak War update: ಪಾಕಿಸ್ತಾನದ ಎಫ್ -16, ಎ...
09-05-25 12:00 am
New Pope, Robert Francis Prevost;140 ಕೋಟಿ ಸದಸ...
08-05-25 11:44 pm
Pak drone-missile attack; ಚೈನಾ ಮೇಡ್ ಲಾಹೋರ್ ಏರ...
08-05-25 04:57 pm
09-05-25 11:07 pm
Mangalore Correspondent
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
Ullal accident, Mangalore: ರಸ್ತೆ ದಾಟುತ್ತಿದ್ದ...
08-05-25 10:54 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm