ಬ್ರೇಕಿಂಗ್ ನ್ಯೂಸ್
08-09-23 09:34 pm HK News Desk ದೇಶ - ವಿದೇಶ
ನವದೆಹಲಿ, ಸೆ.8: ಜಿ20 ಸಮಾವೇಶದಲ್ಲಿ ಪಾಲ್ಗೊಳ್ಳಲು ಅಮೆರಿಕ ಅಧ್ಯಕ್ಷ ಜೋ ಬೈಡನ್ ಭಾರತಕ್ಕೆ ಬಂದು ಇಳಿದಿದ್ದಾರೆ. ಶುಕ್ರವಾರ ಸಂಜೆ 7 ಗಂಟೆ ಸುಮಾರಿಗೆ ರಾಷ್ಟ್ರ ರಾಜಧಾನಿಗೆ ಬಂದು ಇಳಿದ ಜೋ ಬೈಡನ್ ಅವರನ್ನು ಅದ್ಧೂರಿಯಾಗಿ ಭಾರತ ಬರಮಾಡಿಕೊಂಡಿದೆ. ಬೈಡನ್ ಅವರನ್ನು ವಿಮಾನ ಯಾನ ಸಚಿವ ವಿಕೆ ಸಿಂಗ್ ಮತ್ತು ಅಮೆರಿಕದ ಪ್ರತಿನಿಧಿ ಎರಿಕ್ ಗ್ಯಾರ್ಸೆಟ್ಟಿ ಸ್ವಾಗತಿಸಿದರು.
ಸೆಪ್ಟೆಂಬರ್ 9 ಮತ್ತು 10ರಂದು ಭಾರತದ ನೇತೃತ್ವದಲ್ಲಿ ಜಿ20 ಶೃಂಗಸಭೆ ನವದೆಹಲಿಯಲ್ಲಿ ನಡೆಯಲಿದೆ. ಸೆಪ್ಟೆಂಬರ್ 7ರಂದು ವಿಶೇಷ ವಿಮಾನದಲ್ಲಿ ಹೊರಟಿದ್ದ ಅಮೆರಿಕ ಅಧ್ಯಕ್ಷ ಬೈಡನ್, ಇಂದು ತಮ್ಮ ಅಧಿಕಾರಿಗಳ ಜೊತೆಗೆ ನವದೆಹಲಿಗೆ ಬಂದು ಇಳಿದಿದ್ದಾರೆ. ಜಗತ್ತಿನ ದೊಡ್ಡಣ್ಣ ಬೈಡನ್ ಆಗಮನ ಹಿನ್ನೆಲೆ ರಾಜಧಾನಿ ದೆಹಲಿಯಲ್ಲಿ ಹಿಂದೆಂದೂ ಕಂಡಿರದ ಭದ್ರತೆ ಕೈಗೊಳ್ಳಲಾಗಿದೆ. ಅಮೆರಿಕ ಅಧ್ಯಕ್ಷ ಬೈಡನ್ ಅವರನ್ನು ಭಾರಿ ಭದ್ರತೆ ನಡುವೆ ವಿಮಾನ ನಿಲ್ದಾಣದಿಂದ ಕರೆದುಕೊಂಡು ಹೋಗಲಾಗಿದೆ.
ಬೈಡನ್ -ಮೋದಿ ದ್ವಿಪಕ್ಷೀಯ ಸಭೆ
ಅಮೆರಿಕ ಅಧ್ಯಕ್ಷ ಜೋ ಬೈಡನ್ ಮತ್ತು ಪ್ರಧಾನಿ ಮೋದಿ ಮಧ್ಯೆ ಇಂದು ರಾತ್ರಿಯೇ ಮಹತ್ವದ ದ್ವಿಪಕ್ಷೀಯ ಮಾತುಕತೆ ನಡೆಯಲಿದೆ. ಭಾರತ ಹಾಗೂ ಅಮೆರಿಕ ದ್ವಿಪಕ್ಷೀಯ ಮಾತುಕತೆಗೆ ಬೇಕಾದ ಎಲ್ಲಾ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ರಷ್ಯಾ ಮತ್ತು ಚೀನಾಗೂ ಭಾರತದಲ್ಲಿ ನಡೆಯುವ ಶೃಂಗಸಭೆ ಅತ್ಯಂತ ಮಹತ್ವದ್ದು. ಏಕೆಂದರೆ ಇಲ್ಲಿ ಕೈಗೊಳ್ಳುವ ನಿರ್ಧಾರ ಜಾಗತಿಕ ಮಟ್ಟದಲ್ಲಿಯೂ ಪ್ರಭಾವ ಬೀರಲಿದೆ.
ಸಾಮಾನ್ಯವಾಗಿ ಜಿ20 ಶೃಂಗಸಭೆ ವೇಳೆ ದ್ವಿಪಕ್ಷೀಯ ಚರ್ಚೆಗೆ ಅವಕಾಶ ಇರಲ್ಲ. ಆದ್ರೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಹಾಗೂ ಸೌದಿಯ ದೊರೆ ಮೊಹಮ್ಮದ್ ಬಿನ್ ಸಲ್ಮಾನ್ ಅವರಿಗೆ ಭಾರತ ವಿಶೇಷ ವಿನಾಯಿತಿ ನೀಡಿದೆ. ಎರಡೂ ದೇಶಗಳ ನಾಯಕರ ಜೊತೆ ದ್ವಿಪಕ್ಷೀಯ ಮಾತುಕತೆ ನಡೆಯಲಿದೆ. ಅಮೆರಿಕ ಅಧ್ಯಕ್ಷ ಜೋ ಬೈಡನ್ ಜೊತೆ ಪ್ರಧಾನಿ ಮೋದಿ ಮುಖ್ಯವಾಗಿ 6 ವಿಚಾರಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಕ್ಲೀನ್ ಎನರ್ಜಿ, ಟೆಕ್ನಾಲಜಿ, ವ್ಯಾಪಾರ, ರಕ್ಷಣಾ ವಿಚಾರ ಮತ್ತು ಉಭಯ ನಾಯಕರು ತಾಪಮಾನ ಏರಿಕೆ ಸೇರಿದಂತೆ ಜಗತ್ತು ಎದುರಿಸುವ ಪ್ರಮುಖ ಸವಾಲುಗಳ ಬಗ್ಗೆ ಮಾತುಕತೆ ನಡೆಸಲಿದ್ದಾರೆ.
Prime Minister Narendra Modi met United States President Joe Biden for a bilateral discussion at his residence in Delhi late Friday evening, shortly after Mr Biden's Air Force One landed in Delhi ahead of the weekend's G20 Summit. The Prime Minister's Office shared photos of the two leaders holding talks on "a wide range of issues (that) will further deepen bond between India and the US".
08-10-25 11:04 pm
Bangalore Correspondent
ಕಳ್ಳತನ ಪ್ರಕರಣದಲ್ಲಿ ರಿಕವರಿ ಮಾಡಿದ್ದ 2 ಕಿಲೋ ಚಿನ್...
08-10-25 09:21 am
ಪರಿಶಿಷ್ಟ ಜಾತಿಗೆ ಸೇರಿದವರು ಬೌದ್ಧ ಧರ್ಮಕ್ಕೆ ಮತಾಂತ...
07-10-25 11:20 pm
Big Boss, Prashanth Sambargi, Dk Shivakumar,...
07-10-25 10:49 pm
Big Boss Kannada, Close, Update: ಬಿಗ್ ಬಾಸ್ ಮನ...
07-10-25 10:18 pm
08-10-25 08:57 pm
HK News Desk
Nirmala Sitharaman, Cybersecurity: ನನ್ನ ಹೆಸರಿ...
08-10-25 08:40 pm
ಕೆಮ್ಮಿನ ಸಿರಪ್ ಸೇವಿಸಿ ಮಧ್ಯಪ್ರದೇಶದಲ್ಲಿ ಮತ್ತೆ ಆರ...
08-10-25 05:49 pm
ಹಿಮಾಚಲ ಪ್ರದೇಶದಲ್ಲಿ ಭಾರೀ ಭೂಕುಸಿತ ; ಅವಶೇಷಗಳಡಿ ಸ...
08-10-25 09:24 am
ಚಿನ್ನ ಅಡವಿಟ್ಟು ಸಾಲ ; ಕಳೆನಾಶಕ ಕೆಮಿಕಲ್ ಸೇವಿಸಿ ದ...
07-10-25 11:16 pm
08-10-25 10:09 pm
Mangalore Correspondent
ಸಮೀಕ್ಷೆ ನಡೆಸಲು ರಾಜ್ಯ ಸರ್ಕಾರಕ್ಕೆ ಹಕ್ಕಿದೆ, ಸಹಕಾ...
08-10-25 06:07 pm
ತಲಪಾಡಿಯಲ್ಲಿ ಮಾನವ ಅಸ್ಥಿಪಂಜರ ಪತ್ತೆ ಪ್ರಕರಣ ; ಬಿಹ...
07-10-25 11:14 pm
Mangaluru, Sudheer Reddy: ಶಾರದೋತ್ಸವ ಗೊಂದಲ ಇತ್...
07-10-25 10:54 pm
Ullal News, Mangalore, BJP, Police: ಉಳ್ಳಾಲ ಶಾ...
07-10-25 05:17 pm
08-10-25 08:47 pm
HK News Desk
ಸುರತ್ಕಲ್, ಮೂಡುಬಿದ್ರೆಯಲ್ಲಿ ಅಕ್ರಮ ಕಸಾಯಿಖಾನೆಗೆ ಪ...
08-10-25 12:23 pm
ಉಡುಪಿಯಲ್ಲಿ ಶಾಲಾ, ಕಾಲೇಜು ಬಸ್ಗಳ ನಕಲಿ ವಿಮಾ ಜಾಲ...
08-10-25 09:17 am
ಸುರತ್ಕಲ್ ನಲ್ಲಿ ಪಿಕಪ್ ಕಳವು ; ಅಂತರಾಜ್ಯ ಕುಖ್ಯಾತ...
07-10-25 10:13 pm
Kasaragod Gang War, Crime: ಕುಂಬಳೆ ಸೀತಾಂಗೋಳಿಯಲ...
07-10-25 10:31 am