ಬ್ರೇಕಿಂಗ್ ನ್ಯೂಸ್
03-12-23 09:47 pm HK News Desk ದೇಶ - ವಿದೇಶ
ಹೈದರಾಬಾದ್, ಡಿ.3: ತೆಲಂಗಾಣದಲ್ಲಿ ಆಡಳಿತ ವಿರೋಧಿ ಅಲೆಗೆ ಸಿಲುಕಿದ ಹಾಲಿ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ನೇತೃತ್ವದ ಭಾರತ್ ರಾಷ್ಟ್ರ ಸಮಿತಿ ಸೋಲುಂಡಿದೆ. ಕಾಂಗ್ರೆಸ್ 63 ಸ್ಥಾನಗಳೊಂದಿಗೆ ಸರಳ ಬಹುಮತ ಪಡೆದು ಅಧಿಕಾರ ಹಿಡಿಯುವತ್ತ ಸಾಗಿದೆ. ಈ ನಡುವೆ, ಹಾಲಿ ಮತ್ತು ಭಾವಿ ಮುಖ್ಯಮಂತ್ರಿಗಳನ್ನು ಸೋಲಿಸಿ ಸೋಶಿಯಲ್ ಮೀಡಿಯಾದಲ್ಲಿ ಸ್ಟಾರ್ ಐಕಾನ್ ಆದವರು ಬಿಜೆಪಿಯಲ್ಲಿ ಸ್ಪರ್ಧಿಸಿದ್ದ ಕಾಟಿಪಲ್ಲಿ ವೆಂಕಟರಮಣ ರೆಡ್ಡಿ.
ಕಾಮರೆಡ್ಡಿ ಕ್ಷೇತ್ರದಲ್ಲಿ ಕೆಸಿಆರ್ ನಾಲ್ಕು ಬಾರಿ ಶಾಸಕರಾಗಿ ತನ್ನದೇ ಅಧಿಪತ್ಯ ಸ್ಥಾಪಿಸಿದ್ದರು. ಹೀಗಾಗಿ ಕಾಮರೆಡ್ಡಿ ಕ್ಷೇತ್ರ ತನಗೆ ಸುಲಭದ ಹಾದಿಯೆಂದೇ ಕೆಸಿಆರ್ ಭಾವಿಸಿದ್ದರು. ಇದೇ ಕಾರಣಕ್ಕೆ ತನ್ನ ವಿರುದ್ಧ ಮಾತಿನ ಬಾಣ ಬಿಡುತ್ತಿದ್ದ ಕಾಂಗ್ರೆಸಿನ ರೇವಂತ ರೆಡ್ಡಿಗೆ ತಾಕತ್ತಿದ್ದರೆ ತನ್ನ ವಿರುದ್ಧ ಕಾಮರೆಡ್ಡಿ ಕ್ಷೇತ್ರಕ್ಕೆ ಬಂದು ಸ್ಪರ್ಧೆ ಮಾಡು ಎಂದು ಸವಾಲು ಹಾಕಿದ್ದರು. ಸವಾಲನ್ನು ಸ್ವೀಕರಿಸಿದ್ದ ರೇವಂತ ರೆಡ್ಡಿ ಕಾಮರೆಡ್ಡಿ ಕ್ಷೇತ್ರದಲ್ಲಿಯೇ ಸ್ಪರ್ಧಿಸಿದ್ದರು. ಆದರೆ, ಇವರಿಬ್ಬರೂ ಕ್ಷೇತ್ರದಿಂದ ಹೊರಗಿನವರಾಗಿದ್ದು, ಹೈದರಾಬಾದಿನಲ್ಲೇ ವಾಸ ಇದ್ದವರಾಗಿದ್ದರು.
ಇದರ ನಡುವೆ, ಬಿಜೆಪಿಯಿಂದ ಸ್ಪರ್ಧಿಸಿದ್ದ ಕಾಮರೆಡ್ಡಿ ಕ್ಷೇತ್ರದವರೇ ಆಗಿರುವ ಕಾಟಿಪಲ್ಲಿ ವೆಂಕಟರಮಣ ರೆಡ್ಡಿ ಬೇರೆಯದೇ ರೀತಿ ಪ್ರಚಾರ ಕೈಗೊಂಡಿದ್ದರು. 2018ರ ಚುನಾವಣೆಯಲ್ಲಿ ಕೇವಲ 18 ಸಾವಿರ ಮತ ಪಡೆದಿದ್ದ ವೆಂಕಟರಮಣ ರೆಡ್ಡಿಗೆ ಯಾವುದೇ ಸ್ಕೋಪ್ ಇರಲಿಲ್ಲ. ಹಾಲಿ ಸಿಎಂ ಕೆಸಿಆರ್ ಮತ್ತು ಭಾವಿ ಸಿಎಂ ಎನ್ನಲಾದ ರೇವಂತ ರೆಡ್ಡಿ ನಡುವಿನ ಕದನದಲ್ಲಿ ಆಟಕ್ಕುಂಟು ಲೆಕ್ಕಕ್ಕಿಲದ ಅಭ್ಯರ್ಥಿಯೆಂದೇ ಹೇಳಲಾಗಿತ್ತು. ಆದರೆ, ವೆಂಕಟರಮಣ ರೆಡ್ಡಿ ಚುನಾವಣೆ ಸಮಯದಲ್ಲಿ ಮಾಡಿದ್ದ ಪ್ರಚಾರ ಅವರನ್ನು ಫೀನಿಕ್ಸ್ ನಂತೆ ಮೇಲೇಳುವಂತೆ ಮಾಡಿದೆ. ನಿಮಗೆ ಇದೇ ಊರಿನವರು ಬೇಕಾ, ಹೊರಗಿನವರು ಬೇಕಾ, ನೀವೇ ನಿರ್ಧರಿಸಿ ಎಂದು ಪ್ರಚಾರ ಮಾಡಿದ್ದು ಜನರನ್ನು ಆಕರ್ಷಿಸಿದ್ದು ಇಬ್ಪರನ್ನು ಬಿಟ್ಟು ಮೂರನೇ ವ್ಯಕ್ತಿಗೆ ಮತ ಹಾಕುವಂತೆ ಮಾಡಿತ್ತು.
ಕಾಮರೆಡ್ಡಿ ಕ್ಷೇತ್ರಕ್ಕೆ ಬಂದಿದ್ದ ಅಮಿತ್ ಷಾ ಕೂಡ ಇದೇ ರೀತಿಯ ಮಾತುಗಳನ್ನು ಮುಂದಿಟ್ಟು ಜನರನ್ನು ಓಲೈಸುವ ಕೆಲಸ ಮಾಡಿದ್ದರು. ಇದರ ಪರಿಣಾಮ ಚುನಾವಣೆಯಲ್ಲಿ ಫಲ ನೀಡಿದ್ದು, ಜನರು ವೆಂಕಟರಮಣ ರೆಡ್ಡಿ ಪರವಾಗಿ ಮತ ನೀಡಿದ್ದಾರೆ. ಇದೇ ಕ್ಷೇತ್ರದಲ್ಲಿ ನಾಲ್ಕು ಬಾರಿ ಗೆದ್ದಿದ್ದ ಹಾಲಿ ಮುಖ್ಯಮಂತ್ರಿ ಚಂದ್ರಶೇಖರ ರಾವ್ ಅವರನ್ನು ಮನೆಗೇ ಕಳಿಸಿದ್ದಾರೆ. ಅಲ್ಲದೆ, ಭಾವಿ ಮುಖ್ಯಮಂತ್ರಿ ಎನ್ನಲಾಗುತ್ತಿರುವ ರೇವಂತ ರೆಡ್ಡಿ ಅವರನ್ನೂ ಸೋಲಿಸಿದ್ದಾರೆ. ಕಳೆದ ಬಾರಿ ಲೆಕ್ಕಕ್ಕೇ ಇಲ್ಲದ ವೆಂಕಟರಮಣ ರೆಡ್ಡಿ ಪರವಾಗಿ 65198 ಮತಗಳು ಬಿದ್ದಿದ್ದು, 5810 ಮತಗಳಿಂದ ಗೆಲುವು ಕಂಡಿದ್ದಾರೆ. ಚಂದ್ರಶೇಖರ ರಾವ್ 59388 ಹಾಗೂ ರೇವಂತ ರೆಡ್ಡಿ 54296 ಮತಗಳನ್ನು ಪಡೆದಿದ್ದಾರೆ.
ಕಾಮರೆಡ್ಡಿಯಲ್ಲಿ ಗೆದ್ದೇ ಗೆಲ್ತೀನಿ ಎಂದು ತೊಡೆ ತಟ್ಟಿದ್ದ ಮುಖ್ಯಮಂತ್ರಿ ಚಂದ್ರಶೇಖರ ರಾವ್ ಸೋಲುಂಡರೆ, ತಾನು ಸ್ಪರ್ಧಿಸಿದ್ದ ಗಜ್ವೇಲ್ ಕ್ಷೇತ್ರದಲ್ಲಿ 45 ಸಾವಿರ ಮತಗಳಿಂದ ಗೆದ್ದು ಬೀಗಿದ್ದಾರೆ. ಅಲ್ಲಿ ಸಮೀಪದ ಪ್ರತಿಸ್ಪರ್ಧಿಯಾಗಿದ್ದ ಇಟೆಲಾ ರಾಜೇಂದರ್ ಅವರನ್ನು 45301 ಮತಗಳಿಂದ ಸೋಲಿಸಿದ್ದಾರೆ.
Telangana Chief Minister K Chandrasekhar Rao has been hit by anti-incumbency in the state. The Bharat Rashtra Samithi led by K Chandrasekhar Rao lost. The Congress is heading for a simple majority with 63 seats. Meanwhile, it was Katipally Venkataramana Reddy, who contested on a BJP ticket, to become a star icon on social media by defeating sitting and future chief ministers.
08-10-25 09:21 am
Bangalore Correspondent
ಪರಿಶಿಷ್ಟ ಜಾತಿಗೆ ಸೇರಿದವರು ಬೌದ್ಧ ಧರ್ಮಕ್ಕೆ ಮತಾಂತ...
07-10-25 11:20 pm
Big Boss, Prashanth Sambargi, Dk Shivakumar,...
07-10-25 10:49 pm
Big Boss Kannada, Close, Update: ಬಿಗ್ ಬಾಸ್ ಮನ...
07-10-25 10:18 pm
Big Boss Kannada Closed: ಕನ್ನಡ ಶೋ ಬಿಗ್ ಬಾಸ್ ಗ...
07-10-25 07:32 pm
08-10-25 05:49 pm
HK News Desk
ಹಿಮಾಚಲ ಪ್ರದೇಶದಲ್ಲಿ ಭಾರೀ ಭೂಕುಸಿತ ; ಅವಶೇಷಗಳಡಿ ಸ...
08-10-25 09:24 am
ಚಿನ್ನ ಅಡವಿಟ್ಟು ಸಾಲ ; ಕಳೆನಾಶಕ ಕೆಮಿಕಲ್ ಸೇವಿಸಿ ದ...
07-10-25 11:16 pm
ವಿಶ್ವಸಂಸ್ಥೆ ಮಹಾಧಿವೇಶನಕ್ಕೆ ಪಿಪಿ ಚೌಧರಿ ನೇತೃತ್ವದ...
07-10-25 01:53 pm
ಮೊಘಲ್ ಆಕ್ರಮಣದಿಂದ ವಿಷ್ಣು ಮೂರ್ತಿ ಭಗ್ನ ; ಪ್ರತಿಮೆ...
06-10-25 07:56 pm
07-10-25 11:14 pm
Mangalore Correspondent
Mangaluru, Sudheer Reddy: ಶಾರದೋತ್ಸವ ಗೊಂದಲ ಇತ್...
07-10-25 10:54 pm
Ullal News, Mangalore, BJP, Police: ಉಳ್ಳಾಲ ಶಾ...
07-10-25 05:17 pm
Talapady, Mangalore, Crime: ತಲಪಾಡಿ ಅಕ್ಷಯ ಫಾರ್...
07-10-25 05:04 pm
ಫಿಶ್ ಮೀಲ್ ಲಾರಿಗಳಿಂದ ಉಳ್ಳಾಲದಲ್ಲಿ ಗಬ್ಬುನಾತ ! ರಸ...
07-10-25 03:33 pm
08-10-25 12:23 pm
Mangalore Correspondent
ಉಡುಪಿಯಲ್ಲಿ ಶಾಲಾ, ಕಾಲೇಜು ಬಸ್ಗಳ ನಕಲಿ ವಿಮಾ ಜಾಲ...
08-10-25 09:17 am
ಸುರತ್ಕಲ್ ನಲ್ಲಿ ಪಿಕಪ್ ಕಳವು ; ಅಂತರಾಜ್ಯ ಕುಖ್ಯಾತ...
07-10-25 10:13 pm
Kasaragod Gang War, Crime: ಕುಂಬಳೆ ಸೀತಾಂಗೋಳಿಯಲ...
07-10-25 10:31 am
Kali Yogish, Arrest, Mangalore: ಮಂಗಳೂರು, ಮೈಸೂ...
05-10-25 03:22 pm