ಬ್ರೇಕಿಂಗ್ ನ್ಯೂಸ್
02-09-23 06:48 pm HK News Desk ದೇಶ - ವಿದೇಶ
ನವದೆಹಲಿ, ಸೆ.1: ಜೆಟ್ ಏರ್ವೇಸ್ ಸ್ಥಾಪಕ ನರೇಶ್ ಗೋಯಲ್ ಅವರನ್ನು ಮನಿ ಲಾಂಡರಿಂಗ್ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಸೆಪ್ಟೆಂಬರ್ 1ರಂದು ಶುಕ್ರವಾರ ತಡರಾತ್ರಿ ಬಂಧಿಸಿದ್ದಾರೆ. ಬ್ಯಾಂಕ್ನಿಂದ ಸಾಲ ಪಡೆದು, ಸಾಲದ ಹಣವನ್ನು ತನ್ನದೇ ಆದ ಇತರೆ ಕಂಪನಿಗಳಿಗೆ ವರ್ಗಾವಣೆ ಮಾಡಿರುವ ಆರೋಪದಲ್ಲಿ ಅವರನ್ನು ಬಂಧಿಸಲಾಗಿದೆ.
ಕೆಲವು ಗಂಟೆಗಳ ಕಾಲ ಇ.ಡಿ ಕಚೇರಿಯಲ್ಲಿ ಗೋಯಲ್ ಅವರನ್ನು ವಿಚಾರಣೆಗೆ ಒಳಪಡಿಸಿದ ಬಳಿಕ ಮನಿ ಲಾಂಡರಿಂಗ್ ತಡೆ ಕಾಯಿದೆ (ಪಿಎಂಎಲ್ಎ) ಅಡಿಯಲ್ಲಿ ಅವರನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ.
74 ವರ್ಷದ ನರೇಶ್ ಗೋಯಲ್ ಅವರನ್ನು ಬಂಧಿಸಿದ್ದ ಜಾರಿ ನಿರ್ದೇಶನಾಲಯವು ಮುಂಬೈನ ವಿಶೇಷ ಪಿಎಂಎಲ್ಎ ಕೋರ್ಟ್ಗೆ ಅವರನ್ನು ಹಾಜರು ಪಡಿಸಿ ಕಸ್ಟಡಿಗೆ ಕೇಳಿತ್ತು. ಜಾರಿ ನಿರ್ದೇಶನಾಲಯದ ಬೇಡಿಕೆಯನ್ನು ಮನ್ನಿಸಿದ ನ್ಯಾಯಾಲಯವು ಅವರನ್ನು ಇ.ಡಿ ಕಸ್ಟಡಿಗೆ ನೀಡಿದೆ.
ಇ.ಡಿ ತನಿಖೆಯ ಪ್ರಕಾರ, ಜೆಟ್ ಏರ್ವೇಸ್ ಕೆನರಾ ಬ್ಯಾಂಕ್ನಿಂದ 539 ಕೋಟಿ ರೂ. ಸಾಲ ಪಡೆದು, ಹಣವನ್ನು ಹಿಂದಿರುಗಿಸಿಲ್ಲ. ಈ ಮೂಲಕ ಬ್ಯಾಂಕ್ಗೆ ನಷ್ಟ ಉಂಟು ಮಾಡಿದೆ.
ಈ ಸಂಬಂಧ ಕಳೆದ ನವೆಂಬರ್ನಲ್ಲಿ ಕೆನರಾ ಬ್ಯಾಂಕ್ ನರೇಶ್ ಗೋಯಲ್ ಮತ್ತು ಅವರ ಪತ್ನಿ ಅನಿತಾ ವಿರುದ್ಧ ವಂಚನೆ, ಕ್ರಿಮಿನಲ್ ಸಂಚು, ನಂಬಿಕೆ ದ್ರೋಹ ಮತ್ತು ಕ್ರಿಮಿನಲ್ ದುರ್ನಡತೆ ಆರೋಪ ಹೊರಿಸಿ ಕೇಸ್ ದಾಖಲಿಸಿತ್ತು. ಈ ಸಂಬಂಧ ಮೇ ತಿಂಗಳಿನಲ್ಲಿ ಸಿಬಿಐ ವಂಚನೆ ಕೇಸ್ ದಾಖಲಿಸಿತ್ತು. ನಂತರ ಇ.ಡಿ ಮನಿ ಲಾಂಡರಿಂಗ್ ಕೇಸ್ ದಾಖಲಿಸಿಕೊಂಡಿತ್ತು.
ಜೆಟ್ ಏರ್ವೇಸ್ ವಿರುದ್ಧ ಬ್ಯಾಂಕ್ ದಾಖಲಿಸಿರುವ ಎಫ್ಐಆರ್ನಲ್ಲಿ, ಕಂಪನಿಗೆ ಕ್ರೆಡಿಟ್ ಲಿಮಿಟ್ ಅಡಿಯಲ್ಲಿ 848.86 ಕೋಟಿ ರೂ. ಹಣವನ್ನು ಸಾಲವಾಗಿ ನೀಡಲಾಗಿತ್ತು. ಇದರಲ್ಲಿ 538.62 ಕೋಟಿ ರೂ. ಹಣವನ್ನು ಹಿಂದಿರುಗಿಸದೆ ಮೋಸ ಎಸಗಲಾಗಿದೆ ಎಂದು ಹೇಳಲಾಗಿದೆ. ಜುಲೈ 29, 2021ರಂದು ಸಿಬಿಐ ಇದನ್ನು ವಂಚನೆ ಎಂದು ಪರಿಗಣಿಸಿತ್ತು.
ಜೆಟ್ ಏರ್ವೇಸ್ ಲಿಮಿಟೆಡ್ (ಜೆಐಎಲ್)ನ ಫೊರೆನ್ಸಿಕ್ ಆಡಿಟ್ ಪ್ರಕಾರ ಕಂಪನಿಯು ತನ್ನ ಇತರೆ ಕಂಪನಿಗಳಿಗೆ ಅಕ್ರಮವಾಗಿ 1410.41 ಕೋಟಿ ರೂ. ಕಮಿಷನ್ ವೆಚ್ಚ ಹಾಗೂ ಇತರ ಖರ್ಚುಗಳ ರೂಪದಲ್ಲಿ ಪಾವತಿ ಮಾಡಿದೆ.
ಫೊರೆನ್ಸಿಕ್ ಆಡಿಟ್ ಪ್ರಕಾರ ಜೆಟ್ ಏರ್ವೇಸ್ ತನ್ನ ಸಹ ಕಂಪನಿ ಜೆಟ್ ಲೈಟ್ (ಇಂಡಿಯಾ) ಲಿಮಿಟೆಡ್ (ಜೆಎಲ್ಎಲ್)ಗೆ ಮುಂಗಡ ಮೊತ್ತವಾಗಿ ಹಣವನ್ನು ವರ್ಗಾವಣೆ ಮಾಡಿದೆ. ಜೆಐಎಲ್ ತನ್ನ ಅಂಗಸಂಸ್ಥೆಯಾದ ಜೆಎಲ್ಎಲ್ಗೆ ಸಾಲ, ಮುಂಗಡ ಮತ್ತು ಹೂಡಿಕೆಗಳ ರೂಪದಲ್ಲಿ ಅಕ್ರಮವಾಗಿ 1410.41 ಕೋಟಿ ರೂ.ಗಳನ್ನು ರವಾನಿಸಿದೆ ಎಂದು ಹೇಳಲಾಗಿದೆ.
The Enforcement Directorate on September 1 arrested Jet Airways (India) Limited’s founder chairman Naresh Jagdishrai Goyal, in connection with an alleged loan fraud involving about ₹538.62 crore of the Canara Bank.
15-01-26 05:56 pm
HK News Desk
ಧರ್ಮಸ್ಥಳ ಎಸ್ಐಟಿ ತನಿಖೆ ; ತನಿಖೆಯ ಮಾಹಿತಿ ಕೇಳಿ ಸರ...
14-01-26 03:34 pm
ಆನೆ ದಂತದಿಂದ ಮಾಡಲ್ಪಟ್ಟ ರಾಧಾ ಕೃಷ್ಣರ ವಿಗ್ರಹ ಮಾರಾ...
14-01-26 02:54 pm
ಧರ್ಮಸ್ಥಳದಲ್ಲಿ 74 ಅಸಹಜ ಸಾವು ಪ್ರಕರಣ ; ಪ್ರತ್ಯೇಕ...
14-01-26 01:34 pm
ಅಕಾಲಿಕ ಮಳೆಗೆ ಕಂಗಾಲಾದ ಕಾಫಿನಾಡು ; ಭಾರೀ ಮಳೆಗೆ ಕೊ...
13-01-26 10:13 pm
15-01-26 12:14 pm
HK News Desk
ಆಂತರಿಕ ದಂಗೆಯಲ್ಲಿ ಬೆಂದು ಹೋದ ಇರಾನ್ ; 12 ಸಾವಿರಕ್...
14-01-26 10:08 pm
ಜೀವಂತ ನಾಗರಹಾವನ್ನೇ ಜೇಬಿನಲ್ಲಿಟ್ಟು ಆಸ್ಪತ್ರೆಗೆ ಬಂ...
13-01-26 06:39 pm
ರಷ್ಯಾ ಬಳಿಕ ಇರಾನ್ ಮುಂದಿಟ್ಟು ಟ್ರಂಪ್ ಬೆದರಿಕೆ ; ಇ...
13-01-26 04:21 pm
ಮುಂಬೈಗೆ ಬಂದೇ ಬರುತ್ತೇನೆ, ತಾಕತ್ತಿದ್ದರೆ ತಡೆಯಿರಿ....
12-01-26 11:00 pm
15-01-26 09:04 pm
Mangalore Correspondent
ಮನರೇಗಾ ಜಾರಿಗೆ ಒತ್ತಾಯಿಸಿ ಸುಳ್ಯದಿಂದ ಮುಲ್ಕಿಗೆ ಪಾ...
15-01-26 08:12 pm
ಜ.18ರಂದು ಮಂಗಳೂರಿನಲ್ಲಿ ಪ್ರಪ್ರಥಮ ಜಾಗತಿಕ ಬಿಲ್ಲವರ...
15-01-26 04:01 pm
ದೇವಸ್ಥಾನಕ್ಕೆ ಹೊರಟಿದ್ದ ಬಾಲಕನ ಶವ ಬಾವಿಯಲ್ಲಿ ಪತ್ತ...
14-01-26 03:15 pm
ಕುಂದಾಪುರ -ತಲಪಾಡಿ, ಸುರತ್ಕಲ್- ಬಿ.ಸಿ.ರೋಡ್ ಹೆದ್ದಾ...
13-01-26 10:30 pm
15-01-26 03:01 pm
Mangalore Correspondent
ಹೂಡಿಕೆ ಹೆಸರಿನಲ್ಲಿ ವಂಚಿಸುತ್ತಿದ್ದ ಖದೀಮರ ಜಾಲ ಬಯಲ...
14-01-26 09:49 pm
Karwar Suicide: ಪ್ರೀತಿ ಒಪ್ಪಿಕೊಳ್ಳುವಂತೆ ನಿರಂತರ...
14-01-26 05:22 pm
ಹೆಂಡತಿ ಮೇಲೆ ಕಣ್ಣು ; ಗುತ್ತಿಗೆದಾರನನ್ನು ಕೊಲೆ ಮಾಡ...
13-01-26 05:28 pm
ಡಿಜಿಟಲ್ ಅರೆಸ್ಟ್ ನೆಪದಲ್ಲಿ ದೆಹಲಿಯ ವೃದ್ಧ ವೈದ್ಯ...
13-01-26 03:37 pm