ಬ್ರೇಕಿಂಗ್ ನ್ಯೂಸ್
17-09-23 10:27 pm HK News Desk ದೇಶ - ವಿದೇಶ
ಕೊಲಂಬೋ, ಸೆ.18: ಏಷ್ಯಾ ಕಪ್ ಫೈನಲ್ ಪಂದ್ಯದಲ್ಲಿ ಭಾರತ ತಂಡದ ವೇಗಿಗಳ ದಾಳಿಗೆ ಶ್ರೀಲಂಕಾ ಧೂಳೀಪಟವಾಗಿದೆ. ಕೇವಲ 50 ರನ್ಗಳಿಗೆ ಆಲ್ಔಟ್ ಆದ ಶ್ರೀಲಂಕಾ ವಿರುದ್ಧ ಭಾರತಿಯರು ಹತ್ತು ವಿಕೆಟ್ ಗಳ ಭರ್ಜರಿ ಜಯ ದಾಖಲಿಸಿದ್ದಾರೆ. ಇದರೊಂದಿಗೆ ಭಾರತ ಎಂಟನೇ ಬಾರಿಗೆ ಏಷ್ಯಾ ಕಪ್ ಜಯಿಸಿದೆ.
51 ರನ್ನಿನ ಸುಲಭ ಗುರಿಯನ್ನು 6.1 ಓವರ್ಗಳಲ್ಲಿ ಅಂದರೆ ಕೇವಲ 37 ಎಸೆತಗಳಲ್ಲಿ ವಿಕೆಟ್ ನಷ್ಟವಿಲ್ಲದೆ ಬೆನ್ನಟ್ಟಿದ ಭಾರತದ ಆರಂಭಿಕರು 10 ವಿಕೆಟ್ಗಳ ಜಯ ದಕ್ಕಿಸಿಕೊಂಡರು. 263 ಎಸೆತಗಳ ಉಳಿದಿರುವಂತೆ ಭಾರತ ತಂಡಕ್ಕೆ ಸಿಕ್ಕ ಬೃಹತ್ ಗೆಲುವು ಇದಾಗಿದೆ. ಶುಭಮನ್ ಗಿಲ್ (27*) ಮತ್ತು ಇಶಾನ್ ಕಿಶನ್ (23*) ಯಾವುದೇ ಪ್ರಯಾಸ ಇಲ್ಲದೆ ಆಟವಾಡಿದ್ದಾರೆ.
ಇದಕ್ಕೂ ಮುನ್ನ ಮೊಹಮ್ಮದ್ ಸಿರಾಜ್ 21ಕ್ಕೆ ಆರು ವಿಕೆಟ್ ಪಡೆದಿರುವುದು ವೈಯಕ್ತಿಕ ಶ್ರೇಷ್ಠ ದಾಖಲೆಯಾಗಿದೆ. ಹಾರ್ದಿಕ್ ಪಾಂಡ್ಯ (3ಕ್ಕೆ 3) ಮತ್ತು ಜಸ್ಪ್ರೀತ್ ಬುಮ್ರಾ (23ಕ್ಕೆ 1) ಆಕ್ರಮಣಕಾರಿ ಬೌಲಿಂಗ್ ದಾಳಿಗೆ ಕಕ್ಕಾಬಿಕ್ಕಿಯಾದ ಶ್ರೀಲಂಕಾ ತಂಡ 50 ರನ್ಗಳಿಗೆ ಆಲ್ಔಟ್ ಆಯಿತು. ಕುಶಲ್ ಮೆಂಡಿಸ್ (17) ಮತ್ತು ದುಶಾನ್ ಹೇಮಂತ (13) ಹೊರತಾಗಿ ಉಳಿದ ಯಾವ ಬ್ಯಾಟರ್ಗಳೂ ಎರಡಂಕಿಯ ಸ್ಕೋರ್ ಮಾಡಲಿಲ್ಲ. ಇದು ಏಕದಿನ ಇತಿಹಾಸದಲ್ಲಿ ಭಾರತದ ಎದುರು ಶ್ರೀಲಂಕಾ ಗಳಿಸಿದ ಅತ್ಯಂತ ಕಡಿಮೆ ಮೊತ್ತವಾಗಿದೆ.
ಮೊಹಮ್ಮದ್ ಸಿರಾಜ್ ಎಸೆದ ಮೊದಲ ಓವರಿನಲ್ಲೇ ನಾಲ್ಕು ವಿಕೆಟ್ ಪಡೆಯುವ ಮೂಲಕ ಲಂಕನ್ನರ ಬ್ಯಾಟಿಂಗ್ ಬುಡವನ್ನೇ ಮುರಿದಿದ್ದಾರೆ. ಸಿರಾಜ್ ಆರ್ಭಟಕ್ಕೆ ಲಂಕಾದ ನಾಯಕ ಸೇರಿದಂತೆ ಎಲ್ಲ ಪ್ರಮುಖ ಬ್ಯಾಟ್ಸ್ ಮನ್ ಗಳೂ ಪೆವಿಲಿಯನ್ ಸೇರಿದ್ದು ಲಂಕಾಕ್ಕೆ ಆಘಾತ ನೀಡಿತ್ತು. ಅತಿ ಕಡಿಮೆ ರನ್ ಕೊಟ್ಟು ಆರು ವಿಕೆಟ್ ಕಿತ್ತ ನಾಲ್ಕನೇ ಭಾರತೀಯ ಎಂಬ ಸಾಧನೆಯನ್ನು ಸಿರಾಜ್ ಮಾಡಿದ್ದಾರೆ.
Mohammed Siraj brought Sri Lanka down to their knees in just the first six overs of the match by picking a five-wicket haul in that period. Jasprit Bumrah started off with a wicket off the third ball and then Siraj just blew the top off the opposition's batting lineup by taking four wickets in the fourth over alone. He then came back and dismissed Sri Lanka captain Dasun Shanaka, thus completing his five-wicket haul in just his second over. Sri Lanka were thus left reeling at 12/6 in 5.4 overs at that point.
08-10-25 11:04 pm
Bangalore Correspondent
ಕಳ್ಳತನ ಪ್ರಕರಣದಲ್ಲಿ ರಿಕವರಿ ಮಾಡಿದ್ದ 2 ಕಿಲೋ ಚಿನ್...
08-10-25 09:21 am
ಪರಿಶಿಷ್ಟ ಜಾತಿಗೆ ಸೇರಿದವರು ಬೌದ್ಧ ಧರ್ಮಕ್ಕೆ ಮತಾಂತ...
07-10-25 11:20 pm
Big Boss, Prashanth Sambargi, Dk Shivakumar,...
07-10-25 10:49 pm
Big Boss Kannada, Close, Update: ಬಿಗ್ ಬಾಸ್ ಮನ...
07-10-25 10:18 pm
08-10-25 08:57 pm
HK News Desk
Nirmala Sitharaman, Cybersecurity: ನನ್ನ ಹೆಸರಿ...
08-10-25 08:40 pm
ಕೆಮ್ಮಿನ ಸಿರಪ್ ಸೇವಿಸಿ ಮಧ್ಯಪ್ರದೇಶದಲ್ಲಿ ಮತ್ತೆ ಆರ...
08-10-25 05:49 pm
ಹಿಮಾಚಲ ಪ್ರದೇಶದಲ್ಲಿ ಭಾರೀ ಭೂಕುಸಿತ ; ಅವಶೇಷಗಳಡಿ ಸ...
08-10-25 09:24 am
ಚಿನ್ನ ಅಡವಿಟ್ಟು ಸಾಲ ; ಕಳೆನಾಶಕ ಕೆಮಿಕಲ್ ಸೇವಿಸಿ ದ...
07-10-25 11:16 pm
08-10-25 10:09 pm
Mangalore Correspondent
ಸಮೀಕ್ಷೆ ನಡೆಸಲು ರಾಜ್ಯ ಸರ್ಕಾರಕ್ಕೆ ಹಕ್ಕಿದೆ, ಸಹಕಾ...
08-10-25 06:07 pm
ತಲಪಾಡಿಯಲ್ಲಿ ಮಾನವ ಅಸ್ಥಿಪಂಜರ ಪತ್ತೆ ಪ್ರಕರಣ ; ಬಿಹ...
07-10-25 11:14 pm
Mangaluru, Sudheer Reddy: ಶಾರದೋತ್ಸವ ಗೊಂದಲ ಇತ್...
07-10-25 10:54 pm
Ullal News, Mangalore, BJP, Police: ಉಳ್ಳಾಲ ಶಾ...
07-10-25 05:17 pm
08-10-25 08:47 pm
HK News Desk
ಸುರತ್ಕಲ್, ಮೂಡುಬಿದ್ರೆಯಲ್ಲಿ ಅಕ್ರಮ ಕಸಾಯಿಖಾನೆಗೆ ಪ...
08-10-25 12:23 pm
ಉಡುಪಿಯಲ್ಲಿ ಶಾಲಾ, ಕಾಲೇಜು ಬಸ್ಗಳ ನಕಲಿ ವಿಮಾ ಜಾಲ...
08-10-25 09:17 am
ಸುರತ್ಕಲ್ ನಲ್ಲಿ ಪಿಕಪ್ ಕಳವು ; ಅಂತರಾಜ್ಯ ಕುಖ್ಯಾತ...
07-10-25 10:13 pm
Kasaragod Gang War, Crime: ಕುಂಬಳೆ ಸೀತಾಂಗೋಳಿಯಲ...
07-10-25 10:31 am