ಬ್ರೇಕಿಂಗ್ ನ್ಯೂಸ್
08-10-23 07:32 pm HK News Desk ದೇಶ - ವಿದೇಶ
ಜೆರುಸಲೆಂ, ಅ.8: ಇಸ್ರೇಲ್ ಮೇಲೆ ಏಕಾಏಕಿ ಆಕ್ರಮಣ ನಡೆಸಿರುವ ಪ್ಯಾಲೆಸ್ಟೀನ್‌ನ ಹಮಾಸ್ ಉಗ್ರರು, ನಾಗರಿಕರನ್ನು ಕ್ರೂರವಾಗಿ ಹಿಂಸಿಸುವ ಹೃದಯವಿದ್ರಾವಕ ಘಟನೆಗಳು ನಡೆದಿವೆ. ಆಘಾತಕಾರಿ ವಿಡಿಯೋವೊಂದರಲ್ಲಿ, ಜರ್ಜರಿತಗೊಂಡ ಮಹಿಳೆಯೊಬ್ಬರ ಬೆತ್ತಲೆ ದೇಹವನ್ನು ಕಟ್ಟಿ ಬಿಗಿದು ಪಿಕಪ್ ಟ್ರಕ್‌ನ ಹಿಂಬದಿಯಲ್ಲಿ ಇರಿಸಿಕೊಂಡು ಬೀದಿಗಳಲ್ಲಿ ಮೆರವಣಿಗೆ ಮಾಡುವುದು ಕಂಡುಬಂದಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ಹಮಾಸ್ ಉಗ್ರರ ಕ್ರೌರ್ಯದ ವಿಡಿಯೋಗಳು ಹರಿದಾಡುತ್ತಿವೆ. ಉಗ್ರರು ಕುಳಿತ ವಾಹನದ ಸುತ್ತಲಿನಿಂದ ಜನರು ಕಿರುಚುವುದು, ಅಳುವುದು ಮಾಡುತ್ತಿದ್ದರೆ, ಉಗ್ರರು ಅವರನ್ನು ಅಣಕಿಸುತ್ತಾ ಮಹಿಳೆಯ ದೇಹದ ಮೇಲೆ ಉಗಿಯುವುದು ಕಾಣಿಸಿದೆ.
ಅದು ಇಸ್ರೇಲಿ ಮಹಿಳಾ ಸೈನಿಕರೊಬ್ಬರ ದೇಹ ಎಂದು ಹಮಾಸ್ ಉಗ್ರರು ಆರಂಭದಲ್ಲಿ ಹೇಳಿಕೊಂಡಿದ್ದಾಗಿ ವಾಹಿನಿಯೊಂದು ವರದಿ ಮಾಡಿದೆ. ಆದರೆ, ಆ ವಿಡಿಯೋದಲ್ಲಿ ಇರುವ ಮಹಿಳೆ ತನ್ನ ಸಹೋದರಿ ಶಾನಿ ಲೌಕ್ ಎಂದು ಆದಿ ಲೌಕ್ ಟ್ವಿಟ್ಟರ್‌ನಲ್ಲಿ ಖಚಿತಪಡಿಸಿದ್ದಾರೆ. ಶಾನಿ ಲೌಕ್ ಅವರು ಜರ್ಮನ್ ಪ್ರಜೆಯಾಗಿದ್ದು, ಟ್ಯಾಟೂ ಕಲಾವಿದೆಯಾಗಿದ್ದಾರೆ ಎಂದು ನ್ಯೂಯಾರ್ಕ್ ಪೋಸ್ಟ್ ತಿಳಿಸಿದೆ.
ಶಾನಿ ಲೌಕ್ ಅವರ ತಾಯಿಯ ವಿಡಿಯೋ ಸಂದೇಶ ಈಗ ಜಾಲತಾಣದಲ್ಲಿ ವೈರಲ್ ಆಗಿದೆ. ಅದರಲ್ಲಿ ಅವರು ತಮ್ಮ ಮಗಳ ಗುರುತನ್ನು ದೃಢಪಡಿಸಿದ್ದಾರೆ. ಆಕೆ ಈಗ ಎಲ್ಲಿದ್ದಾಳೆ ಎಂಬ ಬಗ್ಗೆ ಹೆಚ್ಚಿನ ಮಾಹಿತಿ ನೀಡುವಂತೆ ಜನರಿಗೆ ಮನವಿ ಮಾಡಿದ್ದಾರೆ.
ಶನಿವಾರ ಬಳಿಗ್ಗೆ ಇಸ್ರೇಲ್ ಗಡಿ ಭಾಗದೊಳಗೆ ಹಮಾಸ್ ಉಗ್ರರು ನುಸುಳಿ ದಾಳಿ ನಡೆಸಿ, ಪಟ್ಟಣಗಳನ್ನು ನಿಯಂತ್ರಣಕ್ಕೆ ತೆಗೆದುಕೊಂಡ ಸಂದರ್ಭದಿಂದ ಶಾನಿ ಲೌಕ್ ನಾಪತ್ತೆಯಾಗಿದ್ದಾರೆ ಎಂದು ಅವರ ಸಂಬಂಧಿಕರೊಬ್ಬರು ತಿಳಿಸಿದ್ದಾರೆ. ವಿಡಿಯೋದಲ್ಲಿ ಹಮಾಸ್ ಉಗ್ರರು ಬೆತ್ತಲೆ ಮೆರವಣಿಗೆ ನಡೆಸಿರುವುದು ಶಾನಿ ಲೌಕ್ ಅವರನ್ನು ಎಂದು ದೃಢಪಡಿಸಿರುವ ತೊಮಾಸಿನಾ ವೀನ್‌ಟ್ರಾಬ್ ಲೌಕ್, ಶಾನಿ ಕುರಿತು ಸಕಾರಾತ್ಮಕ ಸುದ್ದಿ ಬರಲಿದೆ ಎಂಬ ಭರವಸೆ ವ್ಯಕ್ತಪಡಿಸಿದ್ದಾರೆ.
"ಇದು ಖಂಡಿತಾ ಶಾನಿ. ಆಕೆ ಸಂಗೀತ ಉತ್ಸವವೊಂದಕ್ಕೆ ತೆರಳಿದ್ದಳು. ಇದು ನಮ್ಮ ಕುಟುಂಬಕ್ಕೆ ದುಸ್ವಪ್ನದಂತಾಗಿದೆ" ಎಂದು ತೊಮಾಸಿನಾ ಹೇಳಿದ್ದಾರೆ.
ಶಾನಿ ಭಾಗವಹಿಸಿದ್ದ ಸಂಗೀತ ಉತ್ಸವವು, ಹಮಾಸ್ ಉಗ್ರರು ದಾಳಿ ನಡೆಸಿದ ಆರಂಭದ ಸ್ಥಳಗಳಲ್ಲಿ ಒಂದು ಎನ್ನಲಾಗಿದೆ. ಪರಿಸ್ಥಿತಿ ಈಗಲೂ ತೀವ್ರ ಕಳವಳಕಾರಿಯಾಗಿದ್ದು, ಹೆಚ್ಚಿನ ವಿವರಗಳಿಗೆ ಕಾಯಲಾಗುತ್ತಿದೆ
ಹಮಾಸ್ ಉಗ್ರರು ಅನೇಕ ಮಂದಿ ಸೈನಿಕರು, ನಾಗರಿಕರನ್ನು ಅಪಹರಣ ಮಾಡಿ ಹಿಂಸಿಸಿದ್ದಾರೆ. ಗಾಜಾ ಪಟ್ಟಿಯ ಸಮೀಪ ಯಹೂದಿ ರಜೆ ಸುಕ್ಕೋಟ್‌ನ ಕೊನೆಯ ಸಂಭ್ರಮಾಚರಣೆಗಾಗಿ ರೇವ್ ಪಾರ್ಟಿಯಲ್ಲಿದ್ದ 25 ವರ್ಷದ ಇಸ್ರೇಲಿ ಮಹಿಳೆಯನ್ನು ಉಗ್ರರು ಅಪಹರಿಸಿದ್ದಾರೆ.
ಕಿಬ್ಬುಟ್ಸ್ ರೀಮ್ ಸಮೀಪ ಸಂಗೀತ ಉತ್ಸವದಲ್ಲಿ ನೆರೆದಿದ್ದ ಜನರ ಮೇಲೆ ರಾಕೆಟ್‌ಗಳನ್ನು ಹಾರಿಸಿದ ಉಗ್ರರು, ಗುಂಡಿನ ದಾಳಿ ನಡೆಸಿದ್ದರು. ಅಲ್ಲಿದ್ದ ನೋವಾ ಅರ್ಗಮಾನಿ ಎಂಬ ಮಹಿಳೆಯನ್ನು ಎಳೆದೊಯ್ದಿದ್ದರು. ಆಕೆಯನ್ನು ಉಗ್ರರು ಬೈಕ್‌ನಲ್ಲಿ ಇರಿಸಿಕೊಂಡು ಕರೆದೊಯ್ಯುವ ಮನಕಲಕುವ ವಿಡಿಯೋವನ್ನು ಅರ್ಗಮಾನಿ ಕುಟುಂಬದವರು ಬಿಡುಗಡೆ ಮಾಡಿದ್ದಾರೆ. "ನನ್ನನ್ನು ಸಾಯಿಸಬೇಡಿ, ಬೇಡ ಬೇಡ" ಎಂದು ಆಕೆ ಅಂಗಲಾಚುವುದು ವಿಡಿಯೋದಲ್ಲಿ ಕಾಣಿಸಿದೆ. ಕ್ಯಾಮೆರಾದಲ್ಲಿ ನೋವಾಳ ಬಾಯ್‌ಫ್ರೆಂಡ್ ಅವಿ ನಥಾನ್ ಅಸಹಾಯಕನಾಗಿ ಪ್ರೇಯಸಿ ಕಡೆ ನೋಡುವುದು ಕಂಡುಬಂದಿದೆ. ಆತನನ್ನು ಕೂಡ ಉಗ್ರರು ಒತ್ತೆಯಾಳಾಗಿ ಇರಿಸಿಕೊಂಡಿದ್ದರು.
The woman, whose lifeless and undressed body surfaced in a disturbing video on social media on Saturday after Hamas militants from the Gaza Strip launched a massive assault on multiple Israel towns, has now been identified as German citizen Shani Louk.
19-08-25 11:13 am
Bangalore Correspondent
Dharmasthala Case on Social Media: ಧರ್ಮಸ್ಥಳ ವ...
19-08-25 10:39 am
ಧರ್ಮಸ್ಥಳ ಪ್ರಕರಣ ; ಅಧಿವೇಶನದಲ್ಲಿ ಗೃಹ ಸಚಿವರ ಸ್ಪಷ...
18-08-25 10:47 pm
ನಿಮ್ಮ ಮನೆ ಹುಡುಗಿನ ನಮ್ಮ ಸಮುದಾಯದ ಯುವಕನಿಗೆ ಮದುವೆ...
18-08-25 10:35 pm
Dk Shivakumar, Dharmasthala Case: ಧರ್ಮಸ್ಥಳ ವಿ...
18-08-25 08:45 pm
19-08-25 06:59 pm
HK News Desk
ಇಂಡಿಯಾ ಬಣದಿಂದ ಉಪ ರಾಷ್ಟ್ರಪತಿ ಅಭ್ಯರ್ಥಿ ಬಿ.ಸುದರ್...
19-08-25 06:41 pm
ಎನ್ ಡಿಎ ಒಕ್ಕೂಟಕ್ಕೆ ಇಂಡಿಯಾ ಕೂಟದ ಠಕ್ಕರ್ ; ಉಪ ರಾ...
18-08-25 09:19 pm
ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ಇಂಡಿಯಾ ಒಕ್ಕೂಟದಿ...
18-08-25 01:28 pm
ಉಪ ರಾಷ್ಟ್ರಪತಿ ಸ್ಥಾನಕ್ಕೆ ಎನ್.ಡಿ.ಎ ಕೂಟದಿಂದ ಅಚ್ಚ...
17-08-25 09:09 pm
19-08-25 11:07 pm
Mangalore Correspondent
Mangalore Thokottu Sports Winner: ಕಂಪನಿ ಬ್ರಾಂ...
19-08-25 08:54 pm
Ullal Municipal Commissioner: ಉಳ್ಳಾಲ ನಗರಸಭೆಯಲ...
19-08-25 08:28 pm
Puttur, Baby, Sreekrishna J. Rao: ಬಿಜೆಪಿ ಮುಖಂ...
19-08-25 07:04 pm
Activists Mahesh Shetty Thimarodi, Harish Poo...
18-08-25 06:14 pm
19-08-25 10:52 pm
Mangalore Correspondent
ಕಸ್ಟಮ್ಸ್ ಅಧಿಕಾರಿಗಳ ಸೋಗಿನಲ್ಲಿ ಚಿನ್ನದ ವ್ಯಾಪಾರಿಯ...
19-08-25 10:30 pm
ಡಾಕ್ಟರ್ ಮನೆ ದೋಚಿದ್ದ ಮನೆ ಕೆಲಸದವಳು ; ಚಿನ್ನ, ವಜ್...
19-08-25 09:27 pm
Gold Chain robbery, Puttur: ಮೈಸೂರಿನಲ್ಲಿ ಕದ್ದ...
19-08-25 12:54 pm
Ullal Police Raid, Sports Winners, Mangalore:...
19-08-25 12:41 pm